Happy Valentines Day 2020: ಕೇಳಿ ಪ್ರೇಮಿಗಳೇ… ವ್ಯಾಲೆಂಟೈನ್ಸ್ ಡೇಗೂ ಇದೆ ಒಂದು ಇತಿಹಾಸ

Valentines Day 2020: ರಾಜನ ಈ ನಿರ್ಧಾರದ ಬಗ್ಗೆ ವ್ಯಾಲೆಂಟೈನ್ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿ ಕ್ಲಾಡಿಯಸ್​ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಂತ ಮಾತ್ರ. ಸೈನಿಕ ಮನದಾಳವನ್ನು ಅರಿತ ವ್ಯಾಲೆಂಟೈನ್ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಜತೆ ಒಂದುಗೂಡಿಸುತ್ತಿದ್ದರಂತೆ.

news18-kannada
Updated:February 14, 2020, 3:56 PM IST
Happy Valentines Day 2020: ಕೇಳಿ ಪ್ರೇಮಿಗಳೇ… ವ್ಯಾಲೆಂಟೈನ್ಸ್ ಡೇಗೂ ಇದೆ ಒಂದು ಇತಿಹಾಸ
ವ್ಯಾಲೆಂಟೈನ್ಸ್ ಡೇ
  • Share this:
ಇಂದು ಪ್ರೇಮಿಗಳ ದಿನಾಚರಣೆ. ಈ ದಿನವನ್ನು ವಿಶ್ವದಾದ್ಯಂತ ಬಲು ಸಂಭ್ರಮದಿಂದ ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್​ ಡೇ ಪಾಶ್ಚಾತ್ಯ ದೇಶದ ಆಚರಣೆಯಾಗಿದ್ದರೂ, ಇಂದು ಭಾರತದ ಮೂಲೆ ಮೂಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದೆ. ಇದುವೇ ಪ್ರೀತಿಯ ಶಕ್ತಿ ಎಂದರೆ ತಪ್ಪಾಗಲಾರದು. ಫೆಬ್ರವರಿ 7 ರಿಂದ ಪ್ರೇಮಿಗಳು ತಮ್ಮ ಸಂಗಾತಿಗೆ ಹಲವು ರೀತಿ ಸರ್ಪ್ರೈಸ್ ಗಿಫ್ಟ್​ಗಳನ್ನು ನೀಡಿರುತ್ತಾರೆ. ಅದು ಹೂವಿರಬಹುದು, ಟೆಡ್ಡಿ ಬೇರ್ ಇರಬಹುದು ಅಥವಾ ಚಾಕೋಲೇಟ್​ಗಳಿರಬಹುದು. ಹೀಗೆ ಕಳೆದೊಂದು ವಾರದಿಂದ ಪ್ರೇಮಿಗಳು ಪ್ರೇಮಲೋಕದಲ್ಲಿ ತೇಲಾಡಿದ್ದಾರೆ. ಪ್ರೇಮಿಗಳ ದಿನದಂದು ಕೆಂಪು ಬಣ್ಣ ಉಡುಗೆ ತೊಡುವುದು ಸಾಮಾನ್ಯ. ಪ್ರೀತಿಯಲ್ಲಿ ಕೆಂಗುಲಾಬಿ ಮುಖ್ಯ ಪಾತ್ರವಹಿಸುವುದರಿಂದ ಇದೇ ಬಣ್ಣ ಪ್ರೇಮಿಗಳ ವರ್ಣವಾಗಿ ಮಾರ್ಪಟ್ಟಿದೆ. ಆದರೆ ವ್ಯಾಲೆಂಟೈನ್ಸ್​ ಡೇ ಆಚರಣೆ ಶುರುವಾಗಿದ್ದು ಹೇಗೆ? ಅದರ ಹಿಂದಿರುವ ಅಸಲಿ ಕಹಾನಿ ಏನು? ಎಂಬುದರ ಬಗ್ಗೆ ಕಣ್ಣಾಡಿಸಿದರೆ ಸ್ಟೋರಿಯಲ್ಲೊಂದು ಕಥೆ ಕಾಣಿಸುತ್ತದೆ.

ಹೌದು, ವ್ಯಾಲೆಂಟೈನ್ ಎಂಬ ಸಂತನಿಂದ ವ್ಯಾಲೆಂಟೈನ್ಸ್​ ಡೇ ಆರಂಭವಾಗಿದೆ. ಈ ಸಂತರ ಮರಣದ ದಿನವನ್ನು ಇಂದು ಪ್ರೇಮಿಗಳ ದಿನವಾಗಿ ಆಚರಿಸಲಾಗುತ್ತಿದೆ. ಹಾಗಾದರೆ ಸಂತರಿಗೂ ಪ್ರೇಮಕ್ಕೂ ಏನೂ ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದು ಕ್ರಿ.ಶ 270. ರೋಮ್ ಸಾಮ್ರಾಜ್ಯವನ್ನು ಎರಡನೇ ಕ್ಲಾಡಿಯಸ್​ ಎಂಬ ರಾಜ ಆಳುತ್ತಿದ್ದ. ತನ್ನ ಸರ್ವಾಧಿಕಾರಿ ಧೋರಣೆಯಿಂದ ಕುಖ್ಯಾತ ಪಡೆದಿದ್ದ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್ ಎಂಬ ಸಂತ ಹೊಸ ಬೆಳಕಾಗಿ ಕಾಣಿಸಿಕೊಂಡಿದ್ದರು. ಕ್ಲಾಡಿಯಸ್ ಆಸ್ಥಾನದಲ್ಲಿಯೇ ವ್ಯಾಲೆಂಟೈನ್ ಸಂತನಾಗಿದ್ದರು ಎಂಬುದು ವಿಶೇಷ. ತನ್ನ ರಾಜಾಢಾಳಿತದ ಅವಧಿಯಲ್ಲಿ ಕ್ಲಾಡಿಯಸ್ ಸೈನಿಕರನ್ನು ಮದುವೆಯಾಗಲು ಬಿಡುತ್ತಿರಲಿಲ್ಲ. ಯುದ್ಧದ ಸಂದರ್ಭದಲ್ಲಿ ಯುವಕರು ಮದುವೆಯಾಗಬಾರದೆಂದು ಕ್ಲಾಡಿಯಸ್​ ಕಟ್ಟಪ್ಪಣೆ ಹೊರಡಿಸಿದ್ದರು. ಏಕೆಂದರೆ ಯುವಕರು ಒಬ್ಬಂಟಿಯಾಗಿದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಆತ ನಂಬಿದ್ದ. ಇದರಿಂದ ಸೈನಿಕರಲ್ಲಿ ಬಹಳಷ್ಟು ಮಂದಿ ಕೀಳರಿಮೆಗೆ ಒಳಗಾಗಿದ್ದರು. ತಮ್ಮ ಪ್ರೀತಿ ಪಾತ್ರರನ್ನು ಪಡೆಯಲು ವಿಫರಾಗಿದ್ದರು.

ರಾಜನ ಈ ನಿರ್ಧಾರದ ಬಗ್ಗೆ ವ್ಯಾಲೆಂಟೈನ್ ಅವರಿಗೆ ಮೊದಲಿನಿಂದಲೂ ಅಸಮಾಧಾನವಿತ್ತು. ಇಡೀ ಸಾಮ್ರಾಜ್ಯದಲ್ಲಿ ಕ್ಲಾಡಿಯಸ್​ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸಂತ ಮಾತ್ರ. ಸೈನಿಕ ಮನದಾಳವನ್ನು ಅರಿತ ವ್ಯಾಲೆಂಟೈನ್ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಜತೆ ಒಂದುಗೂಡಿಸುತ್ತಿದ್ದರಂತೆ. ಮದುವೆಯಾಗಲು ಇಚ್ಛಿಸುತ್ತಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದರಂತೆ. ತಮ್ಮ ಜೀವನವನ್ನೇ ಪಣಕ್ಕಿಟ್ಟು ಹಲವು ಪ್ರೇಮಿಗಳ ನೆರವಿಗೆ ನಿಂತರು.

ಆದರೆ ಅದೊಂದು ಈ ವಿಚಾರ ಕ್ಲಾಡಿಯಸ್ ಕಿವಿಗೆ ಬೀಳುತ್ತದೆ. ರಾಜಧರ್ಮವನ್ನು ಮೀರಿದ ವ್ಯಾಲೆಂಟೈನ್​ ರನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಈ ಅಪರಾಧಕ್ಕಾಗಿ ಅವರನ್ನು ಫೆಬ್ರವರಿ 14ರಂದು ಸೆರೆಮನೆಗೆ ತಳ್ಳಲಾಯಿತು. ಸೆರೆಮನೆಯಲ್ಲಿ ಬಂಧಿಯಾದ ಮೇಲೆ ಎಲ್ಲರನ್ನು ಆಶ್ಚರ್ಯಪಡಿಸುವಂತಹ ಕೆಲಸಗಳನ್ನು ವ್ಯಾಲೆಂಟೈನ್ ಮಾಡುತ್ತಿದ್ದರಂತೆ. ಅದರಲ್ಲೊಂದು ಸೆರೆಮನೆಯ ಅಧಿಕಾರಿಯ ಮಗಳಿಗೆ ದೃಷ್ಟಿಯನ್ನು ಕರುಣಿಸಿರುವುದು. ಹೀಗೆ ಹಲವು ಪ್ರೇಮಿಗಳ ಸಂಬಂಧಕ್ಕೆ ಅಡಿಪಾಯ ಹಾಕಿಕೊಟ್ಟ ಸಂತರನ್ನು ನೋಡಲು ಹಲವು ಪ್ರೇಮಿಗಳು ಜೈಲಿಗೆ ಬರಲಾರಂಭಿಸಿದರು.

ಈ ನಡುವೆ ವ್ಯಾಲೆಂಟೈನ್ ಮೇಲೆ ಜೈಲರ್ ಮಗಳೊಬ್ಬಳಿಗೆ ಪ್ರೇಮಾಂಕುರವಾಯಿತು. ಆದರೆ ಸೆರೆವಾಸದಲ್ಲಿದ್ದ ವ್ಯಾಲೆಂಟೈನ್​ ತನ್ನ ಸಂಗಾತಿಯೊಂದಿಗೆ ಕಾಲ ಕಳೆಯಲಾಗುವುದಿಲ್ಲ. ಜೈಲ್ ಅಧಿಕಾರಿ ಮಗಳು ವ್ಯಾಲೆಂಟೈನ್​ಗಾಗಿ ಆಗಾಗೆ ಸೆರೆಮನೆಗೆ ಭೇಟಿ ಕೊಡುತ್ತಿದ್ದರು. ಅದೊಂದು ದಿನ ತನ್ನ ಪ್ರಿಯತಮೆ ವ್ಯಾಲೆಂಟೈನ್​ ಪತ್ರವನ್ನು ಬರೆದು ಇಹಲೋಕ ತ್ಯಜಿಸುತ್ತಾರೆ. ಆ ಪತ್ರದಲ್ಲಿ ಇಂತಿ ನಿಮ್ಮ ವ್ಯಾಲೆಂಟೈನ್ ಎಂದು ಸಹಿ ಮಾಡಲಾಗಿತ್ತು. ಹಲವರ ಪ್ರೀತಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ವ್ಯಾಲೆಂಟೈನ್​ ಅವರ ಜ್ಞಾಪಕಾರ್ಥವಾಗಿ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯನ್ನಾಗಿಸಲು ಅಂದಿನ ರೋಮ್​ ಫಾದರ್​ಗಳು ತೀರ್ಮಾನಿಸಿದರು. ಅದರಂತೆ ಇಂದು ವಿಶ್ವದೆಲ್ಲೆಡೆ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಸಂಭಾವನೆ ವಿಚಾರವಾಗಿ ‘ಕೆ.ಜಿ.ಎಫ್ ಚಾಪ್ಟರ್​-2‘​ ಚಿತ್ರವನ್ನು ಕೈ ಬಿಟ್ಟರಂತೆ ಈ ಬಹುಭಾಷಾ ನಟಿ!
First published: February 14, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading