HOME » NEWS » Lifestyle » HEALTH 10 THINGS TO KNOW ABOUT FEMALE CONDOM AND OTHER CONTRACEPTIVES STG AE

ಮಹಿಳಾ ಕಾಂಡೋಮ್ ಬಳಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು..!

ಕಾಂಡೋಮ್ ಅನ್ನು ಬಳಸುವುದಕ್ಕೂ ಮುನ್ನ ಅದನ್ನು ಹೇಗೆ ಬಳಸಬೇಕು ಹಾಗೂ ಗರ್ಭಧಾರಣೆ ತಡೆಯಲು ಈ ಕಾಂಡೋಮ್ ಹೇಗೆ ಸಹಕಾರಿ ಎಂಬುದು ಅತ್ಯಗತ್ಯವಾಗಿದೆ.

news18-kannada
Updated:June 22, 2021, 3:59 PM IST
ಮಹಿಳಾ ಕಾಂಡೋಮ್ ಬಳಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು..!
ಸಾಂದರ್ಭಿಕ ಚಿತ್ರ
  • Share this:
ಮಹಿಳೆಯರು ಬಳಸುವ ಕಾಂಡೋಮ್ ಒಂದು ರೀತಿಯ ಗರ್ಭ ನಿರೋಧಕವಾಗಿದ್ದು ಲೈಂಗಿಕ ಕ್ರಿಯೆಯಿಂದಾಗಿ ಆಗಬಹುದಾದ ಗರ್ಭಧಾರಣೆಯನ್ನು ತಡೆಗಟ್ಟಲು ಬಳಸುವ ಪರಿಕರವಾಗಿದೆ. ಇದರ ಸರಿಯಾದ ಬಳಕೆ ಎಚ್‌ಐವಿ, ಗರ್ಭಧಾರಣೆ ಮತ್ತು ಎಸ್‌ಟಿಐಗಳ ವಿರುದ್ಧ ಅತ್ಯುತ್ತಮ ರಕ್ಷಣೆ ನೀಡುತ್ತದೆ. ವಾಸ್ತವವಾಗಿ ಅವುಗಳು ಗರ್ಭನಿರೋಧಕಗಳ ಏಕೈಕ ವಿಧವಾಗಿದೆ. ಅದು ನಿಮಗೆ ಎಸ್‌ಟಿಐ (ಎಚ್‌ಐವಿ ಸೇರಿದಂತೆ) ತಗುಲದಂತೆ ರಕ್ಷಿಸುತ್ತದೆ.  ಇದನ್ನು ಕಂಡುಹಿಡಿದವರು ಡೇನಿಶ್ ಎಮ್‌ಡಿ ಲೇಸ್ ಹ್ಯಾಸಲ್.

ಮಹಿಳಾ ಕಾಂಡೋಮ್ ಅನ್ನು ಬಳಸುವುದಕ್ಕೂ ಮುನ್ನ ಅದನ್ನು ಹೇಗೆ ಬಳಸಬೇಕು ಹಾಗೂ ಗರ್ಭಧಾರಣೆ ತಡೆಯಲು ಈ ಕಾಂಡೋಮ್ ಹೇಗೆ ಸಹಕಾರಿ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಅಂತೆಯೇ ಕಾಂಡೋಮ್‌ಗಳು ಪ್ಯಾಕೆಟ್‌ನಲ್ಲಿರುವ ದಿನಾಂಕವನ್ನು ಮೀರಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಮತ್ತು ನೀವು ಸುರಕ್ಷತಾ ಮಾನದಂಡಗಳನ್ನು ಪೂರೈಸುವ ಭರವಸೆ ನೀಡುವ ಗುರುತನ್ನು (ಎಫ್‌ಡಿಎ, ಸಿಇ, ಐಎಸ್‌ಒ ಅಥವಾ ಕೈಟ್‌ಮಾರ್ಕ್) ಬಳಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಹಾಗಿದ್ದರೆ ಇಂದಿನ ಲೇಖನದಲ್ಲಿ ಇದನ್ನು ಕುರಿತ ಹತ್ತು ಅಂಶಗಳನ್ನು ಅರಿತುಕೊಳ್ಳೋಣ.

ಮಹಿಳಾ ಕಾಂಡೋಮ್ ಎಂದರೇನು? ಗರ್ಭನಿರೋಧಕದ ಬಗ್ಗೆ ನಾವು ತಿಳಿದಿರಬೇಕಾದ ಅಂಶಗಳು

ಮಹಿಳಾ ಕಾಂಡೋಮ್ ಅನ್ನು ಮಹಿಳೆಯರು ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಆಂತರಿಕವಾಗಿ ಧರಿಸಬಹುದಾಗಿದ್ದು, ಇದರಿಂದ ತನ್ನ ಸಂಗಾತಿಯ ಸ್ಖಲನ ಮಾಡಿದ ವೀರ್ಯದ ಸಂಪರ್ಕವನ್ನು ತಡೆಯುತ್ತದೆ.

ಗರ್ಭಧಾರಣೆ ಮತ್ತು ಸೋಂಕಿನಿಂದ ಸ್ತ್ರೀಯರು ರಕ್ಷಣೆ ಪಡೆದುಕೊಳ್ಳಬಹುದಾಗಿದ್ದು,  ತಮ್ಮ ಮೇಲಿನ ನಿಯಂತ್ರಣವನ್ನು ತೆಗೆದುಕೊಳ್ಳಲು ಇದು ಅನುವು ಮಾಡಿಕೊಡುತ್ತದೆ.
ಸಂಭೋಗಕ್ಕೂ ಮುನ್ನ ಸುಮಾರು 8 ಗಂಟೆಗಳ ಮೊದಲು ಇದನ್ನು ಯೋನಿಯೊಳಗೆ ಸೇರಿಸಬೇಕು. ಆದರೆ, ಲೈಂಗಿಕ ಕ್ರಿಯೆಯ ನಂತರ ಕೂಡಲೇ ಅದನ್ನು ತ್ಯಜಿಸಬೇಕು.

ಇದರ ವಿಫಲತೆಯ ದರ ಶೇಕಡಾ 14 ರಷ್ಟಿದೆ. ಕಾಂಡೋಮ್ ಅನ್ನು ತಪ್ಪಾಗಿ ಇಲ್ಲವೇ ಅಸಮಂಜಸ ರೀತಿಯಲ್ಲಿ ಬಳಸುವುದರಿಂದ ಶೇ. 21 ರಷ್ಟು ವೈಫಲ್ಯವನ್ನು ಉಂಟುಮಾಡಬಹುದು.ಇದನ್ನೂ  ಓದಿ: Rashmika Mandanna-Amitabh Bachchan: ಶೂಟಿಂಗ್​ ಸೆಟ್​ನಲ್ಲಿ ಅಮಿತಾಭ್​ ಬಚ್ಚನ್​ಗೆ ಉಡುಗೊರೆ ನೀಡಿ ಸರ್ಪ್ರೈಸ್​ ಕೊಟ್ಟ ರಶ್ಮಿಕಾ ಮಂದಣ್ಣ..!

ಈ ಕಾಂಡೋಮ್‌ನ ಇತ್ತೀಚಿನ ಅವತರಣಿಕೆಯನ್ನು ನೈಸರ್ಗಿಕ ಲ್ಯಾಟೆಕ್ಸ್‌ನಿಂದ ಮಾಡಲಾಗಿದೆ. ಪ್ಲಾಸ್ಟಿಕ್ ಕಾಂಡೋಮ್‌ಗಳು ಉಂಟುಮಾಡುವ ಶಬ್ದವನ್ನು ಇದು ಮಾಡುವುದಿಲ್ಲ. ಅಲ್ಲದೆ, ಇದು ಸ್ತ್ರೀ ಅಂಗರಚನಾಶಾಸ್ತ್ರದ ವಿರುದ್ಧ ಸುಲಭವಾಗಿ ಹೊಂದಿಕೊಳ್ಳುತ್ತದೆ.

ನೀರು ಅಥವಾ ಸಿಲಿಕಾನ್ ಆಧಾರಿತ ಲೂಬ್ರಿಕೆಂಟ್​ಗ‌ಳನ್ನು ಯಾವುದೇ ಸ್ತ್ರೀ ಕಾಂಡೋಮ್‌ನೊಂದಿಗೆ ಸುರಕ್ಷಿತವಾಗಿ ಬಳಸಬಹುದು. ಆದರೂ, ಲ್ಯಾಟೆಕ್ಸಿನಿಂದ ಮಾಡಲಾದ ಸ್ತ್ರೀ ಕಾಂಡೋಮ್ ಬಳಸುವಾಗ ತೈಲ ಬಳಕೆಯನ್ನು ತಪ್ಪಿಸಬೇಕು.

ಮಹಿಳಾ ಕಾಂಡೋಮ್ ಮಹಿಳೆಯ ನೈಸರ್ಗಿಕ ಹಾರ್ಮೋನ್ ಮಟ್ಟದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ವೈದ್ಯರ ಸಲಹೆ ಇಲ್ಲದೆ ಖರೀದಿಸಬಹುದು.

ಇದನ್ನೂ ಓದಿ: Happy Birthday Geetha Shivarajkumar: ಪತ್ನಿ ಗೀತಾ ಹುಟ್ಟುಹಬ್ಬದ ಅಂಗವಾಗಿ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗಾಗಿ 10 ಲಕ್ಷ ನೀಡಿದ ಶಿವಣ್ಣ

ಸ್ತ್ರೀ ಕಾಂಡೋಮ್‌ಗಳು ಪರಸ್ಪರ ಸಂಗಾತಿಗಳ ನಡುವೆ ಲೈಂಗಿಕ ಕ್ರಿಯೆಯನ್ನು ಹೆಚ್ಚಿಸುತ್ತವೆ. ಕಾಂಡೋಮ್‌ನ ಬಾಹ್ಯ ಉಂಗುರವು ಸಂಭೋಗದ ಸಮಯದಲ್ಲಿ ಚಂದ್ರನಾಡಿ ಮತ್ತು ಶಿಶ್ನವನ್ನು ಉತ್ತೇಜಿಸುತ್ತದೆ.

ಈ ಗರ್ಭನಿರೋಧಕವು ಕೆಲವು ಅನಾನುಕೂಲಗಳನ್ನು ಸಹ ಹೊಂದಿದೆ. ಇದು ಎರಡೂ ಲಿಂಗಗಳಲ್ಲಿ ಜನನಾಂಗದ ಪ್ರದೇಶದ ಕಿರಿಕಿರಿಯನ್ನು ಉಂಟುಮಾಡಬಹುದು ಮತ್ತು ಸಂಭೋಗದ ಸಮಯದಲ್ಲಿ ಯೋನಿಯೊಳಗೆ ಜಾರಿಕೊಳ್ಳಬಹುದು. ಈ ಕಾಂಡೋಮ್ ಬಳಕೆಯು ಲೈಂಗಿಕ ಸಂಭೋಗದ ಸಮಯದಲ್ಲಿ ಸಂವೇದನೆಯನ್ನು ಕಡಿಮೆ ಮಾಡುತ್ತದೆ.
Published by: Anitha E
First published: June 22, 2021, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories