Heart Health: ನಿಮ್ಮ ಆಹಾರದಲ್ಲಿ ಈ ಪದಾರ್ಥಗಳಿದ್ದರೆ ಹೃದಯದ ಆರೋಗ್ಯಕ್ಕೆ ಬೆಸ್ಟ್ ಅಂತೆ!

ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ ಹೃದಯಾಘಾತ ಉಂಟಾಗುತ್ತದೆ. ಹೃದಯಾಘಾತ ತಪ್ಪಿಸಲು ದೇಹದಲ್ಲಿ ಸರಿಯಾದ ರಕ್ತದ ಹರಿವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆಹಾರ ಮತ್ತು ಜೀವನಶೈಲಿ ಬದಲಾವಣೆ ಮಾಡುವುದರಿಂದ ನೀವು ಅಂತಹ ಕಾಯಿಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ದಿನಗಳಲ್ಲಿ (Now A Days) ಕೆಟ್ಟ ಜೀವನಶೈಲಿ (Bad Lifestyle), ಕಲಬೆರಕೆ ಆಹಾರ (Food), ಕಡಿಮೆ ವ್ಯಾಯಾಮ (Exercise), ಒತ್ತಡ ಮತ್ತು ಧೂಮಪಾನ, ಕುಡಿತದ ಕೆಟ್ಟ ಅಭ್ಯಾಸಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಜನರನ್ನು ಹೆಚ್ಚು ಕಾಡುತ್ತಲೇ ಇವೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದಾಗ ಹೃದಯಾಘಾತ (Heart Attack) ಉಂಟಾಗುತ್ತದೆ. ಹೃದಯಾಘಾತ ತಪ್ಪಿಸಲು ದೇಹದಲ್ಲಿ ಸರಿಯಾದ ರಕ್ತದ ಹರಿವು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಆಹಾರ ಮತ್ತು ಜೀವನಶೈಲಿ ಬದಲಾವಣೆ ಮಾಡುವುದರಿಂದ ನೀವು ಅಂತಹ ಕಾಯಿಲೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಪ್ಪಿಸಬಹುದು. ನೀವು ಕೆಲವು ಜ್ಯೂಸ್ ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಇದು ನಾಳಗಳನ್ನು ಸ್ವಚ್ಛಗೊಳಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

  ಹೃದಯದ ಆರೋಗ್ಯ ಕಾಪಾಡುವುದು ಹೇಗೆ?

  ನಮ್ಮ ಹೃದಯವು ಸ್ನಾಯುವಿನ ಅಂಗವಾಗಿದೆ. ಇದು ದಿನಕ್ಕೆ 1 ಲಕ್ಷ ಬಾರಿ ಬಡಿಯುತ್ತದೆ. ನಮ್ಮ ಹೃದಯವು ಎದೆಯ ಎಡಭಾಗದಲ್ಲಿದೆ. ಇದು 24 ಗಂಟೆಗಳಲ್ಲಿ ದೇಹದಾದ್ಯಂತ 5000 ಗ್ಯಾಲನ್ ರಕ್ತವನ್ನು ಪಂಪ್ ಮಾಡುತ್ತದೆ.

  ಹೃದಯಾಘಾತಕ್ಕೆ ಕಾರಣಗಳು ಏನು?

  ನಿಮ್ಮ ಹೃದಯ ಸ್ನಾಯುವಿಗೆ ನಿರಂತರವಾಗಿ ಆಮ್ಲಜನಕದೊಂದಿಗೆ ರಕ್ತದ ಅಗತ್ಯದೆ. ಇದನ್ನು ಪರಿಧಮನಿಯ ಅಪಧಮನಿಗಳು ಸಾಗಿಸುತ್ತವೆ. ನಿಮ್ಮ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣವಾದಾಗ ಮತ್ತು ರಕ್ತನಾಳಗಳು ಕಿರಿದಾದಾಗ ಈ ರಕ್ತ ಪೂರೈಕೆಯು ನಿರ್ಬಂಧಿಸಲ್ಪಡುತ್ತದೆ.

  ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ಗ್ಯಾಸ್ಟ್ರಿಕ್ ಇರಲ್ಲ, ಮಕ್ಕಳಿಗೆ ಕೊಟ್ಟರೆ ಸಿಗೋ ಆರೋಗ್ಯ ಲಾಭಗಳಿವು

  ಇದು ಕೊಬ್ಬು, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಉರಿಯೂತ ಕೋಶಗಳಿಂದ ಮಾಡಲ್ಪಟ್ಟಿದೆ. ಪ್ಲೇಕ್‌ನ ಶೇಖರಣೆ ಹೊರಗಿನ ಪದರ ಗಟ್ಟಿಯಾಗುವಂತೆ ಮಾಡುತ್ತದೆ. ಒಳಗಿನ ಪದರವು ಮೃದುವಾಗಿರುತ್ತದೆ. ಪ್ಲೇಕ್ ಗಟ್ಟಿಯಾದಾಗ, ಹೊರಗಿನ ಶೆಲ್ ಒಡೆಯುತ್ತದೆ.

  ಹೃದಯದ ಆರೋಗ್ಯ ಕಾಪಾಡುವ ಪಾನೀಯಗಳು

  ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ರಸ

  ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ರಸ ಹೃದ್ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಸೇವನೆ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಶುಂಠಿ, ಬೆಳ್ಳುಳ್ಳಿ ಮತ್ತು ನಿಂಬೆ ರಸವು ಅಪಧಮನಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತದೆ. ಈ ಜ್ಯೂಸ್ ಅನ್ನು ನೀವು ಮನೆಯಲ್ಲಿಯೂ ತಯಾರಿಸಬಹುದು.

  ಇದಕ್ಕಾಗಿ ಒಂದು ಗೊಂಚಲು ಬೆಳ್ಳುಳ್ಳಿ ತುರಿ ಮಾಡಿ ಮತ್ತು ಅದಕ್ಕೆ ಒಂದು ಇಂಚಿನ ಶುಂಠಿ ಸೇರಿಸಿ. ಈಗ ಈ ರಸದಲ್ಲಿ ನಿಂಬೆ ಹಿಂಡಿ. ಈಗ ಈ ಮೂರು ಪದಾರ್ಥಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಕುದಿಸಿ ಮತ್ತು ಸ್ವಲ್ಪ ತಣ್ಣಗಾದ ನಂತರ ಕುಡಿಯಿರಿ.

  ಬೆಳ್ಳುಳ್ಳಿ ನೈಸರ್ಗಿಕ ರಕ್ತ ತೆಳು ಮಾಡುವ ಕಾರ್ಯ ನಿರ್ವಹಿಸುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ರಕ್ತನಾಳಗಳಲ್ಲಿ ಕಡಿಮೆ ಬ್ಲಾಕ್ ಕೂಡ ಇರುತ್ತದೆ. ಮತ್ತೊಂದೆಡೆ, ಶುಂಠಿಯು ಅಪಧಮನಿಗಳ ಗೋಡೆಗಳನ್ನು ಬಲಪಡಿಸುತ್ತದೆ. ನಿಂಬೆಯು ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ ಅಂಶ ಹೊಂದಿದ್ದು ರಕ್ತನಾಳಗಳನ್ನು ಸ್ವಚ್ಛ ಮಾಡುತ್ತದೆ.

  ಸೌತೆಕಾಯಿ, ಪುದೀನಾ ಮತ್ತು ಸೆಲರಿ ರಸ

  ಈ ರಸವು ಹೃದ್ರೋಗಿಗಳಿಗೂ ಪ್ರಯೋಜನಕಾರಿ ಆಗಿದೆ. ಸೌತೆಕಾಯಿ ಕರಗಬಲ್ಲ ಫೈಬರ್ ಹೊಂದಿದೆ. ಇದು ಅಪಧಮನಿಗಳನ್ನು ತೆರವು ಮಾಡುತ್ತದೆ. ಸೌತೆಕಾಯಿ ಪಾಲಿಫಿನಾಲ್‌ ಹೊಂದಿದೆ. ಇದು ರಕ್ತನಾಳಗಳನ್ನು ತೆರವು ಮಾಡುತ್ತದೆ. ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ತಾಜಾ ಪುದೀನ ಎಲೆಗಳು ರಕ್ತನಾಳಗಳನ್ನು ಕುಗ್ಗಿಸದಂತೆ ರಕ್ಷಣೆ ಮಾಡುತ್ತದೆ.

  ಪುದೀನಾ ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಸೆಲರಿ ಉತ್ಕರ್ಷಣ ನಿರೋಧಕ ಹೊಂದಿದೆ. ಇದರಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಕೆ ಇವೆ. ಇದು ಅಪಧಮನಿಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

  ಇದನ್ನೂ ಓದಿ: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ

  ಸಿಟ್ರಸ್ ಹಣ್ಣಿನ ರಸ

  ಸಿಟ್ರಸ್ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿ. ಕಿತ್ತಳೆ, ನಿಂಬೆ, ದ್ರಾಕ್ಷಿಹಣ್ಣಿನ ರಸ ಸೇರಿಸಬಹುದು. ಸಿಟ್ರಸ್ ಹಣ್ಣುಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿವೆ. ಇದು ಉರಿಯೂತ ಕಡಿಮೆ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುತ್ತದೆ. ಸಿಟ್ರಸ್ ಹಣ್ಣುಗಳ ರಸದಿಂದ ಹೃದ್ರೋಗವೂ ಕಡಿಮೆಯಾಗುತ್ತದೆ.
  Published by:renukadariyannavar
  First published: