Side Effects Of Cloves: ಅತಿಯಾದ್ರೆ ಲವಂಗ ಕೂಡ ಆರೋಗ್ಯಕ್ಕೆ ಹಾನಿಕಾರಕ

Side Effects Of Cloves: ಹೊಸದಾಗಿ ತಾಯಿಯಾಗಿರುವ ಮಹಿಳೆಯರು ಮಗುವಿಗೆ ಎದೆ ಹಾಲು ನೀಡುತ್ತಿದ್ದರೆ ಲವಂಗ ತಿನ್ನುವುದು ಉತ್ತಮವಲ್ಲ. ಆದರೆ ಅದನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿ ಅದನ್ನು ಬೇಯಿಸಿ ತಿನ್ನಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲವಂಗಗಳು (Cloves)ಲವಂಗ ಮರದ ಹೂವಿನ ಮೊಗ್ಗುಗಳಾಗಿವೆ. ಲವಂಗವನ್ನು ಸಿಹಿ ಮತ್ತು ಆರೊಮ್ಯಾಟಿಕ್ ಮಸಾಲೆ (Aromatic Masala)ಎಂದು ಕರೆಯಲಾಗುತ್ತದೆ, ಆದರೆ ಅವುಗಳನ್ನು ಸಾಂಪ್ರದಾಯಿಕ ಔಷಧದಲ್ಲಿಯೂ(Medicine) ಬಳಸಲಾಗುತ್ತದೆ. ವಾಸ್ತವವಾಗಿ, ಲವಂಗದಲ್ಲಿನ ಸಂಯುಕ್ತಗಳು ಯಕೃತ್ತಿನ ಆರೋಗ್ಯವನ್ನು(Health) ಕಾಪಾಡಲು ಸಹಾಯಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಕೇಳಿರುತ್ತೇವೆ. ಹಾಗೆಯೇ ಲವಂಗದ ಸೇವನೆಯು ಕೂಡ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಎನ್ನಲಾಗುತ್ತದೆ. ಹೀಗಾಗಿ ಲವಂಗವನ್ನು ಸೇವನೆ ಮಾಡಬಾರದು. ಏಕೆಂದರೆ ಲವಂಗವು ಉಷ್ಣ ಗುಣವನ್ನು ಹೊಂದಿದೆ. ಇದು ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಲವಂಗದಲ್ಲಿ ಮೆಗ್ನೀಷಿಯಮ್, ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಷಿಯಮ್, ಸೋಡಿಯಂ, ಸತು ಇತ್ಯಾದಿಗಳು ಹೆಚ್ಚಿನ ಪ್ರಮಾಣದಲ್ಲಿವೆ.

ಲವಂಗವನ್ನು ಅತಿಯಾಗಿ ಸೇವನೆ ಮಾಡುವುದರಿಂದ ಮೂತ್ರಪಿಂಡ ಮತ್ತು ಕರುಳಿನ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಹೆಚ್ಚು ಲವಂಗ ಸೇವನೆ ಮಾಡಬಾರದು.

ಮೂತ್ರಪಿಂಡ, ಪಿತ್ತಜನಕಾಂಗ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಲವಂಗ ಸೇವನೆ ಮಾಡುವಾಗ ಎಚ್ಚರ. ಆದಷ್ಟು ಕಡಿಮೆ ಲವಂಗ ಸೇವನೆ ಮಾಡಿದರೆ ಈ ಸಮಸ್ಯೆಗಳು ಹೆಚ್ಚಾಗುವುದಿಲ್ಲ. ಹೆಚ್ಚು ಲವಂಗ ಸೇವನೆ ಮಾಡುವುದು ಈ ಎಲ್ಲಾ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ ಅಂದರೆ  ಇದು ಮೂತ್ರಪಿಂಡ ವೈಫಲ್ಯ ಮತ್ತು ಪಿತ್ತಜನಕಾಂಗಕ್ಕೆ ಹಾನಿ ಮಾಡುತ್ತದೆ.

ಇದನ್ನೂ ಓದಿ: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡ್ರೆ ಟೆಸ್ಟೋಸ್ಟೆರಾನ್ ಪ್ರಮಾಣ ಕಡಿಮೆ ಇದೆ ಎಂದರ್ಥ

ಲವಂಗವನ್ನು ಹೆಚ್ಚಾಗಿ ಸೇವಿಸಿದರೆ ಉರಿಯೂತ, ಉಸಿರಾಟದ ತೊಂದರೆ, ಚರ್ಮದಲ್ಲಿ ತುರಿಕೆ ಮುಂತಾದ ಸಮಸ್ಯೆಗಳು ಉಂಟಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಈ ಮೊದಲೇ ಈ ಸಮಸ್ಯೆ ಇದ್ದಲ್ಲಿ ಅವರು ಲವಂಗ ಸೇವನೆ ಮಾಡಬಾರದು.

ದೇಹದಲ್ಲಿ ಗ್ಲೂಕೋಸ್ ಮಟ್ಟ ತುಂಬಾ ಕಡಿಮೆಯಾಗಿದ್ದರೆ ಲವಂಗ ಸೇವನೆ ಮಾಡುವುದು ತಪ್ಪಿಸಬೇಕು. ಅದು ನಿಮ್ಮ  ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ.

ಯಾವುದೇ ಅನಿವಾರ್ಯ ಕಾರಣಗಳಿಂದ ಲವಂಗ ಸೇವನೆ ಮಾಡಬೇಕಾದರೆ 1 ಅಥವಾ 2 ಮಾತ್ರ ಸೇವನೆ ಮಾಡಬೇಕು. ಅದಕ್ಕಿಂತ ಹೆಚ್ಚಿನ ಸೇವನೆ ಮಾಡುವುದು

ಮಧುಮೇಹ ರೋಗಿಗಳಿಗೆ ಅತಿಯಾದ ಗ್ಲೂಕೋಸ್ ಮಟ್ಟ ಹಾನಿಕಾರಕವಾಗುತ್ತದೆ.

ಲವಂಗವು ರಕ್ತ ತೆಳುಗೊಳಿಸುವ ಸಾಮರ್ಥ್ಯ ಹೊಂದಿರುವ ಕೆಲ ಸಂಯುಕ್ತಗಳನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚು ರಕ್ತಸ್ರಾವ ಉಂಟಾಗುವ ಅಪಾಯವಿರುತ್ತದೆ. ಯಾವುದೇ ಕಾರಣಕ್ಕೂ ಹೆಚ್ಚು ಲವಂಗ ಸೇವನೆ ಮಾಡಬೇಡಿ.

ಹೊಸದಾಗಿ ತಾಯಿಯಾಗಿರುವ ಮಹಿಳೆಯರು ಮಗುವಿಗೆ ಎದೆ ಹಾಲು ನೀಡುತ್ತಿದ್ದರೆ ಲವಂಗ ತಿನ್ನುವುದು ಉತ್ತಮವಲ್ಲ. ಆದರೆ ಅದನ್ನು ಆಹಾರ ಪದಾರ್ಥಗಳಲ್ಲಿ ಸೇರಿಸಿ ಅದನ್ನು ಬೇಯಿಸಿ ತಿನ್ನಬಹುದು.

ಇದನ್ನೂ ಓದಿ: ಪುರುಷರ ಲೈಂಗಿಕ ಸಮಸ್ಯೆಗೆ ಲವಂಗ ಅದ್ಭುತ ಮದ್ದು; ಈ ರೀತಿ ಬಳಸಿ..

ಅಲ್ಲದೇ ಗರ್ಭೀಣಿ ಮಹಿಳೆಯರು ಅತಿಯಾದ ಲವಂಗ ಸೇವಿಸಿದರೆ ಗರ್ಭಾವಸ್ಥೆಯಲ್ಲಿ ಅಲರ್ಜಿಯ ಪ್ರತಿಕ್ರಿಯೆ ಉಂಟಾಗುತ್ತದೆ. ಇದರಿಂದ ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗುತ್ತದೆ.
Published by:Sandhya M
First published: