• Home
 • »
 • News
 • »
 • lifestyle
 • »
 • Horrible Restaurants: ಜಗತ್ತಿನ ಅತೀ ಭಯಾನಕ ರೆಸ್ಟೋರೆಂಟ್​ಗಳಿವು! ಒಮ್ಮೆಯಾದರೂ ಭೇಟಿ ಕೊಡಿ

Horrible Restaurants: ಜಗತ್ತಿನ ಅತೀ ಭಯಾನಕ ರೆಸ್ಟೋರೆಂಟ್​ಗಳಿವು! ಒಮ್ಮೆಯಾದರೂ ಭೇಟಿ ಕೊಡಿ

ರೆಸ್ಟೋರೆಂಟ್

ರೆಸ್ಟೋರೆಂಟ್

ಜಗತ್ತಿನ ಕೆಲವು ರೆಸ್ಟೋರೆಂಟ್‌ಗಳು ತುಂಬಾ ಭಯಾನಕ ವಾತಾವರಣವನ್ನು ಹೊಂದಿವೆಯಂತೆ. ಅಲ್ಲಿಗೆ ಹೋದವರ ಮನಸ್ಸಲ್ಲಿ ಆ ಚಿತ್ರಣ ಕುಳಿತರೆ ಯಾವತ್ತೂ ಹೋಗುವುದಿಲ್ಲವಂತೆ. ಜನರನ್ನು ಬೆಚ್ಚಿ ಬೀಳಿಸುತ್ತವಂತೆ.

 • Share this:

  ನಾವೆಲ್ಲೂ ರೆಸ್ಟೊರೆಂಟ್ (Restaurant) ಅಥವಾ ಹೊಟೇಲ್ (Hotel) ನಲ್ಲಿ ತಿಂಡಿ (Tiffin), ಊಟ (Dinner) ಮಾಡೇ ಮಾಡಿದ್ದೀವಿ. ಊಟ ಮಾಡಿ ಮನೆಗೆ ಬಂದ ನಂತರ ವಾಹ್! ಊಟ ತುಂಬಾ ರುಚಿಯಾಗಿತ್ತು. ಸರ್ವಿಸ್ ಕೂಡ ಚೆನ್ನಾಗಿತ್ತು. ಅಲ್ಲಿನ ಲೊಕೇಶನ್. ಹೀಗೆ ಅನೇಕ ವಿಷಯಗಳನ್ನು ಮತ್ತೆ ಮತ್ತೆ ಮೆಲುಕು  ಹಾಕುತ್ತೀವಿ. ಜನರಿಗೆ ಕೆಲವು ಸ್ಥಳಗಳು ಹಾಗೂ ಅಲ್ಲಿನ ತಿಂಡಿ, ಊಟವೆಂದರೆ ಸಖತ್ ಇಷ್ಟಪಡುತ್ತಾರೆ (Like). ಪ್ರತಿಯೊಬ್ಬರಿಗೂ ಅವರದ್ದೇ ಆದ ಟೇಸ್ಟ್ ಇದೆ. ಊಟ, ತಿಂಡಿಯ ರುಚಿ ಆಗಾಗ ನೆನಪಾಗುತ್ತಲೇ (Memorable) ಇರುತ್ತದೆ. ಮತ್ತೆ ಮತ್ತೆ ಊಟ, ತಿಂಡಿಗೆ ಅದೇ ಜಾಗಕ್ಕೆ, ಅದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಗೆ ಹೋಗಬೇಕು ಅನ್ನಿಸುತ್ತದೆ. ಆದರೆ ಜಗತ್ತಿನ (World) ಕೆಲವು ರೆಸ್ಟೋರೆಂಟ್‌ಗಳು ತುಂಬಾ ಭಯಾನಕ (Scary) ವಾತಾವರಣವನ್ನು ಹೊಂದಿವೆಯಂತೆ.


  ಅಲ್ಲಿಗೆ ಹೋದವರ ಮನಸ್ಸಲ್ಲಿ ಆ ಚಿತರಣ ಕುಳಿತರೆ ಯಾವತ್ತೂ ಹೋಗುವುದಿಲ್ಲವಂತೆ. ಜನರನ್ನು ಬೆಚ್ಚಿ ಬೀಳಿಸುತ್ತವಂತೆ. ಕೆಲವು ರೆಸ್ಟೋರೆಂಟ್‌ಗಳು ಭೂಮಿಯಿಂದ ಸಾಕಷ್ಟು ಎತ್ತರದಲ್ಲಿವೆ. ಇನ್ನು ಕೆಲವನ್ನು ಸ್ಮಶಾನದಲ್ಲಿ ನಿರ್ಮಾಣ ಮಾಡಿ, ವಿನ್ಯಾಸಗೊಳಿಸಲಾಗಿದೆ. ಅನೇಕ ಸ್ಥಳಗಳಲ್ಲಿ ಕಾಫಿ ಟೇಬಲ್‌ಗೆ ಶವಪೆಟ್ಟಿಗೆಯ ಆಕಾರವನ್ನು ನೀಡಲಾಗಿದೆ. ಅಂತಹ ಮನುಷ್ಯನನ್ನು ಗಾಬರಿಗೊಳಿಸುವ, ಬೆಚ್ಚಿ ಬೀಳಿಸುವ ಕೆಲವು ರೆಸ್ಟೋರೆಂಟ್‌ಗಳ ಬಗ್ಗೆ ಇಂದು ತಿಳಿಯೋಣ.


  ಡಿನ್ನರ್ ಇನ್ ದಿ ಸ್ಕೈ (ಬೆಲ್ಜಿಯಂ) :


  ಭೂಮಿಯಿಂದ 160 ಅಡಿ ಎತ್ತರದಲ್ಲಿರು ಈ ರೆಸ್ಟೋರೆಂಟ್, ಗಾಳಿಯಲ್ಲಿ ತೂಗಾಡುವ ಟೇಬಲ್-ಕುರ್ಚಿಗಳನ್ನು ಹೊಂದಿದೆ. ಗಾಳಿಯಲ್ಲಿ ಓಲಾಡುವ ಕುರ್ಚಿಗಳ ಮೇಲೆಯೇ ರುಚಿಕರವಾದ ಆಹಾರವನ್ನು ಬಡಿಸಲಾಗುತ್ತದೆ. ಊಟದ ಸಮಯದಲ್ಲಿ ಕುರ್ಚಿ ಮೇಲೆ ಕುಳಿತ 22 ಜನರನ್ನು ಸುರಕ್ಷತಾ ಬೆಲ್ಟ್‌ಗಳೊಂದಿಗೆ ಕಟ್ಟಿ ಹಾಕಲಾಗುತ್ತದೆ. 160 ಅಡಿ ಎತ್ತರಕ್ಕೆ ಕರೆದೊಯ್ದ ನಂತರ ಊಟ, ತಿಂಡಿಯನ್ನು ಬಡಿಸಲಾಗುತ್ತದೆ.


  ಇದನ್ನೂ ಓದಿ: Weekend Curfew ವಿರುದ್ಧ ತಿರುಗಿಬಿದ್ದ ಮಾಲೀಕರು: ವಾರಂತ್ಯದಲ್ಲಿ ಹೋಟೆಲ್ಸ್, ಬಾರ್​ಗಳು ಓಪನ್?


  ಎತ್ತರದಿಂದ ಸುಂದರ ನಿಸರ್ಗವನ್ನು ನೋಡುತ್ತಾ, ಆನಂದದಿಂದ ಊಟದ ಸವಿ ಸವಿಯಬಹುದು. ಇನ್ನು ಇಲ್ಲಿ ಊಟದ ಸೀಟಿನಲ್ಲಿ ಕುಳಿತುಕೊಳ್ಳುವ ಮೊದಲು ಜನರು ವಿಮಾ ಪಾಲಿಸಿಗೆ ಸಹಿ ಹಾಕಬೇಕು. ಈ ರೆಸ್ಟೋರೆಂಟ್ ಪ್ರಪಂಚದಾದ್ಯಂತ ಅನೇಕ ಶಾಖೆಗಳನ್ನು ಹೊಂದಿದೆ.


  ದಿ ನ್ಯೂ ಲಕ್ಕಿ ರೆಸ್ಟೊರೆಂಟ್ (ಅಹಮದಾಬಾದ್):


  'ಸತ್ತವರ ಜೊತೆ ಊಟ ಮಾಡು' ಎಂಬ ಮಾತು ಈ ರೆಸ್ಟೋರೆಂಟ್‌ಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಹತ್ತಾರು ಕಲ್ಲಿನ ಶವಪೆಟ್ಟಿಗೆಗಳನ್ನು ಉಕ್ಕಿನ ಬೇಲಿಗಳನ್ನು ಹಾಕಿ ಅಳವಡಿಸಲಾಗಿದೆ. ಈ ಶವಪೆಟ್ಟಿಗೆಗಳು 16 ನೇ ಶತಮಾನದ ಸಂತನ ಅನುಯಾಯಿಗಳಿಗೆ ಸೇರಿದವು ಎಂದು ಹೇಳಲಾಗುತ್ತದೆ. ಇಲ್ಲಿರುವ ಪಾಲಾಕ್ ಪನೀರ್ ಆಹಾರ ಪದಾರ್ಥ ತುಂಬಾ ಫೇಮಸ್.


  ಡಾನ್ಸ್ ಲಿ ನಾಯರ್ (ನ್ಯೂಯಾರ್ಕ್):


  ಕತ್ತಲೆಯಲ್ಲಿ ಆಹಾರವನ್ನು ತಿನ್ನುವುದಕ್ಕಿಂತ ಹೆಚ್ಚು ಭಯಾನಕವಾದದ್ದು ಯಾವುದು?  ನ್ಯೂಯಾರ್ಕ್‌ನ ಡಾನ್ಸ್ ಲಿ ನಾಯರ್ ರೆಸ್ಟೋರೆಂಟ್‌ನಲ್ಲಿ ಬೆಳಕಿನಲ್ಲಿ ಊಟ ಮಾಡುವುದು ಅಥವಾ ಬೆಳಕಿನ ಯಾವುದೇ ಸಾಧನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಮೊಬೈಲ್ ಟಾರ್ಚ್ ಕೂಡ ಉಪಯೋಗಿಸುವಂತಿಲ್ಲ. ಕತ್ತಲಲ್ಲಿ ಕೂತು ತಿನ್ನುವುದನ್ನು ಆನಂದಿಸಬೇಕು. ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಅಪರಿಚಿತರ ಜತೆ ಕುಳಿತು ಊಟ ಮಾಡಬೇಕು.


  ಫೋರ್ಟೆಜಾ ಮೆಡಿಸಿಯಾ (ಇಟಲಿ):


  ಫೋರ್ಟೆಜಾ ಮೆಡಿಸಿಯಾ ಇಟಲಿಯ ಪ್ರಸಿದ್ಧ ರೆಸ್ಟೋರೆಂಟ್ ಆಗಿದೆ. ಇದು 2007 ರಿಂದ ಅತಿಥಿಗಳ ಸೇವೆಯಲ್ಲಿದೆ. ಇದು ವಾಸ್ತವವಾಗಿ 1474 ರಲ್ಲಿ ನಿರ್ಮಿಸಲಾದ ಅರಮನೆ. ಆದರೆ ಇಂದು ಇದನ್ನು ಭದ್ರತಾ ಸೆರೆಮನೆಯಾಗಿ ಬಳಸಲಾಗುತ್ತಿದೆ. ಇಲ್ಲಿ ಜೈಲಿನ ಕೈದಿಗಳು ಆಹಾರ ಬೇಯಿಸುತ್ತಾರೆ ಮತ್ತು ಭದ್ರತಾ ಕಾರಣಗಳಿಗಾಗಿ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಆಹಾರ ನೀಡಲಾಗುತ್ತದೆ. ಈ ರೆಸ್ಟೋರೆಂಟ್‌ನಲ್ಲಿ ಕೆಲವು ವಾರಗಳ ಮೊದಲೇ ಬುಕ್ಕಿಂಗ್ ಮಾಡಬೇಕು. ಊಟದ ಸಮಯದಲ್ಲಿ ಸುಂದರವಾದ ಪಿಯಾನೋ ಮಧುರ ಸಂಗೀತ ಕೇಳಲು ಸಿಗುತ್ತದೆ.


  ನಯೋಟೈಮೊರಿ (ಟೋಕಿಯೊ):


  ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ನಿರ್ಮಾಣವಾಗಿರುವ ಈ ರೆಸ್ಟೋರೆಂಟ್ ಸಾಕಷ್ಟು ಪ್ರಸಿದ್ಧವಾಗಿದೆ. ಇಲ್ಲಿ ಆಹಾರದಿಂದ ಅಲಂಕರಿಸಲ್ಪಟ್ಟ ಮಹಿಳೆಯ ಆಕಾರದ ಡಮ್ಮಿಯನ್ನು ಜನರ ಮುಂದೆ ಮೇಜಿನ ಮೇಲೆ ಇರಿಸಲಾಗುತ್ತದೆ. ತಿನ್ನಲು ಚಾಕು ಮತ್ತು ಫೋರ್ಕ್ ಬದಲಿಗೆ ಬೇರೆ ಸಾಧನ ನೀಡಲಾಗುತ್ತದೆ. ದೇಹದ ಭಾಗಗಳನ್ನು ಆಹಾರ ಪದಾರ್ಥಗಳಂತೆಯೇ ವಿನ್ಯಾಸಗೊಳಿಸಲಾಗಿದೆ. ಇದನ್ನು ನೋಡುವುದೇ ತುಂಬಾ ಭಯಾನಕವಾಗಿದೆ.


  ಇದನ್ನೂ ಓದಿ: ಹೋಟೆಲ್‌ಗಳಲ್ಲಿ 13ನೇ ಮಹಡಿ ಇರುವುದಿಲ್ಲ; ಇದಕ್ಕೆ ಕಾರಣ ಗೊತ್ತಾ!


  ಮಗ್ ಹೌಸ್ ಪಬ್ (ಇಂಗ್ಲೆಂಡ್):


  ಕಲ್ಲಿನ ನೆಲದ ಮೇಲೆ ನಿರ್ಮಿಸಲಾದ ಸುಂದರವಾದ ರೆಸ್ಟೋರೆಂಟ್‌ನಲ್ಲಿ, ಸ್ಮಶಾನದ ಮೈದಾನದಲ್ಲಿ ಹಾದು ಹೋಗಬೇಕಾಗುತ್ತದೆ. ಇದರ ನಂತರ ನೀವು ಬ್ಯಾಕ್ ರೂಂ, ಬಾರ್ ಮತ್ತು ಡೈನಿಂಗ್ ಏರಿಯಾದಂತಹ ಸ್ಥಳಗಳು ಇವೆ. ಊಟದ ಸಮಯದಲ್ಲಿ ಭಯಾನಕ ಶಬ್ದಗಳು ಕೇಳುತ್ತವೆ.


  ಡಿಸಾಸ್ಟರ್ ಕೆಫೆ:


  ಭೂಕಂಪದ ನಡುಕಗಳನ್ನು ಈ ರೆಸ್ಟೋರೆಂಟ್‌ನಲ್ಲಿ ಕಾಣಬಹುದು. ಇದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಫೆಯಲ್ಲಿ ಇರುವ ಸಿಬ್ಬಂದಿ ಯಾವಾಗಲೂ ಸುರಕ್ಷತಾ ಕ್ಯಾಪ್ ಮತ್ತು ನಡುವಂಗಿಗಳನ್ನು ಧರಿಸಿರುವುದನ್ನು ಕಾಣಬಹುದು. ಆಹಾರ ಮತ್ತು ಮದ್ಯವನ್ನು ಡ್ರೋನ್ ಮೂಲಕ ಕಳುಹಿಸಲಾಗುತ್ತದೆ.

  Published by:renukadariyannavar
  First published: