HOME » NEWS » Lifestyle » HEADPHONES AND EARBUDS CAN IMPACT HEARING LOSS SLOWLY IN CHILDREN AND ADULTS STG AE

ನೀವು ಬಳಸುವ ವಸ್ತುಗಳಿಂದಲೇ ನಿಮಗೆ ಶ್ರವಣ ದೋಷ ಬರಬಹುದು ಜಾಗ್ರತೆ..!

ದಿನಕ್ಕೆ 70 ಡೆಸಿಬಲ್ ಸರಾಸರಿ ಶಬ್ಧ ಮಾನ್ಯತೆಯನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‍ಐಹೆಚ್) ಶಿಫಾರಸ್ಸು ಮಾಡಿದೆ. ನಮ್ಮ ಕಿವಿಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.

Trending Desk
Updated:June 22, 2021, 2:45 PM IST
ನೀವು ಬಳಸುವ ವಸ್ತುಗಳಿಂದಲೇ ನಿಮಗೆ ಶ್ರವಣ ದೋಷ ಬರಬಹುದು ಜಾಗ್ರತೆ..!
ಪ್ರಾತಿನಿಧಿಕ ಚಿತ್ರ
  • Share this:

ಹೆಡ್​ಫೋನ್​ ಹಾಗೂ ಇಯರ್‌ ಬಡ್‌ಗಳ ಬಳಕೆ ಕೆಲವರಿಗೆ ಅಗತ್ಯವಾದರೆ, ಮತ್ತೆ ಕೆಲವರಿಗೆ ಫ್ಯಾಷನ್​. ಇವುಗಳನ್ನು ಹಾಕಿಕೊಂಡು ಸಂಗೀತ ಕೇಳುವುದು ನಿಮಗಿಷ್ಟದ ಅಭ್ಯಾಸವಾಗಿರಬಹುದು. ಆದರೆ ಅದು ನಿಮ್ಮ ಕಿವಿಗಳಿಗೆ ಮಾತ್ರ ಖಂಡಿತವಾಗಿಯೂ ಒಳ್ಳೆಯದಲ್ಲ. ಇತ್ತೀಚಿನ ಅಧ್ಯಯನಗಳ ಪ್ರಕಾರ ಅಧಿಕ ಮಟ್ಟದ ಶಬ್ಧಗಳು ಭವಿಷ್ಯದಲ್ಲಿ ಶ್ರವಣದೋಷಕ್ಕೆ ಕಾರಣವಾಗುತ್ತವೆ. ನಿತ್ಯವೂ ಅಧಿಕ ಗಂಟೆಗಳ ಕಾಲ ಸಂಗೀತ ಆಲಿಸುವ ಮಕ್ಕಳು, ಹದಿಹರೆಯದವರು ಈ ಅಪಾಯಕ್ಕೆ ತುತ್ತಾಗುವುದು ಹೆಚ್ಚು. ದಿನಕ್ಕೆ 70 ಡೆಸಿಬಲ್ ಸರಾಸರಿ ಶಬ್ಧ ಮಾನ್ಯತೆಯನ್ನು ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‍ಐಹೆಚ್) ಶಿಫಾರಸ್ಸು ಮಾಡಿದೆ. ನಮ್ಮ ಕಿವಿಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಕುರಿತಾದ ಕೆಲವು ಸಲಹೆಗಳು ಇಲ್ಲಿವೆ.


ನಾವು ಶಬ್ಧ ಮಾಲಿನ್ಯಕ್ಕೆ ಅಥವಾ ಕೆಟ್ಟ ಆಲಿಸುವಿಕೆಯ ಅಭ್ಯಾಸಗಳಿಂದ ಕ್ರಮೇಣ ನಮ್ಮ ಶ್ರವಣ ಸಾಮರ್ಥ್ಯ ಕುಂಠಿತವಾಗುತ್ತದೆ. ಇಯರ್ ಬಡ್‍ಗಳನ್ನು ಬಳಸಿಕೊಂಡು ಸಂಗೀತ ಕೇಳುವುದು ಕೂಡ ಇತ್ತೀಚೆಗೆ ಕಂಡು ಬರುತ್ತಿರುವ ಆಲಿಸುವಿಕೆಯ ಅಭ್ಯಾಸಗಳಲ್ಲಿ ಒಂದು. ಹಾಗಾದರೆ ನಮ್ಮ ಕಿವಿಗಳನ್ನು ಸುರಕ್ಷಿತವಾಗಿ ಇಡುವುದು ಹೇಗೆ? ಇಲ್ಲಿವೆ ಕೆಲವು ಸಲಹೆಗಳು.Portronics Harmonics 230 Neckband-Style Headphones released in India
ಪ್ರಾತಿನಿಧಿಕ ಚಿತ್ರ

70 ಡಿಬಿಎಗೆ ಧ್ವನಿಯನ್ನು ಇರಿಸಿ
ಶಬ್ಧಗಳನ್ನು ಡೆಸಿಬಲ್ಸ್ ಎಂಬ ಘಟಕಗಳಲ್ಲಿ ಅಳೆಯುತ್ತಾರೆ. 70ಎ-ಡೆಸಿಬಲ್ ಅಥವಾ ಅದಕ್ಕಿಂತ ಕಡಿಮೆ ಡೆಸಿಬಲ್ಸ್ ಶಬ್ಧಗಳಿಂದ ಕಿವಿಗೆ ಹಾನಿಯಾಗುವುದಿಲ್ಲ. ಆದರೆ, 85 ಡಿಬಿಎ ಅಥವಾ ಅದಕ್ಕಿಂತ ಹೆಚ್ಚಿನ ಶಬ್ಧಗಳಿಗೆ ತುಂಬಾ ಕಾಲ ಅಥವಾ ಪದೇ ಪದೇ ಒಡ್ಡಿಕೊಳ್ಳುವುದರಿಂದ ಕಿವಿಗಳಿಗೆ ಹಾನಿ ಆಗುತ್ತದೆ” ಎನ್ನುತ್ತದೆ ಎನ್‍ಐಎಚ್.


ಇದನ್ನೂ ಓದಿ: ಶೂಟಿಂಗ್​ ಸೆಟ್​ನಲ್ಲಿ ಅಮಿತಾಭ್​ ಬಚ್ಚನ್​ಗೆ ಉಡುಗೊರೆ ನೀಡಿ ಸರ್ಪ್ರೈಸ್​ ಕೊಟ್ಟ ರಶ್ಮಿಕಾ ಮಂದಣ್ಣ

ಸಾಧನಗಳಲ್ಲಿ ಡೆಸಿಬಲ್ ಔಟ್‍ಪುಟ್ ತಿಳಿಯುವುದು ಕಷ್ಟ, ಹಾಗಾಗಿ ಸಾಧನವನ್ನು 50% ಸೆಟ್ಟಿಂಗ್‍ನಲ್ಲಿ ಬಳಸಲು ಮತ್ತು ಕೇಳುವಿಕೆಯ ಸಮಯವನ್ನು ಕಡಿತಗೊಳಿಸಲು ತಜ್ಞರು ಸಲಹೆ ನೀಡುತ್ತಾರೆ.

ಇಯರ್ ಬಡ್ ಬಳಸಲು ಸುರಕ್ಷತಾ ಆಯ್ಕೆಗಳು ಲಭ್ಯ ಇವೆ, ಆದರೆ ಅದಕ್ಕೂ ಪೋಷಕರ ಅಥವಾ ಗ್ರಾಹಕರ ಮೇಲ್ವಿಚಾರಣೆಯ ಅಗತ್ಯವಿರುತ್ತದೆ ಎನ್ನುತ್ತಾರೆ ಅವರು. ಉದಾಹರಣೆಗೆ, ಐಫೋನ್‍ಗಳಲ್ಲಿ ಕಂಟ್ರೋಲ್ ಸೆಂಟರ್‌ನಲ್ಲಿರುವ ‘ಹಿಯರಿಂಗ್’ ಅಪ್ಲಿಕೇಶನ್ ಬಳಸಿ, ನಿಮ್ಮ ಹೆಡ್​ಫೋನ್ ಆಡಿಯೋ ಮಟ್ಟವನ್ನು ತಿಳಿದುಕೊಳ್ಳಬಹುದು.


ಮಕ್ಕಳಿಗಾಗಿ ಶಬ್ಧ ಸೀಮಿತ ಹೆಡ್ ಫೋನ್‍ಗಳು ಮತ್ತೊಂದು ಆಯ್ಕೆಯಾಗಿವೆ. ಅವುಗಳ ಶಬ್ಧ ಮಿತಿ ಸುಮಾರು 85 ಡಿಬಿಎ ಯಷ್ಟಿದ್ದರೂ ಕೂಡ, ಸಮಯ ಮತ್ತು ವಾಲ್ಯೂಮ್ ಸೆಟ್ಟಿಂಗ್ಗೆ ಪೋಷಕರ ಮೇಲ್ವಿಚಾರಣೆಯ ಅಗತ್ಯ ಇದೆ. ಮಕ್ಕಳ ಪಾಲಿಗೆ ಇವು ವಾಯ್ಯೂಮ್ ಮಿತಿ ಇಲ್ಲದ ಹೆಡ್‍ಫೋನ್‍ಗಳಿಗಿಂತ ಹೆಚ್ಚು ಉತ್ತಮ, ಆದರೂ ಸುರಕ್ಷಿತವಲ್ಲ.


ಸೌಂಡ್ ಲೆವೆಲ್ ಮೀಟರ್ ಬಳಸಿ
ನಿಮ್ಮ ಸುತ್ತಲಿನ ಪರಿಸರದ ಶಬ್ಧವನ್ನು ಅಳೆಯುವ ಅನೇಕ ಉಚಿತ ಹಾಗೂ ಅಗ್ಗದ ಧ್ವನಿ ಮಟ್ಟದ ಮೀಟರ್ ಅಪ್ಲಿಕೇಶನ್‍ಗಳಿವೆ. ಅಂತಹುದ್ದೇ ಉಚಿತ ಆ್ಯಪ್ ನ್ಯಾಶನಲ್ ಇನ್ಸ್​ಸ್ಟಿಟ್ಯೂಟ್​ ಫಾರ್ ಆಕ್ಯುಪೇಶನ್ ಸೇಫ್ಟಿ ಅಂಡ್ ಹೆಲ್ತ್ ನೀಡುತ್ತದೆ. ಇಂತಹ ಆ್ಯಪ್‍ಗಳು ಯಾವುದು ದೊಡ್ಡ ಶಬ್ಧ, ಯಾವುದು ದೊಡ್ಡ ಶಬ್ದ ಅಲ್ಲ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.


ಶ್ರವಣ ರಕ್ಷಣೆ ಬಳಸಿ
ನಿಮ್ಮ ಸುತ್ತಲಿನ ಶಬ್ಧದಿಂದ ಕಾಪಾಡುವಂತೆ ವಿನ್ಯಾಸಗೊಳಿಸಲಾದ ಹಲವಾರು ಹಿಯರಿಂಗ್ ಪ್ರೊಟೆಕ್ಷನ್ ಅಂದರೆ ಶ್ರವಣ ರಕ್ಷಣೆಗಳು ಲಭ್ಯವಿವೆ.


ಹಿಯರಿಂಗ್ ಪ್ರೊಟೆಕ್ಷನ್‍ಗಳು ಅನೇಕ ವಿಧಗಳಲ್ಲಿ ಲಭ್ಯ ಇವೆ- ಇಯರ್ ಮಫ್‍ಗಳು, ಫೋಮ್ ಪ್ಲಗ್‍ಗಳು, ಮರು ಬಳಸಬಲ್ಲ ನಾನ್-ಕಸ್ಟಮ್ ಪ್ಲಗ್‍ಗಳು ಮತ್ತು ಕಸ್ಟಮ್ ಫಿಟ್ ಹಿಯರಿಂಗ್ ಪ್ರೊಟೆಕ್ಷನ್. ನಿಮಗೆ ಸೂಕ್ತವಾದ ಶ್ರವಣ ರಕ್ಷಣೆ ಯಾವುದೆಂದು ತಿಳಿಯಲು ವೃತ್ತಿಪರರ ಸಲಹೆ ಪಡೆಯಿರಿ ಎನ್ನುತ್ತಾರೆ ಶ್ರವಣ ತಜ್ಞೆ ಮೇರಿ ಎಲ್ ಕಾರ್ಸನ್.


ಇದನ್ನೂ ಓದಿ: Taapsee Pannu: ಸೀರೆಯುಟ್ಟು ಶೂ ತೊಟ್ಟು ವಿದೇಶದಲ್ಲಿ ಸುತ್ತಾಡಿದ ನಟಿ ತಾಪ್ಸಿ ಪನ್ನು..!

ಶ್ರವಣ ನಷ್ಟದ ಎಚ್ಚರಿಕೆ ಸಂಕೇತಗಳನ್ನು ಅರಿಯಿರಿ
ಶ್ರವಣ ನಷ್ಟದ ಆರಂಭದ ಮೊದಲ ಸಂಕೇತಗಳು, ಗದ್ದಲದ ವಾತಾವರಣದಲ್ಲಿ ಕೇಳಲು ಕಷ್ಟವಾಗುವುದು ಮತ್ತು ಜನರ ಮಾತುಗಳು ಕೇಳಿಸುತ್ತಿದೆ ಅನಿಸಿದರೂ ಅದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು ಎಂದು ವಿವರಿಸುತ್ತಾರೆ ಕಾರ್ಸನ್. ಕಿವಿಯಲ್ಲಿ ರಿಂಗಣಿಸಿದಂತಾಗುವುದು ಕೂಡ, ಶ್ರವಣ ನಷ್ಟದ ಆರಂಭಿಕ ಚಿಹ್ನೆ.


ನಿಯಮಿತ ಶ್ರವಣ ತಪಾಸಣೆ
50 ವರ್ಷ ಮೇಲ್ಪಟ್ಟ, ಮತ್ತು ಅಸುರಕ್ಷಿತ ಮಟ್ಟದ ಶಬ್ಧಕ್ಕೆ ಒಡ್ಡಿಕೊಂಡಿರುವವರು ವರ್ಷಕ್ಕೊಮ್ಮೆ ಶ್ರವಣ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕಾರ್ಸನ್ ಶಿಫಾರಸು ಮಾಡುತ್ತಾರೆ. ನಿಮ್ಮ ಕೇಳುವಿಕೆಯಲ್ಲಿ ಬದಲಾವಣೆ ಕಂಡು ಬಂದರೆ ಅಥವಾ ಹೊಸ ಅಥವಾ ಕಿರಿಕಿರಿ ಉಂಟುಮಾಡುವ ಶಬ್ಧಗಳು ಕಿವಿಯಲ್ಲಿ ರಿಂಗಣಿಸಿದರೆ, ನೀವು ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನುತ್ತಾರೆ ಅವರು.

Published by: Anitha E
First published: June 22, 2021, 2:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories