Health Tips: ಪ್ರತಿನಿತ್ಯ ಮೊಸರು ಸೇವಿಸಿದ್ರೆ, ಹೃದಯಾಘಾತದಿಂದ ದೂರವಿರಬಹುದಂತೆ..!

ಮೊಸರು ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ ಅನ್ನು ಯಥೇಚ್ಛವಾಗಿ ಹೊಂದಿದೆ. ಇದು ಹಲ್ಲು ಮತ್ತು ಮೂಳೆಗಳಿಗೆ ಸಾಕಷ್ಟು ಪ್ರಮುಖ ವಿಟಮಿನ್ಸ್ ನೀಡುತ್ತದೆ.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ, ತುಪ್ಪ, ಪನ್ನೀರ್‌, ಚೀಸ್ ಇವುಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಸೇರಿ ಇನ್ನು ಅನೇಕ ವಿಟಮಿನ್‌ಗಳು ಅಡಗಿರುತ್ತವೆ. ಪ್ರತಿದಿನ ನಾವು ಇವುಗಳನ್ನ ನಿಯಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯಕರವಾದ (Health) ಲಾಭಗಳನ್ನು ಪಡೆದುಕೊಳ್ಳುತ್ತೇವೆ. ಚಳಿಗಾಲದಲ್ಲಂತೂ ಹಾಲಿನ ಉತ್ಪನ್ನಗಳ ಪ್ರಯೋಜನ ಹತ್ತು ಹಲವು. ಚರ್ಮದ ಆರೈಕೆ, ದೇಹದ ಆರೋಗ್ಯ ಸೇರಿ ಎಲ್ಲದಕ್ಕೂ ಹಾಲಿನ ಉತ್ಪನ್ನಗಳು(Milk Products) ರಾಮಬಾಣವಾಗಿದೆ. ಅದರಲ್ಲೂ ಮೊಸರು(Curd) ನಮ್ಮ ಚರ್ಮದ ಮತ್ತು ದೇಹದ ಆರೋಗ್ಯಕ್ಕೆ ಒಳ್ಳೆಯ ಮನೆಮದ್ದಾಗಿದೆ. ಅಲ್ಲದೆ ಪ್ರತಿ ದಿನ ಮೊಸರನ್ನು ಸೇವಿಸುವುದರಿಂದ ಹೃದಯಾಘಾತ(Heart Attack) ಅಪಾಯದಿಂದ ದೂರವಿರಬಹುದು. ಹಾಗಾದರೆ ಮೊಸರನ್ನು ಸೇವಿಸುವುದರಿಂದ ಏನೆಲ್ಲ ಪ್ರಯೋಜನಗಳಿವೆ ತಿಳಿಯೋಣ ಬನ್ನಿ.

ರುಚಿಗೂ ಸೈ.. ಆರೋಗ್ಯಕ್ಕೂ ಸೈ
ಹಾಲಿನ ಹುದುಗುವಿಕೆ ಪ್ರಕ್ರಿಯೆಯ ನಂತರ ನಮಗೆ ಸಿಗುವ ಹಾಲಿನ ಉತ್ಪನ್ನಗಳಲ್ಲಿ ಒಂದು ಮೊಸರು. ಭಾರತೀಯರ ಅಚ್ಚುಮೆಚ್ಚಿನ ಆಹಾರವಾಗಿದ್ದು ಕೆಲವರಿಗೆ ಮೊಸರಿಲ್ಲದೆ ಊಟಾನೇ ಅಪೂರ್ಣವಾಗಿರುತ್ತದೆ. ಮೊಸರು ರುಚಿಯಿಂದ ಮಾತ್ರವಲ್ಲ, ಅದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿಗಾಗಿ ಕೂಡ ಜನಪ್ರಿಯತೆಯನ್ನು ಹೊಂದಿದೆ.

 ಯೋನಿ ಸೋಂಕುಗಳನ್ನು (vaginal infection) ತಡೆಯುತ್ತದೆ
ಹೆಣ್ಣು ಮಕ್ಕಳಲ್ಲಿ ಆಗಾಗ ಯೂರಿನ್ ಸೋಂಕು ( Infection ) ಆಗುವುದು ಸಹಜ. ಇದಕ್ಕೆ ಮೊಸರು ಸೇವನೆ ರಾಮಬಾಣ. ಯೋನಿಯಲ್ಲಿ ಲ್ಯಾಕ್ಟೋಬ್ಯಾಸಿಲಸ್ ಬ್ಯಾಕ್ಟೀರಿಯಾ ಇರುವುದರಿಂದ ಯೋನಿಯ ಯೀಸ್ಟ್ ಸಮತೋಲನ ಪುನಃಸ್ಥಾಪಿಸಲು ಮೊಸರು ಸಹಾಯ ಮಾಡುತ್ತದೆ. ಇದು ಯೋನಿ ಸೋಂಕುಗಳನ್ನು ತಡೆಯುವಲ್ಲಿ ಸಹಕಾರಿಯಾಗಿದೆ.

ಇದನ್ನೂ ಓದಿ: Eating Curd Good or Bad? ರಾತ್ರಿ ಹೊತ್ತು ಮೊಸರು ತಿನ್ನುವ ಮುನ್ನ ಈ ಅಂಶ ಗಮನಿಸಿ

 ತೂಕ ಕಳೆದುಕೊಳ್ಳಲು ಮೊಸರು ಸಹಾಯಕಾರಿ !
ತೂಕ ಇಳಿಸಲು ವ್ಯಾಯಾಮ, ಡಯೆಟ್ ಅಂತ ಏನೆಲ್ಲ ಕಷ್ಟಪಡುತ್ತೇವೆ. ವ್ಯಾಯಾಮ, ಡಯೆಟ್ ಜತೆಗೆ ಮೊಸರು ಸೇವನೆ ತೂಕ ನಷ್ಟಕ್ಕೆ ಅತ್ಯಂತ ಒಳ್ಳೆಯದು. ಏಕೆಂದರೆ ಇದು ತೂಕ ಹೆಚ್ಚಿಸುವ ಸ್ಟಿರಾಯ್ಡ್ ಹಾರ್ಮೋನುಗಳು ಅಥವಾ ಕಾರ್ಟಿಸೋಲ್ ಬೆಳವಣಿಗೆ ತಡೆಯುತ್ತದೆ. ಈ ಮೂಲಕ ಬೊಜ್ಜಿನ ಅಪಾಯವನ್ನು ನಿಯಂತ್ರಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ದಿನೇ ದಿನೇ ಹೊಸ ರೋಗಗಳು ಹೆಚ್ಚಿತ್ತಿರುವ ಈ ಸಂದರ್ಭದಲ್ಲಿ ನಾವು ಕೂಡ ಅಷ್ಟೇ ಇಮ್ಮ್ಯೂನಿಟಿ ಪವರ್ ಹೊಂದಿರಲೇಬೇಕು. ಹಾಗಾಗಿ ಮೊಸರು ರೋಗ ಉಂಟು ಮಾಡುವ ಕೀಟಾಣುಗಳ ವಿರುದ್ಧ ಹೋರಾಡಲು ಅತ್ಯುತ್ತಮ ಪ್ರೋಬಯಾಟಿಕ್ ಆಹಾರವಾಗಿದೆ. ಇದರಿಂದಾಗಿ ನಮ್ಮ ದೇಹದಲ್ಲಿ ಇಮ್ಯೂನಿಟಿ ಹೆಚ್ಚುತ್ತದೆ.

ಮೊಸರಿನಿಂದ ಮೂಳೆ, ಹಲ್ಲು ಸದೃಢ
ಮೊಸರು ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ ಅನ್ನು ಯಥೇಚ್ಛವಾಗಿ ಹೊಂದಿದೆ. ಇದು ಹಲ್ಲು ಮತ್ತು ಮೂಳೆಗಳಿಗೆ ಸಾಕಷ್ಟು ಪ್ರಮುಖ ವಿಟಮಿನ್ಸ್ ನೀಡುತ್ತದೆ. ಅಷ್ಟೇ ಅಲ್ಲ, ಮೊಸರು ಸಂಧಿವಾತವನ್ನು ತಡೆಯುತ್ತದೆ, ಆದ್ದರಿಂದ ನೀವು ಪ್ರತಿ ಊಟದ ಸಮಯದಲ್ಲಿ ಮೊಸರನ್ನು ತಿನ್ನುವುದು ಉತ್ತಮ.

ಮೊಸರು ಸೇವಿಸಿ.. ಹೃದಯಾಘಾತದಿಂದ ದೂರವಿರಿ
ಪ್ರಪಂಚದಾದ್ಯಂತ ಸುಮಾರು ಶೇಕಡಾ 60ರಷ್ಟು ಜನರು ಹೃದ್ರೋಗಗಳಿಂದ ಸಾಯುತ್ತಾರೆ. ಆದರೆ ಮೊಸರು ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ನಿಜವಾಗಿಯೂ ಪ್ರಯೋಜನ ನೀಡುತ್ತದೆ. ಮೊಸರು ಕೊಲೆಸ್ಟ್ರಾಲ್ ಉಂಟಾಗುವುದನ್ನು ತಡೆಯುತ್ತದೆ ಮತ್ತು ಇದರಿಂದಾಗಿ ಅಧಿಕ ರಕ್ತದೊತ್ತಡ ಕಡಿಮೆಯಾಗಿ ಹೃದಯವನ್ನು ಕಾಪಾಡುವಲ್ಲಿ ಸಹಾಯಕಾರಿ.

ಇದನ್ನೂ ಓದಿ: Weight Loss Tips: ಮೊಸರು ನಿಮ್ಮ ತೂಕ ಇಳಿಸಲು ಹೇಗೆಲ್ಲಾ ಸಹಕಾರಿ ಎಂದು ತಿಳಿದ್ರೆ ದಿನಾ ತಿನ್ನದೇ ಇರಲಾರಿರಿ..

ಕೂದಲು ಮತ್ತು ತ್ವಚೆಯ ಹೊಳಪಿಗೆ ಸಹಾಯ
ಹಾಲಿನ ಉತ್ಪನ್ನಗಳು ನಮ್ಮ ಚರ್ಮ ಮತ್ತು ಕೂದಲಿನ ಆರೈಕೆಗೆ ಸಹಾಯಕಾರಿಯಾಗಿದೆ. ಅದರಲ್ಲೂ
ಮೊಸರಿಂದ ಉತ್ತಮ ಮತ್ತು ಆರೋಗ್ಯಕರ ತ್ವಚೆ ಪಡೆಯಬಹುದು. ಕಡಲೆ ಹಿಟ್ಟು, ಮೊಸರು ಮತ್ತು ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿದ ಫೇಸ್ ಪ್ಯಾಕ್ ಅನ್ನು ಮುಖಕ್ಕೆ ಹಾಕಿ 15 ನಿಮಿಷಗಳ ನಂತರ ಅದನ್ನು ತೊಳೆಯುವದರಿಂದ ಚರ್ಮದ ಹೊಳಪು ಹೆಚ್ಚುತ್ತದೆ . ಮೊಸರು ನೈಸರ್ಗಿಕ ಬ್ಲೀಚ್ ಆಗಿ ಕಾರ್ಯನಿರ್ವಹಿಸುವುದರಿಂದ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಹೊಳೆಯುವ ಮತ್ತು ಆರೋಗ್ಯಕರ ಕೂದಲನ್ನು ಹೊಂದಲು ನೀವು ರೆಮಿಡಿಯನ್ನು ನಿಮ್ಮ ಕೂದಲಿಗೆ ಅನ್ವಯಿಸಬಹುದು.
Published by:vanithasanjevani vanithasanjevani
First published: