Sleep Tips: ರಾತ್ರಿ ನಿದ್ರೆ ಬರುತ್ತಿಲ್ಲವೇ? ಉತ್ತಮ ನಿದ್ರೆಗೆ 6 ಸರಳ ಸೂತ್ರಗಳು ಇಲ್ಲಿದೆ

Sleeping Tips: ನಿದ್ರೆ ಕೊರತೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಗಿಲ್ಲದಿದ್ದರೆ, ಆತ ಉತ್ಸುಕತೆ ಕಳೆದುಕೊಂಡು ಇಡೀ ದಿನವನ್ನು ಆಯಾಸದಿಂದಲೇ ತಳ್ಳುತ್ತಾನೆ. ಹಾಗಾಗಿ ಆರಾಮವಾಗಿ ರಾತ್ರಿ ನಿದ್ರಿಸಿ, ಆರೋಗ್ಯವಾಗಿರಿ ಎಂದು ತಜ್ಞರು ಹೇಳುತ್ತಾರೆ.

(Photo: Google)

(Photo: Google)

 • Share this:
  ಮಾನವನ ದೇಹ ಯಂತ್ರವಿದ್ದಂತೆ, ಈ ಯಂತ್ರದಲ್ಲಿ ಚೂರು ಏರುಪೇರಾದರೂ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತದೆ. ಹಾಗಾಗಿ ಈ ಯಂತ್ರಕ್ಕೆ ಸ್ವಲ್ಪ ಆರಾಮದಾಯಕ ಸ್ಥಿತಿ ನೀಡುವುದು ನಿದ್ರೆ ಎಂಬ ಎಣ್ಣೆ. ಹೌದು ನಿದ್ರೆಯು ವ್ಯಕ್ತಿಯನ್ನು ಮಾನಸಿಕವಾಗಿ, ದೈಹಿಕವಾಗಿ ಉಲ್ಲಸಿತರನ್ನಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ (Sleep) ಮಾಡಬೇಕು. ನಿದ್ರೆ ಕೊರತೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಗಿಲ್ಲದಿದ್ದರೆ, ಆತ ಉತ್ಸುಕತೆ ಕಳೆದುಕೊಂಡು ಇಡೀ ದಿನವನ್ನು ಆಯಾಸದಿಂದಲೇ ತಳ್ಳುತ್ತಾನೆ. ಹಾಗಾಗಿ ಆರಾಮವಾಗಿ ರಾತ್ರಿ ನಿದ್ರಿಸಿ, ಆರೋಗ್ಯವಾಗಿರಿ ಎಂದು ತಜ್ಞರು ಹೇಳುತ್ತಾರೆ.

  ಆಧುನಿಕ ಜೀವನ ಶೈಲಿ, ಆಹಾರ (Food) ಕ್ರಮದಲ್ಲಿನ ಬದಲಾವಣೆ, ಕೆಲಸದ ಒತ್ತಡದಿಂದಾಗಿ ನಿದ್ರಾಹೀನತೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದೊಂದು ನ್ಯೂನತೆಯಾಗಿ ಕಂಡು ಬರುತ್ತಿದೆ. ಅಧ್ಯಯನದ ಪ್ರಕಾರ ವಿಶ್ವದ ಜನಸಂಖ್ಯೆಯ ಸುಮಾರು 45 ಪ್ರತಿಶತದಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಿದರೂ ಅನೇಕರಿಗೆ ಒಳ್ಳೆಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನೀವು ನಿದ್ರೆಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿದ್ದರೆ ಮತ್ತು ಮಾತ್ರೆಗಳನ್ನು ನುಂಗದೆ ರಾತ್ರಿ ಉತ್ತಮವಾಗಿ ವಿಶ್ರಾಂತಿ (Relax) ಪಡೆಯಲು ಇಲ್ಲಿದೆ ಸಲಹೆಗಳು.

  1. ಒದ್ದೆ ಕಾಲಿನಲ್ಲಿ ಮಲಗಬೇಡಿ

  ಒದ್ದೆಯಾದ ಪಾದಗಳೊಂದಿಗೆ ಮಲಗಲು ಹೋಗಬೇಡಿ. ವೈದ್ಯರ ಪ್ರಕಾರ, ಪಾದಗಳು ದೇಹದ ಒಂದು ಪ್ರಮುಖ ಭಾಗವಾಗಿದೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಒದ್ದೆಯಾದ ಪಾದಗಳಲ್ಲಿ ಮಲಗುವುದರಿಂದ ನಿಮ್ಮ ದೇಹದ ಉಷ್ಣತೆಯಲ್ಲಿ ಅಸಮತೋಲನ ಉಂಟಾಗುತ್ತದೆ ಮತ್ತು ಆದ್ದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ಒರೆಸಿಕೊಂಡು ಮಲಗಿ.

  2. ಸಮಯ ಪಾಲನೆ ಮಾಡಿ

  ನಿದ್ರೆಗೆ ಕೆಲವೊಮ್ಮೆ ಸಮಯಪಾಲನೆಯು ಮುಖ್ಯವಾಗುತ್ತದೆ. ಅಂದರೆ ಪ್ರತಿದಿನ ಮಲಗುವ ಸಮಯವನ್ನು ನಿಗದಿಪಡಿಸಿಕೊಳ್ಳಿ. ಏನೇ ಕೆಲಸವಿದ್ದರೂ ನಿಗದಿಪಡಿಸಿಕೊಂಡ ಸಮಯದಲ್ಲೇ ಮಲಗಿ. ನೀವು ಮಲಗುವ ಮುನ್ನ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿರಿ ಏಕೆಂದರೆ ಇವು ಮನಸ್ಸಿನ ಶಾಂತ ಸ್ಥಿತಿಗೆ ತೊಂದರೆ ಉಂಟು ಮಾಡುತ್ತದೆ ಮತ್ತು ನಿಮ್ಮನ್ನು ನಿದ್ರೆಯಿಂದ ಎಚ್ಚರಗೊಳಿಸುವ ಸಾಧ್ಯತೆಯೂ ಇರುತ್ತದೆ.

  3. ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ

  ಸಾಮಾಜಿಕ ಜಾಲತಾಣಕ್ಕಿಂತ ಪರ್ಯಾಯ ಅಭ್ಯಾಸ ರೂಢಿಸಿಕೊಳ್ಳಿ. ಅಂದರೆ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ. ಇದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಮನಸ್ಸನ್ನು ನಿರಾಳಗೊಳಿಸುತ್ತದೆ. ಆದ್ದರಿಂದ ನೀವು ಮಲಗಿದ ತಕ್ಷಣ ನಿದ್ರೆಗೆ ಜಾರಬಹುದು.

  4. ಎರಡು ಗಂಟೆಗಳ ಮೊದಲೇ ಊಟ ಮುಗಿಸಿ

  ಮಲಗುವ ಎರಡು ಗಂಟೆ ಮುನ್ನ ನಿಮ್ಮ ರಾತ್ರಿ ಊಟವನ್ನು ಮುಗಿಸಿಬಿಡಿ ಮತ್ತು ರಾತ್ರಿ ಮಲಗುವ ಮುನ್ನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ನಾಲ್ಕು ಗಂಟೆಗಳ ಮೊದಲೇ ಟೀ ಅಥವಾ ಕಾಫಿ ಕುಡಿಯಿರಿ. ಈ ಎರಡು ನಿಯಮಗಳನ್ನು ಪಾಲಿಸುವುದು ಉತ್ತಮ ನಿದ್ರೆಗೆ ಬಹಳ ಅನುಕೂಲ.

  Read Also⇒ Katrina Kaif ಫಿಟ್ ಆಗಿರಲು ಜಿಮ್‌ನಲ್ಲಿ ಏನೆಲ್ಲಾ ಕಸರತ್ತು ಮಾಡುತ್ತಾರೆ ನೋಡಿ..

  5. ಕಳಪೆ ಗುಣಮಟ್ಟದ ಹಾಸಿಗೆಗಳು

  ಇವು ಸಹ ನಿಮ್ಮ ನಿದ್ರಾ ಭಂಗಕ್ಕೆ ಕಾರಣವಾಗಬಹುದು. ನಿಮ್ಮ ಸ್ನಾಯುಗಳು ಮತ್ತು ನರಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುವ ಆರಾಮದಾಯಕವಾದ ಹಾಸಿಗೆಯಲ್ಲಿ ಮಲಗಿದ್ದರೆ ಒಳ್ಳೆಯದು.

  6. ಮಲಗುವ ಮುನ್ನ ಸ್ನಾನಮಾಡಿ

  ಮಲಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ. ಇದು ನಿಮ್ಮನ್ನು ಉಲ್ಲಾಸಿತವನ್ನಾಗಿ ಮಾಡುತ್ತದೆ.
  First published: