Water : ಪ್ರತಿನಿತ್ಯ ಹೆಚ್ಚು ನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ..?

Benefits of Water : ಸರಿಯಾದ ಸಮಯಕ್ಕೆ ನೀರು ಕುಡಿಯದೆ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ನಮ್ಮ ದೇಹವನ್ನು ನವೀಕರಣ ಮಾಡಲು ಪ್ರತಿನಿತ್ಯ 7-8 ಎಂಟು ಗ್ಲಾಸ್ ಗಳಷ್ಟು ನೀರು ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ

ನೀರು

ನೀರು

  • Share this:
    ನೀರು(Water) ಪ್ರತಿಯೊಂದು ಜೀವಿಯ ಜೀವನಕ್ಕೆ ಬಹಳ ಅವಶ್ಯಕ(Necessary). ಪಂಚಭೂತಗಳಲ್ಲಿ ನೀರು ಸಹ ಒಂದು. ಅದರಲ್ಲೂ ಬೇಸಿಗೆ(Summer) ಕಾಲದಲ್ಲಿ ನೀರನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಈಗಿನ ಸಮಯದಲ್ಲಿ ಒಂದು ದಿನ(One day) ನೀರು ಕುಡಿಯದಿದ್ದರೆ ಸಂಪೂರ್ಣವಾಗಿ ನಾವು ನಿತ್ರಾಣವಾಗಿ ಬಿಡುತ್ತೇವೆ. ಪುಟ್ಟ ಮಕ್ಕಳು(Children's) ಮತ್ತು ವಯಸ್ಸಾದವರ ಪಾಡಂತೂ ಈ ಸಮಯದಲ್ಲಿ ಹೇಳತೀರದು. ಹೀಗಾಗಿ ನಮ್ಮ ದೇಹ ಶೇಕಡಾ 70 ರಷ್ಟು ನೀರಿನಾಂಶವನ್ನು ಹೊಂದಿರಬೇಕು. ಆದರೆ ಸರಿಯಾದ ಸಮಯಕ್ಕೆ ನೀರು ಕುಡಿಯದೆ ದೇಹದಲ್ಲಿ (Body)ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಹೀಗಾಗಿ ನಮ್ಮ ದೇಹವನ್ನು ನವೀಕರಣ ಮಾಡಲು ಪ್ರತಿನಿತ್ಯ 7-8 ಎಂಟು ಗ್ಲಾಸ್ ಗಳಷ್ಟು ನೀರು ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗಾಗಿ ಪ್ರತಿನಿತ್ಯ ನಾವು ಸರಿಯಾದ ಪ್ರಮಾಣದ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇವೆ.. ಹಾಗಿದ್ರೆ ಆ ಆರೋಗ್ಯಕರ ಪ್ರಯೋಜನಗಳು ಏನು ಎನ್ನುವ ಮಾಹಿತಿ ಇಲ್ಲಿದೆ..

    1)ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

    ನಾವು ಸರಿಯಾದ ರೀತಿಯಲ್ಲಿ ನೀರು ಕುಡಿದೆ ಇದ್ದರೆ ನಮ್ಮ ದೇಹ ನಿರ್ಜಲೀಕರಣ ವಾಗುತ್ತದೆ.. ಹೀಗಾಗಿ ಇದು ನಮ್ಮನ್ನ ದೈಹಿಕವಾಗಿ ಬಳಲುವಂತೆ ಮಾಡುತ್ತದೆ.. ಅದ್ರಲ್ಲೂ ವ್ಯಾಯಾಮ ಹಾಗೂ ಸೂರ್ಯನ ಸುಡುಬಿಸಿಲಿಗೆ ಹೋದಾಗ ತೀರಾ ಬಳಲಿದ ಆಯಾಸದ ರೀತಿಯ ಅನುಭವ ಆಗಬಹುದು.. ಹೀಗಾಗಿ ಪ್ರತಿನಿತ್ಯ ಅಗತ್ಯ ಪ್ರಮಾಣದ ನೀರನ್ನು ಕುಡಿಯುವುದು ಮುಖ್ಯ. ದೇಹದ ನೀರಿನ ಅಂಶದ 2% ನಷ್ಟು ಕಡಿಮೆಯಾದರೆ ನಿರ್ಜಲೀಕರಣವು ಗಮನಾರ್ಹ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರದಷ್ಟೇ ನೀರು ಸೇವನೆ ಮಾಡುವ ಬಗ್ಗೆಯೂ ಎಚ್ಚರ ವಹಿಸಬೇಕು.

    ಇದನ್ನೂ ಓದಿ :ಚಳಿಗಾಲದಲ್ಲಿ ಸ್ನಾನ ಮಾಡಲು ಹಿಂದೆ ಮುಂದೆ ಯೋಚನೆ ಮಾಡ್ತಿದ್ದೀರಾ? ಸಂಶೋಧಕರು ಏನ್ ಹೇಳ್ತಾರೆ ನೋಡಿ

    2) ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಲು

    :ನಮ್ಮ ದೇಹದಲ್ಲಿ ಹೆಚ್ಚಳವಾಗುವ ನಿರ್ಜಲೀಕರಣವೂ ಮೆದುಳಿನ ಕಾರ್ಯಕ್ಷಮತೆ ಕಡಿಮೆ ಮಾಡುತ್ತದೆ.. ನಮ್ಮ ಮೆದುಳು ಜಲಸಂಚಯನ ಸ್ಥಿತಿಯಿಂದ ಭವಿತ ವಾಗಿರುವುದು ಹಲವು ಅಧ್ಯಯನಗಳಿಂದ ಬಹಿರಂಗವಾಗಿದೆ.. ಹೀಗಾಗಿ ನಾವು ಕಡಿಮೆ ಪ್ರಮಾಣದ ನೀರು ಸೇವನೆ ಮಾಡಿದಷ್ಟು ಅದು ನಮ್ಮ ಮನಸ್ಸಿನ ಏಕಾಗ್ರತೆಯನ್ನು ದುರ್ಬಲ ಮಾಡುತ್ತಾ ಹೋಗುತ್ತದೆ..

    3) ತಲೆನೋವು ತಡೆಯಲು ಸಹಕಾರಿ

      ಬೆಳಗ್ಗೆ ಎದ್ದ ತಕ್ಷಣ ಬಹುತೇಕರಿಗೆ ತಲೆ ನೋವು ಕಾಡುತ್ತದೆ ಆದರೆ ಇದಕ್ಕೆ ಪ್ರಮುಖ ಕಾರಣ ನಿರ್ಜಲೀಕರಣ.. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದೇ ಉಂಟಾಗುವ ನಿರ್ಜಲೀಕರಣವೂ ಮೈಗ್ರೇನ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ..ಹೀಗಾಗಿ ಪ್ರತಿದಿನ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಮರೆಯಬೇಡಿ..

    4) ಮಲಬದ್ಧತೆ ನಿವಾರಣೆಗೆ ಸಹಕಾರಿ

    ಇತ್ತೀಚಿನ ದಿನಗಳಲ್ಲಿ ಬಹುತೇಕರಿಗೆ ಕಾಡುವ ಸಮಸ್ಯೆ ಅಂದ್ರೆ ಮಲಬದ್ಧತೆ. ದೇಹಕ್ಕೆ ದ್ರವ ಆಹಾರದ ಸೇವನೆ ಕಡಿಮೆಯಾದಾಗ ಮಲಬದ್ಧತೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮೆಗ್ನೀಷಿಯಂ ಮತ್ತು ಸೋಡಿಯಂ ಸಮೃದ್ಧವಾಗಿರುವ ನೆರಳು ವಾಟರ್ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಗಾಗಿ ಕರುಳಿನ ಆರೋಗ್ಯ ಸುಧಾರಣೆಯಾಗಲಿದೆ..

    ಇದನ್ನೂ ಓದಿ :ನೀರನ್ನು ಕುಡಿಯುವಾಗ ಈ ತಪ್ಪುಗಳನ್ನು ಮಾಡಿದ್ರೆ ಆರೋಗ್ಯಕ್ಕೆ ಅಪಾಯ-ಎಚ್ಚರ

    5) ಕಿಡ್ನಿಸ್ಟೋನ್ ನಿಂದ ರಕ್ಷಣೆ

    ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದು ಎಂಬುದು ಸಾಮಾನ್ಯ ಕಾಯಿಲೆ. ಗಂಡಸರು, ಹೆಂಗಸರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯ ಎನಿಸಿದರೂ, ಕಾಯಿಲೆಯಿಂದ ಆಗುವ ನೋವು ಸಹಿಸಲಸಾಧ್ಯ. ಕೆಲವೊಮ್ಮೆ, ನಮ್ಮ ಮೂತ್ರಪಿಂಡಗಳು ಸಣ್ಣ ಸ್ಫಟಿಕದಂತಹ ಕಲ್ಲನ್ನು ಹೊಂದಿರುತ್ತವೆ. ಇವನ್ನೇ ಮೂತ್ರಪಿಂಡದ ಕಲ್ಲುಗಳು ಎಂದು ಕರೆಯುತ್ತಾರೆ. ಹೀಗಾಗಿ ಇವುಗಳನ್ನು ನಿವಾರಣೆ ಮಾಡಲು ಪ್ರತಿನಿತ್ಯ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರು ಸೇವನೆ ಮಾಡುವುದು ಉತ್ತಮ..

    5) ತೂಕ ಇಳಿಕೆಗೆ ಸಹಕಾರಿ

    ದೇಹದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ತೂಕ ಇಳಿಸಿಕೊಳ್ಳಬೇಕು ಎಂದು ಬಹುತೇಕರು ವ್ಯಾಯಾಮ ಹಾಗೂ,ಇನ್ನಿತರ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.. ಆದರೆ ಪ್ರತಿನಿತ್ಯ ಎರಡರಿಂದ ಮೂರು ಲೀಟರ್ ನೀರು ಕುಡಿಯುವುದರಿಂದ ನಿಯಮಿತವಾಗಿ ತೂಕವನ್ನು ಇಳಿಸಿಕೊಳ್ಳಬಹುದು..
    Published by:ranjumbkgowda1 ranjumbkgowda1
    First published: