ಬಳುಕುವ ಬಳ್ಳಿಯಂತಿರುವ ನಟಿ ಸಾರಾ ಅಲಿ ಖಾನ್ (Sra Ali Khan)ಅವರನ್ನು ನೋಡುವ ಹುಡುಗಿಯರೂ ನಾವೂ ಸಪೂರವಾಗಿದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ಅಂದಕೊಳ್ಳಬಹುದು. ಸಿನಿಮಾಗಳಲ್ಲಿ ತುಂಡುಗೆ ತೊಟ್ಟು ಪಡ್ಡೆಗಳ ನಿದ್ದೆ ಕದಿಯುವ ಈ ನಟಿ ಸಿನಿರಂಗಕ್ಕೆ ಎಂಟ್ರಿ ಕೊಡುವ ಮೊದಲು ಹೀಗೆ ಇರಲೇ ಇಲ್ಲ. ಸಾರಾ ಅಲಿ ಖಾನ್ ಆಗಾಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ತಮ್ಮ ಹಳೇ ಫೋಟೋ ಹಾಗೂ ವಿಡಿಯೋಗಳನ್ನು ನೀವು ಗಮನಿಸಿದ್ದರೆ ನಿಮಗೆ ತಿಳಿಯುತ್ತದೆ. ಸಾರಾಈ ಹಿಂದೆ ಸಿಕ್ಕಾಪಟ್ಟೆ ದಪ್ಪಗಿದ್ದರು. ಅವರು ಸ್ನೇಹಿತರ ಜೊತೆ ಹಾಗೂ ತಮ್ಮ ಇಬ್ರಾಹಿಂ ಅಲಿ ಖಾನ್ ಜತೆ ಮಾಡಿರುವ ಕೆಲವು ಹಳೇ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಆಗಾಗ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹಳೇ ವಿಡಿಯೋ ಹಾಗೂ ಚಿತ್ರಗಳನ್ನು ಶೇರ್ ಮಾಡುತ್ತಿರುತ್ತಾರೆ ಈ ನಟಿ. ಇಂದು ಈ ನಟಿಯ ಹುಟ್ಟುಹಬ್ಬ (Happy Birthday).
ಸಾರಾ ಅಲಿ ಖಾನ್ ಜನಿಸಿದ್ದು 1995ರ ಆಗಸ್ಟ್ 12ರಂದು. ಇಂದು ಹುಟ್ಟಹಬ್ಬದ ಸಂಭ್ರಮದಲ್ಲಿರುವ ಸಾರಾ ಅಲಿ ಖಾನ್. 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭ ಕೋರುತ್ತಿದ್ದಾರೆ. ಇನ್ನು ಸಾರಾ ಸಹ ತಮ್ಮ ಬಾಲ್ಯದ ಕೆಲವು ಫೋಟೋಗಳನ್ನು ಸೇರಿಸಿ ಮಾಡಿರುವ ಒಂದು ಕ್ಯೂಟ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೆರ್ ಮಾಡಿದ್ದಾರೆ.
ಸಾಮಾನ್ಯವಾಗಿ ಸ್ಟಾರ್ ಕಿಡ್ಗಳು ಸಿನಿಮಾಗೆ ಬರುವ ಮುನ್ನ ಸ್ಥೂಲಕಾಯಿಗಳಾಗಿರುವ ಚಿತ್ರಗಳನ್ನು ನೋಡಿರುತ್ತೀರಿ. ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾದಾಗಿನಿಂದಂತೂ ಇವೆಲ್ಲ ಯಾರಿಂದಲೂ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಆದರೆ ಸಾರಾ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ಅಷ್ಟಾಗಿ ಮುಚ್ಚುಮರೆ ಮಾಡುವುದಿಲ್ಲ.
ಇದನ್ನೂ ಓದಿ: Allu Arha: ಶಾಕುಂತಲಂ ಸಿನಿಮಾ ಶೂಟಿಂಗ್ ಮುಗಿಸಿದ ಅಲ್ಲು ಅರ್ಹಾ: ಚಿತ್ರತಂಡದ ಕಡೆಯಿಂದ ಸಿಕ್ತು ಸಖತ್ ಪಾರ್ಟಿ..!
26 ವರ್ಷದ ಸಾರಾ ಅಲಿ ಖಾನ್ ಸದ್ಯ ಬೇಡಿಕೆಯಲ್ಲಿರುವ ನಟಿ. ಸಿನಿಮಾಗೆ ಬರುವ ಮೊದಲು 96 ಕೆಜಿ ತೂಕವಿದ್ದರಂತೆ. ಈ ಹಿಂದೆಯೇ ಅವರು ತಮ್ಮ ಹಳೇ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಎಷ್ಟು ದಪ್ಪಗಿದ್ದರು ಎಂದು ತಿಳಿಯುತ್ತದೆ.
96 ಕೆ.ಜಿ.ಯಿಂದ ಬಳುಕುವ ಬಳ್ಳಿಯಂತಾಗಲು ಸಾರಾ ಅಲಿ ಖಾನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಾರಾ ನಟಿಯಾಗಲು ಸಿನಿಮಾ ಅವಕಾಶ ಸಂಪಾದಿಸಿಕೊಳ್ಳುವ ಮೊದಲು ಎಷ್ಟೆಲ್ಲ ಬೆವರು ಸುರಿಸಿದ್ದಾರೆ. ಅವರ ಫಿಟ್ನೆಸ್ ಜರ್ನಿ ಹೇಗಿತ್ತು ಎಂಬುದನ್ನು ಒಂದು ಪುಟ್ಟ ವಿಡಿಯೋ ಮೂಲಕ ತೋರಿಸಿದ್ದರು.
ಸಾರಾ ಅಲಿ ಖಾನ್ ಸದಾ ಚಟಪಟ ಮಾತನಾಡುತ್ತಾ ಸುತ್ತಲೂ ಇರುವವರ ಮೊಗದಲ್ಲಿ ನಗು ಮೂಡಿಸುತ್ತಾ ಇರುವ ಬಬ್ಲಿ ಹುಡುಗಿ. ಅವರ ಈ ವಿಡಿಯೋ ಸಹ ನೋಡುಗರಿಗೆ ಒಂದು ರೀತಿಯ ಖುಷಿ ಹಾಗೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೆ ಒಂದು ರೀತಿಯ ಸ್ಫೂರ್ತಿ ಎಂದರೆ ತಪ್ಪಾಗದು. ಸಾರಾ ಹಂಚಿಕೊಂಡಿರುವ ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು.
ಇದನ್ನೂ ಓದಿ: Kajal Aggarwal: ಮೊದಲ ಹರಿಯಾಲಿ ತೀಜ್ ಆಚರಿಸಿದ ನಟಿ ಕಾಜಲ್ ಅಗರ್ವಾಲ್
2018ರಲ್ಲಿ ಕೇದರನಾಥ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಸಾರಾ ಅಲಿ ಖಾನ್, ಅದೇ ವರ್ಷ ಸಿಂಬ ಚಿತ್ರದಲ್ಲಿ ರಣವೀರ್ ಸಿಂಗ್ ಜತೆ ತೆರೆ ಹಂಚಿಕೊಳ್ಳುತ್ತಾರೆ. ಅದೂ ಸಹ ಬಾಕ್ಸಾಫಿಸ್ನಲ್ಲಿ ಹಿಟ್ ಆಗಿತ್ತು. 2020ರಲ್ಲಿ ಲವ್ ಆಜ್ ಕಲ್ ಮತ್ತು ಕೂಲಿ ನಂ1 ಸಿನಿಮಾದಲ್ಲಿ ಸಾರಾ ನಟಿಸಿದ್ದಾರೆ. ಸದ್ಯ ಅತರಂಗಿ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾ ಇನ್ನು ಬಿಡುಗಡೆಯಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ