• Home
  • »
  • News
  • »
  • lifestyle
  • »
  • Sleeping Problem: ನಿದ್ರೆಗೆ ತೊಂದರೆ ಉಂಟಾಗುತ್ತಿದೆಯೇ? ಹಾಗಾದ್ರೆ ಈ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು!

Sleeping Problem: ನಿದ್ರೆಗೆ ತೊಂದರೆ ಉಂಟಾಗುತ್ತಿದೆಯೇ? ಹಾಗಾದ್ರೆ ಈ ಪೋಷಕಾಂಶಗಳ ಕೊರತೆ ಕಾರಣವಾಗಿರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಡವಾಗಿ ಮಲಗುವುದು ಅಥವಾ ಕಡಿಮೆ ನಿದ್ದೆ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಿನವರ ಜೀವನಶೈಲಿ ಆಗೋಗಿದೆ. ಚಿಕ್ಕ ವಯಸ್ಸಿನಲ್ಲೇ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಿರುವುದು ಕೂಡ ಇದೇ ಕಾರಣವೂ ಆಗಿದೆ. ನಿದ್ರೆಯ ಕೊರತೆ ದೇಹದಲ್ಲಿ ಪೋಷಕಾಂಶಗಳು ಮತ್ತು ವಿಟಮಿನ್‌ಗಳ ಕೊರತೆ ಉಂಟಾಗುತ್ತಿದೆ ಎಂಬುದರ ಸಂಕೇತವಾಗಿದೆ.

ಮುಂದೆ ಓದಿ ...
  • Share this:

    ದಿನವೂ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ (Sleeping) ಮಾಡುವುದು ಆರೋಗ್ಯಕ್ಕೆ (Health) ಬಹಳ ಮುಖ್ಯ. ನೀವು ಸಾಕಷ್ಟು ನಿದ್ರೆ ಮಾಡದೇ ಹೋದ್ರೆ ಅದರ ಪರಿಣಾಮವು (Effects) ಮರುದಿನ ಬೆಳಿಗ್ಗೆ (Morning) ಕೆಟ್ಟ ಮನಸ್ಥಿತಿ, ಆಯಾಸ, ಕಿರಿಕಿರಿ, ಅಸ್ತೇನಿಯಾ ರೂಪದಲ್ಲಿ ಕಾಣಿಸಿಕೊಳ್ಳಲು ಶುರು ಆಗುತ್ತದೆ. ಅಲ್ಲದೆ ನಿದ್ರೆಯ ಕೊರತೆಯಿಂದಾಗಿ ಅಧಿಕ ರಕ್ತದೊತ್ತಡ, ಮಧುಮೇಹ (Diabetes), ಬೊಜ್ಜು, ಮಾನಸಿಕ ಅಸ್ವಸ್ಥತೆ ಇತ್ಯಾದಿಗಳ ಅಪಾಯ ಹೆಚ್ಚುತ್ತದೆ. ತಡವಾಗಿ ಮಲಗುವುದು ಅಥವಾ ಕಡಿಮೆ ನಿದ್ದೆ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಿನವರ ಜೀವನಶೈಲಿ ಆಗೋಗಿದೆ. ಚಿಕ್ಕ ವಯಸ್ಸಿನಲ್ಲೇ ಮಾರಣಾಂತಿಕ ಕಾಯಿಲೆಗಳಿಗೆ ಬಲಿಯಾಗುತ್ತಿರುವುದು ಕೂಡ ಇದೇ ಕಾರಣವೂ ಆಗಿದೆ.


    ನಿದ್ರೆಯ ಕೊರತೆಯು ದೇಹದಲ್ಲಿನ ಪೋಷಕಾಂಶಗಳು ಮತ್ತು ವಿಟಮಿನ್‌ಗಳ ಕೊರತೆ ಉಂಟಾಗುತ್ತಿದೆ ಎಂಬುದರ ಸಂಕೇತವಾಗಿದೆ. ಅಂತಹ ವೇಳೆ ಕೆಲ ಜೀವಸತ್ವಗಳು ದೇಹಕ್ಕೆ ತುಂಬಾ ಮುಖ್ಯ ಆಗಿವೆ.


    ವಿಟಮಿನ್ ಸಿ


    ವಿಟಮಿನ್ ಸಿ ಉತ್ಕರ್ಷಣ ನಿರೋಧಕ ಶಕ್ತಿ ಆಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ಉತ್ತಮ ಹೃದಯ ರಕ್ತನಾಳದ ಆರೋಗ್ಯಕ್ಕೆ ಪ್ರಮುಖ ಆಗಿದೆ ಎಂದು ಹೇಳಲಾಗಿದೆ. ಮತ್ತು ಕಾಲಜನ್ ತಯಾರಿಸಲು ದೇಹಕ್ಕೆ ಅವಶ್ಯಕ ಆಗಿದೆ.


    ಇದನ್ನೂ ಓದಿ: ಹಬ್ಬಗಳಲ್ಲಿ ತೂಕ ಇಳಿಕೆ ಜರ್ನಿ ಸುಲಭವಾಗ್ಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ


    ಎನ್ ಸಿಬಿಐ ಪ್ರಕಾರ, ವಿಟಮಿನ್ ಸಿ ಕೂಡ ನಿದ್ರೆಗೆ ಸಂಬಂಧಪಟ್ಟಿದೆ. ಅಂತಹ ವೇಳೆ ನೀವು ನಿದ್ರೆ ಮಾಡದೇ ಹೋದರೆ ದೇಹದಲ್ಲಿ ವಿಟಮಿನ್ ಸಿ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು. ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯ ಉತ್ತಮ ಮೂಲಗಳು. ದೇಹದಲ್ಲಿ ವಿಟಮಿನ್ ಸಿ ಮಟ್ಟ ಹೆಚ್ಚಿಸಲು ಬ್ರೊಕೊಲಿ, ಪಾಲಕ ಮತ್ತು ಕಿವಿ ಮತ್ತು ಸ್ಟ್ರಾಬೆರಿ ಹಣ್ಣುಗಳ ಸೇವನೆ ತುಂಬಾ ಮುಖ್ಯ.


    ವಿಟಮಿನ್ ಡಿ


    ಇದನ್ನು 'ಸನ್ ಶೈನ್ ವಿಟಮಿನ್' ಎಂದು ಕರೆಯುತ್ತಾರೆ. ವಿಟಮಿನ್ ಡಿ ಕೂಡ ನಿದ್ರೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆ ನಿದ್ರೆಗೆ ಭಂಗ ತರುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಈ ವಿಟಮಿನ್ ಡಿ ಮನಸ್ಥಿತಿ ನಿಯಂತ್ರಿಸುತ್ತದೆ. ಜೊತೆಗೆ ದೇಹದಲ್ಲಿ ಉರಿಯೂತ ಉಂಟಾಗುವುದನ್ನು ತಡೆಯುತ್ತದೆ.


    ವಿಟಮಿನ್ ಡಿ ಯ ಮುಖ್ಯ ಮತ್ತು ನೈಸರ್ಗಿಕ ಮೂಲ ಸೂರ್ಯನ ಬೆಳಕು. ಅದರ ಕೊರತೆಯನ್ನು ಅಣಬೆ, ಮೊಟ್ಟೆಯ ಹಳದಿ ಲೋಳೆ ಇತ್ಯಾದಿ ಸೇವನೆ ಪೂರೈಸುತ್ತದೆ.


    ವಿಟಮಿನ್ ಇ


    ವಿಟಮಿನ್ ಇ ಉತ್ತಮ ಚರ್ಮ ಮತ್ತು ಕೂದಲಿನ ಬೆಳವಣಿಗೆ ಬೇಕೇ ಬೇಕು. ಇದು ನಿಮ್ಮ ನಿದ್ರೆಯ ಮಾದರಿಗಳಿಗೆ ಸಂಬಂಧಿಸಿದ ಪ್ರಮುಖ ಪೋಷಕಾಂಶವೂ ಆಗಿದೆ. ವಿಟಮಿನ್ ಇ ನಿದ್ರೆಯ ಅಭಾವ, ಜ್ಞಾಪಕ ಶಕ್ತಿ ನಷ್ಟ ತಡೆಯಲು ಸಹಾಯ ಮಾಡುತ್ತದೆ. ಹಾಗೂ ದೀರ್ಘಾವಧಿಯಲ್ಲಿ ಅರಿವಿನ ಕುಸಿತ ತಡೆಯುತ್ತದೆ.


    ಇದರ ಕೊರತೆ ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗುತ್ತದೆ. ಸೂರ್ಯಕಾಂತಿ ಬೀಜಗಳು ಮತ್ತು ಎಣ್ಣೆ, ಕುಂಬಳಕಾಯಿ ಬೀಜಗಳು, ಪಾಲಕ್, ಕೆಂಪುಮೆಣಸು ಇತ್ಯಾದಿ ದೇಹಕ್ಕೆ ವಿಟಮಿನ್ ಇ ಪೂರೈಸುತ್ತದೆ.


    ವಿಟಮಿನ್ ಬಿ-12


    ನಿದ್ರಾಹೀನತೆ ಮತ್ತು ವಿಟಮಿನ್ ಬಿ 12 ನಡುವೆ ನೇರ ಸಂಬಂಧವಿಲ್ಲ. ಆದರೆ ವಿಟಮಿನ್ ಬಿ 12 ಕೊರತೆ ಖಿನ್ನತೆ ಉಂಟು ಮಾಡುತ್ತದೆ. ಇದು ನಿದ್ರಾಹೀನತೆ ಉಂಟು ಮಾಡುತ್ತದೆ. ತಜ್ಞರು ವಿಟಮಿನ್ ಬಿ -12 ಅನ್ನು ನಿದ್ರೆ ತೊಂದರೆಗೆ ಕಾರಣವೆಂದು ಪರಿಗಣಿಸುತ್ತಾರೆ. ಹಾಲು, ಚೀಸ್, ಮೊಸರು, ಮೊಟ್ಟೆ ಇತ್ಯಾದಿಗಳ ಸೇವನೆ ದೇಹಕ್ಕೆ ಬಿ 12 ಪೂರೈಸುತ್ತದೆ.


    ಇದನ್ನೂ ಓದಿ: ಇದ್ಯಾವುದು ಬಬಲ್ ಚಹಾ? ಟ್ರೆಂಡಿಂಗ್‌ನಲ್ಲಿರುವ ಈ ಪಾನೀಯ ಆರೋಗ್ಯಕ್ಕೆ ಎಷ್ಟು ಉತ್ತಮ?


    ವಿಟಮಿನ್ ಬಿ6


    ಸಿರೊಟೋನಿನ್ ಮತ್ತು ಮೆಲಟೋನಿನ್ ಹಾರ್ಮೋನ್‌ಗಳ ಉತ್ಪಾದನೆಗೆ ವಿಟಮಿನ್ ಬಿ 6 ಬೇಕು. ವ್ಯಕ್ತಿಯು ಉತ್ತಮ ನಿದ್ರೆಗೆ ಸಹಕಾರಿ. ನಿದ್ರಾಹೀನತೆ ಎದುರಿಸುತ್ತಿರುವ ರೋಗಿಗಳು ಸಾಕಷ್ಟು ಪ್ರಮಾಣದ ವಿಟಮಿನ್ ಬಿ 6 ಪಡೆಯಲು ಬಾಳೆಹಣ್ಣು, ಡೈರಿ, ಮೊಟ್ಟೆ, ಹಸಿರು ಎಲೆಗಳ ತರಕಾರಿ ಸೇವಿಸಬೇಕು.

    Published by:renukadariyannavar
    First published: