• Home
  • »
  • News
  • »
  • lifestyle
  • »
  • Eye Care: ಈ 5 ಲಕ್ಷಣ ಕಾಣಿಸಿಕೊಂಡ್ರೆ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿ, ವೈದ್ಯರೇ ಕೊಟ್ಟ ಸಲಹೆ ಇದು

Eye Care: ಈ 5 ಲಕ್ಷಣ ಕಾಣಿಸಿಕೊಂಡ್ರೆ ತಪ್ಪದೇ ಕಣ್ಣಿನ ಪರೀಕ್ಷೆ ಮಾಡಿಸಿ, ವೈದ್ಯರೇ ಕೊಟ್ಟ ಸಲಹೆ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Eye care Tips By Experts: ಯಾಕೆ ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ಪರೀಕ್ಷೆ ಮಾಡಿಸಬೇಕು ಎಂಬುದರ ಬಗ್ಗೆ  ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗದ ಕಣ್ಣಿನ ಪೊರೆ ಮತ್ತು ಗಾಯಕ್ಕೆ ಸಂಬಂಧಿಸಿದ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ ಮಾಹಿತಿ ನೀಡಿದ್ದಾರೆ. 

  • Share this:

ಜೀವನದಲ್ಲಿ  (Life) ಸ್ವಲ್ಪ ಬ್ರೇಕ್ (Break) ಅನಿಸಿದಾಗ ಹೇಗೆ ನಾವು ವರ್ಷಕ್ಕೆ (Yearly) ಒಮ್ಮೆ ಟ್ರಿಪ್ ಹೋಗುತ್ತೇವೆಯೋ ಹಾಗೆಯೇ, ವಾರ್ಷಿಕ ಆರೋಗ್ಯ (Health Checkup) ತಪಾಸಣೆಯನ್ನು ಮಾಡಿಸಿಕೊಳ್ಳುವುದೂ ಬಹಳ ಮುಖ್ಯ.  ದುರದೃಷ್ಟವಶಾತ್, ತೀವ್ರ ಆರೋಗ್ಯ ತೊಂದರೆಗಳು (Health Problems) ಪ್ರಾರಂಭವಾಗುವವರೆಗೂ ನಮ್ಮಲ್ಲಿ ಹೆಚ್ಚಿನವರು ಆರೋಗ್ಯ ಪರೀಕ್ಷೆಗೆಂದು ಹೋಗುವುದೇ ಇಲ್ಲ. ನಿಮ್ಮ ವಯಸ್ಸನ್ನು ಲೆಕ್ಕಿಸದೆ ನಿಯಮಿತ ಕಣ್ಣಿನ (Eye Care)  ತಪಾಸಣೆ ನಿಮ್ಮ ಪಟ್ಟಿಯಲ್ಲಿ ಇರಬೇಕು ಎನ್ನುತ್ತಾರೆ ವೈದ್ಯರು. ಹಾಗಾದ್ರೆ ಯಾಕೆ ವರ್ಷಕ್ಕೆ ಒಮ್ಮೆಯಾದರೂ ಕಣ್ಣಿನ ಪರೀಕ್ಷೆ ಮಾಡಿಸಬೇಕು ಎಂಬುದರ ಬಗ್ಗೆ  ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗದ ಕಣ್ಣಿನ ಪೊರೆ ಮತ್ತು ಗಾಯಕ್ಕೆ ಸಂಬಂಧಿಸಿದ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ ಮಾಹಿತಿ ನೀಡಿದ್ದಾರೆ. 


ನಿಯಮಿತ ಕಣ್ಣಿನ ಪರೀಕ್ಷೆಗಳು ನಿಮ್ಮ ದೃಷ್ಟಿಯನ್ನು ಬಲಪಡಿಸುವುದು ಮಾತ್ರವಲ್ಲದೇ, ಅವು ಕಣ್ಣಿನ ಕಾಯಿಲೆಗಳನ್ನು ಸಹ ಪತ್ತೆಹಚ್ಚುತ್ತವೆ, ಅವುಗಳಲ್ಲಿ ಅನೇಕ ಸಮಸ್ಯೆಗಳು ದೀರ್ಘಕಾಲದವರೆಗೆ ಗಮನಕ್ಕೆ ಬರುವುದಿಲ್ಲ. ನಿಮಗೆ ತಕ್ಷಣದ ಕಣ್ಣಿನ ತಪಾಸಣೆ ಏಕೆ ಬೇಕು ಎಂಬುದನ್ನು ಸೂಚಿಸುವ 5 ಲಕ್ಷಣಗಳು ಇಲ್ಲಿವೆ:


ದೃಷ್ಟಿಯಲ್ಲಿ ಬದಲಾವಣೆ
ನಿಮಗೆ ವಸ್ತುಗಳು ಮೊದಲಿಗಿಂತ ಹೆಚ್ಚು ಅಸ್ಪಷ್ಟವಾಗಿ ಕಾಣುತ್ತಿದ್ದರೆ, ಅಥವಾ ಮೆನುವಿನಲ್ಲಿ ಇರುವ ವಸ್ತುಗಳನ್ನು  ಓದಲು ಹೆಚ್ಚು ಪ್ರಯತ್ನದ ಅಗತ್ಯವಿದ್ದರೆ ಅಥವಾ ನೀವು ಚಾಲನೆ ಮಾಡುವಾಗ ಹೆಚ್ಚು ಕಷ್ಟಪಡಬೇಕಾದ ಅಗತ್ಯವಿದ್ದರೆ, ವಿವರವಾದ ಕಣ್ಣಿನ ಪರೀಕ್ಷೆಗಾಗಿ ನೀವು ನೇತ್ರತಜ್ಞರನ್ನು ಭೇಟಿ ಮಾಡುವ ಸಮಯ ಇದು ಎಂದು ಅರ್ಥ ಮಾಡಿಕೊಳ್ಳಬೇಕು. ಮಸುಕಾದ ದೃಷ್ಟಿಯು ಗ್ಲಾಕೋಮಾದಂತಹ ಇತರ ಸಂಕೀರ್ಣ ಕಣ್ಣಿನ ಸ್ಥಿತಿಗಳ ಲಕ್ಷಣವೂ ಆಗಿರಬಹುದು.


ಕಣ್ಣಿನಲ್ಲಿ ನಿಯಮಿತ ನೋವು ಅಥವಾ ಕಿರಿಕಿರಿ
ನಿಮ್ಮ ಕಣ್ಣಿನ ದೃಷ್ಟಿ ಸಾಮಾನ್ಯವಾಗಿರಬಹುದು, ಆದರೆ ನೀವು ಪದೇ ಪದೇ ತಲೆನೋವು ಅಥವಾ ಕಣ್ಣಿನ ನೋವು ಅಥವಾ ಒತ್ತಡವನ್ನು ಅನುಭವಿಸುತ್ತಿದ್ದರೆ, ಅದು ನಿಮ್ಮ ದೃಷ್ಟಿಯಲ್ಲಿನ ಬದಲಾವಣೆ ಅಥವಾ ಗಂಭೀರವಾದ ಇತರ ಸಮಸ್ಯೆಗಳನ್ನು ಸೂಚಿಸುತ್ತದೆ. ಆಗಾಗ ತಲೆನೋವು ನಿಮ್ಮ ದೃಷ್ಟಿಯನ್ನು ಹೆಚ್ಚು ಒತ್ತಡಗೊಳಿಸುತ್ತಿದ್ದೀರಿ ಮತ್ತು ನಿಮ್ಮ ಕಣ್ಣುಗಳ ಮೇಲೆ ಅನಗತ್ಯ ಒತ್ತಡವನ್ನು ಹೇರುತ್ತಿದ್ದೀರಿ ಎಂಬುದರ ಸೂಚನೆಯಾಗಿರಬಹುದು.


ಡಾ. ಮಹೇಶ, ಮುಖ್ಯ ವೈದ್ಯಾಧಿಕಾರಿ, ಕಣ್ಣಿನ ಪೊರೆ ಮತ್ತು ಗಾಯ, ಶಂಕರ ಕಣ್ಣಿನ ಆಸ್ಪತ್ರೆ, ಶಿವಮೊಗ್ಗ


ಮಧುಮೇಹ ಸಮಸ್ಯೆ ಇದ್ದರೆ
ಮಧುಮೇಹವು ನಿಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕುರುಡುತನ ಸೇರಿದಂತೆ ವಿವಿಧ ತೊಂದರೆಗಳಿಗೆ ಕಾರಣವಾಗಬಹುದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಡಯಾಬಿಟಿಕ್ ರೆಟಿನೋಪತಿ ಎಂಬ ಕಣ್ಣಿನ ಸ್ಥಿತಿಯು ಮಧುಮೇಹ ಹೊಂದಿರುವ ಜನರಲ್ಲಿ ದೃಷ್ಟಿ ದೋಷ ಮತ್ತು ಕುರುಡುತನಕ್ಕೆ ಕಾರಣವಾಗಬಹುದು. ಇದು ರೆಟಿನಾದಲ್ಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ (ನಿಮ್ಮ ಕಣ್ಣಿನ ಹಿಂಭಾಗದಲ್ಲಿರುವ ಅಂಗಾಂಶದ ಸೂಕ್ಷ್ಮ ಪದರ).


ಇದನ್ನೂ ಓದಿ: ತ್ರಿವರ್ಣ ಬಣ್ಣದ ಹಣ್ಣು, ತರಕಾರಿ ನೋಡಲು ಚೆಂದ, ಆರೋಗ್ಯಕ್ಕೂ ಒಳ್ಳೆಯದು!


ನೀವು ಮಧುಮೇಹಿಗಳಾಗಿದ್ದರೆ, ವರ್ಷಕ್ಕೆ ಒಮ್ಮೆಯಾದರೂ ಸಮಗ್ರ ಕಣ್ಣಿನ ಪರೀಕ್ಷೆಯನ್ನು ಮಾಡಿಸುವುದು ಮುಖ್ಯ. ಡಯಾಬಿಟಿಕ್ ರೆಟಿನೋಪತಿ ಮೊದಲಿಗೆ ರೋಗಲಕ್ಷಣಗಳನ್ನು  ತೋರಿಸದಿರಬಹುದು, ಆದರೆ ಅವುಗಳನ್ನು ಮುಂಚಿತವಾಗಿ ಪತ್ತೆಹಚ್ಚುವುದರಿಂದ ನಿಮ್ಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಕ್ರಮಕೈಗೊಳ್ಳಲು ಸಹಾಯ ಮಾಡುತ್ತದೆ.




ಕಣ್ಣಿನಲ್ಲಿ ನೀರು ಬರುವುದು  ಅಥವಾ ಪದೇ ಪದೇ ಕಣ್ಣು ಕೆಂಪಾಗುವುದು
ಕಣ್ಣುಗಳಲ್ಲಿ ನೀರು ಬರುವುದು ಅಥವಾ ಕೆಂಪಾಗಲು ಬೇರೆ ಬೇರೆ ಕಾರಣಗಳಿವೆ. ಇದು ಧೂಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಅಲರ್ಜಿ ಅಥವಾ ಕಾಂಜಂಕ್ಟಿವಿಟಿಸ್ನಂತಹ ಕಣ್ಣಿನ ಸೋಂಕುಗಳ ಕಾರಣದಿಂದಾಗಿರಬಹುದು. ಕಾರ್ನಿಯಾದಲ್ಲಿನ ಸೋಂಕಿನಿಂದಲೂ ಇದು ಉಂಟಾಗಬಹುದು.


ಕುಟುಂಬದಲ್ಲಿ ಯಾರಿಗಾದರೂ ಕಣ್ಣಿನ ಸಮಸ್ಯೆ ಇದ್ದರೆ
ರೆಟಿನೋಬ್ಲಾಸ್ಟೊಮಾ ಮತ್ತು ಗ್ಲುಕೋಮಾದಂತಹ ಕೆಲವು ಕಣ್ಣಿನ ತೊಂದರೆಗಳು ಆನುವಂಶಿಕವಾಗಿರಬಹುದು. ಆದ್ದರಿಂದ, ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕಣ್ಣಿಗೆ ತೊಂದರೆ ಮಾಡುವ ಆರೋಗ್ಯ ಸಮಸ್ಯೆಗಳು ಹಾಗೂ  ಅನುವಂಶಿಕ ಕಣ್ಣಿನ ತೊಂದರೆಗಳ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮುಖ್ಯ.


ಇದನ್ನೂ ಓದಿ: ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ಮೊಡವೆಗಳ ನಿಯಂತ್ರಣಕ್ಕೆ ಹೀಗೆ ಮಾಡಿ


ಮೇಲಿನ ಯಾವುದೇ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ, ವಯಸ್ಸನ್ನೂ ಲೆಕ್ಕಿಸದೇ ತಕ್ಷಣವೇ ನೀವು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ನಿಮ್ಮ ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನ  ನೆನಪಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ

Published by:Sandhya M
First published: