ಬೊಜ್ಜಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ!

news18
Updated:September 4, 2018, 2:50 PM IST
ಬೊಜ್ಜಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ!
news18
Updated: September 4, 2018, 2:50 PM IST
-ನ್ಯೂಸ್ 18 ಕನ್ನಡ

ಆಧುನಿಕ ಜೀವನ ಶೈಲಿಯ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆಯನ್ನು ಅತಿ ಗಂಭೀರ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಎಲ್ಲ ದೇಶದ ಜನರಲ್ಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಕೂಡ ಚಿಂತೆಗೆ ಕಾರಣವಾಗಿದೆ. 2015 ರ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ ವಿಶ್ವದಲ್ಲಿ ಸುಮಾರು 700 ಮಿಲಿಯನ್ ಜನರು ಸ್ಥೂಲಕಾಯತೆ ಸಮಸ್ಯೆಯಿಂದ ನರಳುತ್ತಿದ್ದಾರೆ. ದೇಹದಲ್ಲಿ ಬೊಜ್ಜು ಆವರಿಸುವುದರಿಂದ ವಿಶ್ವದೆಲ್ಲೆಡೆ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಬೊಜ್ಜಿನ ಸಮಸ್ಯೆ ಮತ್ತು ಅದರಿಂದ ಉಂಟಾಗುವ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಕೆಲ ದೇಶಗಳು ಮುನ್ನೆಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅವುಗಳಲ್ಲಿನ ಪ್ರಮುಖ ವಿಷಯಗಳು ಇಲ್ಲಿವೆ.

1- ಸ್ಥೂಲಕಾಯತೆ ಇಂದು ವಿಶ್ವದ ಅತೀ ದೊಡ್ಡ ಸಮಸ್ಯೆಗಳಲ್ಲಿ ಒಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.

2- ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ 2015ರ ಅಧ್ಯಯನ ವರದಿ ಪ್ರಕಾರ 700 ಮಿಲಿಯನ್ ಅಥವಾ 70 ಕೋಟಿ ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೊಜ್ಜು ಎಂಬುದು ಕೂಡ ಒಂದು ರೋಗವೆಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಪರಿಗಣಿಸಿದೆ.

3. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಅತೀ ವೇಗದಲ್ಲಿ ಹರಡುತ್ತಿರುವ ಸಮಸ್ಯೆಗಳಲ್ಲಿ ಸ್ಥೂಲಕಾಯತೆ ಕೂಡ ಒಂದು. ಶೀಘ್ರದಲ್ಲೇ ಇದೊಂದು ಗಂಭೀರ ಸಮಸ್ಯೆಗಳ ಪಟ್ಟಿಯಲ್ಲಿ ಕಾಣಿಸಲಿದೆ. ಸಾಂಕ್ರಾಮಿಕ ರೋಗ ಮತ್ತು ಅಪೌಷ್ಟಿಕತೆಯ ಸಮಸ್ಯೆಯೊಂದಿಗೆ ಮುಂದಿನ ದಿನಗಳಲ್ಲಿ ಬೊಜ್ಜು ಎಂಬುದು ಗಂಭೀರವಾಗಿ ಕಾಡಲಿದೆ ಎಂದು ತಿಳಿಸಿದೆ.

4- ಸ್ಥೂಲಕಾಯತೆ ಎಂಬುದು ಒಂದು ದೇಶದ ಜಿಡಿಪಿ ಮತ್ತು ಉದ್ಯೋಗದ ಮೇಲೆ ಹೇಗೆ ಆರ್ಥಿಕ ಪ್ರಭಾವ ಬೀರುತ್ತದೆ ಎಂಬುದರ ಮೇಲೆ ಅಧ್ಯಯನಗಳು ನಡೆಯುತ್ತಿದೆ.

5- 1998 ರಲ್ಲಿ ಅಮೆರಿಕದಲ್ಲಿ ಸ್ಥೂಲಕಾಯತೆ ಕುರಿತಾಗಿ 'ಕ್ಲಿನಿಕಲ್ ಗೈಡ್​ಲೈನ್ಸ್ ಆನ್ ದಿ ಐಡೆಂಟಿಫಿಕೇಶನ್ ಅಂಡ್ ಟ್ರೀಟ್ಮೆಂಟ್ ಆಫ್ ಒವರ್​ವೇಟ್ ಅಂಡ್ ಒಬಿಸಿಟಿ' ಎಂಬ ಅಧ್ಯಯನ ವರದಿ ಪ್ರಕಟಿಸಲಾಗಿತ್ತು. ಇದರಲ್ಲಿ ಮುಂಬರುವ ದಿನಗಳಲ್ಲಿ ಬೊಜ್ಜಿನಿಂದ ಯಾವ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ ಎಂಬುದರ ಬಗ್ಗೆ ತಿಳಿಸಲಾಗಿತ್ತು.
Loading...

6- 2006 ರಲ್ಲಿ ಕೆನಡಾದಲ್ಲಿ ಸ್ಥೂಲಕಾಯತೆ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನೆಚರಿಕೆಗಳ ಕುರಿತು ಸರ್ಕಾರ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳನ್ನು ತಿಳಿಸುವ ಅಂಕಿ ಅಂಶಗಳ ವರದಿಯನ್ನು ಪ್ರಕಟಿಸಲಾಗಿತ್ತು.

7- 2004 ರಲ್ಲಿ ಯುಕೆಯ ರಾಯಲ್ ಕಾಲೇಜ್ ಆಫ್ ಫಿಜಿಶಿಯನ್ಸ್ 'ಸ್ಟೋರಿಂಗ್ ಆಫ್ ಪ್ರಾಬ್ಲಂಸ್' ಎಂಬ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಸ್ಥೂಲಕಾಯತೆಗೆ ಸಂಬಂಧಿಸಿದ ಕಾರಣಗಳು, ಸಮಸ್ಯೆಗಳು ಮತ್ತು ಅನಾರೋಗ್ಯಗಳ ಬಗ್ಗೆ ತಿಳಿಸಲಾಗಿದೆ.

8- 2004 ರಲ್ಲಿ ಯುನೈಟೆಡ್ ಕಿಂಗ್​ಡಮ್​ನ 'ಹೌಸ್ ಆಫ್ ಕಾಮನ್ಸ್' ಇದೇ ವಿಷಯವಾಗಿ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ಸಲಹೆ ನೀಡಲು ಆರೋಗ್ಯ ಸಮತಿಯೊಂದನ್ನು ಸ್ಥಾಪಿಸಿದ್ದರು.

9- ಭಾರತದ ಆರೋಗ್ಯ ಸಚಿವಾಲಯ ಕೂಡ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿರುವ ಸ್ಥೂಲಕಾಯತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

10- ಅಮೆರಿಕದಲ್ಲಿ 'ಯುನೈಟೆಡ್ ಸ್ಟೇಟ್ಸ್ ಪ್ರಿವೆಂಟಿವ್ ಸರ್ವಿಸಸ್ ಟಾಸ್ಕ್ ಫೋರ್ಸ್' ತಮ್ಮ ದೇಶದ ನಾಗರೀಕರ ತೂಕದ ಮಾಹಿತಿ ಸಂಗ್ರಹವನ್ನು ಮಾಡುವ ಕಾರ್ಯ ನಿರ್ವಹಿಸುತ್ತಿದೆ.

11- ದೇಹ ತೂಕವನ್ನು ನಿಯಂತ್ರಿಸುವ ಆಹಾರ, ಔಷಧಿ, ಶಸ್ತ್ರಚಿಕಿತ್ಸೆ, ಜಿಮ್, ಯೋಗ ಇತ್ಯಾದಿಗಳನ್ನು ಬಂಡವಾಳ ಮಾಡಿಕೊಂಡು ವಿಶ್ವದಲ್ಲಿ 38 ಸಾವಿರ ಮಿಲಿಯನ್ ಮೊತ್ತದ​ ಮಾರುಕಟ್ಟೆ ಸೃಷ್ಟಿಯಾಗಿದೆ.

12- ಬೊಜ್ಜು ಹೆಚ್ಚಿಸುವ ಸಕ್ಕರೆ ಯುಕ್ತ ಪಾನೀಯಗಳ ಮೇಲೆ ತೆರಿಗೆ ಪ್ರಮಾಣವನ್ನು ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ಸಲಹೆಗಳನ್ನು ನೀಡಿದೆ.

13- ಭಾರತ ಸರ್ಕಾರ ಕೂಡ ನಗರ ಪ್ರದೇಶ ಮತ್ತು ಆಧುನೀಕರಣದ ಹೊಸ ಯೋಜನೆಗಳ ಪ್ರದೇಶಗಳಲ್ಲಿ 13 ಉದ್ಯಾನವನಗಳು, ಪಾದಚಾರಿ ರಸ್ತೆಗಳನ್ನು ನಿರ್ಮಿಸಲು ಆದೇಶ ನೀಡಿದೆ. ಇದರಿಂದ ಆಯಾ ಪ್ರದೇಶದ ಜನರು  ಆರೋಗ್ಯವಂತರಾಗಬಹುದು ಎಂದು ತಿಳಿಸಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ