Travel Tips: ವಿಮಾನದಲ್ಲಿ ಪ್ರಯಾಣಿಸ್ತಿದ್ದೀರಾ? ಫ್ಲೈಟ್ ಹತ್ತೋ ಮೊದಲು ಈ ಆಹಾರ ಅವಾಯ್ಡ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವರು ಪ್ರಯಾಣ ಬೆಳೆಸುವ ಮುಂಚೆ ಹೊಟ್ಟೆ ತುಂಬಾ ಮನೆಯಲ್ಲಿ ಊಟ ಮಾಡಿ, ಮತ್ತೆ ದಾರಿ ಮಧ್ಯೆ ಹೊಟ್ಟೆ ಹಸಿವಾದರೆ ತಿನ್ನಲು ಬೇಕಾಗಬಹುದು ಅಂತ ಸ್ವಲ್ಪ ತಿಂಡಿಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರೆ. ಅದರೆ ಇದು ಸರಿನಾ ಅಂತ ನೀವು ತಿಳಿದುಕೊಳ್ಳಿ.

  • Trending Desk
  • 4-MIN READ
  • Last Updated :
  • Share this:

    ಕೆಲವರು ಪ್ರಯಾಣ (Travelers) ಬೆಳೆಸುವ ಮುಂಚೆ ಹೊಟ್ಟೆ ತುಂಬಾ ಮನೆಯಲ್ಲಿ ಊಟ ಮಾಡಿ, ಮತ್ತೆ ದಾರಿ ಮಧ್ಯೆ ಹೊಟ್ಟೆ ಹಸಿವಾದರೆ (Hungry) ತಿನ್ನಲು ಬೇಕಾಗಬಹುದು ಅಂತ ಸ್ವಲ್ಪ ತಿಂಡಿಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರೆ. ಅದೇ ಇನ್ನೂ ಕೆಲವರು ‘ಬೇಡಪ್ಪಾ ಬೇಡ ಪ್ರಯಾಣ ಬೆಳೆಸ್ತಾ ಇದ್ದೀವಿ, ಹೊಟ್ಟೆ ತುಂಬಾ ತಿಂದರೆ ತೊಂದರೆ ಆಗಬಹುದು’ ಅಂತ ಯೋಚಿಸಿ ಅರ್ಧ ಹೊಟ್ಟೆಯನ್ನು ತುಂಬಿಸಿಕೊಂಡು ಪ್ರಯಾಣ ಶುರು ಮಾಡುತ್ತಾರೆ. ಕೆಲವರಿಗೆ ಪ್ರಯಾಣದಲ್ಲಿ ಹೊಟ್ಟೆ ತೋಳಿಸಿದ ಅನುಭವವಾಗುತ್ತದೆ (Feel), ವಾಕರಿಕೆ ಮತ್ತು ವಾಂತಿ (Vomit) ಸಹ ಆಗುತ್ತದೆ ಅಂತ ಹೇಳಬಹುದು. ಅದರಲ್ಲೂ ಈ ವಿಮಾನ (Airplane) ಪ್ರಯಾಣದಲ್ಲಿ ಅನೇಕರು ಎತ್ತರದ ಹಾರಾಟದಿಂದ ಭಯ, ಆತಂಕ, ವಾಕರಿಕೆ, ವಾಂತಿ ಬಂದ ಹಾಗೆ ಆಗುತ್ತದೆ ಅಂತ ಹೇಳುತ್ತಾರೆ.


    ಮೇಲೆ ಗಾಳಿಯಲ್ಲಿ ಹೋದ ನಂತರ ಹೊಟ್ಟೆಯಲ್ಲಿ ಒಂದು ರೀತಿಯ ನೋವು ಅನುಭವಕ್ಕೆ ಬರುತ್ತದೆ ಅಂತ ಸಹ ಕೆಲವರು ಹೇಳುವುದನ್ನು ನಾವು ಕೇಳಿರುತ್ತೇವೆ.


    ಆದರೆ ಇಂತಹ ಪರಿಸ್ಥಿತಿಯಲ್ಲಿ ವಿಮಾನ ಹತ್ತುವ ಮೊದಲು ಯಾವ ಆಹಾರವನ್ನು ಸೇವಿಸಬೇಕು ಅಂತ ಅನೇಕರಿಗೆ ಗೊಂದಲಗಳಿರುತ್ತವೆ ಅಂತ ಹೇಳಬಹುದು.


    ವಿಮಾನದಲ್ಲಿ ಪ್ರಯಾಣಿಸುವಾಗ ನೀವು ಒಂದು ನಿರ್ದಿಷ್ಟ ಎತ್ತರವನ್ನು ದಾಟಿದಾಗ, ಗಾಳಿಯ ಒತ್ತಡವು ಬದಲಾಗುತ್ತದೆ, ಇದು ತಕ್ಷಣ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.


    Have you ever traveled by plane? Avoid this food before boarding the flight
    ಸಾಂದರ್ಭಿಕ ಚಿತ್ರ


    ಹಾರಾಟದ ಚಲನೆ ಮತ್ತು ನಿರ್ಬಂಧಿತ ಸ್ಥಳವು  ಮತ್ತಷ್ಟು ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಈ ಸಮಸ್ಯೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ನೀವು ವಿಮಾನ ಹತ್ತುವ ಮೊದಲು ಉತ್ತಮ ಆಹಾರ ಆಯ್ಕೆಗಳನ್ನು ಮಾಡುವುದು. ಇದರ ಬಗ್ಗೆ ಪೌಷ್ಠಿಕ ತಜ್ಞೆ ರೂಪಾಲಿ ದತ್ತಾ ಏನ್ ಹೇಳಿದ್ದಾರೆ ನೋಡಿ.


    ವಿಮಾನ ಹತ್ತುವ ಮೊದಲು ನೀವು ಈ 5 ಆಹಾರಗಳನ್ನು ತಿನ್ನಲೇಬೇಡಿ


    1. ಸೇಬು


    ಈ ಪಟ್ಟಿಯಲ್ಲಿ ಸೇಬು ಎಂಬುದನ್ನು ನೋಡಿ ನಿಮಗೆ ಸ್ವಲ್ಪ ಆಶ್ಚರ್ಯವಂತೂ ಖಂಡಿತವಾಗಬಹುದು. ಏಕೆಂದರೆ ಸೇಬನ್ನು ಹೆಚ್ಚಾಗಿ ಆರೋಗ್ಯಕರ ಹಣ್ಣುಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.


    ಸತ್ಯವೆಂದರೆ, ಸೇಬುಗಳು ಜೀರ್ಣಿಸಿಕೊಳ್ಳಲು ಕಷ್ಟ. ಇದರ ಹೆಚ್ಚಿನ ಫೈಬರ್ ಅಂಶವು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.


    ಆದ್ದರಿಂದ, ಬಾಳೆಹಣ್ಣುಗಳು, ಪಪ್ಪಾಯಿಗಳು ಅಥವಾ ಕಿತ್ತಳೆಗಳಂತಹ ಹೊಟ್ಟೆಗೆ ಹಗುರವಾದ ಹಣ್ಣುಗಳನ್ನು ಸೇವಿಸುವುದು ಉತ್ತಮ. ನಿಮ್ಮ ವಿಮಾನ ಹಾರಾಟದ ಮೊದಲು ನೀವು ಸ್ವಲ್ಪ ಜ್ಯೂಸ್ ಕುಡಿಯಬಹುದು. ಆದರೆ ಅವುಗಳಲ್ಲಿರುವ ಸಕ್ಕರೆ ಅಂಶದ ಬಗ್ಗೆ ಸ್ವಲ್ಪ ಗಮನ ಹರಿಸಿ.


    ಅನೇಕ ಹಣ್ಣಿನ ರಸಗಳು ಹೆಚ್ಚು ಸಕ್ಕರೆಯನ್ನು ಹೊಂದಿರುತ್ತವೆ ಮತ್ತು ಇದು ನೀವು ಗಾಳಿಯಲ್ಲಿ ಹೋದ ನಂತರ ಕರುಳಿನ ಅಸ್ವಸ್ಥತೆಗೆ ಕಾರಣವಾಗಬಹುದು.


    2. ಬ್ರೊಕೋಲಿ


    ತರಕಾರಿಗಳಲ್ಲಿ ಬ್ರೊಕೋಲಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ನೀವು ಕೇಳುತ್ತೀರಿ. ಆದರೆ ನಿಮ್ಮ ವಿಮಾನದ ಹಾರಾಟದ ಮೊದಲು ಈ ತರಕಾರಿಯಿಂದ ದೂರವಿರುವುದು ಒಳ್ಳೆಯದು.


    ಏಕೆಂದರೆ ಸೇಬುಗಳಂತೆಯೇ, ಬ್ರೊಕೋಲಿ, ಎಲೆಕೋಸು ಮತ್ತು ಹೂಕೋಸು ಅನಿಲ ಮತ್ತು ಉಬ್ಬರಕ್ಕೆ ಕಾರಣವಾಗಬಹುದು. ಜನರು ಮಾಡುವ ಮತ್ತೊಂದು ಸಾಮಾನ್ಯ ತಪ್ಪು ಎಂದರೆ ಹಾರುವ ಮೊದಲು ಕಚ್ಚಾ ಸಲಾಡ್ ತಿನ್ನುವುದು.


    ಹಸಿ ತರಕಾರಿಗಳು ಅಜೀರ್ಣ ಮತ್ತು ಹೊಟ್ಟೆ ನೋವಿಗೆ ಕಾರಣವಾಗಬಹುದು. ಬದಲಿಗೆ ಸರಳವಾದ ಹಣ್ಣಿನ ಸಲಾಡ್ ಅನ್ನು ಆರಿಸಿಕೊಳ್ಳಿ.


    ಇದನ್ನೂ ಓದಿ: Travel Tips: ವಿಮಾನದಲ್ಲಿ ಪ್ರಯಾಣಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ!


    3. ಫಾಸ್ಟ್‌ಫುಡ್


    ಹೆಚ್ಚಾಗಿ, ಆರೋಗ್ಯಕರ ಆಯ್ಕೆಗಳು ಸುಲಭವಾಗಿ ಲಭ್ಯವಿಲ್ಲದ ಕಾರಣ ಅಥವಾ ನಾವು ವಿಮಾನ ನಿಲ್ದಾಣಗಳಲ್ಲಿ ಕೈಗೆಟುಕುವ ತ್ವರಿತ ಆಹಾರವನ್ನು ತಿನ್ನಲು ನೋಡುತ್ತೇವೆ.


    ಅದರಲ್ಲೂ ರಜಾ ದಿನಗಳನ್ನು ಅನುಭವಿಸಲು ಹೋಗುತ್ತಿರುವಾಗ ನಾವು ಜಂಕ್ ಫುಡ್ ತಿನ್ನಲು ಬಹಳಷ್ಟು ಇಷ್ಟಪಡುತ್ತೇವೆ. ಆದರೆ ಫಾಸ್ಟ್‌ಫುಡ್ ಹೆಚ್ಚಾಗಿ ಉಪ್ಪು, ಸಕ್ಕರೆ ಮತ್ತು ಸಂರಕ್ಷಕಗಳಲ್ಲಿ ಅಧಿಕವಾಗಿರುತ್ತದೆ ಎಂಬುದನ್ನು ನೆನಪಿಡಿ.


    ಹೇಗಾದರೂ ನಿಮಗೆ ಹಾನಿಕಾರಕವಾಗಿರುವ ಈ ಅಂಶಗಳು ವಿಮಾನದ ಪ್ರಯಾಣದಲ್ಲಿ ಇನ್ನೂ ಹೆಚ್ಚು ಸಮಸ್ಯಾತ್ಮಕವಾಗುತ್ತವೆ. ಅವು ಹೊಟ್ಟೆ ಉಬ್ಬರ, ನಿರ್ಜಲೀಕರಣ ಮತ್ತು ಆಮ್ಲೀಯತೆಗೆ ಕಾರಣವಾಗುತ್ತವೆ.


    ಆದ್ದರಿಂದ ಆ ಬರ್ಗರ್ ಬದಲಿಗೆ ಇಡ್ಲಿಯನ್ನು ತಿನ್ನುವುದು ಉತ್ತಮ. ಮನೆಯಿಂದ ಕೆಲವು ಆರೋಗ್ಯಕರ ಆಹಾರವನ್ನು ನಿಮ್ಮೊಂದಿಗೆ ಕೊಂಡೊಯ್ಯುವುದು ಒಳ್ಳೆಯದು.


    Have you ever traveled by plane? Avoid this food before boarding the flight
    ಸಾಂದರ್ಭಿಕ ಚಿತ್ರ


    4. ಕಾಫಿ ಮತ್ತು ಇತರೆ ಪಾನೀಯಗಳು


    ಅನೇಕರು ಈ ಪ್ರಯಾಣದಲ್ಲಿ ಎಚ್ಚರವಾಗಿರಲು ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅದರಲ್ಲೂ ವಿಶೇಷವಾಗಿ ಮುಂಜಾನೆ ಅಥವಾ ತಡರಾತ್ರಿಯ ವಿಮಾನದಲ್ಲಿ ಪ್ರಯಾಣಿಸುವಾಗ ಅಂತ ಹೇಳಬಹುದು.


    ಆದರೆ ಕಾಫಿಯಲ್ಲಿರುವ ಕೆಫೀನ್ ನಿರ್ಜಲೀಕರಣಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಇದು ನಂತರ ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.


    ನಿಮ್ಮ ವ್ಯವಸ್ಥೆಯ ಮೇಲೆ ಇದೇ ರೀತಿಯ ಪರಿಣಾಮ ಬೀರುವ ಇತರ ಪಾನೀಯಗಳೆಂದರೆ ಏರೇಟೆಡ್ ಪಾನೀಯಗಳು ಮತ್ತು ಆಲ್ಕೋಹಾಲ್. ನಿಮ್ಮನ್ನು ಹೈಡ್ರೇಟ್ ಆಗಿಡಲು, ಕಡಿಮೆ ಅಥವಾ ಸಕ್ಕರೆಯಿಲ್ಲದ ನಿಂಬೆ ಹಣ್ಣಿನ ಜ್ಯೂಸ್ ಮತ್ತು ತೆಂಗಿನ ನೀರನ್ನು ಶಿಫಾರಸು ಮಾಡುತ್ತಾರೆ.


    5. ಬೀನ್ಸ್


    ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ನಿರ್ದಿಷ್ಟ ನಾರುಗಳನ್ನು ಹೊಂದಿರುತ್ತವೆ, ಇದನ್ನು ಕೆಲವರು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತಾರೆ. ಅವು ಪ್ರೋಟೀನ್ ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದರೂ, ಅವು ಅನಿಲ ಮತ್ತು ಆಮ್ಲೀಯತೆಯ ಸಮಸ್ಯೆಗಳನ್ನು ಉಂಟು ಮಾಡಬಹುದು.


    ವಿಶೇಷವಾಗಿ ವಿಮಾನದಲ್ಲಿ ಪ್ರಯಾಣ ಬೆಳೆಸುವಾಗ ಇದು ಹೊಟ್ಟೆಗೆ ತೊಂದರೆಯನ್ನುಂಟು ಮಾಡುತ್ತದೆ. ಆದ್ದರಿಂದ ವಿಮಾನ ಪ್ರಯಾಣದ ಮುಂಚೆ ಹಗುರವಾದ ಊಟವನ್ನು ಆರಿಸಿಕೊಳ್ಳುವುದು ಉತ್ತಮ.




    ಪೌಷ್ಠಿಕ ತಜ್ಞೆ ರೂಪಾಲಿ ದತ್ತಾ ಅವರು ವಿಮಾನ ಹತ್ತುವ ಮೂರು ಗಂಟೆಗಳ ಮೊದಲು ಏನನ್ನೂ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ. ಆದರೆ ಹೈಡ್ರೇಟ್ ಆಗಿರಲು ಮರೆಯಬೇಡಿ ಮತ್ತು ಈ ಸಂಸ್ಕರಿಸಿದ ತಿಂಡಿಗಳ ಪ್ರಲೋಭನೆಯಿಂದ ದೂರವಿರಿ ಅಂತ ಹೇಳಿದ್ದಾರೆ.

    Published by:Gowtham K
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು