Hand Weakness: ಕೈಗಳ ದುರ್ಬಲ ಹಿಡಿತ, ದೌರ್ಬಲ್ಯ ಗಂಭೀರ ಕಾಯಿಲೆಗಳ ಸಂಕೇತ!

ಕೈಗಳಲ್ಲಿ ದೌರ್ಬಲ್ಯ ಉಂಟಾಗುತ್ತಿದ್ದರೆ ಮೊದಲು ಸೂಕ್ತ ಜಾಗ್ರತೆ ವಹಿಸಿ. ಇದು ಗಂಭೀರ ಕಾಯಿಲೆಗಳ ಸಂಕೇತ ಆಗಿರಬಹುದು. ಕೆಲವು ರೋಗ ಲಕ್ಷಣಗಳು ದೈಹಿಕ ದೌರ್ಬಲ್ಯ ಉಂಟು ಮಾಡುವ ಮೂಲಕ ಗೋಚರಿಸುತ್ತವೆ. ಕೈಗಳ ದುರ್ಬಲ ಹಿಡಿತವು ದೇಹದಲ್ಲಿ ಬೆಳೆಯುತ್ತಿರುವ ಗಂಭೀರ ಸಮಸ್ಯೆಗಳ ಸಂಕೇತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದಿನನಿತ್ಯದ ಕೆಲಸ (Work) ಮಾಡುವುದು ಸ್ವಲ್ಪ ದೈಹಿಕ ಚಟುವಟಿಕೆಗೆ (Physical Activities) ಸಹಾಯ ಮಾಡುತ್ತದೆ. ಆದರೆ ಸ್ವಲ್ಪ ಸಮಯದವರೆಗೆ ಮನೆಗೆಲಸ ಮಾಡುವುದರಿಂದ ನಿಮಗೆ ಅನಾನುಕೂಲವಾಗುತ್ತಿದ್ದರೆ ನೀವು ಇದರ ಬಗ್ಗೆ ಗಂಭೀರವಾಗಿ (Serious) ಚಿಂತನೆ ಮಾಡಬೇಕು. ಯಾಕೆಂದ್ರೆ ಅಂತಹ ಕೆಲವು ಬದಲಾವಣೆಗಳು (Changes) ದೇಹದಲ್ಲಿ ಬೆಳೆಯುತ್ತಿರುವ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳ ಸಂಕೇತವೂ ಆಗಿರಬಹುದು. ಕೈಗಳಲ್ಲಿ ದೌರ್ಬಲ್ಯ ಉಂಟಾಗುವುದು ಸಹ ಅಂತಹ ಒಂದು ಸಮಸ್ಯೆ ಆಗಿದೆ. ಬಿಗಿಯಾಗಿ ಮುಚ್ಚಿದ ಉಪ್ಪಿನಕಾಯಿ ಡಬ್ಬದ ಮುಚ್ಚಳ ಅಥವಾ ಡಬ್ಬವನ್ನು ತೆರೆಯಲು ನಿಮಗೆ ತುಂಬಾ ಕಷ್ಟವಾಗುತ್ತಿದೆಯೇ? ಕೈಗಳ ಹಿಡಿತ ಮತ್ತು ಶಕ್ತಿ ಮೊದಲಿಗಿಂತ ದುರ್ಬಲವಾಗಿದೆ ಅನ್ನಿಸುತ್ತಿದ್ದರೆ ಮೊದಲು ಎಚ್ಚರಿಕೆ ವಹಿಸಿ.

    ಕೈಗಳ ದೌರ್ಬಲ್ಯವು ಗಂಭೀರ ಸಮಸ್ಯೆಗಳ ಸಂಕೇತ

    ಹಾಗಾಗಿ ಕೈಗಳಲ್ಲಿ ದೌರ್ಬಲ್ಯ ಉಂಟಾಗುತ್ತಿದ್ದರೆ ಮೊದಲು ಸೂಕ್ತ ಜಾಗ್ರತೆ ವಹಿಸಿ. ಇದು ಗಂಭೀರ ಕಾಯಿಲೆಗಳ ಸಂಕೇತ ಆಗಿರಬಹುದು. ಕೆಲವು ರೋಗ ಲಕ್ಷಣಗಳು ದೈಹಿಕ ದೌರ್ಬಲ್ಯ ಉಂಟು ಮಾಡುವ ಮೂಲಕ ಗೋಚರಿಸುತ್ತವೆ. ಕೈಗಳ ದುರ್ಬಲ ಹಿಡಿತವು ದೇಹದಲ್ಲಿ ಬೆಳೆಯುತ್ತಿರುವ ಗಂಭೀರ ಸಮಸ್ಯೆಗಳ ಸಂಕೇತವಾಗಿದೆ ಎಂದು ವಿಜ್ಞಾನಿಗಳು ಅಧ್ಯಯನ ನಡೆಸಿ ಕಂಡು ಹಿಡಿದಿದ್ದಾರೆ.

    ಈ ವೇಳೆ ಬಿಗಿಯಾಗಿ ಮುಚ್ಚಿದ ಉಪ್ಪಿನಕಾಯಿ ಡಬ್ಬದ ಮುಚ್ಚಳ ತೆರೆಯಲು ಮತ್ತು ನೀರು ತುಂಬಿದ ಪಾತ್ರೆಯಲ್ಲಿ ಅಥವಾ ಅನೇಕ ಶಾಪಿಂಗ್ ಬ್ಯಾಗ್‌ಗಳನ್ನು ತೆರೆಯಲು ಕಷ್ಟವಾಗುತ್ತಿದ್ದರೆ, ಕೈಗಳಲ್ಲಿ ಶಕ್ತಿ ಕಡಿಮೆಯಾದ ಅನುಭವ ಆಗುತ್ತಿದ್ದರೆ ಇದು ಹೃದ್ರೋಗ, ಕ್ಯಾನ್ಸರ್ ಮತ್ತು ಗಂಭೀರ ಅಪಾಯಕ್ಕೆ ಕಾರಣ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಆಲ್ಝೈಮರ್ನಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

    ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉತ್ತಮ!

    ಕೈಗಳ ದೌರ್ಬಲ್ಯ ಮತ್ತು ಕೈ ಹಿಡಿತ ದೌರ್ಬಲ್ಯದ ಕುರಿತು ಅಧ್ಯಯನ

    ಆಸ್ಟ್ರಿಯಾ ಮೂಲದ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್‌ನ ವಿಜ್ಞಾನಿಗಳು, ಕೈ ಹಿಡಿತದ ಶಕ್ತಿ ಮತ್ತು ಅದರ ಆಧಾರದ ಮೇಲೆ ದೇಹದಲ್ಲಿ ರೋಗಗಳ ಅಪಾಯ ಕಂಡು ಹಿಡಿಯಲು ಪ್ರಯತ್ನಿಸಿದ್ದಾರೆ. ಕೈಗಳ ದುರ್ಬಲ ಹಿಡಿತವು ವಯಸ್ಸು,

    ಲಿಂಗ ಮತ್ತು ಉದ್ದವನ್ನು ಅವಲಂಬಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನೀವು ಅಂತಹ ಸಮಸ್ಯೆ ಎದುರಿಸುತ್ತಿದ್ದರೆ ಬಹಳ ಜಾಗ್ರತೆ ವಹಿಸಿ. ನಿಮ್ಮ ವಯಸ್ಸಿನ ಜನರಿಗಿಂತ ನಿಮ್ಮ ಕೈಗಳ ದೌರ್ಬಲ್ಯ ಉಂಟಾಗಿದ್ದರೆ ಇದು ಗಂಭೀರ ಮತ್ತು ಮಾರಣಾಂತಿಕ ಪರಿಸ್ಥಿತಿಯ ಸಂಕೇತವಾಗಿರಬಹುದು ಎಂದಿದ್ದಾರೆ.

    ಕೈ ಹಿಡಿತದ ಸಾಮರ್ಥ್ಯ ವಯಸ್ಸು ಮತ್ತು ಲಿಂಗ ಅವಲಂಬಿಸಿದೆ

    BMJ ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ, ಸಂಶೋಧಕರು ಸಾಮಾನ್ಯವಾಗಿ, 20 ನೇ ವಯಸ್ಸಿನಲ್ಲಿ ಮಹಿಳೆಯರಲ್ಲಿ ಸರಾಸರಿ ಹಿಡಿತದ ಬಲವು 29 ಕೆಜಿ ಎಂದು ಅಂದಾಜಿಸಲಾಗಿದೆ ಮತ್ತು ಪುರುಷರದ್ದು 46 ಕೆಜಿ ಎಂದು ಅಂದಾಜಿಸಲಾಗಿದೆ. 60 ನೇ ವಯಸ್ಸಿನಲ್ಲಿ, ಇದು ಕ್ರಮವಾಗಿ 23.5 ಕೆಜಿ ಮತ್ತು 39 ಕೆಜಿಗೆ ಕಡಿಮೆಯಾಗುತ್ತದೆ. ವಯೋಮಾನದ ಗುಣಮಟ್ಟಕ್ಕಿಂತ ಕೈ ಹಿಡಿತ ದುರ್ಬಲವಾಗಿದ್ದರೆ ಗಂಭೀರವಾಗಿ ಯೋಚಿಸಿ.

    ಕೈ ಹಿಡಿತ ದೌರ್ಬಲ್ಯ ಮತ್ತು ರೋಗದ ಅಪಾಯ

    ಒಂದೇ ವಯಸ್ಸಿನ ಮತ್ತು ಲಿಂಗದ ಜನರಿಗೆ ಹೋಲಿಸಿದರೆ ನೀವು ಕೈಗಳ ದುರ್ಬಲ ಹಿಡಿತ ಹೊಂದಿದ್ದರೆ, ಅದನ್ನು ಹೃದ್ರೋಗ ಸಮಸ್ಯೆಗಳ ಸಂಕೇತವೆಂದು ಪರಿಗಣಿಸಿ ಎನ್ನುತ್ತಾರೆ ತಜ್ಞರು. ಹೃದಯ ವೈಫಲ್ಯ ಮತ್ತು ಹೃದಯದ ಸಾಮಾನ್ಯ ಕಾರ್ಯಗಳೊಂದಿಗಿನ ಸಮಸ್ಯೆಗಳ ಸಂಕೇತವೆಂದು ಪರಿಗಣಿಸಬಹುದು.

    ಕೈಗಳ ದೌರ್ಬಲ್ಯ ಹೊಂದಿರುವ ಜನರು ಇತರ ಜನರಿಗಿಂತ ಪ್ರಾಸ್ಟೇಟ್, ಶ್ವಾಸಕೋಶ, ಸ್ತನ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

    ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತದೆ

    ಸಂಶೋಧಕರು ಹೇಳೋದೇನು?

    ಈ ಅಧ್ಯಯನದಲ್ಲಿ ಟೈಪ್-2 ಡಯಾಬಿಟಿಸ್ ಅಥವಾ ಬೊಜ್ಜು ಇರುವವರು ಕಾಲಕ್ರಮೇಣ ಅವರ ಹಿಡಿತ ದುರ್ಬಲಗೊಳ್ಳುವುದು ಕಂಡು ಬಂದಿದೆ ಎಂದು ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ. ದುರ್ಬಲ ಹಿಡಿತವು ಕೈ ಸಮಸ್ಯೆ ಅಥವಾ ಗಾಯದಿಂದಲೂ ಆಗಿರಬಹುದು.
    Published by:renukadariyannavar
    First published: