Hair Care: ದಪ್ಪ ಕೂದಲು ನಿಮ್ಗೆ ಬೇಕಾ? ಕೂದಲಿನ ಆರೈಕೆ ಈ ರೀತಿ‌ ಮಾಡಿ‌ ನೋಡಿ

ಪ್ರತಿಯೊಬ್ಬರಿಗೂ ತಮ್ಮ ಕೂದಲು ಸುಂದರವಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಸಾಕಷ್ಟು ಕಾಳಜಿಯನ್ನೂ ಸಹ ವಹಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈಗಿನ ಜೀವನಶೈಲಿ (Lifestyle) ಯಲ್ಲಿ ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ (Problem) ಯಾಗಿದೆ, ಕೂದಲಿನ ಆರೈಕೆ (Hair Care) ಬಗ್ಗೆ ಯಾರು ಏನೇ ಹೇಳಿದರೂ ಅಲರ್ಟ್ ಆಗಿಬಿಡುತ್ತೇವೆ, ಒಮ್ಮೆ ನೀವು ಪಾಲಿಸಬೇಕಾದ ಸಲಹೆಗಳ ಬಗ್ಗೆ ತಿಳಿಯುವುದು ಅಗತ್ಯ. ಪ್ರತಿಯೊಬ್ಬರಿಗೂ ತಮ್ಮ ಕೂದಲು (Hairs) ಸುಂದರವಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಸಾಕಷ್ಟು ಕಾಳಜಿಯನ್ನೂ ಸಹ ವಹಿಸುತ್ತಾರೆ. ಆದರೆ ಈ ಹಂತದಲ್ಲಿ ಆಗುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳಿಂದಾಗಿ ನೀವು ವಹಿಸುವ ಕಾಳಜಿ ವ್ಯರ್ಥವಾಗುತ್ತದೆ. ಕೂದಲಿನ ಆರೈಕೆ ಹೇಗೆಲ್ಲಾ ಇದ್ದರೆ ಒಳ್ಳೆಯದು ನೋಡೋಣ. ‌

  ಒಂದು ನೆರೆ ಕೂದಲು ಕಿತ್ತರೆ ಎರಡು ನೆರೆ ಕೂದಲು ಹುಟ್ಟುತ್ತದೆ ಎಂಬುದು ನಿಜವೇ?

  ಒಂದು ಕೂದಲು ಕಿತ್ತ ತಕ್ಷಣ ಎರಡು ನೆರೆ ಕೂದಲು ಹುಟ್ಟುವುದಿಲ್ಲ. ಬದಲಿಗೆ ದೇಹದಲ್ಲಿ ಕೂದಲಿಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾದಾಗ ಅಥವಾ ಒತ್ತಡದ ಜೀವನ ಶೈಲಿಯಿಂದ ಅಕಾಲಿಕ ನೆರೆ ಮೂಡುತ್ತದೆ. ಮೊದ ಮೊದಲು ಅಲ್ಲಲ್ಲಿ ಒಂದೊಂದು ನೆರೆ ಕೂದಲು ಕಾಣಿಸಬಹುದು. ನಂತರ ನೆರೆ ಕೂದಲು ಸಂಖ್ಯೆ ಹೆಚ್ಚಾಗುವುದು. ಆದ್ದರಿಂದ ಕೀಳುವುದರಿಂದ ನೆರೆ ಕೂದಲು ಹೆಚ್ಚಾಯಿತು ಎಂದು ಭಾವಿಸುವುದು ತಪ್ಪು. ನೆರೆಕೂದಲು ಬಂದರೆ ಅದನ್ನು ಕೀಳುವುದು ಮಾಡಬೇಡಿ. ಅದು ಕಾಣಬಾರದು ಎಂದಾದರೆ ಡೈ ಮಾಡಿ ಅಥವಾ ಹೆನ್ನಾ ಹಚ್ಚಿ.

  ಸರಿಯಾದ ಶಾಂಪೂ ಆಯ್ಕೆ ಮಾಡಿ

  ಎಲ್ಲಾ ಶಾಂಪೂಗಳನ್ನೂ ಟ್ರೈ ಮಾಡುತ್ತಾ ಕೂದಲನ್ನು ಹಾಳುಮಾಡಿಕೊಳ್ಳುವ ಬದಲಾಗಿ ನಿಮ್ಮ ಕೂದಲಿಗೆ ಹೊಂದುವ ಒಂದು ಶಾಂಪುವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಕೂದಲಿಗೆ ಹೊಂದುವಂತಹ ಶಾಂಪೂ ಆಯ್ಕೆ ಮಾಡುವುದು ಬಹಳ ಅಗತ್ಯ. ಇತ್ತೀಚಿನ ದಿನಗಳಲ್ಲಿ ಜನರು ಮಾರುಕಟ್ಟೆಗೆ ಬರುವ ಹೊಸ ಹೊಸ ಉತ್ಪನ್ನಗಳ ಬಳಕೆಗಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದಾರೆ. ಆದರೆ ಇದು ತಪ್ಪು.

  ಶಾಂಪೂ ಮಾಡುವುದು ಹೇಗೆ ಎಂದು ತಿಳಿಯಿರಿ

  ನಾವೆಲ್ಲರೂ ನಿಯಮಿತವಾಗಿ ನಮ್ಮ ಕೂದಳಿಗೆ ಶಾಂಪೂ ಹಾಕಿ ತೊಳೆಯುತ್ತೇವೆ. ಆದರೆ ನಮ್ಮಲ್ಲಿ ಕೆಲವರು ಮಾತ್ರ ಸರಿಯಾಗಿ ಶಾಂಪೂ ಮಾಡುತ್ತಾರೆ. ಯಾವಾಗಲೂ ಕೂದಲನ್ನು ಶಾಂಪೂ ಹಾಕಿ ತೊಳೆಯುವ ಮೊದಲು ಸರಿಯಾಗಿ ಸಿಕ್ಕಿಲ್ಲದಂತೆ ಬಾಚುವುದು ಅಗತ್ಯ. ಶಾಂಪೂ ಹಾಕುವ ಮುಖ್ಯ ಉದ್ದೇಶವೆಂದರೆ ನಿಮ್ಮ ಕೂದಲಿನ ಬೇರುಗಳವರೆಗೆ ಅದು ತಲುಪಬೇಕು ಎನ್ನುವುದು. ಆದರೆ ಶಾಂಪೂ ಕೂದಲಿನ ತೇವಾಂಶ ಕಡಿಮೆ ಮಾಡುವುದರಿಂದ ಹೆಚ್ಚಾಗಿ ಬಳಸಬೇಡಿ.

  ಇದನ್ನೂ ಓದಿ: Burnout Problem: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು

  ಕೂದಲನ್ನು ಸರಿಯಾದ ರೀತಿಯಲ್ಲಿ ಬಾಚಿರಿ

  ಮೊದಲು ಕೂದಲನ್ನು ಒಣಗಿಸಿ, ಬಳಿಕ ದೊಡ್ಡ ಹಲ್ಲುಗಳುಳ್ಳ ಬಾಚಣಿಗೆಯಿಂದ ಬಾಚಿ. ಮೊದಲು ಕೂದಲ ತುದಿಯಲ್ಲಿ ಬಾಚಿ, ಬಳಿಕ ಮೇಲ್ಭಾಗದಿಂದ ಬಾಚಿರಿ. ನೀವು ಕೂದಲನ್ನು ಹೆಚ್ಚು ಬಾಚುವುದರಿಂದ ಕೂದಲಿನ ಬೇರುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ ಕೂದಲು ತುಂಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ತಲೆಗೆ ಸ್ನಾನ ಮಾಡಿದ ಕೂಡಲೇ ಕೂದಲನ್ನು ಬಾಚಬೇಡಿ.

  ಇದನ್ನೂ ಓದಿ: Guava Fruit Benefit: ಸೀಬೆ ಹಣ್ಣಿನಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿವೆ ನೀವೇ ಓದಿ ನೋಡಿ

  ಸ್ಟೈಲಿಂಗ್ ಉತ್ಪನ್ನಗಳ ಬಳಕೆ

  ಸ್ಟೈಲ್ ಮಾಡುವುದಕ್ಕೂ ಮೊದಲು ಶಾಖದಿಂದ ಕೂದಲನ್ನು ರಕ್ಷಿಸುವ ಜೆಲ್, ಕ್ರೀಂಗಳನ್ನು ಅಪ್ಲೈ ಮಾಡುವುದು ಒಳ್ಳೆಯದು. ಯಾವುದೇ ಪಾರ್ಟಿ ಅಥವಾ ಫಂಕ್ಷನ್ ಗಳಿಗೆ ಹೋಗಬೇಕೆಂದರೆ ಬ್ಲೋ ಡ್ರೈಯರ್ಗಳು, ಫ್ಲಾಟ್ ಐರನ್ಸ್, ಕರ್ಲಿಂಗ್ ರಾಡ್ಗಳು ಕೂದಲನ್ನು ಆಕರ್ಷಕವಾಗಿಸಲು ಸಹಾಯ ಮಾಡುತ್ತವೆ. ಆದರೆ, ಈ ಶಾಖ ಉತ್ಪನ್ನ ಮಾಡುವ ಉಪಕರಣಗಳು ಕೂದಲನ್ನು ಡ್ರೈ ಮಾಡಿ, ಒರಟಾಗಿಸುತ್ತದೆ. ಹಾಗಾಗಿ ಕಡಿಮೆ ಶಾಖ ಬಳಸಿ ನಿಮ್ಮ ಕೂದಲನ್ನು ಸ್ಟೈಲ್ ಮಾಡಿ.

  ಹೇರ್ ಕಟ್ ಮಾಡಿಸುವಲ್ಲಿ ವಿಳಂಬ

  ನಮ್ಮಲ್ಲಿ ಬಹುತೇಕರು ನಿಯಮಿತವಾಗಿ ಹೇರ ಕಟ್ ಮಾಡಿಸುವುದಿಲ್ಲ. ಇದರಿಂದಾಗಿ ಕೂದಲಿನ ಡ್ಯಾಮೇಜ್ ಹೆಚ್ಚಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ಹೇರ್ ಕಟ್ ಅಥವಾ ಟ್ರಿಮ್ ಮಾಡಿಸುವುದರಿಂದ ಕೂದಲ ತುದಿಯಲ್ಲಿ ಕವಲೊಡೆಯುವುದು ಕಡಿಮೆಯಾಗಿ ಕೂದಲು ಆರೋಗ್ಯವಾಗಿರುತ್ತದೆ.
  Published by:Swathi Nayak
  First published: