• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Ice Water Baths: ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳು ಮಾಡುವ ಐಸ್ ವಾಟರ್ ಬಾತ್ ಆರೋಗ್ಯಕರವೇ? ತಜ್ಞರ ಅಭಿಪ್ರಾಯವೇನು?

Ice Water Baths: ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳು ಮಾಡುವ ಐಸ್ ವಾಟರ್ ಬಾತ್ ಆರೋಗ್ಯಕರವೇ? ತಜ್ಞರ ಅಭಿಪ್ರಾಯವೇನು?

ಟೀಂ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿ

ಟೀಂ ಇಂಡಿಯಾ ಆಟಗಾರ ವಿರಾಟ್​ ಕೊಹ್ಲಿ

ವೃತ್ತಿಪರ ಮತ್ತು ಕ್ರಾಸ್‌ಫಿಟ್ ಅಥ್ಲೀಟ್ ಶ್ರೀನಾಥ್ ಪಿ ಸಾಧು ಕೂಡ ಐಸ್ ವಾಟರ್ ಸ್ನಾನವನ್ನು ಹೆಚ್ಚು ಶಿಫಾರಸು ಮಾಡುತ್ತಾರೆ. ದೇಹವನ್ನು ಉಲ್ಲಾಸಗೊಳಿಸಲು ಹಾಗೂ ನೋವಿನಿಂದ ಶಮನ ಪಡೆಯಲು ಶ್ರೀನಾಥ್ ಐಸ್ ವಾಟರ್ ಸ್ನಾನವನ್ನು ಮಾಡುತ್ತಾರೆ ಎಂದು ತಿಳಿಸಿದ್ದಾರೆ.

 • Share this:

ಅನೇಕ ಕ್ರೀಡಾಪಟುಗಳು (Athlete) ದೇಹದಾರ್ಢ್ಯಪಟುಗಳು, ಬಾಕ್ಸರ್‌ಗಳು, ರೆಸ್ಲರ್‌ಗಳು ಕಠಿಣ ದೈಹಿಕ ಚಟುವಟಿಕೆಯ ನಂತರ ಐಸ್ ಕ್ಯೂಬ್‌ಗಳಿಂದ (Ice Cube) ತುಂಬಿದ ಟಬ್‌ನಲ್ಲಿ ಕೊಂಚ ಕಾಲ ವಿರಮಿಸುತ್ತಾರೆ. ಹೇಳುವಾಗಲೇ ಮೈ ರೋಮಾಂಚನಗೊಳಿಸುವ ಈ ಅನುಭವ ಮೈ ಕೊರೆಯುವ ಶೀತದ (Cold) ಅನುಭವವನ್ನು ಒದಗಿಸಿದರೂ ಕಠಿಣ ತರಬೇತಿಯ ನಂತರ ಉಂಟಾಗುವ ಮೈಕೈ ನೋವನ್ನು (Body Aches) ಶಮನ ಮಾಡುವಲ್ಲಿ ಪರಿಣಾಮಕಾರಿ ಎಂದೆನಿಸಿದೆ.


ನೋವಿನ ವಿಧಾನವನ್ನು ಚೇತರಿಕೆಯ ಸಮಯವನ್ನು ವೇಗಗೊಳಿಸಲು ವ್ಯಾಪಕವಾಗಿ ಐಸ್ ಬಾತ್ ಅನ್ನು ಬಳಸಲಾಗುತ್ತದೆ. ಕ್ರೀಡಾಳುಗಳು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಮಂಜುಗಡ್ಡೆಯ ಸ್ನಾನವನ್ನು ಮಾಡಬಹುದೇ ಎಂಬುದನ್ನು ಇಂದಿನ ಲೇಖನದಲ್ಲಿ ಚರ್ಚಿಸಲಾಗಿದ್ದು, ಫಿಟ್‌ನೆಸ್ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.


ಇದನ್ನೂ ಓದಿ: Wrinkles Problem: ಕೈಗಳ ಸುಕ್ಕುಗಳ ಬಗ್ಗೆ ಭಯವೂ ಬೇಡ, ನಿರ್ಲಕ್ಷ್ಯವೂ ಬೇಡ; ಕಾಳಜಿ ಮಾತ್ರ ಹೀಗಿರಲಿ


ಮಂಜುಗಡ್ಡೆ ನೀರಿನ ಸ್ನಾನ (ಸಾಂದರ್ಭಿಕ ಚಿತ್ರ)


ದೇಹದ ನೋವನ್ನು ಶಮನಗೊಳಿಸುವ ಮಂಜುಗಡ್ಡೆಯ ಸ್ನಾನ


ಇತ್ತೀಚೆಗೆ ತಾನೇ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಹಾಗೂ ಮಾಜಿ ಭಾರತ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿ ಇದೇ ರೀತಿ ಮಂಜುಗಡ್ಡೆಯಿಂದ ತುಂಬಿದ ಬಕೆಟ್‌ನಲ್ಲಿ ದೇಹವನ್ನು ತಣ್ಣಗೆ ಮಾಡಿಕೊಳ್ಳುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.


ಕಠಿಣ ತರಬೇತಿಯ ನಂತರ ದೇಹವನ್ನು ವಿಶ್ರಾಂತಿಗೊಳಿಸಲು ವಿರಾಟ್ ಐಸ್ ಕ್ಯೂಬ್‌ಗಳ ತೊಟ್ಟಿಯಲ್ಲಿ ವಿರಮಿಸಿದ್ದಾರೆ. ವ್ಯಾಯಾಮದ ನಂತರದ ಬಿಗಿತವನ್ನು ಶಮನಗೊಳಿಸಲು ಇದು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ ಎಂಬುದು ಫಿಟ್‌ನೆಸ್ ತಜ್ಞರ ಮಾತಾಗಿದೆ.


ಇದನ್ನೂ ಓದಿ: Ugadi 2023: ಯುಗಾದಿ ದಿನ ಎಣ್ಣೆ ಸ್ನಾನ ಮಾಡುವುದು ಹೇಗೆ? ದೇಹದ ಯಾವೆಲ್ಲ ಭಾಗಕ್ಕೆ ತೈಲ ಹಚ್ಚಿಕೊಳ್ಳಬೇಕು?


ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ


ಐಸ್ ವಾಟರ್ ಬಾತ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುವವರು ಕೂಡ ಇದನ್ನು ತಮ್ಮ ದಿನಚರಿಯ ಭಾಗವನ್ನಾಗಿ ಆಯ್ದುಕೊಂಡಿದ್ದು ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.


ಐಸ್ ವಾಟರ್‌ ಸ್ನಾನವು ನರಮಂಡಲವನ್ನು ಪುನರ್ ಸ್ಥಾಪಿಸಲು ಸಹಕಾರಿಯಾಗಿದೆ ಹಾಗೂ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ ಅಂತೆಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ.


ನಗರದಲ್ಲಿ ಐಟಿ ಫರ್ಮ್‌ನಲ್ಲಿ ಕೆಲಸ ಮಾಡುವ ಊರ್ಮಿಳಾ ಬಿಸ್ವಾಸ್ ಕೂಡ ಐಸ್ ಕ್ಯೂಬ್‌ ಟಬ್‌ನಲ್ಲಿ ವಿರಮಿಸುವ ಅನುಭವವನ್ನು ಹಂಚಿಕೊಂಡಿದ್ದಾರೆ. ಆಕೆ ಕನಿಷ್ಠ ಪಕ್ಷ 8-10 ನಿಮಿಷಗಳ ಕಾಲ ಟಬ್‌ನಲ್ಲಿಯೇ ಇರಲು ಪ್ರಯತ್ನಿಸುತ್ತಾರೆ ಎಂದು ತಿಳಿಸಿದ್ದಾರೆ.
ಅನುಭವಿಗಳಿಂದ ತರಬೇತಿ ಅಗತ್ಯ


ಅಥ್ಲೀಟ್, ಫಿಟ್‌ನೆಸ್ ಪ್ರಭಾವಿ ಮತ್ತು ಸ್ವೆಟಿ ನಿಂಜಾಸ್‌ನ ಸಹ-ಸಂಸ್ಥಾಪಕಿ ಶ್ವೇತಾ ದೇವರಾಜ್ ತಿಳಿಸಿರುವಂತೆ ಕ್ರೀಡಾಪಟುಗಳಲ್ಲದವರು ಕೂಡ ಐಸ್ ವಾಟರ್ ಸ್ನಾನವನ್ನು ಆಯ್ಕೆಮಾಡಬಹುದು ಆದರೆ ಅವರು ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.


ಶೀತವು ಶಕ್ತಿಯುತವಾಗಿದೆ ಮತ್ತು ದೇಹದಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಒತ್ತಡದ ಪರಿಸ್ಥಿತಿಯಲ್ಲಿ ಆರಾಮದಾಯಕವಾಗುವುದರ ಮೂಲಕ ಮಾನಸಿಕ ಸ್ಥಿತಿಯನ್ನು ಶಾಂತಗೊಳಿಸುತ್ತದೆ. ಶೀತಕ್ಕೆ ಒಡ್ಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದು ಶ್ವೇತಾ ಸಲಹೆಯಾಗಿದೆ.


ಆದರೆ ಇದನ್ನು ಅತಿಯಾಗಿ ಮಾಡಬಾರದು ಎಂದು ಶ್ವೇತಾ ಸಲಹೆ ನೀಡುತ್ತಾರೆ. ಮಿತಿಮೀರಿದ ಸ್ನಾನವು ದೇಹಕ್ಕೆ ಒತ್ತಡವನ್ನುಂಟು ಮಾಡುತ್ತದೆ ಹಾಗೂ ಅನುಭವಿಗಳ ಸಹಾಯದಿಂದ ಈ ಸ್ನಾನವನ್ನು ಅನುಸರಿಸುವುದು ಒಳಿತು ಎಂದು ಸಲಹೆ ನೀಡುತ್ತಾರೆ.


ಈ ಪ್ರಕ್ರಿಯೆಯು ದಣಿದ ಸ್ನಾಯುಗಳಿಂದ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ವಿಷಗಳನ್ನು ಹೊರಹಾಕುತ್ತದೆ ಎಂದು ನಿವಾಸಿಯಾದ ದೇವರಾಜ್ ತಿಳಿಸುತ್ತಾರೆ.


ಮಂಜುಗಡ್ಡೆ ನೀರಿನ ಸ್ನಾನ (ಸಾಂದರ್ಭಿಕ ಚಿತ್ರ)


ನರಮಂಡಲ ಚೇತರಿಕೆಗೆ ಸಹಕಾರಿ


ಇನ್ವಿಕ್ಟಸ್ ಪರ್ಫಾರ್ಮೆನ್ಸ್ ಲ್ಯಾಬ್‌ನ ನಿರ್ದೇಶಕ, ವ್ಯಾಯಾಮ ಶರೀರಶಾಸ್ತ್ರಜ್ಞ ಮತ್ತು ಕಾರ್ಯಕ್ಷಮತೆಯ ತರಬೇತುದಾರ ರೋಹನ್ ಮ್ಯಾಥ್ಯೂ ಪ್ರಕಾರ, ಐಸ್ ನೀರಿನ ಸ್ನಾನದಿಂದ ಹೆಚ್ಚು ಪ್ರಯೋಜನವಿದೆ ಎಂದಾಗಿದೆ.


ಐಸ್ ವಾಟರ್ ಬಾತ್ ತೆಗೆದುಕೊಳ್ಳುವುದು ಕ್ರೀಡಾ ಜಗತ್ತಿನಲ್ಲಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದು ಕ್ರೀಡಾಳುಗಳ ನೋವನ್ನು ಶಮನ ಮಾಡುತ್ತದೆ ಹಾಗೂ ನರಮಂಡಲವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.


ಅದೂ ಅಲ್ಲದೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಒಟ್ಟಿನಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ ಎಂದು ಮ್ಯಾಥ್ಯೂ ತಿಳಿಸುತ್ತಾರೆ.


ಇದನ್ನೂ ಓದಿ: Beauty Tips: ಕನ್ನಡಕದಿಂದ ಮುಖದ ಮೇಲೆ ಕಲೆ ಆಗಿದ್ಯಾ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ


ದೇಹಕ್ಕೆ ಉಲ್ಲಾಸ ನೀಡುತ್ತದೆ

top videos


  ವೃತ್ತಿಪರ ಮತ್ತು ಕ್ರಾಸ್‌ಫಿಟ್ ಅಥ್ಲೀಟ್ ಶ್ರೀನಾಥ್ ಪಿ ಸಾಧು ಕೂಡ ಐಸ್ ವಾಟರ್ ಸ್ನಾನವನ್ನು ಹೆಚ್ಚು ಶಿಫಾರಸು ಮಾಡುತ್ತಾರೆ. ದೇಹವನ್ನು ಉಲ್ಲಾಸಗೊಳಿಸಲು ಹಾಗೂ ನೋವಿನಿಂದ ಶಮನ ಪಡೆಯಲು ಶ್ರೀನಾಥ್ ಐಸ್ ವಾಟರ್ ಸ್ನಾನವನ್ನು ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಐಸ್ ವಾಟರ್ ಸ್ನಾನ ಎಂದರೆ ಮಂಜುಗಡ್ಡೆಗಳಿಂದ ತುಂಬಿದ ಟಬ್‌ನಲ್ಲಿ ಸ್ವಲ್ಪ ಸಮಯ ಇರುವುದಾಗಿದೆ.

  First published: