• Home
  • »
  • News
  • »
  • lifestyle
  • »
  • Rusk Side Effects: ಕಾಫಿ-ಟೀ ಜೊತೆಗೆ ರಸ್ಕ್‌ ತಿನ್ನೋದು ಒಳ್ಳೆಯದಾ? ಕೆಟ್ಟದ್ದಾ?

Rusk Side Effects: ಕಾಫಿ-ಟೀ ಜೊತೆಗೆ ರಸ್ಕ್‌ ತಿನ್ನೋದು ಒಳ್ಳೆಯದಾ? ಕೆಟ್ಟದ್ದಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಖುಷ್ಬೂ ಜೈನ್‌ ಅವರು ಟೀ ಅಥವಾ ಕಾಫಿ ಜೊತೆಗೆ ಹುರಿದ ಕಡಲೆ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದ್ರೆ ನೀವು ಇನ್ನೂ ರಸ್ಕ್ ತಿನ್ನಲು ಇಷ್ಟಪಡುತ್ತಿದ್ದರೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು ಹೀಗಿವೆ.

  • Trending Desk
  • 2-MIN READ
  • Last Updated :
  • Share this:

ಅನೇಕರಿಗೆ ಟೀ(Tea) ಅಥವಾ ಕಾಫಿ(Coffee) ಜೊತೆಗೆ ರಸ್ಕ್‌ ಸೇವಿಸೋದು ಇಷ್ಟ. ಇನ್ನೂ ಅನೇಕರು ಅದನ್ನು ಹಾಗೆಯೇ ತಿನ್ನುತ್ತಿರುತ್ತಾರೆ. ಹಾಗಿದ್ರೆ ರಸ್ಕ್‌ ಆರೋಗ್ಯಕರ ತಿಂಡಿಯೇ..? ಅದನ್ನು ಟೀ ಕಾಫಿ ಜೊತೆಗೆ ಸೇವಿಸಬಹುದಾ? ಅದು ಯಾವ್ಯಾವ ಅಂಶಗಳನ್ನು ಒಳಗೊಂಡಿರುತ್ತೆ? ತಿಂದರೆ ಏನಾಗುತ್ತೆ ಅನ್ನೋದ್ರ ಬಗ್ಗೆ ತಜ್ಞರು(Experts) ಏನಂತಾರೆ ಅನ್ನೋದನ್ನು ನೋಡೋಣ.


ರಸ್ಕ್‌ ಆರೋಗ್ಯಕ್ಕೆ ಒಳ್ಳೆಯದಲ್ಲ!


ಪೌಷ್ಠಿಕ ತಜ್ಞರಾದ ಖುಷ್ಬೂ ಜೈನ್‌ ತಿಬ್ರೆವಾಲಾ ಅವರು, "ರಸ್ಕ್‌ ಅನ್ನು ಸಾಮಾನ್ಯವಾಗಿ ಸಂಸ್ಕರಿಸಿದ ಹಿಟ್ಟು, ಸಕ್ಕರೆ, ಅಗ್ಗದ ಎಣ್ಣೆಗಳು, ಹೆಚ್ಚುವರಿ ಅಂಟು ಮತ್ತು ಒಂದೆರಡು ಆಹಾರ ಸೇರ್ಪಡೆಗಳ ಮೂಲಕ ಬೇಯಿಸಿರುತ್ತಾರೆ. ಆದ್ರೆ ಈ ಆಹಾರ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ" ಎಂದು ಎಚ್ಚರಿಸುತ್ತಾರೆ.


ರಸ್ಕ್‌ ತಿನ್ನುವುದರಿಂದ ಏನಾಗುತ್ತದೆ?


ದಿನವೂ ರಸ್ಕ್‌ ತಿನ್ನುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ ಮಟ್ಟ ಹೆಚ್ಚಾಗುವುದರೊಂದಿಗೆ ಉರಿಯೂತದ ಅಪಾಯವೂ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.


"ದಿನವೂ ರಸ್ಕ್‌ ಸೇವನೆ ನಿಮ್ಮ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಇದು ಉತ್ತೇಜಿಸುತ್ತದೆ. ಇದು ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. ಅಸಮರ್ಪಕ ಜೀರ್ಣಕ್ರಿಯೆ ಮತ್ತು ಅನಗತ್ಯ ಆಹಾರ ತಿನ್ನಬೇಕೆನ್ನುವ ಬಯಕೆಗಳಿಗೆ ಕಾರಣವಾಗುತ್ತದೆ" ಎಂದು ಖುಷ್ಬೂ ಜೈನ್‌ ತಿಳಿಸುತ್ತಾರೆ.


ಅಲ್ಲದೇ ಸೂಜಿ ರವೆಯಿಂದ ಮಾಡಲಾಗಿದೆ ಎನ್ನುವ ರಸ್ಕ್‌ ಕೂಡ ಆರೋಗ್ಯಕ್ಕೆ ಯಾವುದೇ ಪ್ರಯೋಜನ ನೀಡುವುದಿಲ್ಲ. "ಇದು ನಿಮ್ಮ ಕರುಳು ಹಾಗೂ ಹಾರ್ಮೋನ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.


ಇದನ್ನೂ ಓದಿ: Stroke Signs: ಬ್ಲಡ್‌ ಗ್ರೂಪ್ ಮೂಲಕ ಸ್ಟ್ರೋಕ್ ಲಕ್ಷಣಗಳನ್ನು ಪತ್ತೆ ಮಾಡ್ಬೋದಂತೆ


ಕೊಲೆಸ್ಟ್ರಾಲ್‌ ಹೆಚ್ಚಾಗಲು ಕಾರಣವಾಗುತ್ತದೆ. ದೇಹದಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ದೇ ಆಲಸ್ಯವನ್ನು ಉಂಟುಮಾಡುತ್ತದೆ" ಎಂಬುದಾಗಿ ಖುಷ್ಬೂ ಜೈನ್‌ ಹೇಳುತ್ತಾರೆ.


ಇನ್ನು ಹಾರ್ಮೋನ್‌ ತಜ್ಞ ಹಾಗೂ ಪೌಷ್ಠಿಕ ತಜ್ಞರೂ ಆಗಿರುವ ಶಿಖಾ ಗುಪ್ತಾ, ರಸ್ಕ್‌ನ ಹೊಂದಿರುವ ಪದಾರ್ಥಗಳನ್ನು ವಿವರವಾಗಿ ಡಿಕೋಡ್ ಮಾಡಿದ್ದಾರೆ.


ಸಂಸ್ಕರಿಸಿದ ಗೋಧಿ ಹಿಟ್ಟು/ಮೈದಾ: ರಸ್ಕ್‌ ತಯಾರಿಕೆಯಲ್ಲಿ ಸಂಸ್ಕರಿಸಿದ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ಬಳಸಲಾಗುತ್ತದೆ. ಇದರಿಂದ ಹೊಟ್ಟು, ಜೀವಸತ್ವಗಳು ಮತ್ತು ಖನಿಜಗಳನ್ನು ಅದರಿಂದ ಹೊರತೆಗೆಯಲಾಗುತ್ತದೆ. ಆದ್ದರಿಂದ, ಅದರಲ್ಲಿ ಯಾವದೇ ಫೈಬರ್ ಅಂಶಗಳಿರೋದಿಲ್ಲ.


ಸಕ್ಕರೆ: ರಸ್ಕ್‌ನಲ್ಲಿ ಸಾಕಷ್ಟು ಪ್ರಮಾಣದ ಸಕ್ಕರೆ ಸೇರಿಸಲಾಗಿರುತ್ತದೆ. ನೀವು ಕೇವಲ 2 ರಸ್ಕ್‌ ತಿಂದರೂ ದಿನಕ್ಕೆ ಸೇವಿಸಬೇಕಾದ ಸಕ್ಕರೆ ಸೇವನೆ ಮೀರಿದಂತೆ ಎಂಬುದಾಗಿ ಗುಪ್ತಾ ಹೇಳುತ್ತಾರೆ.


ಸಂಸ್ಕರಿಸಿದ ಎಣ್ಣೆ: ಇಲ್ಲಿ ಬಳಸುವ ಎಣ್ಣೆಯ ಗುಣಮಟ್ಟ ಚೆನ್ನಾಗಿರುವುದಿಲ್ಲ. ಅಲ್ಲದೇ ಇದು ಹೆಚ್ಚು ಸಂಸ್ಕರಿಸಲ್ಪಡುತ್ತದೆ. ಯಾವುದೇ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿಲ್ಲ.


ರವೆ ರಸ್ಕ್:‌ ಇದನ್ನು ಗೋಧಿ ಅಥವಾ ರವೆಯಿಂದ ತಯಾರಿಸಲಾಗಿದ್ದರೂ, ಇದರಿಂದ ಎಲ್ಲಾ ಫೈಬರ್ ಮತ್ತು ಪೋಷಕಾಂಶಗಳನ್ನು ತೆಗೆದುಹಾಕಲಾಗಿರುತ್ತದೆ.


ಆಹಾರ ಸಂಯೋಜಕಗಳು ಮತ್ತು ಕೃತಕ ಸುವಾಸನೆಗಳು: ಇಂತಹ ಆಹಾರಗಳನ್ನು ಹೆಚ್ಚು ಕಾಲ ಸಂರಕ್ಷಿಸಿಡಲು ಸಾಕಷ್ಟು ರಾಸಾಯನಿಕಗಳನ್ನು ಹಾಕಲಾಗುತ್ತದೆ. ಅಲ್ಲದೇ ರುಚಿ ಹಾಗೂ ಪರಿಮಳಕ್ಕಾಗಿ ರಾಸಾಯನಿಕ ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಗುಪ್ತಾ ಹೇಳುತ್ತಾರೆ.


ಆಹಾರ ಬಣ್ಣ: ರಸ್ಕ್‌ಗೆ ಕಂದು ಬಣ್ಣವನ್ನು ನೀಡಲು ಸಾಮಾನ್ಯವಾಗಿ ಕ್ಯಾರಮೆಲ್ ಬಣ್ಣ ಅಥವಾ ಕಂದು ಆಹಾರ ಬಣ್ಣವನ್ನು ಸೇರಿಸಲಾಗುತ್ತದೆ.


“ಈ ಬಣ್ಣವು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಮೈದಾದೊಂದಿಗೆ ರಸ್ಕ್ ಅನ್ನು ಗೋಧಿಯಂತೆ ಕಾಣುವಂತೆ ಮಾಡಲು ಇದನ್ನು ಬಳಸಲಾಗುತ್ತದೆ" ಎಂಬುದಾಗಿ ಸಮಗ್ರ ಆರೋಗ್ಯ ತರಬೇತುದಾರ ದಿಗ್ವಿಜಯ್ ಸಿಂಗ್ ಹೇಳುತ್ತಾರೆ.


ಖುಷ್ಬೂ ಜೈನ್‌ ಅವರು ಟೀ ಅಥವಾ ಕಾಫಿ ಜೊತೆಗೆ ಹುರಿದ ಕಡಲೆ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದ್ರೆ ನೀವು ಇನ್ನೂ ರಸ್ಕ್ ತಿನ್ನಲು ಇಷ್ಟಪಡುತ್ತಿದ್ದರೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು ಹೀಗಿವೆ.


ಇದನ್ನೂ ಓದಿ: Heart Care: ಹೃದಯದ ಆರೋಗ್ಯ ಹಾಳಾಗಬಾರದು ಅಂದ್ರೆ ಚೆನ್ನಾಗಿ ನೀರು ಕುಡಿಬೇಕಂತೆ


ರಸ್ಕ್‌ ತಿನ್ನುವಾಗ ಈ ಅಂಶಗಳನ್ನು ನೆನಪಿಡಿ


“ಮಲ್ಟಿಗ್ರೇನ್ ರಸ್ಕ್‌ನಲ್ಲಿ ಮೈದಾ ಕೂಡ ಇರಬಹುದು. ಆದ್ದರಿಂದ, ಯಾವಾಗಲೂ 100 ಪ್ರತಿಶತ ಗೋಧಿ ಅಥವಾ 100 ಪ್ರತಿಶತ ರವೆ ರಸ್ಕ್ ಅನ್ನು ನೋಡಿ ಕೊಂಡುಕೊಳ್ಳಿ.


ಯಾವುದೇ ಉತ್ಪನ್ನವನ್ನು ಖರೀದಿಸುವ ಮುನ್ನ ಲೇಬಲ್‌ಗಳನ್ನು ಸರಿಯಾಗಿ ಓದಿ ಎಂಬುದಾಗಿ ಖುಷ್ಬೂ ಜೈನ್‌ ಸಲಹೆ ನೀಡುತ್ತಾರೆ.

Published by:Latha CG
First published: