• Home
  • »
  • News
  • »
  • lifestyle
  • »
  • Guava Pani Puri: ಪೇರಳೆ ಹಣ್ಣಿನ ಪಾನಿಪೂರಿ ತಿಂದಿದ್ದೀರಾ? ಇಲ್ಲಿದೆ ರೆಸಿಪಿ ಟ್ರೈ ಮಾಡಿ!

Guava Pani Puri: ಪೇರಳೆ ಹಣ್ಣಿನ ಪಾನಿಪೂರಿ ತಿಂದಿದ್ದೀರಾ? ಇಲ್ಲಿದೆ ರೆಸಿಪಿ ಟ್ರೈ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದೇ ರೀತಿಯ ಪಾನಿ ಪುರಿ ತಿಂದು ಬೇಜಾರಾಗ್ತಿದೆ ಅಂದ್ರೆ ಬಾಣಸಿಗ ಪಂಕಜ್ ಭದೌರಿಯಾ ಅವರು ಡಿಫರೆಂಟ್ ಆಗಿರೋ ಪಾನಿ ಪುರಿ ಒಂದನ್ನ ಪರಿಚಯಿಸಿದ್ದಾರೆ. ಅವರು ಈ ಪಾನಿ ಪುರಿಯನ್ನು ಬೇರೆ ರೀತಿಯಲ್ಲೂ ಮಾಡಿ ತಿನ್ನಬಹುದು ಅನ್ನೋದನ್ನ ತಿಳಿಸಿದ್ದಾರೆ. ಅದಾಗ್ಯೂ ಆರೋಗ್ಯಕರ ಮತ್ತು ಟೇಸ್ಟಿ ಆ ಪಾನಿ ಪುರಿ ಯಾವುದು ಅಂತಾ ನೋಡೋಣ.

ಮುಂದೆ ಓದಿ ...
  • Share this:

    ಸಾಮಾನ್ಯವಾಗಿ ಪಾನಿಪುರಿಯನ್ನು (Pani Puri) ಎಲ್ಲರೂ ತಿಂದಿದ್ದೀರಿ. ಕೆಲವರಿಗಂತೂ ಪಾನಿಪುರಿ ಅಂದ್ರೆ ಪಂಚಪ್ರಾಣ. ದಿನವಿಡೀ ಕೊಟ್ಟರೂ ಬೇಡ ಅನ್ನಲ್ಲ. ಸಂಜೆಯಾಗ್ತಿದ್ದ (Evening) ಹಾಗೇ ಜನರು (People) ಪಾನಿಪುರಿ ತಿನ್ನೋಕೆ ಮುಗಿ ಬೀಳ್ತಾರೆ. ಪಾನಿಪುರಿಯಲ್ಲಿ ಹಲವು ವಿಧಗಳಿವೆ. ಸೇವ್ ಪಾನಿಪುರಿಯಿಂದ ಎಲ್ಲಾ ತರಹದ ಪಾನಿಪುರಿ ಅಂಗಡಿಗಳಲ್ಲಿ (Shops) ಸಿಗುತ್ತದೆ. ಸಿಹಿ, ಮಸಾಲೆಯುಕ್ತ, ಕಟು ರುಚಿ ಮತ್ತು ಖಾರದ ರುಚಿ ಹೊಂದಿರುತ್ತೆ. ಈ ಎಲ್ಲಾ ಪದಾರ್ಥಗಳನ್ನು (Ingredients) ಪಾನಿಪುರಿ ಜೊತೆ ಸೇವಿಸಿ ನೀವು ಎಂಜಾಯ್ ಮಾಡ್ತೀರಿ. ಅನೇಕ ಜನರು ಅನೇಕ ರೀತಿಯ ತಮ್ಮಿಷ್ಟದ ಪಾನಿಪುರಿ ತಿನ್ನೋಕೆ ಇಷ್ಟ ಪಡ್ತಾರೆ. ಈಗಂತೂ ಜನರು ಮನೆಗಳಲ್ಲೂ ಪಾನಿಪುರಿ ಮಾಡಿ ತಿನ್ನುತ್ತಾ ಇದ್ದಾರೆ.


    ಪೇರಲ ಹಣ್ಣಿನ ಪಾನಿ ಪುರಿ ರೆಸಿಪಿ ಹೀಗಿದೆ


    ನಿಮಗೆ ಒಂದೇ ರೀತಿಯ ಪಾನಿ ಪುರಿ ತಿಂದು ಬೇಜಾರಾಗ್ತಿದೆ ಅಂದ್ರೆ ಬಾಣಸಿಗ ಪಂಕಜ್ ಭದೌರಿಯಾ ಅವರು ಡಿಫರೆಂಟ್ ಆಗಿರೋ ಪಾನಿ ಪುರಿ ಒಂದನ್ನ ಪರಿಚಯಿಸಿದ್ದಾರೆ. ಅವರು ಈ ಪಾನಿ ಪುರಿಯನ್ನು ಬೇರೆ ರೀತಿಯಲ್ಲೂ ಮಾಡಿ ತಿನ್ನಬಹುದು ಅನ್ನೋದನ್ನ ತಿಳಿಸಿದ್ದಾರೆ. ಅದಾಗ್ಯೂ ಆರೋಗ್ಯಕರ ಮತ್ತು ಟೇಸ್ಟಿ ಆ ಪಾನಿ ಪುರಿ ಯಾವುದು ಅಂತಾ ನೋಡೋಣ. ಜೊತೆಗೆ ಪಾಕ ವಿಧಾನವನ್ನೂ ತಿಳಿಯೋಣ.


    ಪಾನಿ ಪುರಿ ಪ್ರಿಯರು ಮತ್ತು ಪೇರಲ ಹಣ್ಣನ್ನು ಹೆಚ್ಚು ಇಷ್ಟ ಪಟ್ಟು ತಿನ್ನುವವರಿಗೆ ಈ ಪೇರಲ ಹಣ್ಣಿನ ಪಾನಿ ಪುರಿ ಹೆಚ್ಚು ಇಷ್ಟವಾಗುತ್ತದೆ. ಅದು ಹೆಚ್ಚು ರುಚಿಕರ ಮತ್ತು ಸುವಾಸನೆಯುಕ್ತವಾಗಿದೆ. ಸಾಮಾನ್ಯವಾಗಿ ತಿನ್ನುವ ಪಾನಿಪುರಿಗೆ ಬಾಣಸಿಗ ಪಂಕಜ್ ಭದೌರಿಯಾ ಅವರು ಪೇರಲ ಹಣ್ಣಿನ ಟ್ವಿಸ್ಟ್ ಕೊಟ್ಟಿದ್ದಾರೆ. ಇನ್ಯಾಕ್ ತಡ ಪೇರಲ ಹಣ್ಣಿನ ಟೇಸ್ಟಿ ಪಾನಿ ಪುರಿ ಹೇಗ್ ಮಾಡೋದು ಅಂತಾ ನೋಡೋಣ.


    ಪೇರಲ ಹಣ್ಣಿನ ಪಾನಿ ಪುರಿ ರೆಸಿಪಿ


    ಬೇಕಾಗುವ ಪದಾರ್ಥಗಳು


    ರವೆ ಒಂದು ಕಪ್, ಕರಗಿದ ತುಪ್ಪ ಕಾಲು ಕಪ್, ಹಿಟ್ಟು ಒಂದು ಚಮಚ, ಬಿಸಿ ನೀರು, ಪೇರಲ ರಸ 400 ಮಿಲಿ, ಚಾಟ್ ಮಸಾಲಾ ಒಂದು ಚಮಚ, ಕರಿಮೆಣಸಿನ ಪುಡಿ ಒಂದು ಚಮಚ, ಕಪ್ಪು ಉಪ್ಪು ಒಂದು ಚಮಚ, ಕೆಂಪು ಮೆಣಸಿನ ಪುಡಿ ಒಂದು ಚಮಚ, ಹಸಿರು ಮೆಣಸಿನಕಾಯಿ ಒಂದು ಚಮಚ


    ಪೇರಲ ಹಣ್ಣಿನ ಪಾನಿ ಪುರಿಯನ್ನು ಹೇಗೆ ತಯಾರಿಸುವುದು?


    ಮೊದಲು ಪೂರಿ ತಯಾರಿಸಲು ಹಿಟ್ಟನ್ನು ತಯಾರಿಸಿ. ಇದಕ್ಕಾಗಿ ರವೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಕರಗಿದ ತುಪ್ಪವನ್ನು ಬಿಸಿ ನೀರಿನೊಂದಿಗೆ ಬೆರೆಸಿ ಹಿಟ್ಟಿಗೆ ಹಾಕಿ ಬೆರೆಸಿ. ಚೆನ್ನಾಗಿ ಹಿಟ್ಟನ್ನು ನಾದಿಕೊಳ್ಳಿ. ಈಗ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ. ರೌಂಟ್ ಶೇಪ್ ನೀಡಿ ಎಣ್ಣೆಯಲ್ಲಿ ಫ್ರೈ ಮಾಡಿ. ಸ್ವಲ್ಪ ಕಂದು ಬಣ್ಣ ಬರುವವರೆಗೆ ಪೂರಿ ಬೇಯಿಸಿ ತೆಗೆಯಿರಿ.


    ನಂತರ ಒಂದು ಬಟ್ಟಲಿನಲ್ಲಿ ಪೇರಲ ರಸ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ಮಸಾಲೆ ಹಾಕಿ. ಚಾಟ್ ಮಸಾಲಾ, ಕರಿಮೆಣಸಿನ ಪುಡಿ, ಕಪ್ಪು ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಕೆಲವು ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ರಸವನ್ನು ಗ್ಲಾಸ್ ಗೆ ಹಾಕಿಡಿ.


    ಇದನ್ನೂ ಓದಿ: ಮಕ್ಕಳ ಬೆಳಗಿನ ತಿಂಡಿ ಸಮಸ್ಯೆಗೆ ಇಲ್ಲಿದೆ ಪರಿಹಾರ.


    ಈಗ ಪೂರಿ ತೆಗೆದುಕೊಂಡು ಅದರಲ್ಲಿ ಕೆಲವು ದಾಳಿಂಬೆ ಬೀಜಗಳು ಮತ್ತು ಕತ್ತರಿಸಿದ ಹಸಿರು ಕೊತ್ತಂಬರಿ ತುಂಬಿ ನಿಮಗೆ ಬೇಕಾದ ಹಣ್ಣಿನ ಸಣ್ಣ ತುಂಡು ಸೇರಿಸಬಹುದು. ಈಗ ಪೇರಲ ಪಾನಿ ಪುರಿ ಸಿದ್ಧವಾಗಿದೆ.

    Published by:renukadariyannavar
    First published: