Milind Soman: 83 ರಲ್ಲೂ ಸಖತ್​ ಫಿಟ್​ & ಫೈನ್​! ಪುಷ್​ಅಪ್ಸ್​ ಮಾಡೋಕೆ ಇವ್ರಿಗೆ ಮಗ ಮಿಲಿಂದ್​ ಸ್ಫೂರ್ತಿಯಂತೆ

ಮಿಲಿಂದ್ ಸೋಮನ್ ಫಿಟ್‌ನೆಸ್‌ ವಿಷಯದಲ್ಲಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಇವರ 83 ವರ್ಷದ ತಾಯಿ ಉಷಾ ಸೋಮನ್ (Usha Soman) ಫಿಟ್‌ನೆಸ್‌ ಬಗ್ಗೆ ನಿಮಗೆ ಗೊತ್ತಾ..? ಇವರು ಕೂಡ ಫಿಟ್‌ನೆಸ್‌ನಲ್ಲಿ ಆಸಕ್ತಿ ಹೊಂದಿದ್ದು, ಯುವಕರು, ಹಿರಿಯರಿಗೂ ಸ್ಫೂರ್ತಿಯಾಗಿದ್ದಾರೆ.

ತಾಯಿ ಜೊತೆ ಮಿಲಿಂದ್​ಸೋಮನ್​

ತಾಯಿ ಜೊತೆ ಮಿಲಿಂದ್​ಸೋಮನ್​

  • Share this:
ಫಿಟ್‌ನೆಸ್‌ (Fitness) ಪ್ರಿಯರಿಗೆ ಮಿಲಿಂದ್ ಸೋಮನ್ (Milind Soman) ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಮಿಲಿಂದ್ ಸೋಮನ್ ಫಿಟ್‌ನೆಸ್‌ ವಿಷಯದಲ್ಲಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಇವರ 83 ವರ್ಷದ ತಾಯಿ ಉಷಾ ಸೋಮನ್ (Usha Soman) ಫಿಟ್‌ನೆಸ್‌ ಬಗ್ಗೆ ನಿಮಗೆ ಗೊತ್ತಾ..? ಇವರು ಕೂಡ ಫಿಟ್‌ನೆಸ್‌ನಲ್ಲಿ ಆಸಕ್ತಿ ಹೊಂದಿದ್ದು, ಯುವಕರು, ಹಿರಿಯರಿಗೂ ಸ್ಫೂರ್ತಿಯಾಗಿದ್ದಾರೆ. ಟ್ರೆಕ್ಕಿಂಗ್‌ (Trekking) ನಲ್ಲಿ ಒಲವು ಹೊಂದಿರುವ ಉಷಾ ಅವರು ತಮ್ಮ 81 ನೇ ವಯಸ್ಸಿನಲ್ಲಿ ಹಿಮಾಲಯದಲ್ಲಿ ಸಂದಕ್ಫು ಫಲುತ್ ಚಾರಣವನ್ನು ಪೂರ್ಣಗೊಳಿಸಿದ ಅತ್ಯಂತ ಹಿರಿಯ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಇದಲ್ಲದೆ, ಅವರು ತಮ್ಮ 70ರ ದಶಕದಲ್ಲಿ ಸೀರೆ (Saree) ಉಟ್ಟು ಬರಿಗಾಲಿನಲ್ಲಿ ಮ್ಯಾರಥಾನ್‌ (Marathon) ನಲ್ಲಿ ಭಾಗವಹಿಸಿದ್ದಾರೆ.

ಅಮ್ಮನಿಗೆ ಮಗ ಮಿಲಿಂದ್ ಸೋಮನ್ ಸ್ಫೂರ್ತಿ!

ಉಷಾ ಸೋಮನ್ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು ಅವರೊಂದಿಗೆ ನೇರವಾಗಿ ಸಂದರ್ಶನ ನಡೆಸಲಾಯಿತು. ವಿಶೇಷ ಸಂದರ್ಶನವೊಂದರಲ್ಲಿ, ಉಷಾ ಸೋಮನ್ ತಮ್ಮ ಫಿಟ್‌ನೆಸ್ ದಿನಚರಿ, ತನ್ನ ಮಗನಿಂದ ಕಲಿತ ಪಾಠಗಳು ಮತ್ತು ತನ್ನ ಮುಂದಿ ನಡೆ ಬಗ್ಗೆ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಉಷಾ ಸೋಮನ್ ಜೊತೆಗಿನ ಆಯ್ದ ಕೆಲವು ಮಾತುಕತೆಗಳು ಇಲ್ಲಿವೆ.

1) ಫಿಟ್ನೆಸ್ ಬಗ್ಗೆ ಯೋಚಿಸಿದಾಗ ನಿಮ್ಮ ಮನಸ್ಸಿಗೆ ಬರುವ ಮೊದಲ ಆಲೋಚನೆ ಏನು?

ನಾನು ಬದುಕಿರುವವರೆಗೂ ಚಟುವಟಿಕೆಯಲ್ಲಿ ಸ್ವತಂತ್ರವಾಗಿರಲು ಮತ್ತು ಫಿಟ್ ಆಗಿರಲು ಬಯಸುತ್ತೇನೆ. ಇದು ನನ್ನನ್ನು ಇನ್ನಷ್ಟು ಫಿಟ್ ಆಗಿರಲು ಪ್ರೇರೇಪಿಸುತ್ತದೆ. ನಾನು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದಿದ್ದೇನೆ ಮತ್ತು ಸಾಮಾನ್ಯ ಬಾಲ್ಯವನ್ನು ಅನುಭವಿಸಿದ್ದೇನೆ. ರಜಾ ದಿನಗಳಲ್ಲಿ ಆಟವಾಡದೇ, ಪುಸ್ತಕಗಳನ್ನು ಓದುತ್ತಿದ್ದೆ ಮತ್ತು ಕಲೆ, ಕರಕುಶಲಗಳನ್ನು ಕಲಿಯುತ್ತಿದ್ದೆ. ನಾನು ಡಾಕ್ಟರ್ ಆಗಲು ಬಯಸಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ನಂತರ ಪೌಷ್ಟಿಕಾಂಶದಲ್ಲಿ M.sc ಮಾಡಿದೆ. ಮದುವೆಯಾದ ನಂತರ ನಾನು ವಿದೇಶದಲ್ಲಿ ಜನರಲ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಬಯೋಕೆಮಿಸ್ಟ್ರಿಯಲ್ಲಿ ಕೆಲಸ ಮಾಡಿದೆ. ಭಾರತಕ್ಕೆ ಮರಳಿದ ನಂತರ, ನಾನು ವಿಲ್ಸನ್ ಕಾಲೇಜಿನಲ್ಲಿ ಕ್ಲಿನಿಕಲ್ ಬಯೋಕೆಮಿಸ್ಟ್ರಿ ಕಲಿಸಲು ಪ್ರಾರಂಭಿಸಿದೆ. ನಾನು 1996ರಲ್ಲಿ ವೃತ್ತಿಯಿಂದ ನಿವೃತ್ತಿ ಪಡೆದ ನಂತರ ಟ್ರೆಕ್ಕಿಂಗ್ ಬಗ್ಗೆ ಆಸಕ್ತಿ ಹೊಂದಿದೆ.

2) ಇಷ್ಟು ವರ್ಷಗಳಲ್ಲಿ ನಿಮ್ಮ ಫಿಟ್ನೆಸ್ ದಿನಚರಿ ಹೇಗೆ ಬದಲಾಗಿದೆ..?

ಬಾಲ್ಯದಲ್ಲಿ ಅಥ್ಲೆಟಿಕ್ ಆಗಿದ್ದೆ. ನಾನು ಶಾಲೆಯಲ್ಲಿ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದೆ. ಆದರೆ ಪದವಿಯ ನಂತರ ನನ್ನ ಕ್ರೀಡಾ ಚಟುವಟಿಕೆ ಕಡಿಮೆಯಾಯಿತು. ಈಗ, ನನ್ನ ಮಗನಿಂದಾಗಿ ನಾನು ತುಂಬಾ ಸಕ್ರಿಯವಾಗಿದ್ದೇನೆ. ಪ್ರತಿ ವರ್ಷ, ಅವರು ಪಿಂಕಥಾನ್ ನಡೆಸುತ್ತಾರೆ, ಇದು ಆರಂಭದಲ್ಲಿ ನನಗೆ ಫಿಟ್ ಆಗಿರಲು ಸ್ಫೂರ್ತಿ ನೀಡಿತು. ಮಗ ಮಿಲಿಂದ್‌ನೊಂದಿಗೆ ಒಮ್ಮೆ ಮ್ಯಾರಥಾನ್‌ನಲ್ಲಿ ಓಡಿದ ವಿಡಿಯೋ ವೈರಲ್ ಆಗಿತ್ತು, ಅದು ನನಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು.

ಇದನ್ನೂ ಓದಿ: 6,000 ರನ್ ಪೂರೈಸಿದ ಶಿಖರ್ ಧವನ್, ವಿರಾಟ್ ಕೊಹ್ಲಿಗೆ ಭರ್ಜರಿ ಪೈಪೋಟಿ!​

ನಾನು ಮುಂಜಾನೆ ಸುಮಾರು ಐದು ಕಿಲೋಮೀಟರ್ ವಾಕಿಂಗ್ ಹೋಗುತ್ತೇನೆ. ನಂತರ ಮನೆಗೆ ಹಿಂತಿರುಗಿ ಅಡುಗೆ ಸೇರಿ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ. ಓದುವುದು ನನಗೆ ಇಷ್ಟ, ಹಾಗಾಗಿ ಹೆಚ್ಚೆಚ್ಚು ಪುಸ್ತಕ ಓದುತ್ತೇನೆ ಮತ್ತು ಟಿವಿ ನೋಡುತ್ತೇನೆ.

3) ನಿಮ್ಮ ಆಹಾರ ಕ್ರಮ ಹೇಗಿದೆ?

ನಾನು ಬದುಕಲು ತಿನ್ನುತ್ತೇನೆ, ತಿನ್ನಲು ಬದುಕುವುದಿಲ್ಲ, ಅದು ನನ್ನನ್ನು ಆರೋಗ್ಯವಾಗಿರಿಸುತ್ತದೆ.

4) ಗೆಟ್‌ಸೆಟ್‌ಅಪ್‌ ಕಾರ್ಯಕ್ರಮದ ಬಗ್ಗೆ ತಿಳಿಸಿ?

ನನ್ನಂತಹ ವಯಸ್ಸಾದವರಿಗೆ ಗೆಟ್‌ಸೆಟ್‌ಅಪ್‌ನಂತಹ ಪ್ಲಾಟ್‌ಫಾರ್ಮ್ ಇದೆ ಎಂದು ನನಗೆ ತಿಳಿದಿರಲಿಲ್ಲ. ಈ ಕಾರ್ಯಕ್ರಮ ನಿರ್ವಾಹಕರಾದ ಅನಿತಾ ಅವರು ನನ್ನ ಬಳಿಗೆ ಬಂದಾಗಲೇ ನನಗೆ ಅದರ ಬಗ್ಗೆ ತಿಳಿಯಿತು. ನಾನು ನನ್ನ ಜೀವನ ಮತ್ತು ಫಿಟ್‌ನೆಸ್ ಪ್ರಯಾಣವನ್ನು ವಯಸ್ಸಾದ ವಯಸ್ಕರೊಂದಿಗೆ ಹಂಚಿಕೊಳ್ಳುವುದು ನಿಜಕ್ಕೂ ಖುಷಿ ನೀಡಿದೆ. ನಾನು ಸಹ ಅಲ್ಲಿ ಅನೇಕ ಹೊಸ ವಿಚಾರಗಳನ್ನು ಕಲಿತುಕೊಂಡೆ.

5) ಫಿಟ್ನೆಸ್ ವಿಚಾರದಲ್ಲಿ ಇಂದಿನ ಪೀಳಿಗೆಯಲ್ಲಿನ ಕೊರತೆ ಏನು..?

ಮೊದಲನೆಯದಾಗಿ, ನಿಮ್ಮ ಮೇಲೆ ನಂಬಿಕೆ ಇರಲಿ, ನನಗೆ ಸಾಧ್ಯವಿಲ್ಲ’ ಎಂದು ಯಾವುದೇ ವ್ಯಾಯಾಮವನ್ನು ಪ್ರಾರಂಭಿಸಬೇಡಿ. ಕನಿಷ್ಠ ಅದನ್ನು ಪ್ರಯತ್ನಿಸಿ. ನೀವು ಇದನ್ನು ಮಾಡಲು ಸಾಧ್ಯವಾಗದೇ ಇರಬಹುದು, ಆದರೆ ಪ್ರಯತ್ನಿಸಬಹುದು. ವಾಕಿಂಗ್ ಸರಳವಾದ ವ್ಯಾಯಾಮವಾಗಿದೆ, ಆದ್ದರಿಂದ ಅದರೊಂದಿಗೆ ಪ್ರಾರಂಭಿಸಿ. ನಂತರ ನೀವು ಪುಷ್-ಅಪ್‌ಗಳು ಬೇರೆ ಬೇರೆ ವ್ಯಾಯಾಮ ಮಾಡಬಹುದು.

6) ನೀವು ಪ್ರಸ್ತುತ ಯಾವುದರ ಬಗ್ಗೆ ತರಬೇತಿ ಪಡೆಯುತ್ತಿದ್ದೀರಿ?

ಪ್ರತಿ ವರ್ಷ ಶಿವಾಜಿ ಪಾರ್ಕ್‌ನಲ್ಲಿ ಅಲ್ಟ್ರಾ ರನ್ ಸಾಮಾನ್ಯವಾಗಿ ಆಗಸ್ಟ್ 15ರಂದು ನಡೆಯುತ್ತದೆ. ನಾನು ಅಲ್ಲಿ 50 ಕಿಲೋಮೀಟರ್ ಓಡಲು ನಿರ್ಧರಿಸಿದ್ದೇನೆ ಮತ್ತು ತಯಾರಿ ನಡೆಸುತ್ತಿದ್ದೇನೆ.

ಇದನ್ನೂ ಓದಿ: ಪುಷ್ಪಾ ಸಿನಿಮಾದ 'ಊ ಅಂಟಾವಾ' ಹಾಡಿಗೆ ಕೊಹ್ಲಿ ಡ್ಯಾನ್ಸ್

7) ಮಿಲಿಂದ್ ಅವರು ನಿಮ್ಮಿಂದ ಬಹಳಷ್ಟು ಕಲಿಯುತ್ತಾರೆ ಎಂದಿದ್ದಾರೆ. ಅವರಿಂದ ನೀವು ಏನಾದರೂ ಕಲಿತಿದ್ದೀರಾ..?

ನಾನು ನನ್ನ ಎಲ್ಲಾ ವ್ಯಾಯಾಮಗಳನ್ನು ನನ್ನ ಮಗನಿಂದ ಕಲಿತಿದ್ದೇನೆ. ಪುಶ್‌ಅಪ್‌ಗಳನ್ನು ಮಾಡಲು ಅವನೇ ನನಗೆ ಸ್ಫೂರ್ತಿ.

8) ಜನರು, ವಿಶೇಷವಾಗಿ ಮಹಿಳೆಯರು, ಏಕೆ ಬೇಗ ಫಿಟ್ನೆಸ್ ತೆಗೆದುಕೊಳ್ಳಬೇಕು?

ವ್ಯಾಯಾಮಕ್ಕೆ ವಯಸ್ಸಿಲ್ಲ, ಫಿಟ್ ಆಗಿರುವುದು ಎಲ್ಲರಿಗೂ ಮುಖ್ಯ. ಬೊಜ್ಜು ಬಂದ ಮೇಲೆ ಫಿಟ್ನೆಸ್ ಅನುಸರಿಸುವುದಕ್ಕಿಂತ, ಮೊದಲೇ ದಿನಚರಿಯನ್ನು ಪ್ರಾರಂಭಿಸುವುದು ಉತ್ತಮ.

9) ವಯಸ್ಸಾದವರನ್ನು ಸಕ್ರಿಯವಾಗಿರಿಸಲು ಮತ್ತು ವ್ಯಾಯಾಮ ಮಾಡಲು ಹೇಗೆ ಪ್ರೇರೇಪಿಸುವುದು?

ಮಿಲಿಂದ್ ಮತ್ತು ಅಂಕಿತಾ ಒಟ್ಟಿಗೆ ವರ್ಕ್ ಔಟ್ ಮಾಡುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ನಿಮ್ಮ ಪೋಷಕರೊಂದಿಗೆ ಇದನ್ನು ಮಾಡಿ ಮತ್ತು ಅವರ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ನಾನು ಹೇಳುತ್ತೇನೆ. ಗೆಟ್‌ಸೆಟ್‌ಅಪ್‌ನಂತಹ ಗುಂಪುಗಳಿಗೆ ಅವರನ್ನು ಪರಿಚಯಿಸುವುದು ಫಿಟ್‌ನೆಸ್ ದಿನಚರಿಗೆ ಉತ್ತಮ ಮಾರ್ಗವಾಗಿದೆ.

10) ಮುಂದಿನ ನಡೆ ಏನು?

ನಾನು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತೇನೆ. ಇತ್ತೀಚೆಗೆ ನಾನು ನನ್ನ ಕುಟುಂಬದೊಂದಿಗೆ ವರ್ಡ್ಲೆ ಆಟವನ್ನು ಆಡುತ್ತಿದ್ದೇನೆ. ಅದನ್ನು ಯಾರು ಮೊದಲು ಪರಿಹರಿಸುತ್ತಾರೆ ಎಂದು ಕಾದು ನೋಡಬೇಕು.
Published by:Vasudeva M
First published: