Mother’s Day 2019: ಅಪ್ಪ ಅಂದರೆ ಆಕಾಶ, ಅಮ್ಮ ಅಂದ್ರೆ...? ಒಮ್ಮೆ ಈ ವಿಡಿಯೋ ನೋಡಿ

Happy Mothers Day 2019: ಅಮ್ಮನ ಕಾಲಡಿಯಲ್ಲಿ ಸ್ವರ್ಗವಿದೆ ಎಂಬ ಪ್ರವಾದಿ ಮುಹಮ್ಮದ್​ ಅಮೃತವಾಣಿಯು ತಿಳಿಸಿರುವ ಇದನ್ನೇ. ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಅಮ್ಮನ ಆರೈಕೆ ಮಾಡದಿದ್ದರೆ ಸ್ವರ್ಗ ಎಂಬುದು ನಿನಗಿಲ್ಲ ಎಂಬುದು ಇದರ ಸಂಕ್ಷಿಪ್ತ ಅರ್ಥ.

zahir | news18
Updated:May 12, 2019, 7:51 AM IST
Mother’s Day 2019: ಅಪ್ಪ ಅಂದರೆ ಆಕಾಶ, ಅಮ್ಮ ಅಂದ್ರೆ...? ಒಮ್ಮೆ ಈ ವಿಡಿಯೋ ನೋಡಿ
@Freepik.com
zahir | news18
Updated: May 12, 2019, 7:51 AM IST
ಅಪ್ಪ ಅಂದರೆ ಥಟ್ಟನೆ ಬರುವ ಉತ್ತರ ಆಕಾಶ. ಅಮ್ಮ ಅಂದರೆ ಹೂಂ ಹೂಂ ಪದಗಳಿಗೆ ನಿಲುಕದ ಒಂದು ಸುಂದರ ಅನುಭವ. ಅಮ್ಮ ಅಂದರೆ ಅಕ್ಕರೆ , ಮಮತೆ , ಅದೊಂದು ಬಾವ ,ಅಮ್ಮ ಅಂದರೆ ಜಗತ್ತಿನ ಸರ್ವ ಶ್ರೇಷ್ಠ ದೇವರು ಹೀಗೆ ವರ್ಣಿಸುತ್ತಲೇ ಹೋಗಬಹುದು.

ನನ್ನ ಅಮ್ಮನ ಪ್ರಾರ್ಥನೆಗಳನ್ನು ನಾನು ಸದಾ ನೆನೆಪಿಸಿಕೊಳ್ಳುತ್ತಿರುತ್ತೇನೆ ಮತ್ತು ಅದು ಸದಾಕಾಲವೂ ನನ್ನನ್ನು ಹಿಂಬಾಲಿಸುತ್ತದೆ. ಆ ಪಾರ್ಥನೆಗಳೇ ನನ್ನ  ಜೀವನದ ಬೆಂಗಾವಲು ಎಂದು ಹಿಂದೊಮ್ಮೆ ಅಮೆರಿಕನ್ ಅಧ್ಯಕ್ಷ ಅಬ್ರಹಾಂ ಲಿಂಕನ್​ ಹೇಳಿರುವುದು ಇದೇ ತಾಯಿಯ ಕುರಿತು.

ಅಮ್ಮನ ಕಾಲಡಿಯಲ್ಲಿ ಸ್ವರ್ಗವಿದೆ ಎಂಬ ಪ್ರವಾದಿ ಮುಹಮ್ಮದ್​ ಅಮೃತವಾಣಿಯು ತಿಳಿಸಿರುವ ಇದನ್ನೇ. ನೀವು ಎಷ್ಟೇ ಎತ್ತರಕ್ಕೆ ಬೆಳೆದರೂ ಅಮ್ಮನ ಆರೈಕೆ ಮಾಡದಿದ್ದರೆ ಸ್ವರ್ಗ ಎಂಬುದು ನಿನಗಿಲ್ಲ ಎಂಬುದು ಇದರ ಸಂಕ್ಷಿಪ್ತ ಅರ್ಥ. ಒಂಭತ್ತು ತಿಂಗಳು ತನ್ನ ಉದರದಲ್ಲಿ ಹೊತ್ತು, ಹೆತ್ತು ಲಾಲಿಸಿ ಪಾಲಿಸಿದ ಅಮ್ಮಂದಿರನ್ನು ದಿನಕ್ಕೆ ನಾವು ಎಷ್ಟು ಬಾರಿ ನೆನಪಿಸಿಕೊಳ್ಳುತ್ತಿದ್ದೀವಿ?, ತನ್ನ ಆರೋಗ್ಯವನ್ನೇ ಲೆಕ್ಕಿಸದೇ ಪ್ರಸವವೇದನೆಯನ್ನು ಒಬ್ಬಳೇ ನುಂಗಿ ನಿಮಗೆ ಜನ್ಮ ನೀಡಿದ ಕರುಣಾಮೂರ್ತಿಯ ಮುಖದಲ್ಲಿ ನೀವೆಷ್ಟು ಬಾರಿ ಮಂದಹಾಸ ಮೂಡಿಸಿದ್ದೀರಿ ಎಂಬುದನ್ನು ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಿ.



ಅದೆಲ್ಲಿದ್ದರೂ ಸದಾ ತಮ್ಮ ಮಕ್ಕಳಿಗಾಗಿ ಪ್ರಾರ್ಥಿಸುವ, ಮಕ್ಕಳನ್ನೇ ಸರ್ವಸ್ವ ಎಂದು ಬದುಕುವ, ಜೀವನದುದ್ದಕ್ಕೂ ಎಲ್ಲರಿಗಾಗಿ ತ್ಯಾಗ ಮಾಡುವ ಏಕೈಕ ತ್ಯಾಗಮಯಿ ಅಂದರೆ ಅದು ಅಮ್ಮ ಮಾತ್ರ.  ತಾಯ್ತನ ಎಂಬ ಅವರ್ಣನೀಯ ಅನುಬಂಧದಿಂದ ಪ್ರಾರಂಭವಾಗುವ ಪ್ರೀತಿ ಕೊನೆವರೆಗೂ ತನ್ನ ಮಕ್ಕಳಿಗಾಗಿ ಮಿಡಿಯುವ ಹೃದಯ ಇದೆಯಲ್ಲವೇ ಅದುವೇ ಅಮ್ಮ.


Loading...

ನಿಮ್ಮ ಬಳಿ ಹೇಳಲೂ ಸಾಧ್ಯವಾಗದಷ್ಟು ಸಂಪತ್ತು ಇರಬಹುದು. ಲೆಕ್ಕವಿಡಲಾಗದಷ್ಟು ಚಿನ್ನಾಭರಣಗಳಿರಬಹುದು. ನಾನು ನಿಮಗಿಂತಲೂ ಶ್ರೀಮಂತ. ಏಕೆಂದರೆ ನನ್ನ ಬಳಿ ತಾಯಿ ಇದ್ದಾರೆ ಎಂದು  ಸ್ಟಿಕ್‌ಲ್ಯಾಂಡ್ ಗಿಲಿನ್ ಹೇಳಿರುವುದು ಇದೇ ಕಾರಣಕ್ಕೆ. ಮೇ 12 ವಿಶ್ವ ಅಮ್ಮಂದಿರ ದಿನ. ಒಂದು ಬಾರಿ ನಿಮ್ಮ ಅಮ್ಮಂದಿರಿಗೆ ಕರೆ ಮಾಡಿ. ಪ್ರೀತಿಯಿಂದ ವಿಶಸ್ ತಿಳಿಸಿ. ಸಂತಸ ಹಂಚಿಕೊಳ್ಳಿ, ಸಾಧ್ಯವಾದರೆ ಏನಾದರೊಂದು ಉಡುಗೊರೆ ಕೊಡಿಸಿ, ಏಕೆಂದರೆ ಕೇಳಿ ಪಡೆಯುವುದಕ್ಕಿಂತ ಮಗ-ಮಗಳು ಕೊಡಿಸಿದ್ದಾರೆ ಎಂದೇಳುವಾಗ ಅಮ್ಮನ ಮುಖದಲ್ಲಿ ಅರಳುವ ನಗುವಿದೆಯಲ್ಲಾ ಅದುವೇ ನಿಮ್ಮ ಸಾಧನೆ.

First published:May 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...