• Home
  • »
  • News
  • »
  • lifestyle
  • »
  • Sanitary Napkin: ಮಹಿಳೆಯರೇ, ಸ್ಯಾನಿಟರಿ ನ್ಯಾಪ್ಕಿನ್​ಗಳಲ್ಲಿದೆ ಅತಿಹೆಚ್ಚು ರಾಸಾಯನಿಕಗಳು, ಬಳಸುವ ಮುನ್ನ ಎಚ್ಚರ

Sanitary Napkin: ಮಹಿಳೆಯರೇ, ಸ್ಯಾನಿಟರಿ ನ್ಯಾಪ್ಕಿನ್​ಗಳಲ್ಲಿದೆ ಅತಿಹೆಚ್ಚು ರಾಸಾಯನಿಕಗಳು, ಬಳಸುವ ಮುನ್ನ ಎಚ್ಚರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Chemicals Found in Sanitary Pads: ಹೆಚ್ಚಿನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಅಂದಾಜು ಸರಾಸರಿ 1,800 ದಿನಗಳವರೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಮೊದಲ ಆಯ್ಕೆಯ ಉತ್ಪನ್ನವಾಗಿ ಬಳಸುತ್ತಾರೆ.

  • Trending Desk
  • 4-MIN READ
  • Last Updated :
  • Share this:

ಭಾರತದಲ್ಲಿ (India)  ಮಾರಾಟವಾಗುವ ಜನಪ್ರಿಯ ಸ್ಯಾನಿಟರಿ ನ್ಯಾಪ್‌ಕಿನ್‌ಗಳಲ್ಲಿ (Sanitary Pads)  ಹೃದ್ರೋಗ, ಮಧುಮೇಹ (Diabetes) ಮತ್ತು ಕ್ಯಾನ್ಸರ್‌ಗೆ (Cancer)  ಸಂಬಂಧಿಸಿದ ಹೆಚ್ಚಿನ ಪ್ರಮಾಣದ ರಾಸಾಯನಿಕಗಳು ಕಂಡುಬಂದಿವೆ ಎಂದು ದೆಹಲಿ ಮೂಲದ ಪರಿಸರ ಎನ್‌ಜಿಒ ತಿಳಿಸಿದೆ. ಟಾಕ್ಸಿಕ್ಸ್ ಲಿಂಕ್ ಎಂಬ ಎನ್‌ಜಿಒ ನಡೆಸಿದ ಅಧ್ಯಯನವು ಮಾರುಕಟ್ಟೆಯಲ್ಲಿ ಲಭ್ಯವಿರುವ ಆರು ಬಗೆಯ ಅಜೈವಿಕ ಮತ್ತು ನಾಲ್ಕು ಸಾವಯವ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಒಟ್ಟು ಹತ್ತು ಮಾದರಿಗಳಲ್ಲಿ ಥಾಲೇಟ್‌ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳು (VOC) ಕಂಡುಬಂದಿರುವುದಾಗಿ 'ಋತುಚಕ್ರದ ತ್ಯಾಜ್ಯ 2022' ಎಂಬ ಶೀರ್ಷಿಕೆಯ ವರದಿಯಲ್ಲಿ ಪ್ರಕಟಿಸಲಾಗಿದೆ.


ಥಾಲೇಟ್‌ ಮತ್ತು VOC ರಾಸಾಯನಿಕದಿಂದ ಏನಾಗುತ್ತದೇ?


ಥಾಲೇಟ್‌ಗಳಿಗೆ ಒಡ್ಡಿಕೊಳ್ಳುವುದರಿಂದ ಅಂತಃಸ್ರಾವಕ ಅಡ್ಡಿ, ಹೃದಯ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳ ಮೇಲಿನ ಪರಿಣಾಮಗಳು, ಮಧುಮೇಹ, ಕೆಲವು ಕ್ಯಾನ್ಸರ್‌ಗಳು ಮತ್ತು ಜನ್ಮ ದೋಷಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇನ್ನು VOC ಗಳಿಗೆ ಒಡ್ಡಿಕೊಳ್ಳುವುದರಿಂದ ಮೆದುಳಿನ ದುರ್ಬಲತೆ, ಅಸ್ತಮಾ, ಅಸಾಮರ್ಥ್ಯಗಳು, ಕೆಲವು ಕ್ಯಾನ್ಸರ್‌ಗಳು ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯ ಅಪಾಯವನ್ನು ಹೆಚ್ಚಿಸುತ್ತದೆ.


ಆರ್ಗ್ಯಾನಿಕ್‌ ಸ್ಯಾನಿಟರಿ ನ್ಯಾಪ್‌ಕಿನ್‌ ಗಳಲ್ಲೂ ಥಾಲೇಟ್‌ ಪತ್ತೆ!


ಕೆಲವು ಸ್ವಯಂ ಘೋಷಿತ 'ಸಾವಯವ' ಸ್ಯಾನಿಟರಿ ನ್ಯಾಪ್‌ಕಿನ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಥಾಲೇಟ್‌ಗಳು ಕಂಡುಬಂದಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಇದರ ಪ್ರಕಾರ, ಸಾವಯವ ಮತ್ತು ಅಜೈವಿಕ ಬಹುತೇಕ ಎಲ್ಲಾ ರೀತಿಯ ಸ್ಯಾನಿಟರಿ ನ್ಯಾಪ್ಕಿನ್ಗಳು, ಥಾಲೇಟ್ಗಳ ಉಪಸ್ಥಿತಿ ಹೊಂದಿವೆ ಎಂದು ಅಧ್ಯಯನ ಹೇಳುತ್ತದೆ.


ಎಲ್ಲಾ ಸಾವಯವ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ VOC ಗಳಿರುವುದು ಆಘಾತಕಾರಿ ಎಂದು ಅಧ್ಯಯನವು ಹೇಳಿದೆ. ಹೀಗಾಗಿ ಬಹುತೇಕ ಸಾವಯವ ಪ್ಯಾಡ್‌ಗಳು ಸುರಕ್ಷಿತವಲ್ಲ ಎನ್ನಲಾಗಿದೆ.


ಇದನ್ನೂ ಓದಿ: ಬೆನ್ನು ನೋವಿಗೆ ಈ ವಿಟಮಿನ್ ಕೊರತೆಯೂ ಕಾರಣವಂತೆ


ಸಿಂಥಟಿಕ್‌ ವಸ್ತು, ಸುಗಂಧಗಳ ಸೇರ್ಪಡೆ !


ಹೆಚ್ಚಿನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಅಂದಾಜು ಸರಾಸರಿ 1,800 ದಿನಗಳವರೆಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಮೊದಲ ಆಯ್ಕೆಯ ಉತ್ಪನ್ನವಾಗಿ ಬಳಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಇತರ ಬದಲಾವಣೆಗಳ ಜೊತೆಗೆ, ಸಿಂಥೆಟಿಕ್ ಪ್ಲಾಸ್ಟಿಕ್ ವಸ್ತುಗಳನ್ನು ಸ್ಯಾನಿಟರಿ ಪ್ಯಾಡ್‌ಗಳಿಗೆ ದ್ರವ ಹೀರಿಕೊಳ್ಳುವಂತೆ ಸೇರಿಸಲಾಗುತ್ತದೆ.
ಬಳಕೆದಾರರಿಗೆ ತಾಜಾತನದ ಭಾವನೆಯನ್ನು ಒದಗಿಸುವ ಸಲುವಾಗಿಯೇ ಸ್ಯಾನಿಟರಿ ಪ್ಯಾಡ್‌ಗಳಿಗೆ ಸುಗಂಧ ಕೂಡ ಸೇರ್ಪಡೆ ಮಾಡಲಾಗುತ್ತೆ. ಆದ್ರೆ ಇದೀಗ ಸ್ಯಾನಿಟರಿ ಪ್ಯಾಡ್‌ಗಳ ಅಂಶವಾಗಿರುವ ಈ ಕೆಲವು ರಾಸಾಯನಿಕಗಳು ಬಳಕೆದಾರರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಹೆಚ್ಚುತ್ತಿದೆ.


ಅಧ್ಯಯನದಲ್ಲಿ ಒಟ್ಟು 10 ಮಾದರಿಗಳು, ಆರು ಅಜೈವಿಕ ಮತ್ತು ನಾಲ್ಕು ಸಾವಯವ ಸ್ಯಾನಿಟರಿ ಪ್ಯಾಡ್‌ಗಳನ್ನು ಪರೀಕ್ಷೆಗೆ ಕಳುಹಿಸಿ, VOC ಮತ್ತು ಥಾಲೇಟ್‌ಗಳ ಫಲಿತಾಂಶಗಳನ್ನು ತೂಕ-ವಾರು (µg/kg) ವಿಶ್ಲೇಷಿಸಲಾಗಿದೆ. ನಂತರ ಅವುಗಳನ್ನು ಪ್ಯಾಡ್-ವಾರು ಸಾಂದ್ರತೆಗಳಾಗಿ ಪರಿವರ್ತಿಸಲಾಯಿತು. ಪ್ಯಾಡ್‌ನ ಸರಾಸರಿ ತೂಕ ಸುಮಾರು 10 ಗ್ರಾಂ ಎಂದು ತೆಗೆದುಕೊಳ್ಳಲಾಗಿದೆ. ಅಲ್ಲದೇ ಮುಟ್ಟಿನ ಪ್ಯಾಡ್‌ಗಳನ್ನು ಡಿಐಬಿಪಿ, ಡಿಬಿಪಿ, ಡಿಐಎನ್‌ಪಿ, ಡಿಐಡಿಪಿ ಮತ್ತು ಇತರ ಥಾಲೇಟ್‌ಗಳಿಗಾಗಿ ಪರೀಕ್ಷಿಸಲಾಯಿತು.


ಸ್ಯಾನಿಟರಿ ಪ್ಯಾಡ್‌ಗಳ ಮೂಲಕ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು ಸಹ ವಿಮರ್ಶಾತ್ಮಕ ಕಾಳಜಿಯಾಗಿದೆ. ಇನ್ನು, ಅಧ್ಯಯನವು ಆ ನಿಟ್ಟಿನಲ್ಲಿ ಕೆಲವು ಶಿಫಾರಸುಗಳನ್ನು ಮಾಡಿದೆ.


* ಮುಟ್ಟಿನ ಉತ್ಪನ್ನಗಳಲ್ಲಿ VOC ಗಳು ಮತ್ತು ಥಾಲೇಟ್‌ಗಳ ಉಪಸ್ಥಿತಿ ಮತ್ತು ಸಂಭಾವ್ಯ ಪ್ರಭಾವದ ಬಗ್ಗೆ ಸಂಪೂರ್ಣ ತನಿಖೆಯನ್ನು ಅಧ್ಯಯನವು ಶಿಫಾರಸು ಮಾಡುತ್ತದೆ.


*ಸರ್ಕಾರ ಮತ್ತು ಮಾನದಂಡಗಳನ್ನು ತಯಾರಿಸುವ ಸಂಸ್ಥೆಗಳು ನೈರ್ಮಲ್ಯ ಉತ್ಪನ್ನಗಳಲ್ಲಿನ ರಾಸಾಯನಿಕಗಳಿಗೆ ಮಾನದಂಡಗಳನ್ನು ರೂಪಿಸಬೇಕು.


*ಉತ್ಪಾದಕರು ಉತ್ಪನ್ನದ ಪದಾರ್ಥಗಳ ಪಟ್ಟಿಯನ್ನು ಬಹಿರಂಗಪಡಿಸಲು ಕಡ್ಡಾಯವಾಗಿರಬೇಕು.


*ಉತ್ಪಾದಕರು ಉತ್ಪನ್ನದ ಬಗ್ಗೆ ಸೂಕ್ತ ಮಾಹಿತಿ ಮತ್ತು ಸಾಕಷ್ಟು ಎಚ್ಚರಿಕೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಜವಾಬ್ದಾರಿಯುತ ಜಾಹೀರಾತು ನೀಡಬೇಕು.


ಇದನ್ನೂ ಓದಿ: ಈ ಆಹಾರಗಳಿಂದ ಅಲರ್ಜಿ ಉಂಟಾಗಬಹುದು, ಇಲ್ಲಿದೆ ನೋಡಿ ಲಿಸ್ಟ್


ಅಂತಿಮವಾಗಿ, ಸ್ಯಾನಿಟರಿ ಉತ್ಪನ್ನಗಳಲ್ಲಿ ಈ ರಾಸಾಯನಿಕಗಳ ಬಳಕೆಯಲ್ಲಿ ಪರ್ಯಾಯ ಅಥವಾ ಕಡಿತವನ್ನು ಉತ್ತೇಜಿಸಲು ಯೋಜನೆಗಳನ್ನು ಅಧ್ಯಯನವು ಶಿಫಾರಸು ಮಾಡುತ್ತದೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು