Happy New Year: ಹೊಸ ವರ್ಷದ ಶುಭಾಶಯ ಹಂಚಿಕೊಳ್ಳಲು ಇಲ್ಲಿದೆ ನೋಡಿ ಹೊಸ ಸಂದೇಶಗಳು..!

ಹೊಸ ವರ್ಷದ ಆಚರಣೆಗಳನ್ನು ಸ್ಮರಣೀಯವಾಗಿಸಲು ಜನರು ತಮ್ಮ ಸ್ನೇಹಿತರು, ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ಹೋಗುತ್ತಾರೆ. ಮನೆಯಲ್ಲಿಯೇ ಹೊಸ ವರ್ಷವನ್ನು ಅದ್ವಿತೀಯವಾಗಿ ಆಚರಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಪರಸ್ಪರ ಸಂದೇಶಗಳನ್ನು ಹಂಚಿಕೊಂಡು ಖುಷಿಪಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೊಸ ವರ್ಷಕ್ಕೆ (New Year) ಇನ್ನೇನು ಕೆಲವೇ ಸಮಯಗಳ ಕ್ಷಣಗಣನೆ ಬಾಕಿ ಇದೆ. 2021ರ ವರ್ಷ ಕೊನೆಗೊಳ್ಳುತ್ತಿದ್ದಂತೆಯೇ ಜನರು ಹೊಸ ಹೊಸ ಭರವಸೆಗಳು ಹಾಗೂ ಹೊಸ ಆರಂಭದತ್ತ (Beginnings) ಮುಖ ಮಾಡುವುದು ವಾಡಿಕೆ. ನಿಮ್ಮ ಗುರಿಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ನಿರ್ಧಾರಗಳನ್ನು ಈ ಸಮಯದಲ್ಲಿ ಮಾಡುವುದು ಅತ್ಯುತ್ತಮವಾಗಿದೆ. ಹೊಸ ಆರಂಭ ಎಂಬುದು ಯಾವುದೇ ಕೆಲಸ ಆರಂಭಿಸಲು ಶುಭಸಂಕೇತವಾಗಿದೆ. ಪ್ರತಿ ವರ್ಷದ ಆರಂಭವು ಸಾಕಷ್ಟು ಧನಾತ್ಮಕ ಚಿಂತನೆಗಳು ಹಾಗೂ ಉತ್ತಮ ಶಕ್ತಿಯ ಅಂಶ ಒದಗಿಸುತ್ತವೆ. ಹೊಸ ಉತ್ಸಾಹ (New excitement ) ಮೈಗೂಡಿಸುವಂತೆ ಮಾಡುತ್ತದೆ. ಅಂತೆಯೇ ಹೊಸ ವರ್ಷದ ಆಚರಣೆಗಳನ್ನು ಸ್ಮರಣೀಯವಾಗಿಸಲು ಜನರು ತಮ್ಮ ಸ್ನೇಹಿತರು, ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ಹೋಗುತ್ತಾರೆ. ಮನೆಯಲ್ಲಿಯೇ ಹೊಸ ವರ್ಷವನ್ನು ಅದ್ವಿತೀಯವಾಗಿ ಆಚರಿಸಿಕೊಳ್ಳುತ್ತಾರೆ (Celebrations). ಇಲ್ಲದಿದ್ದರೆ ಪರಸ್ಪರ ಸಂದೇಶಗಳನ್ನು(Sharing messages) ಹಂಚಿಕೊಂಡು ಖುಷಿಪಡುತ್ತಾರೆ.

ಶುಭನುಡಿ ಇಲ್ಲಿದೆ
ಹೊಸ ವರ್ಷ ಆಚರಿಸಲು ಪ್ರತಿಯೊಬ್ಬರೂ ತಮ್ಮದೇ ಆದ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೂ, ಹೊಸ ವರ್ಷದ ದಿನ ಅತ್ಯಂತ ಸ್ಮರಣೀಯವಾದ ಸಮಯ ನೀಡುವುದು ಹೃದಯಸ್ಪರ್ಶಿಯಾದ ಸಂದೇಶಗಳು, ಉಲ್ಲೇಖಗಳಾಗಿವೆ. ಹಾಗಿದ್ದರೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಬಹುದಾದ ಕೆಲವೊಂದು ಸಂದೇಶಗಳು ಹಾಗೂ ಶುಭನುಡಿಗಳನ್ನು ನೀಡುತ್ತಿದ್ದೇವೆ.

ಇದನ್ನೂ ಓದಿ: New Year Party: ಹೊಸವರ್ಷವನ್ನು ನೀವು ಹೀಗೂ ಆಚರಿಸಬಹುದು

ಹೊಸ ವರ್ಷ 2022ರ ಸಂದೇಶಗಳು:
ಭಗವಂತನ ಶುಭಾಶೀರ್ವಾದ ತುಂಬಿದ ವರ್ಷವಾಗಿರಲಿ ಎಂದು ನಾನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು 2022
ಈ ವರ್ಷ ನಿಮಗೆ ಯಶಸ್ಸು ತರಲಿ ಎಂದು ಹಾರೈಸುತ್ತೇನೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಂತೋಷ ಹಾಗೂ ಯಶಸ್ಸು ನಿಮ್ಮದಾಗಿರಲಿ. ಹೊಸ ವರ್ಷದ ಶುಭಾಶಯಗಳು 2022
2022ರಲ್ಲಿ ಆರೋಗ್ಯ, ಸಂತೋಷ ಹಾಗೂ ನೆಮ್ಮದಿ ನಿಮ್ಮದಾಗಲಿ
ಹೊಸ ವರ್ಷವು ನಿಮಗೆ ಶಾಂತಿ, ಸಂತೋಷ ತರಲಿ.
ಈ ವರ್ಷ ನಾನು ಮಾಡಿದ ಅತ್ಯುತ್ತಮ ಕೆಲಸವೆಂದರೆ ನಿನ್ನೊಂದಿಗೆ ಅನುರಕ್ತನಾಗಿರುವುದು. 2022ರಲ್ಲಿ ಜೊತೆಯಾಗಿ ಇನ್ನಷ್ಟು ಸ್ಮರಣೀಯ ನೆನಪುಗಳನ್ನು ಮಾಡೋಣ
ಹೊಸ ವರ್ಷವು ಹೊಸ ಅವಕಾಶಗಳನ್ನು ತರುತ್ತದೆ. ಆದರೆ ಎಲ್ಲಾ ಬದಲಾವಣೆಗಳು ನೀನು ನನ್ನೊಂದಿಗೆ ಇರುವಾಗಲೇ ನಡೆದಿರುವುದಕ್ಕೆ ನಾನು ಕೃತಜ್ಞನಾಗಿರುವೆ
ಒಂದು ಅಸಾಧಾರಣ ವರ್ಷದಲ್ಲಿ, ನಿಮ್ಮ ಅಸಾಧಾರಣ ಸ್ನೇಹಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಧನ್ಯವಾದ. ಮತ್ತು ಹೊಸ ಆರಂಭದ ಶುಭಾಶಯಗಳು!
ನನ್ನ ನಿರ್ಧಾರಗಳನ್ನು ನನ್ನ ಮೇಲೆ ವಿನಿಯೋಗಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿರುವೆ. ಬದಲಿಗೆ ನೀವು ನನಗೆ ತೋರಿದ ಪ್ರೀತಿಗೆ ಬದಲಿಯಾಗಿ ನಾನು ಅದನ್ನು ನೀಡಲು ಬಯಸಿರುವೆ ಹೊಸ ವರ್ಷದ ಶುಭಾಶಯಗಳು!
ಕಳೆದ ವರ್ಷವನ್ನು ಸ್ಮರಣೀಯ ನೆನಪುಗಳಿಂದ ನೆನಪು ಮಾಡಿಕೊಳ್ಳೋಣ ಹೊಸ ವರ್ಷದ ಶುಭಾಶಯಗಳು

ಹೊಸ ವರ್ಷ 2022ರ ಪ್ರಸಿದ್ಧ ಉಲ್ಲೇಖಗಳು:
ಇದು ಹೊಸ ವರ್ಷ. ಹೊಸ ಆರಂಭ. ಪ್ರತಿಯೊಂದು ಬದಲಾಗುತ್ತದೆ – ಟೇಲರ್ ಸ್ವಿಫ್ಟ್
ಬಹುಶಃ ಈ ವರ್ಷ ನಮ್ಮಲ್ಲಿನ ನ್ಯೂನತೆಗಳನ್ನು ಹುಡುಕದಯೇ ನಮ್ಮಲ್ಲಿರುವ ಸಂಭಾವ್ಯತೆಗಳನ್ನು ಉತ್ತೇಜಿಸಬೇಕು – ಎಲ್ಲೆನ್ ಗುಡ್ಮನ್
ನಿಮ್ಮ ಉತ್ಸಾಹವನ್ನು ಅನುಸರಿಸಿ, ಕರ್ತವ್ಯ ನಿಷ್ಟೆಯಲ್ಲಿ ನಂಬಿಕೆಯನ್ನಿಡಿ ಹಾಗೂ ನಿಮ್ಮ ಕನಸುಗಳನ್ನು ಬೆನ್ನಟ್ಟುವ ಅಗತ್ಯವಿಲ್ಲ. ಅವು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ – ರಾಂಡಿ ಪಾಶ್
ನಿಮ್ಮ ಯಶಸ್ಸು ಹಾಗೂ ಸಂತಸ ನಿಮ್ಮಲ್ಲಿಯೇ ಅಡಗಿದೆ. ಸಂತೋಷವಾಗಿರಲು ಕಷ್ಟಗಳನ್ನು ಪರಿಹರಿಸಿ, ನಿಮ್ಮ ತೊಂದರೆಗಳ ವಿರುದ್ಧ ನೀವು ಅಜೇಯರಾಗಿರುತ್ತೀರಿ - ಹೆಲೆನ್ ಕೆಲ್ಲರ್
ನಾಳೆ ಎಂಬುದು 365 ಪುಟದ ಪುಸ್ತಕದ ಮೊದಲ ಖಾಲಿ ಹಾಳೆಯಾಗಿದೆ. ಒಳ್ಳೆಯ ಅಂಶವನ್ನೇ ಇಲ್ಲಿ ಬರೆಯಿರಿ - ಬ್ರಾಡ್ ಪೈಸ್ಲಿ
ಈ ವರ್ಷದಲ್ಲಿಯೂ ನೀವು ತಪ್ಪುಗಳನ್ನು ಮಾಡುತ್ತೀರಿ ಎಂದೇ ನಾನು ಭಾವಿಸುತ್ತೇನೆ. ಏಕೆಂದರೆ ನೀವು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ ನೀವು ಏನೋ ಮಾಡುತ್ತಿದ್ದೀರಿ ಎಂದಾಗಿದೆ - ನೀಲ್ ಗೈಮನ್
ಕಳೆದ ವರ್ಷದ ಪದಗಳು ಕಳೆದ ವರ್ಷದ ಭಾಷೆಗೆ ಸೇರಿವೆ. ಮತ್ತು ಮುಂದಿನ ವರ್ಷದ ಮಾತುಗಳು ಮತ್ತೊಂದು ಧ್ವನಿಗಾಗಿ ಕಾಯುತ್ತಿವೆ. -ಟಿ.ಎಸ್. ಎಲಿಯಟ್
ನಾನು ಹೊಸ ವರ್ಷಕ್ಕಾಗಿ ನಿರ್ಣಯಗಳನ್ನು ಮಾಡುವುದಿಲ್ಲ, ಆದರೆ ವಿಷಯಗಳನ್ನು ದೃಶ್ಯೀಕರಿಸಿ ಮತ್ತು ಯೋಜಿಸುತ್ತೇನೆ. - ಅಮಲಾ ಅಕ್ಕಿನೇನಿ

ಇದನ್ನೂ ಓದಿ: New Year Party: ರಾಜ್ಯದ ಯಾವ ಊರಲ್ಲಿ ಇವತ್ತು ರಾತ್ರಿ ಪಾರ್ಟಿ ಮಾಡೋಕೆ ಪರ್ಮಿಶನ್? ಎಷ್ಟು ಗಂಟೆಗೆ ರೆಸ್ಟೊರೆಂಟ್-ಬೀಚ್ ಕ್ಲೋಸ್? ಫುಲ್ ಡೀಟೈಲ್ಸ್ ಇಲ್ಲಿದೆ

ಜೀವನವು ಒಂದು ಅವಕಾಶ, ಅದರಿಂದ ಪ್ರಯೋಜನ ಪಡೆಯಿರಿ. ಜೀವನವು ಸೌಂದರ್ಯವಾಗಿದೆ, ಅದನ್ನು ಮೆಚ್ಚಿಕೊಳ್ಳಿ. ಜೀವನವು ಒಂದು ಕನಸು, ಅದನ್ನು ನನಸಾಗಿಸಿ.—ಮದರ್ ಥೆರೇಸಾ
ನಾವೆಲ್ಲರೂ ಪ್ರತಿ ವರ್ಷವೂ ವಿಭಿನ್ನ ವ್ಯಕ್ತಿಯಾಗಿದ್ದೇವೆ. ನಮ್ಮ ಜೀವನದುದ್ದಕ್ಕೂ ನಾವು ಒಂದೇ ವ್ಯಕ್ತಿ ಎಂಬುದಾಗಿ ನಾನು ಭಾವಿಸುವುದಿಲ್ಲ." - ಸ್ಟೀವನ್ ಸ್ಪೀಲ್ಬರ್ಗ್
ಯಾವುದೇ ಕೆಲಸದ ಪ್ರಮುಖ ಭಾಗ ಆರಂಭವಾಗಿದೆ - ಆಲ್ಬರ್ಟ್ ಐನ್‌ಸ್ಟೈನ್
ಹೊಸ ವರ್ಷವನ್ನು ನೋಡಲು ಒಬ್ಬ ಆಶಾವಾದಿ ಮಧ್ಯರಾತ್ರಿಯವರೆಗೂ ಎಚ್ಚರವಾಗಿರುತ್ತಾನೆ. ಒಬ್ಬ ನಿರಾಶಾವಾದಿ ಹಳೆಯ ವರ್ಷವು ನಿರ್ಗಮಿಸುವುದನ್ನು ಖಚಿತಪಡಿಸಿಕೊಳ್ಳಲು ಎಚ್ಚರವಾಗಿರುತ್ತಾನೆ." -ಬಿಲ್ ವಾನ್
Published by:vanithasanjevani vanithasanjevani
First published: