TeachersDay: ಟೀಚರ್ ಹೇಳಿದ ಆ ಮೂರು ಕಥೆಗಳು

zahir | news18
Updated:September 5, 2018, 2:38 PM IST
TeachersDay: ಟೀಚರ್ ಹೇಳಿದ ಆ ಮೂರು ಕಥೆಗಳು
zahir | news18
Updated: September 5, 2018, 2:38 PM IST
-ನ್ಯೂಸ್ 18 ಕನ್ನಡ

ಫ್ರೆಂಡ್ಸ್
ನಿಮ್ಮ ಗೆಳೆತನ ಆರಂಭವಾಗುವುದು ಎಲ್ಲಿಂದ? ಸ್ನೇಹಕ್ಕೆ ಕಾರಣವಾಗುವುದಾದರೂ ಏನು? ಈ ಪ್ರಶ್ನೆಗೆ ನಮ್ಮ ಕ್ಲಾಸ್​ನಲ್ಲಿ ಮೌನ ಆವರಿಸಿತ್ತು. ಹೊಸ ಶಾಲೆಯಲ್ಲಿ ಎಲ್ಲವೂ ಹೊಸತನದಿಂದ ಕೂಡಿತ್ತು. ಟೀಚರ್ ಸಹ ನಮ್ಮ ಮೌನವನ್ನು ಅರ್ಥ ಮಾಡಿಕೊಂಡಿದ್ದರು. ಗುಸು ಪಿಸು ಪ್ರಾರಂಭವಾಗುವ ಮೊದಲೇ ಟೀಚರ್ ಮಾತು ಮುಂದುವರೆಸಿದರು. ನಿಮ್ಮ ಜೀವನದಲ್ಲಿ ಗೆಳೆಯ-ಗೆಳೆತಿಯನ್ನು ಆರಿಸಿಕೊಳ್ಳುವಾಗ ತುಂಬಾ ಎಚ್ಚರವಹಿಸಬೇಕು ಎಂದರು. ಒಂದು ಪ್ರಾಣಿಯನ್ನು ನೋಡಿದರೆ ಅದರ ಸ್ವಭಾವ ನಮಗೆ ತಿಳಿಯುತ್ತದೆ. ಮೊಲವನ್ನು ಕೈಗೆತ್ತಿಕೊಳ್ಳಲು ಯಾರು ಹಿಂಜರಿಯುವುದಿಲ್ಲ. ಆದರೆ ಇದನ್ನು ಹುಲಿಯ ವಿಷಯಕ್ಕೆ ಹೇಳಲಾಗುವುದಿಲ್ಲ. ಏಕೆಂದರೆ ಇಲ್ಲಿ ಮೊಲದ ಸ್ವಭಾವ ಮತ್ತು ಹುಲಿ ಸ್ವಭಾವ ಹೇಗಿರುತ್ತದೆ ಎಂಬುದು ತಿಳಿದಿರುತ್ತದೆ. ಆದರೆ ಮನುಷ್ಯನ ಸ್ವಭಾವ  ನಿಮಗೆ ನೋಡಿದಾಗ ಗೊತ್ತಾಗುವುದಿಲ್ಲ. ಹಾಗಾಗಿ ನೀವು ಫ್ರೆಂಡ್ಸ್​ನ ಆಯ್ಕೆ ಮಾಡಿಕೊಳ್ಳುವಾಗ ಸದಾ ಎಚ್ಚರದಿಂದರಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ಕೆಟ್ಟವರಿದ್ದಾರೆ, ನೀಚರಿದ್ದಾರೆ, ಮದ್ಯಪಾನಿಗಳಿದ್ದಾರೆ. ಇಂತಹ ಸಮಾಜದಿಂದ ನೀವು ಉತ್ತಮ ಗೆಳೆಯ-ಗೆಳೆತಿಯನ್ನು ಆರಿಸಿಕೊಳ್ಳುವ ಬಗ್ಗೆ ಅತಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ನಿಮ್ಮ ಫ್ರೆಂಡ್ಸ್ ಕೆಟ್ಟವರಾಗಿದ್ದರೆ ನೀವೂ ಕೂಡ ಕೆಟ್ಟದಾರಿಯಲ್ಲಿ ಮುನ್ನಡೆಯುತ್ತೀರಿ. ನಿಮ್ಮ ಜೊತೆಗಿರುವ ಫ್ರೆಂಡ್ಸ್​  ಸರಿಯಾದ ದಿಕ್ಕಿನಲ್ಲಿದ್ದರೆ ಮಾತ್ರ ನೀವೂ ಕೂಡ ಗುರಿ ಮುಟ್ಟಲು ಸಾಧ್ಯ. ಉದಾ: ಮಹಾಭಾರತದ ಕಥೆ ತೆಗೆದುಕೊಳ್ಳಿ. ಕರ್ಣನು ಮತ್ತು ಅರ್ಜುನನು ಯುದ್ದದಲ್ಲಿ ಮುಖಾಮುಖಿಯಾಗುತ್ತಾರೆ. ಸೂರ್ಯನ ಮಗನಾಗಿದ್ದ ಕರ್ಣನು ಇಂದ್ರನ ಮಗ ಅರ್ಜುನನೊಂದಿಗೆ ರಣರಂಗದಲ್ಲಿ ಸೆಣಸಿದ್ದರು. ಯುದ್ಧವಿದ್ಯೆಯಲ್ಲಿ ಅರ್ಜುನನಿಗಿಂತ ಅಪಾರ ಸಾಮರ್ಥ್ಯ ಹೊಂದಿದ್ದರು ಕರ್ಣನು ಹಣಾಹಣಿಯಲ್ಲಿ ಸೋತಿದ್ದರು. ಇದಕ್ಕೆ ಕಾರಣ ಕರ್ಣನ ಸಾರಥಿಯಾಗಿದದ್ದು ಶಲ್ಯ. ಪ್ರತಿಯೊಂದು ನಡೆಯಲ್ಲೂ ನಕರಾತ್ಮಕ ಚಿಂತನೆಗಳಿಂದ ಕರ್ಣನ ಮನಃಶಕ್ತಿಯನ್ನು ಶಲ್ಯ ಕುಗ್ಗಿಸಿದ್ದರು. ಆದರೆ ಅತ್ತ ಕಡೆ ಜಗತ್ತಿನ ಅತಿದೊಡ್ಡ ಪ್ರೇರಣೆಯಾಗಿರುವ ಶ್ರೀ ಕಷ್ಣ ಭಗವಾನ್ ಅರ್ಜುನನ ಸಾರಥಿಯಾಗಿದ್ದರು. ಶ್ರೀ ಕೃಷ್ಣ ಅರ್ಜುನನಿಗೆ ದೈರ್ಯ ತುಂಬಿದಲ್ಲದೆ ಮಾರ್ಗದರ್ಶನ ನೀಡಿರುವುದು ಯುದ್ಧದಲ್ಲಿ ಜಯ ಸಾಧಿಸಲು ನೆರವಾಗಿತ್ತು. ಹಾಗಾಗಿ ನೀವು ಆಯ್ಕೆ ಮಾಡಿಕೊಳ್ಳುವ ಗೆಳೆಯರಲ್ಲಿ ಸಕಾರಾತ್ಮಕ ಚಿಂತನೆಗಳಿರಬೇಕು. ನಾಳೆ ನಿಮಗೆ ಮಾರ್ಗದರ್ಶಕ, ದೈರ್ಯ ತುಂಬುವಂತಹ ವ್ಯಕ್ತಿಗಳಿರಾಗಿರಬೇಕು.ಇಂತಹ ಸ್ನೇಹ ಬಂಧವಿದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ.

ಸಂಪಾದನೆ

ಅದೊಂದು ಶ್ರೀಮಂತ ಸಮ್ರಾಜ್ಯ ಅಲ್ಲಿ ಅರಸನದ್ದೇ ಆಜ್ಞೆ. ಅರಸನ ಕೂದಲನ್ನು ಕಟ್ ಮಾಡಲು ಪ್ರತಿ ತಿಂಗಳು ಕ್ಷೌರಿಕನೊಬ್ಬ ಅರಮನೆಗೆ ಬರುತ್ತಿದ್ದ. ಯಾವಾಗಲೂ ನಗುತ್ತಾ, ಪ್ರೀತಿಯಿಂದ ಎಲ್ಲರನ್ನೂ ಮಾತನಾಡಿಸುತ್ತಾ ಅರಮನೆಯೊಳಗೆ ಪ್ರವೇಶಿಸುತ್ತಿದ್ದ. ತನ್ನ ಕೆಲಸ ಮುಗಿದಂತೆ ರಾಜನಿಂದ ಕಾಣಿಕೆ ಪಡೆದು ಖುಷಿಯಾಗಿ ಹೊರಡುತ್ತಿದ್ದ. ಪ್ರತಿ ತಿಂಗಳು ಇದನ್ನು ಗಮನಿಸುತ್ತಿದ್ದ ರಾಜ ತನ್ನ ಮಂತ್ರಿಯಲ್ಲಿ ಕೇಳಿದ. ತನ್ನಲ್ಲಿ ಎಲ್ಲವೂ ಇದೆ. ಸೊತ್ತು ಸಂಪತ್ತು ಪಟ್ಟ... ಹೀಗೆ ಎಲ್ಲ ಇದ್ದರೂ ಆ ಕ್ಷೌರಿಕನ ರೀತಿಯಲ್ಲಿ ಒಂದು ದಿನವು ಸಂತೋಷದಿಂದ ನಾನು ಅರಮನೆಯಲ್ಲಿರಲಿಲ್ಲ. ಇದಕ್ಕೆ ಕಾರಣವೇನೆಂದು ಕೇಳಿದ. ರಾಜನ ಪ್ರಶ್ನೆಗೆ ಮಂತ್ರಿ ಉತ್ತರಿಸಲೇಬೇಕಿತ್ತು. ಈ ಕ್ಷೌರಿಕ ಶೇ.99ರಷ್ಟು ದೂಷಿತ ವಲಯದಿಂದ ದೂರವಿದ್ದಾನೆಂದು ಮಂತ್ರಿ ರಾಜನಿಗೆ ಹೇಳಿದ. ರಾಜನಿಗೆ ಮಂತ್ರಿಯ ಉತ್ತರ ಅರ್ಥವಾಗಿರಲಿಲ್ಲ. ಸಂತೋಷಕ್ಕೂ ಅದಕ್ಕೂ ಏನು ಸಂಬಂಧ ಎಂದು ಮತ್ತೊಮ್ಮೆ ರಾಜ ಕೇಳಿದ. ರಾಜನಿಗೆ ಹೇಳಿದರೆ ಅರ್ಥವಾಗುವುದಿಲ್ಲ ಎಂದರಿತ ಮಂತ್ರಿ ನಾಳೆ ತೋರಿಸುವುದಾಗಿ ತಿಳಿಸಿದ. ಅದಕ್ಕಾಗಿ ಮಂತ್ರಿ ಮತ್ತು ರಾಜ 99 ಚಿನ್ನದ ನಾಣ್ಯಗಳನ್ನು ಒಂದು ಸಣ್ಣ ಚೀಲದಲ್ಲಿರಿಸಿ ಕ್ಷೌರಿಕನ ಗುಡಿಸಲಿನ ಮುಂದಿರಿಸಿದರು. ಅಲ್ಲೆ ಪಕ್ಕದಲ್ಲಿದ್ದ ಪೊದೆಯಲ್ಲಿ ರಾಜ ಮತ್ತು ಮಂತ್ರಿ  ಅಡಗಿ ಕುಳಿತುಕೊಂಡರು. ಕ್ಷೌರಿಕನಿಗಾಗಿ ರಾಜ ಮತ್ತು ಮಂತ್ರಿ ಕಾದು ಕುಳಿತಿದ್ದರು. ಸ್ವಲ್ಪ ಸಮಯದ ನಂತರ ಕ್ಷೌರಿಕ ತನ್ನ ಗುಡಿಸಲಿಗೆ ಹಿಂತಿರುಗಿದ್ದನು. ಈ ವೇಳೆ ಮನೆಯ ಮುಂದೆ ಸಣ್ಣ ಚೀಲ ಬಿದ್ದಿರುವುದು ಕಾಣಿಸಿತು. ಕುತೂಹಲದಿಂದ ಕ್ಷೌರಿಕ ಚೀಲವನ್ನು ತೆರೆದು ನೋಡಿದ. ಚೀಲದಲ್ಲಿ ಚಿನ್ನದ ನಾಣ್ಯಗಳು. ಒಂದೊಂದಾಗಿ ಎಣಿಸಲು ಪ್ರಾರಂಭಿಸಿದ ಬರೋಬ್ಬರಿ 99 ನಾಣ್ಯಗಳು. ಆದರೆ ಕ್ಷೌರಿಕ ಮತ್ತೆ ಮತ್ತೆ ಎಣಿಸುತ್ತಿದ್ದ. ರಾತ್ರಿಯಿಂದ ಬೆಳಗಿನ ತನಕ ಕ್ಷೌರಿಕ ತನಗೆ ಸಿಕ್ಕಿರುವ ನಾಣ್ಯಗಳನ್ನು ಎಣಿಸುತ್ತಲೇ ಇದ್ದ. ಮರುದಿನ ರಾಜ ಕೂದಲ್ ಕಟ್ ಮಾಡಲು ಕ್ಷೌರಿಕನನ್ನು ಅರಮನೆಗೆ ಕರೆಸಿದ. ಆದರೆ ಯಾವಾಗಲೂ ಖುಷಿಯಿಂದ ಬರುತ್ತಿದ್ದ ಕ್ಷೌರಿಕನ ಮುಖದಲ್ಲಿ ಚಿಂತೆ ಮನೆ ಮಾಡಿತ್ತು. ಯಾರೊಂದಿಗೂ ಹೆಚ್ಚು ಮಾತನಾಡಿರಲಿಲ್ಲ. ಬಂದ ಕೆಲಸಗಳನ್ನು ಮುಗಿಸಿಕೊಂಡು ದಿಢೀರಣೆ ಹೊರಟು ಹೋದ. ಕ್ಷೌರಿಕನ ಮನಸ್ಸಲ್ಲಿ ಚಿನ್ನದ ನಾಣ್ಯಗಳು ತುಂಬಿತ್ತು. 99 ಇರುವ ನಾಣ್ಯಗಗಳನ್ನು 100 ಮಾಡಬೇಕೆಂಬ ಆಸೆಗಳು ಚಿಗುರೊಡೆದಿತ್ತು. ಮತ್ತಷ್ಟು ಚಿನ್ನವನ್ನು ಸಂಪಾದಿಸುವಲ್ಲಿ  ಕ್ಷೌರಿಕ ನಿರತನಾದ. ತನ್ನ ಸಂತೋಷಗಳೆಲ್ಲವೂ ಸಂಪಾದಿಸಬೇಕೆಂಬ ಕನಸಿನಲ್ಲಿ ಕಳೆದುಕೊಂಡ. ಸಂಪಾದನೆ ಹೆಚ್ಚುತ್ತಾ ಹೋದಂತೆ ಜೀವನದ ಕ್ಷಣ ಕ್ಷಣದ ಖುಷಿಗಳನ್ನು ಕ್ಷೌರಿಕ ಮರೆತಿದ್ದನು. ಹಾಗಾಗಿ  ನೆವರ್ ಫಾಲೋ ಮನಿ....ನೀವು ನಿಮ್ಮ ಜೀವನವನ್ನು ಪ್ರೀತಿಸಿ, ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಹಣವೇ ನಿಮ್ಮನ್ನು ಹುಡುಕಿ ಬರುತ್ತದೆ. ನೀವು ಹಣದ ಹಿಂದೆ ಹೋಗಬೇಡಿ ಅದುವೇ ಜೀವನವಲ್ಲ. Never follow money, do what You're Good At and the Money Will Follow you.

ಭಯ ಮತ್ತು ಆತ್ಮ ವಿಶ್ವಾಸ   
ಭಯ ಎಂಬುದು ಎಲ್ಲರಲ್ಲೂ ಇರುವ ಒಂದು ಸಹಜ ಗುಣ. ಕೆಲವರು ಮತ್ತೊಬ್ಬರೊಂದಿಗೆ ಮಾತನಾಡಲು ಭಯಪಟ್ಟರೆ, ಮತ್ತೆ ಕೆಲವರು ಇಂಟರ್​ವ್ಯೂ ಇನ್ನಿತರ ವಿಷಯಗಳಿಗೆ ಹೆದರುತ್ತಾರೆ. ಸ್ವಾಭಾವಿಕವಾಗಿ ಎಲ್ಲರೂ ಭಯದಿಂದಲೇ ಜೀವನವನ್ನು ದೂಡುತ್ತಿರುತ್ತಾರೆ. ಇವತ್ತು ಏನಾಗುತ್ತದೆ. ಇಲ್ಲ ನಾಳೆ ಏನಾಗಬಹುದು ಎಂಬುದು ಕೂಡ ಒಂದು ಭಯನೇ. ಇಂತಹ ಭಯಗಳಿಂದ  ಜೀವನ ಹಿಂದೆ ಉಳಿಯಲು ಕಾರಣವಾಗುತ್ತಿರುವುದು. ಅಮೆರಿಕದ ಅಧ್ಯಕ್ಷ ರೂಸ್ ವೆಲ್ಟ್ ಹೇಳಿದ ಒಂದು ಮಾತಿದೆ 'ನೀವು ಭಯಪಡಬೇಕಿರುವುದು ಭಯವನ್ನು ಮಾತ್ರ. ಭಯವನ್ನು ಹೊರತುಪಡಿಸಿ ನೀವು ಬೇರೆ ವಿಷಯಕ್ಕೆ ಭಯ ಪಟ್ಟರೆ ನೀವು ಭಯದಲ್ಲೇ ಕಾಲ ಕಳೆಯಬೇಕಾಗಬಹುದು'.  ಭಯ ಎಂಬುದು ಎರಡು ರೀತಿಯಲ್ಲಿರುತ್ತದೆ. ಒಂದು ನಮ್ಮ ಸಮಾಜದಿಂದ ಸೃಷ್ಟಿಯಾಗಿರುವ ಭಯ. ಅದು ಮಾಡಬೇಡಿ, ಇದು ತಪ್ಪು ಎಂಬಿತ್ಯಾದಿ ಭಯಗಳು. ಮತ್ತೊಂದು ಕಲ್ಪನೆಯಲ್ಲಿರುವ ಭಯ. ಒಂದು ಇಂಟರ್​ವ್ಯೂಗೆ ಹೋಗಬೇಕಾದರೆ ಇಲ್ಲ ಇತರೆ ಕಾರ್ಯಗಳನ್ನು ಮಾಡಬೇಕಿದ್ದರೆ ಮುಂಚಿತವಾಗಿ ನೀವೇ ಕಲ್ಪಿಸಿಕೊಳ್ಳುವ ಭಯ. ಇಂತಹ ಭಯ ಹೋಗಲಾಡಿಸಲು ಸ್ವಾಮಿ ವಿವೇಕಾನಂದರು ಒಂದು ಉಪಾಯ ಹೇಳಿದ್ದಾರೆ. ಕೊಠಡಿಯಲ್ಲಿ ನೀವು ಏಕಾಂಗಿಯಾಗಿರುವಾಗ ಕನ್ನಡಿ ನೋಡಿ ನಿಮ್ಮದೇ ಪ್ರತಿರೂಪದೊಂದಿಗೆ ಮಾತನಾಡಲು ಪ್ರಾರಂಭಿಸಿ. ಯಾರ ಮುಂದೆಯು ಮಾತನಾಡಬಲ್ಲೆ ಎಂಬ ವಿಶ್ವಾಸವಿರುವ ಕೆಲ ವಿಷಯಗಳನ್ನು ಒಂದು ಕಾಗದದಲ್ಲಿ ಬರೆದಿಟ್ಟುಕೊಳ್ಳಿ. ಕನ್ನಡಿಯಲ್ಲಿ ನಿಮ್ಮ ಕಣ್ಣುಗಳನ್ನು ದಿಟ್ಟಿಸಿ ನೋಡಿ 10-15 ಬಾರಿ ದೀರ್ಘ ಉಸಿರನ್ನು ಎಳೆದುಕೊಳ್ಳಿ. ನಂತರ ನೀವೇ ಬರೆದಿಟ್ಟ ವಿಷಯಗಳನ್ನು ಧೈರ್ಯದಿಂದ ನಿಮ್ಮ ಪ್ರತಿರೂಪದೊಂದಿಗೆ ಹೇಳಿಕೊಳ್ಳಿ. ಹೀಗೆ ನಿರಂತರ 21 ದಿನಗಳು ಮಾಡಿದರೆ ನಿಮ್ಮ ಮನೋಸ್ಥೈರ್ಯ ಹೆಚ್ಚುತ್ತದೆ. ಭಯವು ದೂರವಾಗಿ ಎಲ್ಲಿ ಬೇಕಾದರೂ ಯಾರೊಂದಿಗೂ ಮಾತನಾಡಬಲ್ಲ ಧೈರ್ಯ ನಿಮ್ಮದಾಗುತ್ತದೆ. ಅಮೆರಿಕದ ಚಿಕಾಗೋ ಸಮ್ಮೇಳನವನ್ನು ಪ್ರತಿನಿಧಿಸಿದ್ದ ಸ್ವಾಮಿ ವಿವೇಕಾನಂದರು ಅತಿರಥ ಮಹಾರಥರ ಮುಂದೆ ಅಮೆರಿಕದ ಸೋದರಿಯರೇ ಮತ್ತು ಸೋದರರೇ.... ಉತ್ಸಾಹದಿಂದ ಭಾಷಣ ಮಾಡಲು ಇಂತಹ ಆತ್ಮಸ್ಥೈರ್ಯವೇ ಕಾರಣವಾಗಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ