Superfood: ಪ್ರಯಾಣಿಸುವಾಗ ಈ ಸೂಪರ್‌ಫುಡ್‌ಗಳು ನಿಮ್ಮೊಂದಿಗೆ ಇದ್ರೆ ಯಾವ ಆರೋಗ್ಯ ಸಮಸ್ಯೆನೂ ಬರಲ್ವಂತೆ

ಸಾಮಾನ್ಯವಾಗಿ ನಾವು ಪ್ರಯಾಣದಲ್ಲಿರುವಾಗ ನಮ್ಮ ರೋಗನಿರೋಧಕ ಶಕ್ತಿಯು ಕಡಿಮೆ ಆಗಬಹುದು ಅಥವಾ ಸುತ್ತಾಡಿ ಸುತ್ತಾಡಿ ನಮ್ಮ ದೇಹದಲ್ಲಿರುವ ಶಕ್ತಿ ಕಡಿಮೆ ಆದಂತೆ ಭಾಸವಾಗಬಹುದು. ಹೀಗೆ ಕಡಿಮೆಯಾದ ರೋಗನಿರೋಧಕ ಶಕ್ತಿಯು ನಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರುವ ರೋಗಗಳಿಗೆ ನಮ್ಮನ್ನು ಒಳಗಾಗುವಂತೆ ಮಾಡುತ್ತದೆ. ಹೆದರಬೇಡಿ.. ನೀವು ಪ್ರವಾಸದಲ್ಲಿರುವಾಗ ಅಥವಾ ಪ್ರಯಾಣಿಸುವಾಗ ತಿನ್ನಲು ಅತ್ಯುತ್ತಮ ಸೂಪರ್‌ಫುಡ್ ಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದೇವೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಏನಿದು ಸೂಪರ್‌ಫುಡ್‌ಗಳು (Superfoods) ಅಂತ ನಿಮಗೆ ಪ್ರಶ್ನೆ ಕಾಡಬಹುದು ಅಲ್ಲವೇ? ಸೂಪರ್‌ಫುಡ್‌ಗಳು ಎಂದರೆ ಅತ್ಯಂತ ಪ್ರಭಾವಶಾಲಿ ಪೌಷ್ಟಿಕ (Nutritious) ಮೌಲ್ಯ ಮತ್ತು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಗಳನ್ನು ಒದಗಿಸುವ ಆಹಾರಗಳು ಎಂದರ್ಥ. ಸಾಮಾನ್ಯವಾಗಿ ನಾವು ಪ್ರಯಾಣದಲ್ಲಿರುವಾಗ ನಮ್ಮ ರೋಗನಿರೋಧಕ ಶಕ್ತಿಯು (Immunity Power) ಕಡಿಮೆ ಆಗಬಹುದು ಅಥವಾ ಸುತ್ತಾಡಿ ಸುತ್ತಾಡಿ ನಮ್ಮ ದೇಹದಲ್ಲಿರುವ ಶಕ್ತಿ ಕಡಿಮೆ ಆದಂತೆ ಭಾಸವಾಗಬಹುದು. ಹೀಗೆ ಕಡಿಮೆಯಾದ ರೋಗನಿರೋಧಕ ಶಕ್ತಿಯು ನಮ್ಮ ಪ್ರಯಾಣದ ಮೇಲೆ ಪರಿಣಾಮ ಬೀರುವ ರೋಗಗಳಿಗೆ ನಮ್ಮನ್ನು ಒಳಗಾಗುವಂತೆ ಮಾಡುತ್ತದೆ. ಹೆದರಬೇಡಿ.. ನೀವು ಪ್ರವಾಸದಲ್ಲಿರುವಾಗ (Trip) ಅಥವಾ ಪ್ರಯಾಣಿಸುವಾಗ (Travel) ತಿನ್ನಲು ಅತ್ಯುತ್ತಮ ಸೂಪರ್‌ಫುಡ್ ಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದೇವೆ ನೋಡಿ.

1. ನಿಂಬೆಹಣ್ಣು
ನಿಂಬೆಹಣ್ಣು ಅತ್ಯಂತ ಚೇತೋಹಾರಿ ಮತ್ತು ಸುಲಭವಾಗಿ ಲಭ್ಯವಿರುವ ಸೂಪರ್‌ಫುಡ್ ಗಳಲ್ಲಿ ಒಂದಾಗಿದೆ. ದಿನಕ್ಕೆ ಕೆಲವು ಬಾರಿ ನಿಂಬೆ ನೀರನ್ನು ಸೇವಿಸುವುದು ಸಹ ಉತ್ತಮ ಮನಸ್ಥಿತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ನಿಂಬೆಹಣ್ಣುಗಳು ಒಂದು ಪ್ರತಿರಕ್ಷಣಾ ವ್ಯವಸ್ಥೆಯ ಬೂಸ್ಟರ್ ಆಗಿದ್ದು, ಇದು ಜ್ವರ ಮತ್ತು ನೆಗಡಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ ಮತ್ತು ನಿಂಬೆಹಣ್ಣನ್ನು ಸಲಾಡ್ ಗಳು, ಹಣ್ಣಿನ ಬಾಲ್ ನಲ್ಲಿ, ಜ್ಯೂಸ್ ಗಳಲ್ಲಿ, ಸ್ಮೂಥಿಗಳಲ್ಲಿ ಸಹ ಬಳಸಬಹುದು.

ಇದನ್ನೂ ಓದಿ: Bitter Gourd: ಕಹಿ ಅಂತ ಮೂಗು ಮುರಿಯುವ ಹಾಗಲಕಾಯಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚು ಮಾಡುತ್ತೆ

2. ಶುಂಠಿ
ಶುಂಠಿಯು ನಿಮ್ಮ ದೇಹದಲ್ಲಿರುವ ಸ್ನಾಯುಗಳಿಗೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ, ನಿಮ್ಮ ಹೊಟ್ಟೆಯನ್ನು ಸರಾಗಗೊಳಿಸುತ್ತದೆ, ತಲೆನೋವನ್ನು ಕಡಿಮೆ ಮಾಡುತ್ತದೆ, ಮೂಗಿನ ಮತ್ತು ಗಂಟಲಿನ ದಟ್ಟಣೆಯನ್ನು ನಿವಾರಿಸುತ್ತದೆ. ಶುಂಠಿಯನ್ನು ನಿಮ್ಮ ಊಟದಲ್ಲಿಯೂ ಸಹ ಬಳಸಬಹುದು ಮತ್ತು ನೀವು ಮಲಗುವ ಮೊದಲು ಒಂದು ಕಪ್ ಚಹಾದಲ್ಲಿ ಹಾಕಿಕೊಂಡು ಆನಂದಿಸಬಹುದು.

3. ಪುದೀನಾ ಎಲೆಗಳು
ಪುದೀನಾ ಎಲೆಗಳನ್ನು ನೀವು ನಿಮ್ಮೊಂದಿಗೆ ಎಲ್ಲೆಡೆ ಒಯ್ಯಬಹುದು, ಪುದೀನಾ ಎಲೆಗಳು ಪ್ರಯಾಣ ಮಾಡುವಾಗ ಒಂದು ಉತ್ತಮ ಉಲ್ಲಾಸದಾಯಕವಾದ ಅನುಭವವನ್ನು ನೀಡುತ್ತದೆ. ಏಕೆಂದರೆ ಅವು ತಾಜಾತನದ ರುಚಿಯನ್ನು ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಅಲರ್ಜಿ ರೋಗಲಕ್ಷಣಗಳನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.

4. ಮೊಸರು
ಅಜೀರ್ಣಕ್ಕೆ ಅತ್ಯುತ್ತಮವಾದ ಚಿಕಿತ್ಸೆ ಎಂದರೆ ಅದು ಮೊಸರು ಎಂದು ಹೇಳಬಹುದು. ನೀವು ದೂರದ ಊರುಗಳಿಗೆ ಪ್ರಯಾಣಿಸುವಾಗ ಅಜೀರ್ಣವು ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿರುತ್ತದೆ. ಮೊಸರು ಪ್ರೋಬಯಾಟಿಕ್ ಗಳು ಮತ್ತು ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಈಗಂತೂ ಅನೇಕ ಸ್ಥಳಗಳಲ್ಲಿ ಈ ಮೊಸರು ಕಪ್ ಗಳು ಲಭ್ಯವಿವೆ ಮತ್ತು ನೀವು ಪ್ರಯಾಣಿಸುವಾಗ ಊಟ ಮಾಡುವುದನ್ನು ಮಿಸ್ ಮಾಡಿಕೊಂಡರೆ ಮೊಸರು ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.

ಇದನ್ನೂ ಓದಿ:  Cough Remedies: ಕಫ, ಕೆಮ್ಮಿನಿಂದ ಬಳಲುತ್ತಿದ್ದೀರಾ? ಮನೆಯಲ್ಲೇ ಸಿಗುವ ತಕ್ಷಣದ ಪರಿಹಾರಗಳಿವು

5. ಅರಿಶಿನ
ಅರಿಶಿನವು ಪ್ರಯೋಜನಕಾರಿ ಮತ್ತು ಪೌಷ್ಟಿಕ ಮಸಾಲೆಯಾಗಿದೆ. ಇದು ನಮ್ಮ ರಕ್ತಪರಿಚಲನಾ ವ್ಯವಸ್ಥೆಗೆ ಸಹಾಯ ಮಾಡುತ್ತದೆ ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಪ್ರಯಾಣದ ಮೊದಲು ಮತ್ತು ಪ್ರಯಾಣದ ಸಮಯದಲ್ಲಿ ಯಾವುದೇ ಊಟದಲ್ಲಿ ಅರಿಶಿನವನ್ನು ಸೇರಿಸಿಕೊಳ್ಳುವುದು ತುಂಬಾ ಸುಲಭ. ಅರಿಶಿನವನ್ನು ಅನೇಕ ಭಕ್ಷ್ಯಗಳಲ್ಲಿ ಹಾಕಿಕೊಂಡು ಬೇಯಿಸಬಹುದು. ನಿಮ್ಮ ಸ್ವಂತ ಆಹಾರವನ್ನು ಬೇಯಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಒಂದು ಲೋಟ ಬಿಸಿ ಹಾಲಿಗೆ ಒಂದು ಟೀ ಸ್ಪೂನ್ ಅರಿಶಿನವನ್ನು ಸೇರಿಸಬಹುದು ಮತ್ತು ಮಲಗುವ ಮೊದಲು ಅದನ್ನು ಸೇವಿಸಬಹುದು.

6. ಡ್ರೈಫ್ರೂಟ್ಸ್
ಬಾದಾಮಿ, ಗೋಡಂಬಿ, ವಾಲ್ನಟ್ ಮುಂತಾದ ಡ್ರೈಫ್ರೂಟ್ಸ್ ಗಳನ್ನು ಉತ್ತಮ ಪ್ರಯಾಣದ ಆಹಾರಗಳೆಂದು ಕರೆಯುತ್ತಾರೆ. ಏಕೆಂದರೆ ಇವುಗಳನ್ನು ಪ್ರಯಾಣದಲ್ಲಿ ತೆಗೆದುಕೊಂಡು ಹೋಗುವುದು ತುಂಬಾನೇ ಸುಲಭ ಮತ್ತು ಇವುಗಳು ಎಷ್ಟೇ ದಿನಗಳವರೆಗೆ ಇರಿಸಿದರೂ ಸಹ ಹಾಳಾಗುವುದಿಲ್ಲ. ಇದಲ್ಲದೆ, ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮ ಪೋಷಕಾಂಶಗಳ ಸೇವನೆಯನ್ನು ನಿರ್ವಹಿಸಲು ಅವು ತ್ವರಿತ ಮತ್ತು ಸುಲಭ ಮಾರ್ಗವಾಗಿದೆ. ನೀವು ಪ್ರಯಾಣಿಸುವಾಗ ಇವುಗಳನ್ನು ತಿನ್ನುತ್ತಾ ಇದ್ದರೆ, ಅಷ್ಟೊಂದು ಹಸಿವಾಗುವುದಿಲ್ಲ.

7. ಬಾಳೆಹಣ್ಣು
ಬಾಳೆಹಣ್ಣುಗಳು ಶಕ್ತಿಯ ಉತ್ತಮ ಮೂಲವಾಗಿರುವುದರ ಜೊತೆಗೆ, ಸ್ನಾಯು ವಿಶ್ರಾಂತಿಕಾರಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ ಎಂದು ನಿಮಗೆ ತಿಳಿದಿದೆಯೇ? ಬಾಳೆಹಣ್ಣುಗಳು ಮೆಲಟೋನಿನ್ ಸಂಶ್ಲೇಷಣೆಯನ್ನು ಬೆಂಬಲಿಸುತ್ತವೆ, ಏಕೆಂದರೆ ಅವುಗಳಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಧಿಕವಾಗಿದೆ. ಹೀಗಾಗಿ ಬಾಳೆಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.

ಇದನ್ನೂ ಓದಿ: Health Tips: ಮಧುಮೇಹ ಕಂಟ್ರೋಲ್ ಮಾಡಲು ನೀವು ಸೇವಿಸುವ ಆಹಾರವೇ ಔಷಧಿಯಂತೆ! ಹೀಗಿರಲಿ ನಿಮ್ಮ ಊಟ

ಕೊನೆಯದಾಗಿ ಹೇಳುವುದಾದರೆ ನೀವು ಪ್ರಯಾಣಿಸುವಾಗ, ನಿಮ್ಮ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುವ ಮತ್ತು ನಿಯಂತ್ರಿಸುವ ಆಹಾರಗಳ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಿ.
Published by:Ashwini Prabhu
First published: