Health tips: ಪ್ರತಿದಿನ ಮೊಟ್ಟೆ ಸೇವಿಸಿದರೆ ಮಧುಮೇಹ ಬರುತ್ತಾ? ಏನ್​ ಹೇಳುತ್ತೆ ಸಂಶೋಧನೆ?

ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಅಥವಾ ಹೆಚ್ಚು ಮೊಟ್ಟೆಗಳನ್ನು ಸೇವಿಸಿದವರಲ್ಲಿ ಈ ಮಧುಮೇಹದ ಅಪಾಯ ಶೇಕಡಾ 60 ರಷ್ಟು ಹೆಚ್ಚಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊಟ್ಟೆ (Egg) ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ? ಬಹುತೇಕರು ಪ್ರತಿದಿನ ತಮ್ಮ ಆಹಾರದಲ್ಲಿ ಯಾವುದಾದರೊಂದು ರೀತಿಯಲ್ಲಿ ಮೊಟ್ಟೆಯನ್ನು ತಿನ್ನಲು ಬಯಸುತ್ತಾರೆ. ಮೊಟ್ಟೆಯಿಂದ ಮಾಡಿಕೊಳ್ಳುವ ಆಮ್ಲೆಟ್ (Omelette) ಮತ್ತು ಮೊಟ್ಟೆ ಸಾರು ಎಂದರೆ ಬಹುತೇಕರಿಗೆ ಇಷ್ಟವಾದ ಭಕ್ಷ್ಯ (Popular Dish) ಎನ್ನಬಹುದು. ಪ್ರತಿದಿನ ಕನಿಷ್ಠ ಒಂದರಿಂದ ಎರಡು ಮೊಟ್ಟೆಗಳನ್ನು ಸೇವಿಸಿದರೆ ಆರೋಗ್ಯಕ್ಕೆ(Good for Health) ಒಳ್ಳೆಯದು ಎಂದು ವೈದ್ಯರು(Doctors) ಹೇಳುವುದನ್ನು ನಾವೆಲ್ಲಾರೂ ಕೇಳಿರುತ್ತೇವೆ.

ಸಂಶೋಧನೆಯ ಪ್ರಕಾರ
ಆದರೆ ಇಲ್ಲೊಂದು ಹೊಸ ಅಧ್ಯಯನದ ಪ್ರಕಾರ, ಮೊಟ್ಟೆಯನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮನ್ನು ಇದು ಮಧುಮೇಹದ ಅಪಾಯಕ್ಕೆ ತಳ್ಳಬಹುದು ಎಂದು ಹೇಳಿದೆ. ಈ ಸಂಶೋಧನೆಯ ಪ್ರಕಾರ, ದಿನಕ್ಕೆ ಒಂದು ಅಥವಾ ಹೆಚ್ಚು ಮೊಟ್ಟೆಗಳನ್ನು ಸೇವಿಸಿದವರಲ್ಲಿ ಈ ಮಧುಮೇಹದ ಅಪಾಯ ಶೇಕಡಾ 60 ರಷ್ಟು ಹೆಚ್ಚಾಗುತ್ತದೆ ಮತ್ತು ಇದರ ಪರಿಣಾಮವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸ್ಪಷ್ಟವಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಡಯಾಬಿಟೀಸ್‌ನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ!

ಮಧುಮೇಹದ ಹೆಚ್ಚಳ
ಚೀನಾ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಕತಾರ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆಸಲಾದ, ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ನೇತೃತ್ವದ ದೀರ್ಘಕಾಲೀನ 1991 ರಿಂದ 2009 ರ ವರೆಗೆ ನಡೆಸಲಾದ ಅಧ್ಯಯನವು ಚೀನಾದ ವಯಸ್ಕರನ್ನು ಇದರಲ್ಲಿ ತೊಡಗಿಸಿಕೊಂಡು ಮೊಟ್ಟೆ ಬಳಕೆಯ ಪರಿಣಾಮವನ್ನು ತಿಳಿದಂತಹ ಅಧ್ಯಯನ ಎಂದು ಕರೆಯಬಹುದು. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಸಾರ್ವಜನಿಕ ಆರೋಗ್ಯ ತಜ್ಞ ಮಿಂಗ್ ಲಿ ಅವರು ಮಧುಮೇಹದ ಹೆಚ್ಚಳವು ನಿಜಕ್ಕೂ ಇದರ ಬಗ್ಗೆ ಕಾಳಜಿಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದರು.

ಮಧುಮೇಹದಲ್ಲಿ ಆಹಾರ ಕ್ರಮವು ತುಂಬಾ ಮಹತ್ವದ ಪಾತ್ರವನ್ನು ವಹಿಸುತ್ತದೆ
ಟೈಪ್ 2 ಮಧುಮೇಹದ ಆರಂಭಕ್ಕೆ ತುಂಬಾನೇ ಪ್ರಭಾವ ಬೀರುವ ಅಂಶವೆಂದರೇ ಅದು ನಮ್ಮ ಆಹಾರ ಕ್ರಮವಾಗಿದೆ, ಆದ್ದರಿಂದ ಈ ರೋಗದ ಹೆಚ್ಚುತ್ತಿರುವ ಹರಡುವಿಕೆಯ ಮೇಲೆ ಪರಿಣಾಮ ಬೀರಬಹುದಾದ ಆಹಾರ ಕ್ರಮಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ ಎಂದು ಮಿಂಗ್ ಹೇಳಿದರು.
ಕಳೆದ ಕೆಲವು ದಶಕಗಳಲ್ಲಿ, ಚೀನಾ ಗಣನೀಯ ಪೌಷ್ಠಿಕಾಂಶ ಪರಿವರ್ತನೆಗೆ ಒಳಗಾಗಿದೆ, ಅನೇಕ ಜನರು ಧಾನ್ಯಗಳು ಮತ್ತು ತರಕಾರಿಗಳನ್ನು ಒಳಗೊಂಡ ಆಹಾರದಿಂದ ದೂರ ಹೋಗಿ ಹೆಚ್ಚಿನ ಪ್ರಮಾಣದ ಜನರು ಮಾಂಸ, ಕುರುಕಲು ತಿಂಡಿಗಳನ್ನು ಮತ್ತು ಹೆಚ್ಚು ಸಂಸ್ಕರಿಸಿದ ಆಹಾರ ಸೇವಿಸುತ್ತಿದ್ದಾರೆ.

ಮೊಟ್ಟೆ ಸೇವನೆ ಮತ್ತು ಮಧುಮೇಹ
ಅದೇ ಸಮಯದಲ್ಲಿ, ಮೊಟ್ಟೆಗಳ ಬಳಕೆಯೂ ಸ್ಥಿರವಾಗಿ ಹೆಚ್ಚುತ್ತಿದೆ, 1991 ರಿಂದ 2009 ರವರೆಗೆ ಚೀನಾದಲ್ಲಿ ಮೊಟ್ಟೆ ತಿನ್ನುವವರ ಸಂಖ್ಯೆ ದ್ವಿಗುಣಗೊಂಡಿದೆ" ಎಂದು ಅವರು ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಪ್ರಬಂಧದಲ್ಲಿ ತಿಳಿಸಿದ್ದಾರೆ. ಮೊಟ್ಟೆಗಳು ಮತ್ತು ಮಧುಮೇಹದ ನಡುವಿನ ಸಂಬಂಧವು ಆಗಾಗ್ಗೆ ಚರ್ಚಿಸಲ್ಪಡುತ್ತದೆಯಾದರೂ, ಈ ಅಧ್ಯಯನವು ಜನರ ದೀರ್ಘಕಾಲೀನ ಮೊಟ್ಟೆ ಸೇವನೆ ಮತ್ತು ಉಪವಾಸದ ರಕ್ತ ಗ್ಲುಕೋಸ್ ನಿಂದ ನಿರ್ಧರಿಸಲ್ಪಟ್ಟಂತೆ ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ನಿರ್ಣಯಿಸಬಹುದು.

ಹೆಚ್ಚಿನ ಮತ್ತು ನಿಯಮಿತ ಸೇವನೆಯು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ತಜ್ಞರು ಕಂಡು ಹಿಡಿದದ್ದು ಏನೆಂದರೆ, ಹೆಚ್ಚಿನ ದೀರ್ಘಕಾಲೀನ ಮೊಟ್ಟೆ ಸೇವನೆಯು ಚೀನಾದ ವಯಸ್ಕರಲ್ಲಿ ಮಧುಮೇಹದ ಅಪಾಯವನ್ನು ಸುಮಾರು ಶೇಕಡಾ 25 ರಷ್ಟು ಹೆಚ್ಚಿಸಿದೆ. ಇದಲ್ಲದೆ, ನಿಯಮಿತವಾಗಿ ಸಾಕಷ್ಟು ಮೊಟ್ಟೆಗಳನ್ನು (ದಿನಕ್ಕೆ ಒಂದು ಮೊಟ್ಟೆ) ಸೇವಿಸುವ ವಯಸ್ಕರಿಗೆ ಮಧುಮೇಹದ ಅಪಾಯವು ಶೇಕಡಾ 60 ರಷ್ಟು ಹೆಚ್ಚಾಗಿದೆ" ಎಂದು ಮಿಂಗ್ ಹೇಳಿದ್ದಾರೆ. ಈ ಫಲಿತಾಂಶಗಳು ಹೆಚ್ಚಿನ ಮೊಟ್ಟೆ ಸೇವನೆಯು ಚೀನಾದ ವಯಸ್ಕರಲ್ಲಿ ಮಧುಮೇಹದ ಅಪಾಯದೊಂದಿಗೆ ಸಂಬಂಧವನ್ನು ಸೂಚಿಸುತ್ತದೆಯಾದರೂ, ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Brinjal: ಬದನೆಕಾಯಿ ತಿಂದ್ರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತಾ? ಇದರ ಪ್ರಯೋಜನಗಳು ಒಂದೆರೆಡಲ್ಲ

ಸಂಶೋಧನೆ ಹೇಳುವುದೇನು?
ಮಧುಮೇಹ ಎಂಬ ಮಹಾಮಾರಿಯನ್ನು ಸೋಲಿಸಲು, ಸಂಶೋಧನೆಯನ್ನು ಒಳಗೊಂಡಿರುವ ಬಹುಮುಖಿ ವಿಧಾನದ ಅಗತ್ಯವಿದೆ, ಆದರೆ ಸಾರ್ವಜನಿಕರಿಗೆ ತಿಳಿಸಲು ಮತ್ತು ಮಾರ್ಗದರ್ಶನ ನೀಡಲು ಸಹಾಯ ಮಾಡಲು ಸ್ಪಷ್ಟವಾದ ಮಾರ್ಗಸೂಚಿಗಳ ಅಗತ್ಯವಿದೆ. ಈ ಅಧ್ಯಯನವು ಆ ದೀರ್ಘಕಾಲೀನ ಗುರಿಯತ್ತ ಒಂದು ಹೆಜ್ಜೆಯಾಗಿದೆ" ಎಂದು ಲೇಖಕರು ಬರೆದಿದ್ದಾರೆ. ಈ ಅಧ್ಯಯನವು 8,545 ವಯಸ್ಕರನ್ನು ಒಳಗೊಂಡಿತ್ತು.
Published by:vanithasanjevani vanithasanjevani
First published: