ಅದ್ಯಾವುದೋ ಬೇರಂತೆ, ನಾರಂತೆ, ಸೊಪ್ಪು, ಎಲೆ, ಬಳ್ಳಿಯಿಂದಾನೂ ಔಷಧಿ(Medicine) ಕೊಡ್ತಾರಂತೆ, ಹಣ್ಣೂ ಮದ್ದಂತೆ, ಕಾಯಿಯೂ, ಕಾಯಿಯೊಳಗಿನ ಬೀಜವೂ ರೋಗ(Disease) ನಿವಾರಕವಂತೆ. ಹಲವು ಮೂಲಿಕೆಗಳನ್ನು ಸೇರಿಸಿ ಔಷಧಿ ಮಾಡೋದಂತೆ. ಇದನ್ನೆಲ್ಲ ನಂಬ್ತೀರಾ? ಇದು ಮೂಢನಂಬಿಕೆ(Superstition). ಇಂಥದ್ದನ್ನೆಲ್ಲ ತಿಂದು ಆರೋಗ್ಯ(Health) ಹಾಳು ಮಾಡ್ಕೋಬೇಡಿ’ ಎಂದು ಭಾರತೀಯ ಆಯುರ್ವೇದ ಪದ್ಧತಿ ಬಗ್ಗೆ ಮೂಗು ಮುರಿಯುವವರೆ ಹೆಚ್ಚು.ಆದ್ರೆ ಆಯುರ್ವೇದ ಪದ್ಧತಿಯಲ್ಲಿ ಬರುವ ತುಳಸಿ ಅಶ್ವಗಂಧ ದಂತಹ ಗಿಡಮೂಲಿಕೆಗಳು ನಮ್ಮ ಅನೇಕ ಸಮಸ್ಯೆಗಳನ್ನು ದೂರ ಮಾಡುತ್ತವೆ.. ಅದರಲ್ಲೂ ಆಯುರ್ವೇದ ಪದ್ಧತಿಯಲ್ಲಿ ಅಶ್ವಗಂಧಕ್ಕೆ ಅಗ್ರಸ್ಥಾನವಿದ್ದು, ಸರ್ವರೋಗಕ್ಕೂ ಮದ್ದಾಗಿ ಅಶ್ವಗಂಧ ಕಾರ್ಯ ನಿರ್ವಹಣೆ ಮಾಡುತ್ತದೆ.
ಸರ್ವರೋಗಕ್ಕೂ ಮದ್ದು ಅಶ್ವಗಂಧ..
ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಅಶ್ವಗಂಧದ ಎಲೆಗಳು ಹಂದಿಯ ಕಿವಿಯ ರೀತಿ ಇರುವುದರಿಂದ ವರಾಹಕರ್ಣಿ ಎಂದೂ ಹೆಸರಿದೆ. ಕಣ್ಮರೆಯಾಗುತ್ತಿರುವ ಗಿಡಮೂಲಿಕೆಯಲ್ಲಿ ಒಂದಾಗಿರುವ ಅಶ್ವಗಂಧದ ಔಷಧೀಯ ಗುಣ ಹಿರಿದಾದದ್ದು. ಅಶ್ವಗಂಧದಲ್ಲಿ ಹಲವು ವಿಧದ ವಿಟಮಿನ್ಗಳು, ಖನಿಜಾಂಶಗಳು, ಪೋಷಕಾಂಶಗಳು ಇರುತ್ತವೆ. ಹಾಗಾಗಿ ದೇಹದ ಸದೃಢ ಬೆಳವಣಿಗೆಯಲ್ಲೂ ಇದು ಸಹಕಾರಿ. ಅಶ್ವಗಂಧ ಹಲವು ಕಾಯಿಲೆಗಳಿಗೆ ಮದ್ದು.. ಹಾಗೇ ಶಕ್ತಿಯನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಖಿನ್ನತೆ, ಒತ್ತಡ ನಿವಾರಿಸುವ ಸಾಮರ್ಥ್ಯವೂ ಇದಕ್ಕಿದೆ. ಅಶ್ವಗಂಧದ ನಿಯಮಿತ ಸೇವನೆಯಿಂದ ದೇಹದಲ್ಲಿ ಎಂಡೋರ್ಫಿನ್ಗಳ ಬಿಡುಗಡೆ ಮಟ್ಟ ಹೆಚ್ಚಿ, ಈ ಮೂಲಕ ಖಿನ್ನತೆ, ಒತ್ತಡ, ಮಾನಸಿಕ ನೋವನ್ನು ನಿವಾರಣೆ ಮಾಡುತ್ತದೆ.
ಇದನ್ನೂ ಓದಿ: ತಪ್ಪಿಯೂ ಬೆಳಗ್ಗಿನ ಉಪಹಾರದಲ್ಲಿ ಈ 5 ಆಹಾರಗಳನ್ನು ಸೇವಿಸಬೇಡಿ
1) ಮಾಂಸಖಂಡಗಳ ಸದೃಢತೆ: ದೇಹದಲ್ಲಿ ಎಲುಬು ಮತ್ತು ಮಾಂಸಖಂಡಗಳ ಆರೋಗ್ಯಕ್ಕೆ ಅಶ್ವಗಂಧ ಸಹಕಾರಿ. ವಯಸ್ಸಾದಂತೆ ಎಲುಬು, ಮಾಂಸಖಂಡಗಳೆಲ್ಲ ಸಹಜವಾಗಿಯೇ ದುರ್ಬಲವಾಗುತ್ತವೆ. ಹೀಗಾದಾಗ ಅಶ್ವಗಂಧ ಸೇವಿಸಬೇಕು.
2) ಖಿನ್ನತೆ ನಿವಾರಣೆ: ಅಶ್ವಗಂಧ ಮಾನಸಿಕ ಒತ್ತಡವನ್ನು ನಿವಾರಿಸುವ ಅದ್ಭುತ ಮೂಲಿಕೆಯಾಗಿದೆ ಹಾಗೂ ಖಿನ್ನತೆಯನ್ನು ಇಲ್ಲವಾಗಿಸಿ ಮನಸ್ಸನ್ನು ನಿರಾಳಗೊಳಿಸುವ ಗುಣ ಹೊಂದಿದೆ. ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣ ಮೆದುಳಿನಲ್ಲಿ ಉತ್ಪತ್ತಿಯಾಗುವ ’ಕಾರ್ಟಿಸೋಲ್’ಎಂಬ ರಸದೂತ. ಅಶ್ವಗಂಧ ಈ ರಸದೂತದ ಉತ್ಪಾದನೆಯನ್ನು ಆದಷ್ಟೂ ಮಟ್ಟಿಗೆ ನಿಗ್ರಹಿಸಿ ಇದರಿಂದ ಎದುರಾಗುವ ಮಾನಸಿಕ ಒತ್ತಡದಿಂದ ರಕ್ಷಣೆ ಒದಗಿಸುತ್ತದೆ.
3)ಲೈಂಗಿಕ ಸಮಸ್ಯೆಗಳಿಗೆ ಪರಿಹಾರ: ಪುರುಷರಲ್ಲಿ ಕಾಡುವ ಲೈಂಗಿಕ ಸಮಸ್ಯೆಗಳಿಗೆ ಅಶ್ವಗಂಧವು ರಾಮಬಾಣವಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಅನೇಕ ಸಮಸ್ಯೆಗಳಿಗೆ ನೈಸರ್ಗಿಕವಾದ ಪರಿಹಾರವನ್ನು ನೀಡುತ್ತವೆ.
4) ರೋಗನಿರೋಧಕ ಶಕ್ತಿ ಹೆಚ್ಚಳ: ಇದೊಂದು ಅದ್ಭುತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದ್ದು ನೂರಾರು ವರ್ಷಗಳಿಂದ ಅಶ್ವಗಂಧವನ್ನು ಇದೇ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಬಲಿಷ್ಟವಾದಷ್ಟೂ ಹಲವಾರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಾಗುತ್ತದೆ. ಈ ಗುಣದಿಂದಾಗಿಯೇ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ರೋಗ ನಿರೋಧಕ ಶಕ್ತಿ ವೃದ್ದಿಸುವ ಔಷಧಿಗಳಲ್ಲಿ ಅಶ್ವಗಂಧವನ್ನು ಪ್ರಮುಖವಾಗಿ ಬಳಸಕಾಗುತ್ತದೆ.
5) ನಿದ್ರಾಹೀನತೆ ಸಮಸ್ಯೆ ನಿವಾರಣೆ: ತುಂಬ ಒತ್ತಡದಿಂದ ನಿದ್ದೆ ಸರಿಯಾಗಿ ಬರುತ್ತಿಲ್ಲವೆಂದರೆ, ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಅಶ್ವಗಂಧ ಪುಡಿ ಹಾಕಿ, ಚೆನ್ನಾಗಿ ಕುಲುಕಿ ಕುಡಿಯಬೇಕು. ಇದರಿಂದ ನಿದ್ರಾಹೀನತೆ ದೂರವಾಗುತ್ತದೆ.
6) ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ: ಅಶ್ವಗಂಧ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹ ಇದನ್ನು ತೋರಿಸಲಾಗಿದೆ, ನಿಮ್ಮ ದೇಹವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ