Health Tips: ಉಳಿದ ಆಹಾರ ಸೇವಿಸುವುದು ಎಷ್ಟು ಸೇಫ್​?ಈ ಬಗ್ಗೆ ಆಯುರ್ವೇದ ಏನು ಹೇಳುತ್ತೆ? ಇಲ್ಲಿದೆ ನೋಡಿ..

Health Tips: ಉಳಿದ ಆಹಾರ ಬಿಸಿ ಮಾಡಿ ತಿಂದರೂ, ಹೊಸದಾಗಿ ಬೇಯಿಸಿದ ಆಹಾರದಲ್ಲಿ ಸಿಗುವಷ್ಟು ಪೌಷ್ಟಿಕವಲ್ಲ ಎಂದು ಎಲ್ಲರಿಗೆ ಗೊತ್ತಿದೆ. ಆಯುರ್ವೇದ ಪ್ರಕಾರ ಹೊಸದಾಗಿ ಮಾಡಿದ ಅಡುಗೆಯನ್ನ ಮೂರು ಗಂಟೆಗಳ ಒಳಗಾಗಿ ಸೇವಿಸಬೇಕು. ಉಳಿದ ಆಹಾರ ತಿನ್ನುವುದೇ ಆದರೆ, ಆಹಾರ ಮಾಡಿದ 24 ಗಂಟೆಯೊಳಗೆ ಸೇವಿಸಿದರೆ ಆರೋಗ್ಯಕ್ಕೆ ಒಳಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ರಾತ್ರಿ ಮಿಕ್ಕ ಅನ್ನಕ್ಕೆ(Leftover Food) ಬೆಳಗ್ಗೆ ಚಿತ್ರಾನ್ನ ಮಾಡಿಕೊಂಡು ತಿನ್ನುವುದು ಸಹಜ. ಮಧ್ಯಾಹ್ನ, ರಾತ್ರಿಗೂ ಸೇರಿಸಿ ಬೆಳಗ್ಗೆಯೇ ಅಡುಗೆ ತಯಾರಿಸುವುದು ಕಾಮನ್. ಈ ಫಾಸ್ಟ್​ ಫುಡ್(Fast Food)​ ಜಮಾನದಲ್ಲಿ ಎಲ್ಲವೂ ಫಾಸ್ಟ್​ ಆಗಿಯೇ ಸಿಗುತ್ತೆ. 2 ನಿಮಿಷದಲ್ಲಿ ಬಗೆ ಬಗೆಯ ಅಡುಗೆಗಳು ರೆಡಿಯಾಗುತ್ತವೆ. ಆದರೂ ಮನೆಯಲ್ಲಿ ಅಮ್ಮ ಕೆಲಸಕ್ಕೆ ಹೋಗಬೇಕೆಂದು ಮನೆಯಲ್ಲಿದ್ದ ಮಕ್ಕಳಿಗೆ ಬೆಳಗ್ಗೆಯೇ ಅಡುಗೆ ಮಾಡಿಟ್ಟು ಹೋಗುತ್ತಾರೆ. ಮಕ್ಕಳು ಅದನ್ನ ಓವೆನ್​ನಲ್ಲಿ ಬಿಸಿಮಾಡಿಕೊಂಡು ತಿನ್ನುತ್ತಾರೆ. ಇನ್ನೂ ಬ್ಯಾಚುಲರ್​ ಕಥೆಗಳು ಹೇಳ ತೀರದು. ಇಂದು ಮಾಡಿದ ಸಾಂಬರನ್ನ ಮೂರು ದಿನಗಳ ಕಾಲ ಬಿಸಿ ಮಾಡಿ ಊಟ ಮಾಡುತ್ತಾರೆ. ಇಲ್ಲ ರಾತ್ರಿ ಮಾಡಿಟ್ಟ ಅನ್ನವನ್ನ, ಬೆಳಗ್ಗೆ ಗಂಜಿ ರೂಪದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ.

    ಮತ್ತೊಂದು ವರ್ಗ ಯಾವುದೇ ಕಾರಣಕ್ಕೂ ಉಳಿದ ಆಹಾರ ಸೇವಿಸಬಾರದು ಅಂತ ಹೇಳುತ್ತಾರೆ. ನಿಜಕ್ಕೂ ಯಾವುದು ಸರಿ, ಯಾವುದು ತಪ್ಪು ಅಂತ ಕನ್ಫೂಸ್​ ಆಗತ್ತಿದೆಯಾ? ಒಂದೇ ಸಲ ಮಾಡಿಟ್ಟ ಅಡುಗೆಯನ್ನ ಮತ್ತೆ ಬಿಸಿ ಮಾಡಿ ತಿನ್ನುವುದು ನಿಜಕ್ಕೂ ಸುರಕ್ಷತವೇ? ಈ ಬಗ್ಗೆ ಆಯುರರ್ವೇದ ಏನು ಹೇಳುತ್ತೆ? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

    ಉಳಿದ ಆಹಾರ ಸೇವಿಸುವ ಬಗ್ಗೆ ಆಯುರ್ವೇದ ಏನು ಹೇಳುತ್ತೆ?
    ಉಳಿದ ಆಹಾರ ಬಿಸಿ ಮಾಡಿ ತಿಂದರೂ, ಹೊಸದಾಗಿ ಬೇಯಿಸಿದ ಆಹಾರದಲ್ಲಿ ಸಿಗುವಷ್ಟು ಪೌಷ್ಟಿಕವಲ್ಲ ಎಂದು ಎಲ್ಲರಿಗೆ ಗೊತ್ತಿದೆ. ಆಯುರ್ವೇದ ಪ್ರಕಾರ ಹೊಸದಾಗಿ ಮಾಡಿದ ಅಡುಗೆಯನ್ನ ಮೂರು ಗಂಟೆಗಳ ಒಳಗಾಗಿ ಸೇವಿಸಬೇಕು. ಉಳಿದ ಆಹಾರ ತಿನ್ನುವುದೇ ಆದರೆ, ಆಹಾರ ಮಾಡಿದ 24 ಗಂಟೆಯೊಳಗೆ ಸೇವಿಸಿದರೆ ಆರೋಗ್ಯಕ್ಕೆ ಒಳಿತು. 24 ಗಂಟೆ ಬಳಿಕ ಉಳಿದ ಆಹಾರವನ್ನು ಸೇವಿಸಬಾರದೆಂದು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಉಳಿದ ಆಹಾರವನ್ನು ಹಾಗೆಯೇ ಬಿಟ್ಟರೆ ಅದರೊಳಗೆ ಬ್ಯಾಕ್ಟೀರಿಯಾಗಳು ಬೆಳೆದುಕೊಳ್ಳುತ್ತವೆ. ಹೀಗಾಗಿ ಹೆಚ್ಚು ಸಮಯ ಬಿಟ್ಟು ಉಳಿದ ಆಹಾರ ಸೇವಿಸುವ ಮುನ್ನ ಜಾಗೃತರಾಗಿರಬೇಕು.

    ಇದನ್ನೂ ಓದಿ: ಚರ್ಮದ ಸಮಸ್ಯೆಗಳಿಗೆ ಪರಿಹಾರ ಬೇಕಾ? ಹಾಗಾದ್ರೆ ದಾಳಿಂಬೆ ಹಣ್ಣು ತಿನ್ನಿ

    ಉಳಿದ ಆಹಾರ ಸೇವಿಸುವುದು ಎಷ್ಟು ಸೇಫ್​?
    ಆಯರ್ವೇದ ತಜ್ಞರ ಪ್ರಕಾರ, ಉಳಿದ ಆಹಾರ ಮತ್ತೆ ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಹೆಚ್ಚಿನ ದೋಶಗಳು ಉಂಟಾಗುತ್ತೆ. ಆದಾಗಿಯೂ ಮಾಡಿದ ಅಡುಗೆಯನ್ನ ಸರಿಯಾಗಿ ಬೇಯಿಸಿ, ಸರಿಯಾಗಿ ಸಂಗ್ರಹಿಸಿಟ್ಟು ಬಳಿಕ ಸೇವಿಸುವ ವೇಳೆ ಆಹಾರವನ್ನು ಮತ್ತೆ ಬೇಯಿಸಿ, ಬಿಸಿ ಬಿಸಿಯಾಗಿ ತಿಂದರೆ ತೊಂದರೆಯಾಗುವ ಸಾಧ್ಯತೆ ಕಡಿಮೆ ಅಂತ ತಜ್ಞರು ಹೇಳಿದ್ದಾರೆ. ಅದರಲ್ಲೂ ಮಾಂಸವನ್ನು ಬೇಯಿಸುವಾಗ ಸರಿಯಾದ ರೀತಿಯಲ್ಲಿ ಬೇಯಿಸಿ, ಸರಿಯಾದ ರೀತಿಯಲ್ಲಿ ಶೇಖರಿಸಿಡಬೇಕು. ಎಲ್ಲರೂ ಉಳಿದ ಆಹಾರವನ್ನ ಫ್ರಿಡ್ಜ್​ನಲ್ಲಿ ಇರಿಸುತ್ತಾರೆ. ಇದು ಕೂಡ ಅಷ್ಟೇ 24 ಗಂಟೆಗಳ ಬಳಿಕ ಫ್ರಿಡ್ಜ್​ನಲ್ಲಿರಿಸಿದ ಆಹಾರವನ್ನು ಸೇವಿಸಬಾರದು. ಫ್ರಿಡ್ಜ್​ನಲ್ಲಿ ಆಹಾರವನ್ನು ಇರಿಸಿದಾಗ , ಪೌಷ್ಟಿಕಾಂಶದ ಮೌಲ್ಯವೂ ಕಡಿಮಾಯಾಗುತ್ತೆ.

    ಈ ಬಗ್ಗೆ ತಜ್ಞರು ಹೇಳುವುದೇನು?
    ಇತ್ತೀಚೆಗೆ ಆಯುರ್ವೇದ ತಜ್ಞೆ ಡಾ. ವರಲಕ್ಷ್ಮಿ ಉಳಿದ ಆಹಾರ ಸೇವಿಸುವ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನ ಮಾಡಿದ್ದರು. ಉಳಿದ ಆಹಾರವನ್ನು ಸೇವಿಸುವ ಮುನ್ನ ಚೆನ್ನಾಗಿ ಅದನ್ನು ಬಿಸಿಮಾಡಬೇಕು. ಆದರೆ ಹೀಗೆ ನಾವು ಮಾಡುವದರಿಂದ ಆಹಾರದಲ್ಲಿರುವ ವಿಟಮಿನ್​ ಹಾಗೂ ಪೋಷಕಾಂಶಗಳು ನಾಶವಾಗುತ್ತೆ.

    ಇದನ್ನೂ ಓದಿ: ಆಲೂಗೆಡ್ಡೆ ಜ್ಯೂಸ್ ಸೇವನೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ

    ಫ್ರೆಶ್​ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಬಹಳಷ್ಟು ಉಪಯೋಗವಿದೆ. ಉಳಿದ ಆಹಾರ ಮತ್ತೆ ಬಸಿ ಮಾಡಿ ಸೇವಿಸುವುದು ಆರೋಗ್ಯಕ್ಕೆ ಹಾನಿಕರ. ನಾವು ಬಹಳಷ್ಟು ಸಮಯ ಆಹಾರವನ್ನು ಬಿಟ್ಟು ಬಿಸಿ ಮಾಡಿ ತಿಂದರೆ ಆಹಾರ ವಿಷವಾಗಿ ಬದಲಾಗಿರುತ್ತೆ. ಹೀಗಾಗಿ ತಿನ್ನುವ ಮೊದಲು ಹೆಚ್ಚಿನ ಜಾಗೃತಿವಹಿಸಿ ಅಂತ ಡಾ. ವರಲಕ್ಷ್ಮಿ ತಿಳಿಸಿದ್ದಾರೆ.

    (ವರದಿ - ವಾಸುದೇವ.ಎಂ)
    Published by:Sandhya M
    First published: