Hair Care: ಕೂದಲನ್ನು ಬಾಚುವಾಗ ಈ ನಿಯಮಗಳನ್ನು ಪಾಲಿಸಿ!

ಕೂದಲನ್ನು ಬಾಚುವುದು ಸಹ ಅತ್ಯಗತ್ಯವಾದ ಕೂದಲ ರಕ್ಷಣೆಯ ಹಂತವಾಗಿದ್ದು, ಇದನ್ನು ಉತ್ತಮವಾಗಿ ನಿರ್ವಹಿಸಿದರೆ ಕೂದಲ ಎಳೆಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಬಹುದು. ಹಾಗಾಗಿ ಕೆಲವೊಮ್ಮೆ ಹಿರಿಯರು ದಿನಕ್ಕೆ ಎರಡು ಬಾರಿಯಾದರೂ ಬಾಚಬೇಕು ಎಂದು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಾನವನ ಸೌಂದರ್ಯ ಕೂದಲಲ್ಲಿ ಅಡಗಿದೆ. ಕೂದಲು ಸಮೃದ್ಧವಾಗಿದ್ದಷ್ಟು ಮನುಷ್ಯ ಸುಂದರವಾಗಿ ಕಾಣುತ್ತಾನೆ. ಆದರೆ ಕೂದಲ ಆರೈಕೆ ಮಾತ್ರ ಪ್ರತಿಯೊಬ್ಬರಿಗೂ ತಲೆನೋವು. ಕೂದಲು ತುಂಬಾ ಸೂಕ್ಷ್ಮವಾಗಿರುವುದರಿಂದ ಆರೈಕೆಯಿಲ್ಲದಿದ್ದರೆ ಉದುರುವುದು, ತೆಳ್ಳಗಾಗುವುದು, ಸಿಕ್ಕುಗಟ್ಟುವುದು ಹೀಗೆ ಒಂದಲ್ಲ ಒಂದು ಸಮಸ್ಯೆಗಳು ಆರಂಭವಾಗಿ ಕೂದಲ ಅಂದ ಮಾಸುತ್ತದೆ. ಹಾಗಾಗಿ ಕೂದಲಿಗೆ ಎಣ್ಣೆ ಹಚ್ಚುವುದು, ತೊಳೆಯುವುದು ಮತ್ತು ಕಂಡೀಷನಿಂಗ್ ಮಾಡುವಂತಹ ಇತರ ಕೂದಲ ರಕ್ಷಣೆಯ ವಿಧಾನಗಳನ್ನು ನೀವು ನಿರ್ಲಕ್ಷಿಸಿದರೆ ಆರೋಗ್ಯಕರ ಕೂದಲನ್ನು ಪಡೆಯುವುದು ಕಷ್ಟವಾಗುತ್ತದೆ.

ಪ್ರತಿಯೊಂದು ಕ್ರಿಯೆಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕೂದಲ ರಕ್ಷಣೆಯ ಅಭ್ಯಾಸಗಳನ್ನು ಪಾಲಿಸುವುದು ಮತ್ತು ಸೂಕ್ತ ಮಾರ್ಗಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ಏಕೆಂದರೆ ಎಲ್ಲ ವ್ಯಕ್ತಿಯ ಕೂದಲು ಒಂದೇ ರೀತಿಯಾಗಿ ಇರುವುದಿಲ್ಲ, ಕೆಲವರಿಗೆ ನುಣುಪಾಗಿದ್ದರೆ, ಇನ್ನು ಕೆಲವರದ್ದು ಗುಂಗುರು ಇರುತ್ತದೆ. ಹೀಗೆ ಪ್ರತಿಯೊಂದು ರೀತಿಯ ಕೂದಲಿಗೂ ಬಾಚುವ ವಿಧಾನ ವಿಭಿನ್ನವಾಗಿಯೇ ಇರುತ್ತದೆ.

ಸಾಂದರ್ಭಿಕ ಚಿತ್ರ


ಹಾಗಾಗಿ, ಕೂದಲನ್ನು ಬಾಚುವುದು ಸಹ ಅತ್ಯಗತ್ಯವಾದ ಕೂದಲ ರಕ್ಷಣೆಯ ಹಂತವಾಗಿದ್ದು, ಇದನ್ನು ಉತ್ತಮವಾಗಿ ನಿರ್ವಹಿಸಿದರೆ ಕೂದಲ ಎಳೆಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಬಹುದು. ಹಾಗಾಗಿ ಕೆಲವೊಮ್ಮೆ ಹಿರಿಯರು ದಿನಕ್ಕೆ ಎರಡು ಬಾರಿಯಾದರೂ ಬಾಚಬೇಕು ಎಂದು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Mouni Roy: ಶಿಲಾ ಬಾಲಿಕೆಯಂತೆ ಪೋಸ್​ ಕೊಟ್ಟ ಕೆಜಿಎಫ್​ ಹುಡುಗಿ ಮೌನಿ ರಾಯ್​..!

ಕೂದಲು ಬಾಚುವುದು ಹೇಗೆ: ಕೂದಲನ್ನು ಬಾಚುವುದು ಮುಖ್ಯ ಏಕೆಂದರೆ, ಇದು ನೆತ್ತಿಯ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸಡಿಲವಾದ ಕೂದಲನ್ನು ತೆಗೆದುಹಾಕುತ್ತದೆ. ಜತೆಗೆ ಕೂದಲಿನ ಆರೋಗ್ಯ ಕಾಪಾಡುತ್ತದೆ ಮತ್ತು ಹೊಳಪನ್ನು ನೀಡುತ್ತದೆ. ನಿಮ್ಮ ಕೂದಲನ್ನು ಯಾವ ರೀತಿಯಲ್ಲಿ ಬಾಚಬೇಕು ಎಂಬುದರ ಬಗ್ಗೆ ಇಲ್ಲಿವೆ ಸಲಹೆಗಳು.

ಉತ್ತಮ ಬ್ರಶ್ ಬಳಸಿ: ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬ್ರಷ್‍ಗಳು ಲಭ್ಯವಿದ್ದು, ನಿಮ್ಮ ಕೂದಲಿನ ವಿಧಕ್ಕೆ ಅನುಗುಣವಾಗಿ ಉತ್ತಮವಾದ ಬ್ರಶ್ ಆಯ್ದುಕೊಳ್ಳಿ. ಉದಾಹರಣೆಗೆ, ಪ್ಯಾಡಲ್ ಬ್ರಶ್ ಅಲೆಅಲೆಯಾದ ಅಥವಾ ನೇರವಾದ ಕೂದಲಿಗೆ ಹೆಚ್ಚು ಸೂಕ್ತವಾಗಿರುತ್ತದೆ ಆದ್ದರಿಂದ ನಿಮ್ಮ ಕೂದಲಿಗೆ ತಕ್ಕುದಾದ ಹಾಗೂ ಸರಿಯಾದ ಬ್ರಶ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಇದನ್ನೂ ಓದಿ: Bhoot Police: ಈ ಹಿಂದೆ ವಿವಾದಕ್ಕೀಡಾಗಿದ್ದ ಭೂತ್ ಪೊಲೀಸ್​ ಸಿನಿಮಾ ಪ್ರಚಾರದಲ್ಲಿ ಅರ್ಜುನ್ ಕಪೂರ್​...!

ಡಿಟಾಗ್ಲಿಂಗ್ ಬ್ರಶ್ ಬಳಸಿಇದು ಒದ್ದೆಯಾದ ಮತ್ತು ಒಣ ಕೂದಲಿಗೆ ಅನ್ವಯವಾಗುತ್ತದೆ. ಇದು ಕೂದಲು ಸೀಳಾಗುವುದನ್ನು ತಪ್ಪಿಸುತ್ತದೆ.

ಕೂದಲು ಒರಟಾಗದಂತೆ ಕಾಪಾಡಿ: ನೀವು ಒಣಕೂದಲನ್ನು ಬಾಚುವಾಗ ಡಿಟಾಗ್ಲಿಂಗ್ ಉತ್ಪನ್ನಗಳನ್ನು ಬಳಸುವುದು ಉತ್ತಮ. ಒದ್ದೆಯಾದ ಕೂದಲು ದುರ್ಬಲವಾಗಿರುತ್ತದೆ ಮತ್ತು ಒಡೆಯುವ ಸಾಧ್ಯತೆ ಹೆಚ್ಚು ಆದ್ದರಿಂದ ಒದ್ದೆಯಾದ ಕೂದಲನ್ನು ಬಾಚುವಾಗ ನಿಮ್ಮ ನೆತ್ತಿಯ ಮೇಲೆ ಅಥವಾ ಕೂದಲು ಹೆಚ್ಚು ಒರಟಾಗದಂತೆ ನೋಡಿಕೊಳ್ಳಬೇಕು.

ಕೂದಲು ಬಾಚುತ್ತಿರಿ: ಆಗಾಗ್ಗೆ ಕೂದಲು ಬಾಚುವುದು ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ. ಸಾಮಾನ್ಯವಾಗಿ ಕೂದಲನ್ನು ಯಾವಾಗಲೂ ಬಾಚುವುದು ಕೂದಲು ಉದುರುವ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದು ಸತ್ಯಕ್ಕೆ ದೂರ. ನಿಮ್ಮ ಕೂದಲು ಸಿಕ್ಕುಗಟ್ಟುವುದನ್ನು  ತಪ್ಪಿಸುತ್ತದೆ.

ಇದನ್ನೂ ಓದಿ: Vikrant Rona Glimpse: ಕಿಚ್ಚ ಸುದೀಪ್​ ಹುಟ್ಟುಹಬ್ಬದಂದು ವಿಕ್ರಾಂತ್​ ರೋಣನ ಕಡೆಯಿಂದ ಸಿಗಲಿದೆ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್​

ಎಣ್ಣೆ ಹಚ್ಚುವುದು ಮರೆಯಬೇಡಿ: ಕೂದಲಿಗೆ ಎಣ್ಣೆ ಹಚ್ಚುವುದರಿಂದ ಇದು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ, ಎಣ್ಣೆ ಹಚ್ಚಿದ ನಂತರ ಬಾಚುವುದು ಕೂದಲು ಒಡೆಯುವುದು ಮತ್ತು ಉದುರುವುದಕ್ಕೆ ಕಾರಣವಾಗಬಹುದು. ಆದ್ದರಿಂದ ಎಣ್ಣೆ ಹಚ್ಚಿದ ತಕ್ಷಣ ಕೂದಲು ಬಾಚಬೇಡಿ.
Published by:Anitha E
First published: