ಕೆಲವರಿಗೆ ಊಟದ ಜೊತೆ ಮೊಸರು (Curd) ಇಲ್ಲ ಅಂದರೆ ಊಟ(Meals) ಸೇರುವುದಿಲ್ಲ, ಇನ್ನು ಕೆಲವರು ಮೊಸರನ್ನು ತಮ್ಮ ಸಮೀಪ ಕೂಡಾ ಇಟ್ಟುಕೊಳ್ಳುವುದಿಲ್ಲ. ಆದರೆ ಮೊಸರು ನಮ್ಮ ಆರೋಗ್ಯಕ್ಕೆ(Health) ಎಷ್ಟು ಪ್ರಯೋಜನಕಾರಿ(Benefits) ಎಂದು ತಿಳಿದರೆ ಖಂಡಿತವಾಗಿಯೂ ಎಲ್ಲರು ಮೊಸರು ಸೇವಿಸಲು ಆರಂಭಿಸುತ್ತೀರಿ. ಮೊಸರಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್(Proteins), ವಿಟಮಿನ್-ಬಿ(Vitamin) 6 ಮತ್ತು ವಿಟಮಿನ್-ಬಿ 12 ಮತ್ತು ರಿಬೋಫ್ಲಾವಿನ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇವುಗಳು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ ಅಧ್ಯಯನಗಳ ಪ್ರಕಾರ ನಮ್ಮಲ್ಲಿ ಶೇ. 95ರಷ್ಟು ಜನರು ಮೊಸರನ್ನು ಅನುಚಿತ ರೀತಿಯಲ್ಲಿ ಸೇವಿಸುತ್ತಾರೆ. ಇದರಿಂದ ನೆಗಡಿ, ಜ್ವರ, ಅಸ್ತಮ, ತ್ವಚೆಯಲ್ಲಿ ಕಿರಿಕಿರಿ, ಕೂದಲು ಉದುರುವ ಸಮಸ್ಯೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಪಿತ್ತ, ಕಫದಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ.. ಹೀಗಾಗಿ ಕೆಲವೊಂದಷ್ಟು ವಸ್ತುಗಳನ್ನು ಮೊಸರಿನ ಜೊತೆ ಸೇರಿಸಿ ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು.. ಆ ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ
1) ಮೊಸರು ಮತ್ತು ಉಪ್ಪು ಸಕ್ಕರೆ: ಸಾಮಾನ್ಯವಾಗಿ ಮೊಸರನ್ನು ಸೇವಿಸುವುವಾಗ ಜನರು ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿಕೊಂಡು ಸವಿಯುತ್ತಾರೆ. ಈ ವಿಧಾನವು ಉಚಿತವಾದುದ್ದಲ್ಲ. ಉಪ್ಪು ಮತ್ತು ಸಕ್ಕರೆಯನ್ನು ತಯಾರಿಸುವಾಗ ಸಾಕಷ್ಟು ರಾಸಾಯನಿಕ ವಸ್ತುಗಳನ್ನು ಸೇರಿಸಿ ತಯಾರಿಸಲಾಗುವುದು. ಅವುಗಳನ್ನು ಮೊಸರಿಗೆ ಅಥವಾ ಇತರ ಪದಾರ್ಥಗಳಿಗೆ ಸೇರಿಸಿದಾಗ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುತ್ತವೆ. ಆದರೆ ಅವು ಆರೋಗ್ಯದ ಮೇಲೆ ಅಷ್ಟೇ ಕೆಟ್ಟ ಪರಿಣಾಮವನ್ನು ಬೀರುತ್ತವೆ.
ಇದನ್ನೂ ಓದಿ: ಹ್ಯಾಂಗೋವರ್ನಿಂದ ಹೊರಬರಲು ಪರದಾಡ್ತಿದ್ರೆ ತಪ್ಪದೇ ಈ ಹಣ್ಣು ತಿನ್ನಿ
2) ಮೊಸರು ಮತ್ತು ಸೌತೆಕಾಯಿ: ಮೊಸರು ಮತ್ತು ಸೌತೆಕಾಯಿಯಲ್ಲಿ ಇರುವ ಪೋಷಕಾಂಶಗಳು ವಿರುದ್ಧವಾದ ಗುಣವನ್ನು ಒಳಗೊಂಡಿವೆ. ಅವುಗಳ ಮಿಶ್ರಣವನ್ನು ಸೇವಿಸಿದರೆ ಆಂತರಿಕ ವ್ಯವಸ್ಥೆಯು ಅಥವಾ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದು. ಅವುಗಳಿಂದಾಗಿ ತ್ವಚೆಯಲ್ಲಿ ಹಾಗೂ ಜೀರ್ಣ ಕ್ರಿಯೆಯಲ್ಲಿ ಅನಿರೀಕ್ಷಿತವಾದ ತೊಂದರೆ ಎದುರಾಗುವುದು.
3) ಹಾಲು ಮತ್ತು ಮೊಸರು: ಹಾಲಿನಿಂದಲೇ ಮೊಸರು ಮಾಡುವುದಾದರೂ ಹಾಲು ಹಾಗೂ ಮೊಸರನ್ನು ಜೊತೆಗೆ ತೆಗೆದುಕೊಳ್ಳಬೇಡಿ. ಹಾಲು ಮೊಸರು ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಸಿಡಿಟಿ, ವಾಂತಿ ಮುಂತಾದ ಸಮಸ್ಯೆ ಕಂಡು ಬರಬಹುದು. ಆದ್ದರಿಂದ ಹಾಲು ಸೇವಿಸಿ ಕನಿಷ್ಠ ಎರಡು ಗಂಟೆಗಳಾದ ಬಳಿಕ ಮೊಸರನ್ನು ಸೇವಿಸಿ. ಮೊಸರು ತಿಂದು ಹಾಲು ಕುಡಿದರೆ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ. ದೇಹವು ಹಾಲಿನ ಪೋಷಕಾಂಶಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮೊಸರು ತಿಂದ ಕೂಡಲೇ ಹಾಲು ಸೇವನೆ ಬೇಡವೇ ಬೇಡ.
4) ಮೀನು: ಮೊಸರಿನೊಂದಿಗೆ ತಿನ್ನಬಾರದ ಆಹಾರ ಪದಾರ್ಥಗಳಲ್ಲಿ ಮೀನು ಸಹ ಒಂದು..ಮೊಸರಿನ ಜೊತೆ ಮೀನನ್ನ ಸೇವನೆ ಮಾಡಿದಾಗ ಅಜೀರ್ಣ ಗ್ಯಾಸ್ ಹೊಟ್ಟೆನೋವು ವಾಂತಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
5) ಹುರಿದ ವಸ್ತುಗಳು: ಹುರಿದ ಮತ್ತು ಕರಿದ ಪದಾರ್ಥಗಳೊಂದಿಗೆ ಸಹ ಮೊಸರು ತಿನ್ನಬೇಡಿ. ಮೊಸರು ಕರಿದ ಮತ್ತು ಕರಿದ ವಸ್ತುಗಳನ್ನು ಜೀರ್ಣಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ದೇಹವು ಮೊಸರಿನ ಪೋಷಕಾಂಶಗಳನ್ನು ಪಡೆಯುವುದಿಲ್ಲ.
6) ಈರುಳ್ಳಿ: ಸಾಮಾನ್ಯವಾಗಿ ಹೆಚ್ಚಿನ ಜನರು ಮಜ್ಜಿಗೆ ಮತ್ತು ಮೊಸರು ಸೇವನೆ ಮಾಡುವಾಗ ಈರುಳ್ಳಿಯನ್ನು ಬಳಸುತ್ತಾರೆ. ಅದರಲ್ಲೂ ಮೊಸರಿನ ಜೊತೆಗೆ ಈರುಳ್ಳಿ ಸೇರಿಸಿ ರಾಯತಾ ಮಾಡಿ ತಿನ್ನುವುದು ಹೆಚ್ಚಿನ ಪ್ರಯೋಜನ ಎಂದು ಅನೇಕರು ಅಂದುಕೊಂಡಿರುತ್ತಾರೆ. ಆದ್ರೆ ಹೀಗೆ ಮೊಸರಿನ ಜೊತೆ ಈರುಳ್ಳಿ ತಿನ್ನುವುದು
ಅಲರ್ಜಿ, ವಾಂತಿ, ಗ್ಯಾಸ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಉಂಟಾಗುತ್ತವೆ.
ಇದನ್ನೂ ಓದಿ: ರೋಸ್ ವಾಟರ್ ಹಚ್ಚಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ, ಕೇಶ ಸೌಂದರ್ಯಕ್ಕೂ ಇದೇ ಬೆಸ್ಟ್
7) ಮಾವು: ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನಬೇಡಿ. ಮಾವು ಪ್ರಕೃತಿಯಲ್ಲಿ ಬಿಸಿಯಾಗಿರುತ್ತದೆ ಮತ್ತು ಮೊಸರು ಸ್ವಭಾವತಃ ಶೀತವಾಗಿರುತ್ತದೆ. ಈ ಎರಡನ್ನೂ ಒಟ್ಟಿಗೆ ತಿನ್ನುವುದರಿಂದ ನಿಮ್ಮ ದೇಹದಲ್ಲಿ ವಿಷಕಾರಿ ಅಂಶ ಉಂಟಾಗುತ್ತದೆ. ಇದು ಆಹಾರ ವಿಷ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ