Happy Parsi New Year 2022: ಪಾರ್ಸಿ ಹೊಸ ವರ್ಷಾಚರಣೆ, ಏನಿದು? ಇದರ ಮಹತ್ವವೇನು?

Happy Parsi New Year 2022: ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಾರ್ಸಿ ಹೊಸ ವರ್ಷವನ್ನು ಆಚರಿಸುತ್ತಿದ್ದರೆ, ಅವರಿಗೆ ಈ ಶುಭಾಶಯಗಳ ಮೆಸೇಜ್​ ಕಳುಹಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಜನವರಿ 1 ರಂದು ಹೊಸವರ್ಷದ (New Year) ಆಚರಣೆ ಮಾಡಲಾಗುತ್ತದೆ. ಆದರೆ ಪಾರ್ಸಿ(Parsi)  ಸಮುದಾಯವು ಆಗಸ್ಟ್ 16 ರಂದು ಪಾರ್ಸಿ ಹೊಸ ವರ್ಷವನ್ನು (Parsi New Year) ಆಚರಿಸಲಾಗುತ್ತದೆ. ಇದನ್ನು ನವ್ರೋಜ್ ಎಂದೂ ಕರೆಯುತ್ತಾರೆ, ಇದು ಜೊರಾಸ್ಟ್ರಿಯನ್ ಕ್ಯಾಲೆಂಡರ್‌ನ ಮೊದಲ ದಿನವಾಗಿದ್ದು, ಹೊಸ ವರ್ಷವನ್ನಾಗಿ ಆಚರಿಸಲಾಗುತ್ತದೆ, ಇದನ್ನು ಶಾಹೆನ್‌ಶಾಹಿ ಕ್ಯಾಲೆಂಡರ್ ಎಂದೂ ಸಹ ಕರೆಯುತ್ತಾರೆ. ಈ ದಿನದಂದು, ಭಾರತದಾದ್ಯಂತ ಪಾರ್ಸಿ ಕುಟುಂಬಗಳು ಪ್ರಾರ್ಥನೆ ಸಲ್ಲಿಸಲು ತಮ್ಮ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಫರ್ಚಾ, ಬೆರ್ರಿ ಪುಲಾವ್ ಮತ್ತು ಜರ್ದಲೂ ಚಿಕನ್ ಸೇರಿದಂತೆ ಹಲವಾರು ಸಾಂಪ್ರದಾಯಿಕ ಪಾರ್ಸಿ ಆಹಾರಗಳನ್ನು ಸಹ ತಯಾರಿಸಲಾಗುತ್ತದೆ.  

ಪಾರ್ಸಿ ಹೊಸ ವರ್ಷದ ಇತಿಹಾಸ 

ಪಾರ್ಸಿ ಹೊಸ ವರ್ಷದ ಆರಂಭವು ಸುಮಾರು 3,5000 ವರ್ಷಗಳ ಹಿಂದಿನದು ಎಂದು ಹೇಳಲಾಗುತ್ತದೆ. ಪ್ರವಾದಿ ಜರಾತುಸ್ತ್ರರು ಇರಾನ್‌ನ ಪರ್ಷಿಯಾದಲ್ಲಿ ಝೋರಾಸ್ಟ್ರಿಯನ್ ಧರ್ಮವನ್ನು ಸ್ಥಾಪಿಸಿದ ಸಮಯ ಇದಾಗಿದ್ದು, ಈ ಸಮಯದಿಂದ ಪಾರ್ಸಿ ಹೊಸವರ್ಷವನ್ನು ಆಚರಿಸಲಾಗುತ್ತದೆ. ಜೊರಾಸ್ಟ್ರಿಯನ್ ತತ್ವಶಾಸ್ತ್ರದ ಪ್ರಕಾರ ಈ ದಿನವು ವಿಶ್ವದಲ್ಲಿರುವ ಎಲ್ಲದರ ವಾರ್ಷಿಕ ನವೀಕರಣ ಮಾಡುವ ದಿನವಾಗಿದೆ. ನವ್ರೋಜ್ ಎಂಬ ಪದವು ಪಾರ್ಸಿ ಕ್ಯಾಲೆಂಡರ್ ಅನ್ನು ಪರಿಚಯಿಸಿದ ಎಂದು ನಂಬಲಾಗುವ ಪುರಾತನ ಸಸಾನಿಯನ್ ರಾಜ ಜಮ್ಶೆಡ್​ಗೆ ಸಂಬಂಧಪಟ್ಟಿದ್ದು ಎನ್ನಲಾಗುತ್ತದೆ. ಹೀಗಾಗಿ, ಈ ಹಬ್ಬವನ್ನು ಜಮ್ಶೆಡ್-ಇ-ನೂರೋಜ್ ಎಂದೂ ಸಹ ಕರೆಯುತ್ತಾರೆ.

 ಪಾರ್ಸಿ ಹೊಸ ವರ್ಷದ ಮಹತ್ವ

ಪಾರ್ಸಿ ಹೊಸ ವರ್ಷವನ್ನು ಜೊರಾಸ್ಟ್ರಿಯನ್ ಕ್ಯಾಲೆಂಡರ್‌ನ ಮೊದಲ ತಿಂಗಳ ಫರ್ವರ್ಡಿನ್‌ನ ಮೊದಲ ದಿನದಂದು ಆಚರಿಸಲಾಗುತ್ತದೆ. ಈ ದಿನ ವಾರ್ಷಿಕ ವಸಂತ ವಿಷುವತ್ ಸಂಕ್ರಾಂತಿಯ ಪ್ರಾರಂಭದ ಸಂಕೇತವಾಗಿದೆ. ಹೇಳಬೇಕೆಂದರೆ ಇದು ಮಾರ್ಚ್ 21 ರಂದು ಬರುತ್ತದೆ. ಆದರೆ ನಮ್ಮ ದೇಶದ ಪಾರ್ಸಿಗಳು ತಮ್ಮ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜೊರಾಸ್ಟ್ರಿಯನ್ ಕ್ಯಾಲೆಂಡರ್ ಅನ್ನು ಅನುಸರಿಸುವುದರಿಂದ, ಈ ದಿನವನ್ನು ಜುಲೈ ಅಥವಾ ಆಗಸ್ಟ್‌ನಲ್ಲಿ ಆಚರಿಸುತ್ತಾರೆ.

ಇದನ್ನೂ ಓದಿ: ಭಾರತದ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಪುಸ್ತಕಗಳು ಇವು, ಬಿಡುವಾದಾಗ ನೀವೂ ಓದಿ

ಪಾರ್ಸಿ ಹೊಸ ವರ್ಷದ ಆಚರಣೆ ಮಾಡುವುದು ಹೇಗೆ?

ಪಾರ್ಸಿ ಜನರು ಈ ದಿನವನ್ನು ಮಂಗಳಕರವೆಂದು ನಂಬುತ್ತಾರೆ ಮತ್ತು ಪಾರ್ಸಿ ಹೊಸ ವರ್ಷದ ಸಂದರ್ಭದಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ. ಈ ದಿನ ವಿವಿಧ ಅಡುಗೆಗಳನ್ನು ತಯಾರಿಸಲಾಗುತ್ತದೆ. ಜನರು ಈ ದಿನವನ್ನು ದೇಹ, ಆತ್ಮ ಮತ್ತು ಮನಸ್ಸಿನ ಶುದ್ಧೀಕರಣದ ದಿನವಾಗಿ ಆಚರಿಸುತ್ತಾರೆ. ಹೀಗಾಗಿ, ಅವರು ತಮ್ಮ ಮನೆ, ಬಟ್ಟೆ ಮತ್ತು ವಸ್ತುಗಳನ್ನು ಸ್ವಚ್ಛಗೊಳಿಸುತ್ತಾರೆ. ಜನರು ದತ್ತಿ ದಾನಗಳನ್ನೂ ಮಾಡುತ್ತಾರೆ. ನವ್ರೋಜ್ ದಿನದಂದು ಪಾರ್ಸಿಗಳು ಅಗ್ನಿ ದೇವಾಲಯಕ್ಕೆ ಭೇಟಿ ನೀಡಿ, ಪ್ರಾರ್ಥಿಸುತ್ತಾರೆ.

ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಪಾರ್ಸಿ ಹೊಸ ವರ್ಷವನ್ನು ಆಚರಿಸುತ್ತಿದ್ದರೆ, ಅವರಿಗೆ ಈ ಶುಭಾಶಯಗಳ ಮೆಸೇಜ್​ ಕಳುಹಿಸಿ.

ನಾವು ಪಾರ್ಸಿ ಹೊಸ ವರ್ಷವನ್ನು ಆಚರಿಸುತ್ತಿರುವ ಈ ಸಂತಸದ ಸಮಯದಲ್ಲಿ ನಾನು ಬಹಳ ಪ್ರೀತಿಯಿಂದ ನನ್ನ ಶುಭಾಶಯಗಳನ್ನು ಕಳುಹಿಸುತ್ತಿದ್ದೇನೆ. ಪಾರ್ಸಿ ಹೊಸ ವರ್ಷದ ಶುಭಾಶಯಗಳು ಮತ್ತು ನವ್ರೋಜ್ ಮುಬಾರಕ್ .

ಈ ನವ್ರೋಜ್ ನಿಮಗೆ ಪ್ರಕಾಶಮಾನವಾದ ದಿನಗಳನ್ನು ತರಲಿ. ನೆನಪಿನಲ್ಲಿ ಉಳಿಯುವ ಆಚರಣೆಗಳೊಂದಿಗೆ ನೀವು ಈ ಸಂದರ್ಭವನ್ನು ಆನಂದಿಸಬಹುದು. ನಿಮಗೆ ನವ್ರೋಜ್ ಮುಬಾರಕ್

ಇದನ್ನೂ ಓದಿ: ಹೀಗೆ ಕ್ಲೀನ್ ಮಾಡಿದ್ರೆ ಅಡುಗೆ ಮನೆ ಕಪಾಟು ಪಳ ಪಳ ಅಂತ ಹೊಳೆಯುತ್ತೆ

ಈ ಹೊಸ ವರ್ಷವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಬಹಳಷ್ಟು ಸಂತೋಷವನ್ನು ತರಲಿ. ನಿಮಗೆ ನವರೋಜ್ ಶುಭಾಶಯಗಳು.
Published by:Sandhya M
First published: