Coconut Pickle: ಮಾವಿನಕಾಯಿ ಉಪ್ಪಿನಕಾಯಿ ಗೊತ್ತು, ತೆಂಗಿನಕಾಯಿ ಪಿಕಲ್ ಟ್ರೈ ಮಾಡಿದ್ದೀರಾ? ಇಲ್ಲಿದೆ ನೋಡಿ

ಕೇರಳದ ಜನರ ಅಡುಗೆಮನೆಯಲ್ಲಿ ತೆಂಗಿನಕಾಯಿಯನ್ನು ತುರಿದಿರಲಿ, ಪುಡಿಯಾಗಿರಲಿ, ಕತ್ತರಿಸಿದದ್ದಾಗಿರಲಿ, ಹುರಿದಿರಲಿ ಅಥವಾ ಎಣ್ಣೆಯ ರೂಪದಲ್ಲಿರಲಿ ಹೀಗೆ ಅನೇಕ ರೂಪಗಳಲ್ಲಿ ಇದನ್ನು ಬಳಸುತ್ತಾರೆ ಎಂದು ಹೇಳಬಹುದು. ಕೇರಳದ ಆಹಾರ ಪದ್ಧತಿಯಿಂದ ನಾವು ಎರಡು ಅತ್ಯುತ್ತಮ ವಸ್ತುಗಳನ್ನು ಜೋಡಿಸಿದರೆ ಹೇಗೆ? ಇಲ್ಲಿದೆ ನೋಡಿ ನಿಮಗಾಗಿ ತೆಂಗಿನಕಾಯಿ ಉಪ್ಪಿನಕಾಯಿ.

ತೆಂಗಿನಕಾಯಿ ಉಪ್ಪಿನಕಾಯಿ

ತೆಂಗಿನಕಾಯಿ ಉಪ್ಪಿನಕಾಯಿ

  • Share this:
ಊಟದ ಜೊತೆಗೆ ತಟ್ಟೆಯಲ್ಲಿ ಒಂದು ಉಪ್ಪಿನಕಾಯಿ (Pickle) ಇದ್ದಿದ್ರೆ ಎಷ್ಟು ಚೆನ್ನಾಗಿರುತ್ತಿತ್ತು’ ಅಂತ ಬಹುತೇಕರಿಗೆ ಅನ್ನಿಸದೆ ಇರದು, ಏಕೆಂದರೆ ಊಟದ ರುಚಿಯನ್ನು ಯಾವುದೇ ಉಪ್ಪಿನಕಾಯಿಯೂ ಆ ರುಚಿಯನ್ನು ದುಪ್ಪಟ್ಟು ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಎಷ್ಟೋ ಜನರಿಗೆ ವರ್ಷ ಪೂರ್ತಿ ಈ ತರಕಾರಿಗಳು (Vegetable) ಮತ್ತು ಹಣ್ಣುಗಳನ್ನು (Fruits) ಸಂರಕ್ಷಿಸಿಡಲು ಉತ್ತಮ ಮಾರ್ಗ ಯಾವುದು ಅಂತ ನಮಗೆ ಯಾರಾದರೂ ಕೇಳಿದರೆ ನಾವು ಹೇಳುವುದು ಅವುಗಳನ್ನು ಉಪ್ಪಿನಕಾಯಿ ಮಾಡಿ ಒಂದು ದೊಡ್ಡ ಭರಣಿಯಲ್ಲಿ ಹಾಕಿಡಿ ಅಂತ. ಈ ತರಕಾರಿಗಳನ್ನು ಉಪ್ಪು ನೀರಿನಲ್ಲಿ ಇಡುವ ಪಾಶ್ಚಿಮಾತ್ಯ ಪದ್ಧತಿಗಿಂತ ಭಿನ್ನವಾಗಿ, ಕೇರಳ ರಾಜ್ಯದ ಜನರು ಕಚ್ಚಾ ಅಥವಾ ಹಾಗೆಯೇ ಕರಿದಂತಹ ಖಾದ್ಯ ಪದಾರ್ಥಗಳನ್ನು ಉಪ್ಪು ಮತ್ತು ಕೆಲವು ಮಸಾಲೆಗಳೊಂದಿಗೆ ಬಾಟಲ್ ನಲ್ಲಿ ಹಾಕಿ ಸಂರಕ್ಷಿಸಿ ಇಡಲಾಗುತ್ತದೆ.

ತೆಂಗಿನಕಾಯಿ ಉಪ್ಪಿನಕಾಯಿ
ಈಗ, ಕೇರಳ ಪಾಕಪದ್ಧತಿಯ ವಿಚಾರ ನೆನಪಿಗೆ ಬಂದರೆ, ಅಲ್ಲಿ ಈ ತೆಂಗಿನಕಾಯಿಯನ್ನು ತುಂಬಾನೇ ಉಪಯೋಗಿಸಲಾಗುತ್ತದೆ ಎಂದು ಹೇಳಬಹುದು. ಕೇರಳದ ಜನರ ಅಡುಗೆಮನೆಯಲ್ಲಿ ತೆಂಗಿನಕಾಯಿಯನ್ನು ತುರಿದಿರಲಿ, ಪುಡಿಯಾಗಿರಲಿ, ಕತ್ತರಿಸಿದದ್ದಾಗಿರಲಿ, ಹುರಿದಿರಲಿ ಅಥವಾ ಎಣ್ಣೆಯ ರೂಪದಲ್ಲಿರಲಿ ಹೀಗೆ ಅನೇಕ ರೂಪಗಳಲ್ಲಿ ಇದನ್ನು ಬಳಸುತ್ತಾರೆ ಎಂದು ಹೇಳಬಹುದು. ಕೇರಳದ ಆಹಾರ ಪದ್ಧತಿಯಿಂದ ನಾವು ಎರಡು ಅತ್ಯುತ್ತಮ ವಸ್ತುಗಳನ್ನು ಜೋಡಿಸಿದರೆ ಹೇಗೆ? ಇಲ್ಲಿದೆ ನೋಡಿ ನಿಮಗಾಗಿ ತೆಂಗಿನಕಾಯಿ ಉಪ್ಪಿನಕಾಯಿ.

ಇದನ್ನೂ ಓದಿ:  Breakfast Recipe: ಬೆಳಗಿನ ತಿಂಡಿಯಾಗಿ ರೊಟ್ಟಿ ಉಪ್ಪಿಟ್ಟು ರೆಸಿಪಿ ಮಾಡುವುದು ಹೇಗೆ? ಇಲ್ಲಿ ವಿಧಾನ ತಿಳಿಯಿರಿ

ತೆಂಗಿನಕಾಯಿ ಉಪ್ಪಿನಕಾಯಿ ಪ್ರಾಚೀನ ಕಾಲದಲ್ಲಿ ಕೇರಳದ ಮನೆಗಳಲ್ಲಿ ಸಾಮಾನ್ಯವಾಗಿ ತಯಾರಿಸಲಾಗುತ್ತಿದ್ದ ಒಂದು ಉಪ್ಪಿನಕಾಯಿಯಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ ನೋಡಿ.

ಈ ತೆಂಗಿನಕಾಯಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಾಗ್ರಿಗಳು

  • 1 ತೆಂಗಿನಕಾಯಿ

  • 4 ಚಮಚದಷ್ಟು ಬೆಳ್ಳುಳ್ಳಿ

  • 4 ಚಮಚದಷ್ಟು ಶುಂಠಿ

  • 4 ಚಮಚದಷ್ಟು ಹಸಿಮೆಣಸಿನಕಾಯಿ

  • 4 ಚಮಚದಷ್ಟು ಕರಿಬೇವಿನ ಎಲೆಗಳು

  • 1 ಚಮಚದಷ್ಟು ಅರಿಶಿಣ ಪುಡಿ

  • 3 ಚಮಚದಷ್ಟು ಮೆಣಸಿನ ಪುಡಿ

  • 2 ಚಮಚದಷ್ಟು ಜೀರಿಗೆ

  • 10 ಒಣಗಿದ ಮೆಣಸಿನಕಾಯಿ

  • 1 1/2 ಟೀ ಚಮಚ ಇಂಗು

  • 1 ಟೀ ಚಮಚ ಮೆಂತ್ಯ ಬೀಜಗಳು

  • ಅಗತ್ಯಕ್ಕೆ ತಕ್ಕಷ್ಟು ಉಪ್ಪು

  • 1/4 ಚಮಚದಷ್ಟು ಕೊತ್ತಂಬರಿ ಪುಡಿ

  • 1/4 ಕಪ್ ನೀರು

  • 250 ಗ್ರಾಂ ಎಳ್ಳೆಣ್ಣೆ ವಿನೆಗರ್ (ಬೇಕಾದರೆ ಹಾಕಿಕೊಳ್ಳಬಹುದು)


ತಯಾರಿಸುವ ವಿಧಾನ
ಮೊದಲು ತೆಂಗಿನ ಕಾಯಿಯನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿಕೊಳ್ಳಿರಿ. ನಂತರ ಒಣಗಿದ ಮೆಣಸಿನಕಾಯಿ, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಬಿಸಿ ಬಾಣಲೆಯಲ್ಲಿ ಹುರಿದುಕೊಳ್ಳಿರಿ. ಇವುಗಳನ್ನು ಮಿಕ್ಸರ್ ಜಾರ್ ನಲ್ಲಿ ರುಬ್ಬಿ ಒಂದು ಬಾಣಲೆಯಲ್ಲಿ ಎಳ್ಳೆಣ್ಣೆಯನ್ನು ಬಿಸಿ ಮಾಡಿ. ನಂತರ ಅದರಲ್ಲಿ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನಕಾಯಿಗಳನ್ನು ಹಾಕಿಕೊಂಡು ಅವುಗಳು ಬಣ್ಣ ಬದಲಾಯಿಸಲು ಪ್ರಾರಂಭಿಸಿದಾಗ, ಕರಿಬೇವಿನ ಎಲೆಗಳನ್ನು ಅದಕ್ಕೆ ಸೇರಿಸಿಕೊಳ್ಳಿರಿ, ತೆಂಗಿನ ತುರಿಯನ್ನು ಸಹ ಸೇರಿಸಿ.

ಇದನ್ನೂ ಓದಿ: Food Recipe: ಕೊತ್ತಂಬರಿ ರಸಂ ಮಾಡುವುದು ಹೇಗೆ? ಒಮ್ಮೆ ಟ್ರೈ ಮಾಡಿ ಹೊಸ ರುಚಿ ಸವಿಯಿರಿ

ನಂತರ ತೆಂಗಿನಕಾಯಿ ಚೂರುಗಳು ಚೆನ್ನಾಗಿ ಮತ್ತು ಕಂದು ಬಣ್ಣ ಬರುವವರೆಗೆ ಹುರಿಯಿರಿ ಈಗ ಅರಿಶಿನ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ ಮತ್ತು ಅಸಫೋಟಿಡಾ ಪುಡಿಯನ್ನು ಸೇರಿಸಿ. ಅಗತ್ಯವಿರುವಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ನೀರನ್ನು ಸುರಿಯಿರಿ ಉಪ್ಪಿನಕಾಯಿ ಖಾರ ದಪ್ಪಗಾಗುವವರೆಗೆ ಮತ್ತು ಎಣ್ಣೆ ಬೇರ್ಪಡಲು ಪ್ರಾರಂಭಿಸುವವರೆಗೆ ಬೇಯಿಸಿ. ನೀವು ಅಗತ್ಯವಿದ್ದರೆ ಒಂದು ಟೇಬಲ್ ಚಮಚ ವಿನೆಗರ್ ಅನ್ನು ಅದಕ್ಕೆ ಸೇರಿಸಬಹುದು. ತೆಂಗಿನ ಉಪ್ಪಿನಕಾಯಿಯನ್ನು ಬಿಸಿ ಬಿಸಿಯಾದ ಅನ್ನದೊಂದಿಗೆ ಅಥವಾ ಇಡ್ಲಿ, ದೋಸೆಯೊಂದಿಗೆ ಸವಿಯಬಹುದು. ಎಳ್ಳೆಣ್ಣೆಯನ್ನು ಸೇರಿಸಿದಾಗ, ಉಪ್ಪಿನಕಾಯಿಯನ್ನು ಏರ್ ಟೈಟ್ ಜಾರ್ ನಲ್ಲಿ ಹೆಚ್ಚು ಕಾಲ ಸಂಗ್ರಹಿಸಬಹುದು.
Published by:Ashwini Prabhu
First published: