• ಹೋಂ
 • »
 • ನ್ಯೂಸ್
 • »
 • lifestyle
 • »
 • Alzheimer's Disease: ಅತ್ಯಂತ ಚಿಕ್ಕ ವಯಸ್ಸಿನ ವ್ಯಕ್ತಿಗೆ ಅಲ್ಝೈಮರ್ ಕಾಯಿಲೆ! ಚೀನಾದಲ್ಲಿ ಮತ್ತೊಂದು ಶಾಕಿಂಗ್ ಕೇಸ್

Alzheimer's Disease: ಅತ್ಯಂತ ಚಿಕ್ಕ ವಯಸ್ಸಿನ ವ್ಯಕ್ತಿಗೆ ಅಲ್ಝೈಮರ್ ಕಾಯಿಲೆ! ಚೀನಾದಲ್ಲಿ ಮತ್ತೊಂದು ಶಾಕಿಂಗ್ ಕೇಸ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಾವು ನೀವೆಲ್ಲ ಅಲ್ಝೈಮರ್ ಎಂಬ ಕಾಯಿಲೆಯ ಬಗ್ಗೆ ಕೇಳಿರುತ್ತೇವೆ. ಇದೊಂದು ಆರೋಗ್ಯದ ಅವಸ್ಥೆಯಾಗಿದ್ದು ಇದರಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತೀಕ್ಷ್ಣ ಮರೆಯುವಿಕೆಯಂತಹ ಸ್ಥಿತಿಯನ್ನು ಅನುಭವಿಸುತ್ತಿರುತ್ತಾರೆ. ಚೀನಾದಲ್ಲಿ ಪತ್ತೆಯಾದ ಅಲ್ಝೈಮರ್ ಬಗ್ಗೆ ಇಲ್ಲಿದೆ ವರದಿ.

 • Trending Desk
 • 2-MIN READ
 • Last Updated :
 • Share this:

  ನಾವು ನೀವೆಲ್ಲ ಅಲ್ಝೈಮರ್ (Alzheimer's) ಎಂಬ ಕಾಯಿಲೆಯ (Disease) ಬಗ್ಗೆ ಕೇಳಿರುತ್ತೇವೆ. ಇದೊಂದು ಆರೋಗ್ಯದ ಅವಸ್ಥೆಯಾಗಿದ್ದು ಇದರಿಂದ ಬಳಲುತ್ತಿರುವವರು ಸಾಮಾನ್ಯವಾಗಿ ತೀಕ್ಷ್ಣ ಮರೆಯುವಿಕೆಯಂತಹ ಸ್ಥಿತಿಯನ್ನು ಅನುಭವಿಸುತ್ತಿರುತ್ತಾರೆ. ಇನ್ನೊಂದು ವಿಷಯವೆಂದರೆ ಸಾಮಾನ್ಯವಾಗಿ (Generally) ಈ ಕಾಯಿಲೆ ವಯಸ್ಸಾದಂತೆ ಅಥವಾ ಹೆಚ್ಚಾಗಿ ಹಿರಿಯರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯಲೋಕವನ್ನು (Medical World) ಅಚ್ಚರಿಗೊಳಿಸುವಂತಹ ಒಂದು ಘಟನೆ (Incident) ಇದೀಗ ಚೀನಾದಿಂದ (China) ವರದಿಯಾಗಿದೆ (Report).  ಚೀನಾದ ನರರೋಗ ತಜ್ಞರು ಇದೀಗ 19ರ ಪ್ರಾಯದ ಯುವಕನೊಬ್ಬ ಈ ಕಾಯಿಲೆಯಿಂದ ಬಳಲುತ್ತಿರುವುದಾಗಿ ಕಂಡುಕೊಂಡಿದ್ದಾರೆ.


  ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಅಲ್ಝೈಮರ್ ಕಾಯಿಲೆಗೆ ತುತ್ತಾಗಿರುವ ಈ ವ್ಯಕ್ತಿ ವಿಶ್ವದಲ್ಲೇ ಪ್ರಥಮ ಎನ್ನಲಾಗುತ್ತಿದೆ. ಕಾಯಿಲೆಯಿಂದ ಬಳಲುತ್ತಿರುವ ಈ ಯುವಕ ಹದಿನೇಳು ವರ್ಷದವರಿದ್ದಾಗಲೇ ಸ್ಮರಣೆ ಹಾಗೂ ಅರಿವಿನ ಕೊರತೆಯಿಂದ ಬಳಲಲು ಪ್ರಾರಂಭಿಸಿದರೆನ್ನಲಾಗಿದೆ. ವರ್ಷಗಳುರುಳಿದಂತೆ ಅವರ ಈ ಸ್ಥಿತಿ ಇನ್ನಷ್ಟು ಬಿಗಡಾಯಿಸಿತೆನ್ನಲಾಗಿದೆ.


  Alzheimers disease for a very young person Another shocking case in China
  ಸಾಂಕೇತಿಕ ಚಿತ್ರ


  ಸೆರೆಬ್ರೋಸ್ಪೈನಲ್ ದ್ರವದ ಮಾರ್ಕ್​ 


  ವೈದ್ಯರು ಈ ಯುವಕನ ಮೆದುಳಿನ ಇಮೇಜಿಂಗ್ ಮಾಡಿದಾಗ ಅದರಲ್ಲಿ ಆ ಯುವಕನ ಮೆದುಳಿನಲ್ಲಿರುವ ಸ್ಮರಣೆಗೆ ಸಂಬಂಧಿಸಿದ ಭಾಗವಾದ ಹಿಪ್ಪೊಕ್ಯಾಂಪಸ್ ಕುಗ್ಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಈ ಕಾಯಿಲೆಯ ಸಂದರ್ಭದಲ್ಲಿ ಸಹಜವಾಗಿ ಕಂಡುಬರುವ ಸೆರೆಬ್ರೋಸ್ಪೈನಲ್ ದ್ರವದ ಮಾರ್ಕಿಂಗ್ ಗಳು ಸಹ ಕಂಡುಬಂದಿರುವುದಾಗಿ ವೈದ್ಯರು ತಿಳಿಸಿದ್ದಾರೆನ್ನಲಾಗಿದೆ.


  ಇಲ್ಲಿ ಗಮನಿಸಬೇಕಾಗಿರುವ ಒಂದು ಸಂಗತಿ ಎಂದರೆ, ಇಲ್ಲಿಯವರೆಗೂ ಅಲ್ಝೈಮರ್ ಸ್ಥಿತಿಯು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುವ ಆರೋಗ್ಯ ಸ್ಥಿತಿಯಾಗಿದೆ ಎಂದು ನಂಬಿಕೆಯಿದ್ದು, ಅಷ್ಟಕ್ಕೂ 65 ರ ವಯೋಮಾನಕ್ಕಿಂತ ಕಡಿಮೆ ಇರುವವರ ಪೈಕಿ ಅಂದಾಜು ಶೇ. ಹತ್ತರಷ್ಟು ಜನರು ಈ ಕಾಯಿಲೆ ಅಭಿವೃದ್ಧಿಪಡಿಸಿಕೊಳ್ಳಬಹುದೆಂಬ ಅಭಿಪ್ರಾಯವಿದೆ.


  ಇದೀಗ ವರದಿಯಾದ ಘಟನೆಯಿಂದ ಕಡಿಮೆ ವಯಸ್ಸಿನಲ್ಲೂ ಈ ಕಾಯಿಲೆ ಬರಬಹುದಾದ ಸಾಧ್ಯತೆಯನ್ನು ಪುಷ್ಟೀಕರಿಸಿದಂತಾಗಿದೆ. ಹಾಗೆ ನೋಡಿದರೆ ಮುವತ್ತರ ವಯೋಮಾನದೊಳಗಿರುವ ಎಲ್ಲರೂ ತಮ್ಮದೆ ಆದ ಅಲ್ಝೈಮರ್ ಗುಣಗಳನ್ನು ತಮ್ಮ ವಂಶವಾಹಿನಿಗಳಲ್ಲಿ ಹೊಂದಿರುತ್ತಾರೆ.


  ಈ ವಂಶವಾಹಿನಿಗಳು ಎಷ್ಟು ದೋಷಪೂರಿತವಾಗಿರುತ್ತವೆ ಎಂಬುದರ ಮೇಲೆ ಅವರವರ ಅಲ್ಝೈಮರ್ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.


  Alzheimers disease for a very young person Another shocking case in China
  ಸಾಂಕೇತಿಕ ಚಿತ್ರ


  ಸಂಶೋಧಕರು ಏನು ಹೇಳ್ತಾರೆ ಗೊತ್ತಾ?


  ಆದಾಗ್ಯೂ ಈ ಉದಾಹರಣೆಯಲ್ಲಿ ಚೀನಾದ ಕ್ಯಾಪಿಟಲ್ ಮೆಡಿಕಲ್ ವಿವಿಯ ಸಂಶೋಧಕರು ಯುವಕನ ಮೆದುಳಿನಲ್ಲಿ ಅಲ್ಝೈಮರ್ ಗೆ ಕಾರಣವಾಗಬಹುದಾದ ದೋಷಯುಕ್ತವಾದ ಯಾವುದೇ ರೀತಿಯ ರೂಪಾಂತರಿ ವಂಶವಾಹಿನಿಗಳನ್ನು ಗಮನಿಸಿಲ್ಲವೆಂದು ಹೇಳಿದ್ದಾರೆ.


  ಪ್ರಸ್ತುತ ವ್ಯಕ್ತಿಯು ಅಲ್ಝೈಮರ್ ಪೀಡಿತನೆಂದು ಗೊತ್ತಾಗುವುದಕ್ಕೂ ಮುಂಚೆ ಇಲ್ಲಿಯವರೆಗೂ ಅಲ್ಝೈಮರ್ ನಿಂದ ಬಳಲುತ್ತಿರುವ ಅತಿ ಕಿರಿಯ ವಯಸ್ಸಿನ ವ್ಯಕ್ತಿಯ ವಯಸ್ಸು 21 ಆಗಿತ್ತು. ಈ ವ್ಯಕ್ತಿಯು PSEN1 ಜೀನ್ ರೂಪಾಂತರಿಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದು ಅದರ ಪರಿಣಾಮದಿಂದಾಗಿ ಮೆದುಳಿನಲ್ಲಿ ಅಲ್ಝೈಮರ್ ಕಾಯಿಲೆಯ ಸಹಜ ಲಕ್ಷಣವಾದ ಪ್ಲೇಕ್ ಗಳು ಸೃಷ್ಟಿಯಾಗಿದ್ದವು.


  ಆದರೆ ಚೀನಾದಲ್ಲಿ ವರದಿಯಾಗಿರುವ ಈ ಘಟನೆಯು ಸಾಕಷ್ಟು ರಹಸ್ಯಮಯವಾಗಿದೆ. ಏಕೆಂದರೆ ಇಲ್ಲಿ ಯಾವುದೇ ರೀತಿಯ ಜೀನ್ ಮ್ಯೂಟೇಷನ್ ಕಂಡುಬಂದಿಲ್ಲ. ಅದೂ ಅಲ್ಲದೆ ಈ ವ್ಯಕ್ತಿಯು ಕುಟುಂಬದಲ್ಲಿ ಅಲ್ಝೈಮರ್ ನಿಂದ ಬಳಲಿದ, ಬಳಲುತ್ತಿರುವ ಯಾವುದೇ ಇತಿಹಾಸವನ್ನೂ ಸಹ ಹೊಂದಿಲ್ಲ.


  ಕಾಯಿಲೆ ತಿಳಿದ ಬಗೆ


  ಪ್ರಸ್ತುತ ಚೀನಾದ ಯುವಕನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸುವುದಕ್ಕಿಂತ ಮುಂಚೆ ಸುಮಾರು ಎರಡು ವರ್ಷಗಳ ಹಿಂದ ಆತ ತರಗತಿಯಲ್ಲಿ ಗಮನಹರಿಸುವುದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸಲು ಪ್ರಾರಂಭಿಸಿದ. ಕ್ರಮೇಣ ಓದುವುದು ಸಹ ಕಠಿಣವಾಗತೊಡಗಿದ್ದಲ್ಲದೆ ಅಲ್ಪಾವಧಿ ಸ್ಮರಣ ಶಕ್ತಿಯು ಕುಗ್ಗತೊಡಗಿತು.


  ಇದನ್ನೂ ಓದಿ:China Corona Virus: ಮತ್ತೆ ಚೀನಾದಲ್ಲಿ ಮೊಳಗುತ್ತಿದೆ ಸಾವಿನ ಗಂಟೆ; ಒಂದು ವಾರದಲ್ಲಿ ಸತ್ತವರೆಷ್ಟು ಗೊತ್ತಾ?


  ದಿನದ ಹಿಂದೆ ಜರುಗಿದ ಘಟನೆಗಳು ಸಹ ಯುವಕನಿಗೆ ನೆನಪಿಸಿಕೊಳ್ಳಲು ಕಠಿಣವಾಗತೊಡಗಿದವು. ಅಲ್ಲದೆ ಯುವಕ ತನ್ನ ವಸ್ತುಗಳನ್ನು ಕಳೆದುಕೊಳ್ಳತೊಡಗಿದ. ಇದು ಆ ಯುವಕನ ಪಾಲಿಗೆ ಎಷ್ಟು ಸಮಸ್ಯೆ ಆಯಿತೆಂದರೆ ಆತ ತನ್ನ ಪ್ರೌಢ ಶಿಕ್ಷಣವನ್ನು ಮುಗಿಸಲೂ ಸಹ ಅಸಮರ್ಥನಾದ.


  ತದನಂತರ ಆ ಯುವಕನಿಗೆ ಸ್ಮರಣೆಗೆ ಸಂಬಂಧಿಸಿದ ಪರೀಕ್ಷೆಗೊಳಪಡುವಂತೆ ಶಿಫಾರಸ್ಸು ಮಾಡಲಾಯಿತು. ಅಲ್ಲಿ ವಿವಿಧ ರೀತಿಯ ಸ್ಮರಣಶಕ್ತಿಯ ಪರೀಕ್ಷೆಗಳನ್ನು ಮಾಡಿದಾಗ ಆ ಯುವಕ ತನ್ನ ಸಮಾನ ವ್ಯಸ್ಕರಿಗೆ ಹೋಲಿಸಿದಾಗ ಸುಮಾರು 82% ರಷ್ಟು ಸ್ಮರಣ ನಷ್ಟದಿಂದ ಬಳಲುತ್ತಿರುವುದು ಕಂಡುಬಂದಿತು.
  ಇದೀಗ ಈ ಯುವಕನ ಈ ಕಾಯಿಲೆಯು ವೈದ್ಯಲೋಕವನ್ನೇ ತಬ್ಬಿಬ್ಬು ಆಗುವಂತೆ ಮಾಡಿದ್ದು ಹೊಸ ಸವಾಲೊಂದನ್ನು ಎಸೆದಂತಾಗಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರ್ದಿ ಮಾಡಿರುವಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಣಿತ ವೈದ್ಯರು ಈ ಪ್ರಕರಣವು ಭವಿಷ್ಯದಲ್ಲಿ ಹೊಸ ಬಗೆಯ ಕಾರಣಗಳು ಇರಬಹುದಾದ ಸಾಧ್ಯತೆಯನ್ನು ಅಂದಾಜಿಸಲು ಸವಾಲನ್ನೆಸಿದಿದೆ ಎಂದಿದ್ದಾರೆ.

  Published by:Gowtham K
  First published: