• Home
  • »
  • News
  • »
  • lifestyle
  • »
  • Headache: ಬಿಡದೇ ಕಾಡುವ ತಲೆನೋವಿಗೆ ಆಯುರ್ವೇದ ಚಹಾದಲ್ಲೇ ಇದೆ ಪರಿಹಾರ!

Headache: ಬಿಡದೇ ಕಾಡುವ ತಲೆನೋವಿಗೆ ಆಯುರ್ವೇದ ಚಹಾದಲ್ಲೇ ಇದೆ ಪರಿಹಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಲೆನೋವಿನ ಸಮಸ್ಯೆ ಹೆಚ್ಚಾದಾಗ ತುಂಬಾ ಜನರು ಮಾತ್ರೆ ಸೇವನೆ ಮಾಡ್ತಾರೆ. ಆದರೆ ಹೆಚ್ಚುವರಿ ಔಷಧ ಸೇವನೆ ದೇಹಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಆಯುರ್ವೇದ ವೈದ್ಯೆ ದೀಕ್ಷಾ ಭಾವಸಾರ್ ಹೇಳುವ ಪ್ರಕಾರ ತಲೆನೋವಿನ ಪರಿಹಾರಕ್ಕೆ ಔಷಧಿಗಳ ಬದಲಿಗೆ ಆಯುರ್ವೇದ ಚಹಾವನ್ನು ಮನೆಯಲ್ಲಿ ತಯಾರಿಸಿ ಸೇವನೆ ಮಾಡುವುದು ಉತ್ತಮ.

ಮುಂದೆ ಓದಿ ...
  • Share this:

    ಪ್ರತಿಯೊಬ್ಬರಿಗೂ ತಲೆನೋವು (Headache) ಬಂದಿರುತ್ತದೆ. ತಲೆನೋವು ತುಂಬಾ ಕಾಮನ್ ಸಮಸ್ಯೆ (Common Problem). ಆದರೆ ಅದು ದೀರ್ಘಕಾಲ ಬಾಧಿಸಿದರೆ ತಡೆಯಲು ಯಾರಿಗೂ ಸಾಧ್ಯವಾಗಲ್ಲ. ಲೈಟಾಗಿ ತಲೆನೋವು ಬಂದ ಕೂಡಲೇ ಜನರು ಸ್ಟ್ರಾಂಗ್ ಕಾಫಿ (Strong Coffee), ಸ್ಟ್ರಾಂಗ್ ಟೀ ಕುಡಿದರೆ ಕಡಿಮೆ ಆಗುತ್ತೆ ಅನ್ಕೊಳ್ತಾರೆ. ಕೆಲವೊಮ್ಮೆ ಒತ್ತಡವನ್ನು (Stress) ಕಡಿಮೆ ಮಾಡಲು ಚಹಾ ಸೇವನೆ ಮಾಡ್ತಾರೆ. ಮೈಗ್ರೇನ್ (Migraine) ಸಮಸ್ಯೆ ಬೇಗ ಹೋಗಲ್ಲ. ಅದು ತುಂಬಾ ಬಾಧಿಸುತ್ತದೆ. ಮಹಿಳೆಯರಲ್ಲಿ ತಲೆನೋವಿನ ಪ್ರಕರಣಗಳು ಹೆಚ್ಚು. ಒತ್ತಡ ಮತ್ತು ತಲೆನೋವು ಸಾಕಷ್ಟು ಬಳಲುವಂತೆ ಮಾಡುತ್ತದೆ. ತಲೆನೋವು ಕಾಮನ್ ಅಲ್ಲ.


    ತಲೆನೋವಿನ ಸಮಸ್ಯೆಗೆ ಆಯುರ್ವೇದ ಚಹಾ


    ಇದು ಮೆದುಳು, ಕಣ್ಣು, ಕಿವಿ ಮತ್ತು ಮೂಗಿನ ನರಗಳಿಂದ ಉಂಟಾಗುವ ತೊಂದರೆಗಳ ಪರಿಣಾಮವೂ ಆಗಿರುತ್ತದೆ ಅಂತಾರೆ ತಜ್ಞರು. ತಲೆನೋವಿನ ಸಮಸ್ಯೆ ಹೆಚ್ಚಾದಾಗ ತುಂಬಾ ಜನರು ಮಾತ್ರೆ ಸೇವನೆ ಮಾಡ್ತಾರೆ. ಆದರೆ ಹೆಚ್ಚುವರಿ ಔಷಧ ಸೇವನೆ ದೇಹಕ್ಕೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ.


    ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಹೇಳುವ ಪ್ರಕಾರ, ತಲೆನೋವಿನ ಪರಿಹಾರಕ್ಕೆ ಔಷಧಿಗಳ ಬದಲಿಗೆ ಆಯುರ್ವೇದ ಚಹಾವನ್ನು ಮನೆಯಲ್ಲಿ ತಯಾರಿಸಿ ಸೇವನೆ ಮಾಡುವಂತೆ ಸಲಹೆ ನೀಡುತ್ತಾರೆ. ಅವರ ಬಳಿ ಹೋಗುವ ಅನೇಕ ರೋಗಿಗಳು ಈ ಚಹಾ ಸೇವನೆಯಿಂದ ತಮ್ಮ ತಲೆನೋವು ಸಮಸ್ಯೆ ವಾಸಿ ಮಾಡಿಕೊಂಡಿದ್ದಾರೆ ಎಂದು ಹೇಳ್ತಾರೆ.




    ಆಯುರ್ವೇದ ಚಹಾ ರೆಸಿಪಿ


    ಒಂದು ಗ್ಲಾಸ್ ನೀರು, ಅರ್ಧ ಟೀಸ್ಪೂನ್ ಅಜ್ವೈನ್, ಒಂದು ಪುಡಿ ಮಾಡಿದ ದೊಡ್ಡ ಏಲಕ್ಕಿ , ಒಂದು ಟೀಸ್ಪೂನ್ ಕೊತ್ತಂಬರಿ ಬೀಜ, ಐದು ಪುದೀನ ಎಲೆ ಬೇಕು.


    ಆಯುರ್ವೇದ ಚಹಾ ತಯಾರಿಸುವ ವಿಧಾನ


    ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಗೆ ಹಾಕಿರಿ. ಮಧ್ಯಮ ಉರಿಯಲ್ಲಿ 3 ನಿಮಿಷ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಸೇವಿಸಿ. ತಲೆನೋವು ಇದ್ದಾಗ ಬೆಳಗ್ಗೆ ಈ ಚಹಾ ಸೇವಿಸಿ. ಇದು ತುಂಬಾ ಪ್ರಯೋಜನಕಾರಿ.


    ಯಾರಿಗೆಲ್ಲಾ ಆಯುರ್ವೇದ ಚಹಾ ಪ್ರಯೋಜನಕಾರಿ?


    ಮೈಗ್ರೇನ್ ಸಮಸ್ಯೆ, ಹಾರ್ಮೋನ್ ಅಸಮತೋಲನ, ಹ್ಯಾಂಗೊವರ್, ಅನಿಯಂತ್ರಿತ ಮಧುಮೇಹ, ಇನ್ಸುಲಿನ್ ಪ್ರತಿರೋಧ, ಉರಿಯೂತ, ಆಹಾರದ ಕಡುಬಯಕೆ, ಚಟವನ್ನು ತೊರೆಯಲು ಪ್ರಯತ್ನಿಸುತ್ತಿರುವವರು,


    ರೋಗ ನಿರೋಧಕ ಶಕ್ತಿ ಸುಧಾರಿಸುವವರಿಗೆ ಈ ಚಹಾ ಪ್ರಯೋಜನ ನೀಡುತ್ತದೆ. ಈ ಆಯುರ್ವೇದ ಚಹಾದ ನಿಯಮಿತ ಸೇವನೆ ತುಂಬಾ ಲಾಭಕಾರಿ.


    ಸಾಂದರ್ಭಿಕ ಚಿತ್ರ


    ಸೆಲರಿ ಪ್ರಯೋಜನ


    ರಂಜಕ, ಕ್ಯಾರೋಟಿನ್, ರೈಬೋಫ್ಲಾವಿನ್, ನಿಯಾಸಿನ್, ಥಯಾಮಿನ್ ಮತ್ತು ಕಾರ್ಬೋಹೈಡ್ರೇಟ್‌ ಹೊಂದಿದೆ. ಉರಿಯೂತದ ಗುಣಲಕ್ಷಣ ಹೊಂದಿದೆ. ಇದರ ಸೇವನೆ ಊತ, ಅಜೀರ್ಣ, ಕೆಮ್ಮು, ಶೀತ, ಮಧುಮೇಹ, ಅಸ್ತಮಾ ಮತ್ತು ತೂಕ ನಷ್ಟಕ್ಕೆ ಸಹಕಾರಿ.


    ಕೊತ್ತಂಬರಿ ಸೊಪ್ಪು


    ಕೊತ್ತಂಬರಿಯು ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಸತು ಮುಂತಾದ ಪೋಷಕಾಂಶ ಹೊಂದಿದೆ. ಇದು ಚಯಾಪಚಯ ಸುಧಾರಿಸುತ್ತದೆ. ಮೈಗ್ರೇನ್ ತಲೆನೋವು, ಹಾರ್ಮೋನ್ ಅಸಮತೋಲನ ಮತ್ತು ಥೈರಾಯ್ಡ್ ನಿವಾರಿಸುತ್ತದೆ.


    ಪುದೀನಾ ಪ್ರಯೋಜನ


    ಪುದೀನವು ಆಂಟಿಮೈಕ್ರೊಬಿಯಲ್, ಅಲರ್ಜಿ ವಿರೋಧಿ ಮುಂತಾದ ಗುಣ ಹೊಂದಿದೆ. ಆರೋಗ್ಯ ಸಂಬಂಧಿ ಸಮಸ್ಯೆ, ಮೂಡ್ ಸ್ವಿಂಗ್, ನಿದ್ರಾಹೀನತೆ, ಅಸಿಡಿಟಿ, ಮೈಗ್ರೇನ್, ಕೊಲೆಸ್ಟ್ರಾಲ್ ಸಮಸ್ಯೆ ತುಂಬಾ ಪರಿಣಾಮಕಾರಿ.


    ಇದನ್ನೂ ಓದಿ: ರೆಡ್ ರಾಸ್ಪ್ಬೆರಿ ಟೀ ಆರೋಗ್ಯಕಾರಿಯೇ? ಇದು ಹೇಗೆ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ?


    ಏಲಕ್ಕಿಯ ಪ್ರಯೋಜನ


    ಏಲಕ್ಕಿ ಮೌತ್ ಫ್ರೆಶ್ನರ್ ಆಗಿದೆ. ಏಲಕ್ಕಿಯು ಚಲನೆಯ ಕಾಯಿಲೆ, ವಾಕರಿಕೆ, ಮೈಗ್ರೇನ್, ಅಧಿಕ ಬಿಪಿ, ಚರ್ಮ ಮತ್ತು ಕೂದಲಿಗೆ ಒಳ್ಳೆಯದು.

    Published by:renukadariyannavar
    First published: