Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ? ಆರೋಗ್ಯ ಸಮಸ್ಯೆ ಒಂದೆರಡಲ್ಲ

ನೀವು ಹೆಚ್ಚು ಹೆಡ್‌ಫೋನ್ ಬಳಸಿದರೆ ಅದು ನಿಮ್ಮ ಕಿವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.ಕೆಲವೊಮ್ಮೆ ಹೆಡ್‌ಫೋನ್‌ಗಳ ಅತಿಯಾದ ಬಳಕೆಯು ಏಕಾಗ್ರತೆಗೆ ತೊಂದರೆ ಉಂಟುಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಂತ್ರಜ್ಞಾನದ  (Technology) ಹೆಚ್ಚುತ್ತಿರುವ ಬಳಕೆಯಿಂದಾಗಿ, ನಮ್ಮೆಲ್ಲರ ಜೀವನವು ಇಂದು ತುಂಬಾ ಸುಲಭವಾಗಿದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಇಂದು ಹಲವಾರು ದುಬಾರಿ ಇಯರ್ ಫೋನ್ (Ear Phone) ಅಥವಾ ಹೆಡ್ ಫೋನ್ (Headphone) ಗಳನ್ನು ಬಳಸುತ್ತಿದ್ದಾರೆ. ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಬಳಕೆದಾರರಿಗೆ ಮನರಂಜನೆಯ ಮತ್ತಿನಲ್ಲಿ ಆರೋಗ್ಯದ (Health) ದೂರದೃಷ್ಟಿಯೇ ಮರೆತುಹೋಗುತ್ತದೆ. ಹೌದು, ಬಹುಸಂಖ್ಯಾತರು ಮನರಂಜನೆಗಾಗಿ ಇಂದು ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ಗಳನ್ನು ದಿನನಿತ್ಯವು ದೀರ್ಘ ಸಮಯ ಬಳಸುತ್ತಾರೆ. ಆದರೆ ಅವುಗಳ ಬಳಕೆಯಿಂದ ಆರೋಗ್ಯದ ಮೇಲಾಗುವ ಸೈಡ್‌ ಎಫೆಕ್ಟ್‌ಗಳ ಮೇಲೆ ಯಾರು ಸಹ ಇದುವರೆಗೂ ಗಮನಹರಿಸಿಯೇ ಇಲ್ಲಾ. ದಿನದಿಂದ ದಿನಕ್ಕೆ ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂತಹವರು ತಮ್ಮ ಆರೋಗ್ಯದ ದೃಷ್ಟಿಯಿಂದ, ಇಯರ್‌ಫೋನ್‌ ಮತ್ತು ಹೆಡ್‌ಫೋನ್‌ ಬಳಸುವುದರಿಂದ ಉಂಟಾಗುವ ಆರೋಗ್ಯದ ಸೈಡ್‌ ಎಫೆಕ್ಟ್‌ಗಳು (Side Effects) ಏನು ಎಂಬುದನ್ನು ನೋಡೋಣ,

    ಕಿವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ

    ನೀವು ಹೆಚ್ಚು ಹೆಡ್‌ಫೋನ್ ಬಳಸಿದರೆ ಅದು ನಿಮ್ಮ ಕಿವಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಇದರಿಂದಾಗಿ ಪದೇ ಪದೇ ಸೋಂಕು ಹರಡುವ ಸಾಧ್ಯತೆ ಕೂಡ ಇರುತ್ತದೆ. ಆರಂಭದಲ್ಲಿ ಕಿವಿಯಲ್ಲಿ ನೋವು ಪ್ರಾರಂಭವಾಗುತ್ತದೆ ಎಂದು ಅವರು ಹೇಳುತ್ತಾರೆ. ಕ್ರಮೇಣ ನಿಮ್ಮ ಈ ಸಮಸ್ಯೆ ಹೆಚ್ಚಾಗಬಹುದು. ನೋವಿನ ನಂತರ, ನಿಮ್ಮ ಕಿವಿಯಲ್ಲಿ ಸೋಂಕು ಉಂಟಾಗುವ ಅಪಾಯವಿದೆ. ಅಷ್ಟೇ ಅಲ್ಲ ಇದರಿಂದ ಕೆಲವರಿಗೆ ತಲೆ ಸುತ್ತುವಿಕೆಯ ಅನುಭವ ಕೂಡ ಆಗಬಹುದು ಎಂದು ಸೌರಭ್ ಅಗರ್ವಾಲ್ ಹೇಳಿದ್ದಾರೆ.

    ಇದನ್ನೂ ಓದಿ: Face Mask: ಮುಖದ ಅಂದ ಹೆಚ್ಚಿಸಲು ಮತ್ತು ಹೊಳೆಯುವ ತ್ವಚೆಗಾಗಿ ಇಲ್ಲಿವೆ ಕೆಲವು ಫೇಸ್ ಪ್ಯಾಕ್

    ಹೆಡ್‌ಫೋನ್‌ಗಳ ಅತಿಯಾದ ಬಳಕೆಯು ಏಕಾಗ್ರತೆಗೆ ತೊಂದರೆ

    ಕೆಲವೊಮ್ಮೆ ಹೆಡ್‌ಫೋನ್‌ಗಳ ಅತಿಯಾದ ಬಳಕೆಯು ಏಕಾಗ್ರತೆಗೆ ತೊಂದರೆ ಉಂಟುಮಾಡಬಹುದು. ಸೋಂಕಿಗೊಳಗಾದ ಜನರು ತಾವು ಬಳಸಿದ ಹೆಡ್‌ಫೋನ್‌ಗಳನ್ನು ಇತರರಿಗೆ ನೀಡಿ ಅಥವಾ ಇತರರಿಂದ ಪಡೆದುಕೊಳ್ಳುವ ಮೂಲಕ ಸೋಂಕು ಹರಡಬಹುದು. ಇದು ಇಂತಹ ಪರಿಸ್ಥಿತಿಯಲ್ಲಿ, ಆದಷ್ಟು ಇಯರ್‌ಫೋನ್‌ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸಿ ಈ ರೀತಿಯ ಹಾನಿ ತಪ್ಪಿಸಲು ಇಯರ್ ಫೋನ್ ಬದಲಿಗೆ ಹೆಡ್ ಫೋನ್ ಬಳಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಅನಿವಾರ್ಯ ಪರಿಸ್ಥಿತಿಯಲ್ಲಿ ನೀವು ಇಯರ್ ಫೋನ್ ಬಳಸುತ್ತಿದ್ದರೆ, ಅದನ್ನು ನಿಶ್ಚಿತ ಅಂತರದಲ್ಲಿ ಬಳಸಲು ಪ್ರಯತ್ನಿಸಿ.

    ಪ್ರತಿದಿನ ಹೆಚ್ಚು ಇಯರ್‌ಫೋನ್‌ ಬಳಸುವವರಿಗೆ ಕಿವಿಡುತನ ಎದುರಾಗಬಹುದು

    ಇಯರ್‌ಫೋನ್ ಬಳಕೆಯಿಂದಾಗುವ ಸೈಡ್‌ ಎಫೆಕ್ಟ್‌ಗಳು ಇತ್ತೀಚಿನ ಒಂದು ಅಧ್ಯಯನದ ಪ್ರಕಾರ "ಪ್ರತಿದಿನ ಹೆಚ್ಚು ಕಾಲ ಇಯರ್‌ಫೋನ್‌/ಹೆಡ್‌ಫೋನ್‌ ಬಳಸುವವರಿಗೆ ಕಿವಿ ಉರಿಯುವಿಕೆ, ಜುಮ್ಮೆನುವಿಕೆ ಪ್ರಾರಂಭವಾಗಿ ಸ್ವಲ್ಪ ಸಮಯದ ನಂತರ ಸಾಮನ್ಯವಾಗುತ್ತದೆ. ಆದರೆ ಇಂತಹ ಸಮಸ್ಯೆಯೇ ಮುಂದೆ ಕಿವಿಡುತನಕ್ಕೆ ಕಾರಣವಾಗುತ್ತದೆ" ಎಂದು ಹೇಳಲಾಗಿದೆ.

    ಇದನ್ನೂ ಓದಿ: Eye Problem Causes: ಕಣ್ಣಿನ ದೃಷ್ಟಿ ಸಮಸ್ಯೆಗೆ ಈ ಆಹಾರಗಳು ಕಾರಣ

    ಹೆಡ್‌ಫೋನ್‌ಗಳ ಬಳಕೆಯಿಂದ ಕಿವಿ ತುರಿಕೆ ಉಂಟಾಗುತ್ತದೆ

    ಹೆಡ್ ಫೋನ್ ಬಳಕೆ ಎಷ್ಟೊಂದು ಅಪಾಯಕಾರಿಯಾಗಿದೆ
    ಜನರು ತಮ್ಮ ಈ ಅಭ್ಯಾಸವನ್ನು ಸಮಯಕ್ಕೆ ಬದಲಾಯಿಸದೆ ಹೋದಲ್ಲಿ ಕಿವಿಗಳಿಗೆ ಶಾಶ್ವತ ಹಾನಿ ಸಂಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ನಮ್ಮ ಕಿವಿಯಲ್ಲಿ ಕಿವಿ ಮೇಣದಿಂದಾಗಿ ರೋಗಾಣುಗಳು ನೈಸರ್ಗಿಕವಾಗಿ ಸಾಯುತ್ತವೆ. ಈ ಮೇಣವು ನಮ್ಮ ಕಿವಿಗಳನ್ನು ಸೋಂಕಿನಿಂದ ರಕ್ಷಿಸುತ್ತದೆ. ಹೆಡ್‌ಫೋನ್‌ಗಳನ್ನು ಹಲವು ಬಾರಿ ಅನ್ವಯಿಸುವುದರಿಂದ ಕಿವಿ ತುರಿಕೆ ಉಂಟಾಗುತ್ತದೆ, ಇದಕ್ಕಾಗಿ ನಾವು ಇಯರ್‌ಬಡ್‌ಗಳನ್ನು ಬಳಸುತ್ತೇವೆ. ಆದರೆ ಇದು ಕಿವಿಯಲ್ಲಿರುವ ಮೇಣವನ್ನು ತೆಗೆದುಹಾಕುತ್ತದೆ ಮತ್ತು ಕಿವಿಯ ಒಳ ಭಾಗಕ್ಕೆ ರೋಗಾಣುಗಳ ಸೋಂಕಿನ ಅಪಾಯ ಇದು ಹೆಚ್ಚಿಸುತ್ತದೆ.
    Published by:Swathi Nayak
    First published: