ಸರಿಯಾದ ಟೈಮ್​ಗೆ ನಿದ್ದೆ ಬರ್ತಿಲ್ವಾ? ಹಾಗಿದ್ರೆ ಈ ಸಮಸ್ಯೆ ಇರಬಹುದು ನೋಡ್ಕೊಳಿ..

ಉತ್ತಮ ನಿದ್ರೆಯನ್ನು ಮಾಡದೆ ಇರುವುದರಿಂದ ಮರುದಿನ ಚಡಪಡಿಕೆ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಆದರೆ ಅಷ್ಟೇ ಅಲ್ಲ, ನಿದ್ರಾಹೀನತೆಯು ಒಟ್ಟಾರೆ ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂದು ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ವಯಸ್ಸಿನ ಮಿತಿಯಿಲ್ಲದೆ ಜನರು ನಿದ್ರಾಹೀನತೆ(Insomnia)ಯಿಂದ ಬಳಲುತ್ತಿದ್ದು, ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರೆ ಒಂದೇ ಎರಡೇ? ಮಾನಸಿಕ ಒತ್ತಡ(Psychological stress), ಖಿನ್ನತೆ ಅಥವಾ ಅತಿಯಾದ ಕೆಲಸ ನಿಮ್ಮ ನಿದ್ರಾಹೀನತೆಗೆ ಪ್ರಮುಖವಾದ ಕಾರಣ ಎಂದು ಇದುವರೆಗೂ ಹೇಳಲಾಗುತ್ತಿತ್ತು.ಕೆಲವೊಬ್ಬರು ರಾತ್ರಿಯಿಡಿ ಸರಿಯಾಗಿ ನಿದ್ರೆ(Sleep) ಬರದೇ ಒದ್ದಾಡುತ್ತಾರೆ, ಆ ನಿದ್ರೆಯಿಲ್ಲದ ರಾತ್ರಿಗಳಿಗೆ ಇನ್ನೊಂದು ಕಾರಣ ಇಲ್ಲಿದೆ ನೋಡಿ. ಆದೇನಪ್ಪಾ ಅಂತೀರಾ? ನಾವು ಸೇವಿಸುವ ಆಹಾರ(Food)ದಲ್ಲಿ ಪೌಷ್ಠಿಕಾಂಶ(Protein)ದ ಕೊರತೆಯಾದರೂ ಸಹ ಅದು ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತಿದೆ.

ನಿದ್ರಾಹೀನತೆಯಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು

ಉತ್ತಮ ನಿದ್ರೆಯನ್ನು ಮಾಡದೆ ಇರುವುದರಿಂದ ಮರುದಿನ ಚಡಪಡಿಕೆ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಆದರೆ ಅಷ್ಟೇ ಅಲ್ಲ, ನಿದ್ರಾಹೀನತೆಯು ಒಟ್ಟಾರೆ ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂದು ನೋಡಿ.

1. ಮನಸ್ಥಿತಿ ಬದಲಾವಣೆಯಾಗುವುದು

2. ಅಧಿಕ ರಕ್ತದೊತ್ತಡ

3. ಇನ್ಸುಲಿನ್ ಪ್ರತಿರೋಧದ ಹೆಚ್ಚಿದ ಅಪಾಯ

4. ಮಧುಮೇಹದ ಅಪಾಯ ಹೆಚ್ಚಾಗುವುದು

5. ದೇಹದ ತೂಕ ಹೆಚ್ಚಾಗುವುದು

6. ಬೊಜ್ಜು ಹೆಚ್ಚಾಗುವುದು

7. ರೋಗನಿರೋಧಕತೆ ದುರ್ಬಲವಾಗುವುದು

ಈ ನಿದ್ರಾಹೀನತೆಗೆ ಪೋಷಕಾಂಶಗಳ ಕೊರತೆಗಳು ಕಾರಣವೇ?

ನೀವು ಸೇವಿಸುವ ಆಹಾರವು ಹೇಗೆ ನಿಮ್ಮ ದೇಹದ ತೂಕ, ಹೃದ್ರೋಗ ಸಮಸ್ಯೆ, ಮಧುಮೇಹ ಮತ್ತು ಚಯಾಪಚಯ ಅಸ್ವಸ್ಥತೆಗಳಂತಹ ದೀರ್ಘಕಾಲೀಕ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತದೆಯೋ, ಹಾಗೆಯೇ ಇದು ನಿದ್ರಾಹೀನತೆಯ ಮೇಲೂ ಸಹ ತುಂಬಾನೇ ಪರಿಣಾಮ ಬೀರಬಹುದು.

ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದೀರಿ ಎಂದರೆ ನಿಮಗೆ ಕೆಲವು ಪೋಷಕಾಂಶಗಳ ಕೊರತೆಯಿದೆ ಎಂದು ಅರ್ಥ. ನೀವು ಕೆಳಗೆ ನೀಡಲಾದ ಪೋಷಕಾಂಶಗಳ ಕೊರತೆಯ ಬಗ್ಗೆ ಓದಿಕೊಳ್ಳಿರಿ, ನಿಮ್ಮ ನಿದ್ರಾಹೀನತೆಗೆ ಯಾವ ಪೋಷಕಾಂಶವು ಕಾರಣ ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

1. ವಿಟಮಿನ್ ಸಿ: ಸಿಟ್ರಸ್ ಹಣ್ಣುಗಳಲ್ಲಿ ಹೇರಳವಾಗಿ ಕಂಡುಬರುವ ವಿಟಮಿನ್ ಸಿ ಉರಿಯೂತದ ವಿರುದ್ಧ ಹೋರಾಡುವ, ರೋಗನಿರೋಧಕ ವ್ಯವಸ್ಥೆ, ಮೂಳೆ ಮತ್ತು ಹಲ್ಲುಗಳನ್ನು ಬಲಪಡಿಸುವಲ್ಲಿ ಧನಾತ್ಮಕ ಪರಿಣಾಮಕ್ಕೆ ಹೆಸರುವಾಸಿಯಾದ ಉತ್ಕರ್ಷಣ ನಿರೋಧಕಗಳ ಶಕ್ತಿ ಕೇಂದ್ರವಾಗಿದೆ.

ವಿಟಮಿನ್ ಸಿ ಯು ‘ಸ್ಲೀಪ್ ಅಪ್ನಿಯಾ’ ವನ್ನು ಚೆನ್ನಾಗಿ ನಿರ್ವಹಿಸುತ್ತದೆ. ಕಿತ್ತಳೆ, ಬೆರ್ರಿಗಳು, ಮೆಣಸುಗಳು, ಬ್ರೊಕೋಲಿ, ನಿಂಬೆ ಮತ್ತು ಬ್ರಸೆಲ್ಸ್ ಮೊಳಕೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಈ ಪೋಷಕಾಂಶದ ಕೊರತೆಯನ್ನು ನಿವಾರಿಸಿಕೊಳ್ಳಬಹುದು.

2. ವಿಟಮಿನ್ ಬಿ6: ನಮ್ಮ ದೇಹಕ್ಕೆ ಬೇಕಾಗುವ ಉತ್ತಮ ನಿದ್ರೆಗಾಗಿ ಮೆಲಟೋನಿನ್ ಮತ್ತು ಸೆರೊಟೋನಿನ್ ಅಗತ್ಯವಿದೆ. ಯಾರೋ ಒಬ್ಬರಿಗೆ ವಿಟಮಿನ್ ಬಿ6 ಕೊರತೆಯಿದ್ದರೆ, ದೇಹವು ನಿದ್ರೆಯ ಹಾರ್ಮೋನುಗಳನ್ನು ಸರಿಯಾಗಿ ಉತ್ಪಾದಿಸಲು ವಿಫಲವಾಗುತ್ತದೆ, ಆ ಮೂಲಕ ನಿದ್ರಾಹೀನತೆಯನ್ನು ಪ್ರಚೋದಿಸುತ್ತದೆ.

ವಿಟಮಿನ್ ಬಿ6 ಕೊರತೆಯನ್ನು ನಿವಾರಿಸಿಕೊಳ್ಳಲು ಬಾಳೆಹಣ್ಣು, ಕಡಲೆಕಾಯಿ, ಓಟ್ಸ್, ಹಂದಿ ಮಾಂಸ, ಚಿಕನ್, ಮೀನು ನಿಮ್ಮ ಆಹಾರದ ಮೆನುವಿನಲ್ಲಿ ಸೇರಿಸಿಕೊಳ್ಳಿರಿ.

3. ವಿಟಮಿನ್ : ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ವಿಟಮಿನ್ ಇ ಎಷ್ಟು ಮುಖ್ಯ ಎನ್ನುವುದು ಬಹುತೇಕರಿಗೆ ತಿಳಿದಿದೆ. ಈ ಪೋಷಕಾಂಶವು ನಿದ್ರಾಹೀನತೆ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ಅರಿವಿನ ಕುಸಿತವನ್ನು ತಡೆಯುತ್ತದೆ.

ಇದನ್ನು ಓದಿ : ವೈರಲ್ ಫೀವರ್ ನಿಂದ ಹೈರಾಣಾಗಿ ಹೋಗಿದ್ದೀರಾ? ಮನೆಯಲ್ಲಿಯೇ ಈ ಮದ್ದು ಮಾಡಿ ಸೇವಿಸಿ

ಈ ಪೋಷಕಾಂಶದ ಕೊರತೆಯನ್ನು ನಿವಾರಿಸಿಕೊಳ್ಳಲು ಬಾದಾಮಿ, ಸೂರ್ಯಕಾಂತಿ ಎಣ್ಣೆ ಮತ್ತು ಬೀಜಗಳು, ಕುಂಬಳಕಾಯಿ, ಕಾಲರ್ಡ್ ಗ್ರೀನ್ಸ್, ಪಾಲಕ್ ಮತ್ತು ಕೆಂಪು ಬೆಲ್ ಪೆಪ್ಪರ್ ಗಳಂತಹ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿರಿ.

4. ವಿಟಮಿನ್ ಡಿ :ವಿಟಮಿನ್ ಡಿ ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುವ ಪೋಷಕಾಂಶ ಎಂದು ಹೇಳಲಾಗುತ್ತದೆ. ಆದರೆ ಇದು ಉರಿಯೂತವನ್ನು ತಡೆಗಟ್ಟಲು ಹೇಗೆ ಸಹಾಯ ಮಾಡುತ್ತದೆ ಎಂದು ಅನೇಕರಿಗೆ ತಿಳಿದಿಲ್ಲ. ಆದರೆ ಈಗ, ಈ ಪೋಷಕಾಂಶವು ನಿಮ್ಮ ನಿದ್ರೆಗೂ ಹೇಗೆ ಸಹಾಯ ಮಾಡುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುವ ಸಂಶೋಧನೆಯೊಂದು ನಡೆಯುತ್ತಿದೆ. ಒಂದು ಅಧ್ಯಯನದ ಪ್ರಕಾರ, ವಿಟಮಿನ್ ಡಿ ಕೊರತೆಯು ಕಡಿಮೆ ನಿದ್ರೆಯ ಅವಧಿಗೆ ಸಂಬಂಧಿಸಿದೆ.

ಇದನ್ನು ಓದಿ : ಮನೆಯಲ್ಲಿಯೇ ಪ್ರೋಟೀನ್ ಪೌಡರ್ ತಯಾರು ಮಾಡುವುದು ಹೇಗೆ..?

ಈ ಕೊರತೆಯನ್ನು ನಿವಾರಿಸಿಕೊಳ್ಳಲು ನೀವು ಬಿಸಿಲಿನಲ್ಲಿ ಕುಳಿತುಕೊಳ್ಳುವುದು, ಅಣಬೆಗಳು, ಮೊಟ್ಟೆಯ ಹಳದಿ ಲೋಳೆ ಸೇವಿಸುವುದು ಉತ್ತಮ.
Published by:Vasudeva M
First published: