Hair Problem: ಕೂದಲು ಅತಿಯಾಗಿ ಉದುರುತ್ತಿವೆಯೇ..? ಅದಕ್ಕೆ ಕಾರಣ ಇದೇ ಇರಬಹುದಾ..!

ಈಗಂತೂ ವಯಸ್ಸಾದವರ ತಲೆ ಬೋಳಾಗುವುದು ಬಿಡಿ, 20 ರಿಂದ 30 ರ ವಯಸ್ಸಿನವರಲ್ಲಿಯೂ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದು ನಿಜಕ್ಕೂ ಯುವಕ ಮತ್ತು ಯುವತಿಯರನ್ನು ಚಿಂತೆಗೀಡು ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿಮ್ಮ ವಯಸ್ಸು 50 ದಾಟಿದ್ದು, ನಿಮ್ಮ ಕೂದಲು ಉದುರುತ್ತಿದೆ ಎಂದರೆ ನೀವು ಅಷ್ಟೊಂದು ಚಿಂತೆ  ಮಾಡುವುದಿಲ್ಲ.  ಅದೇ ನೀವು 20 ರಿಂದ 30 ವಯಸ್ಸಿನ ಆಸುಪಾಸಿನ ವಯಸ್ಸಿನವರಾಗಿದ್ದು, ನಿಮ್ಮ ಕೂದಲು ಉದುರುತ್ತಿದೆ  (Hair Fall Problem) ಎಂದರೆ ನಿಮಗೆ ಅದೇ ಒಂದು ದೊಡ್ಡ ಚಿಂತೆ ಆಗುತ್ತದೆ. ಕೂದಲು ಉದುರುವುದು ಪುರುಷರು ಮತ್ತು ಮಹಿಳೆಯರು ಇಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ತಮ್ಮ ಕೂದಲು ಉದುರುತ್ತಿರುವುದಕ್ಕೆ ಆನ್‌ಲೈನ್‌ನಲ್ಲಿ ಕೂದಲಿನ ಪೋಷಣೆಯ ಬಗ್ಗೆ ಸಲಹೆಗಳನ್ನು ಹುಡುಕುತ್ತಾರೆ, ಇತರರು ಅದನ್ನು ನಿಯಂತ್ರಿಸಲು ಮನೆಯಲ್ಲಿಯೇ ಅನೇಕ ಪರಿಹಾರಗಳನ್ನು ಕಂಡುಕೊಳ್ಳುತ್ತಿರುತ್ತಾರೆ.

ಈಗಂತೂ ವಯಸ್ಸಾದವರ ತಲೆ ಬೋಳಾಗುವುದು ಬಿಡಿ, 20 ರಿಂದ 30 ರ ವಯಸ್ಸಿನವರಲ್ಲಿಯೂ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದು ನಿಜಕ್ಕೂ ಯುವಕ ಮತ್ತು ಯುವತಿಯರನ್ನು ಚಿಂತೆಗೀಡು ಮಾಡಿದೆ.  ನಿಮ್ಮ ಕೂದಲು ಏಕೆ ಹೆಚ್ಚಾಗಿ ಉದುರುತ್ತಿವೆ ನಿಮಗೆ ಗೊತ್ತೇ? ಈ ಪ್ರಶ್ನೆಗೆ ಚರ್ಮರೋಗ ತಜ್ಞೆ ಡಾ. ಕಿರಣ್ ಅವರು 20 ರಿಂದ 30 ವಯಸ್ಸಿನವರಲ್ಲಿ ಏಕೆ ಕೂದಲು ಉದುರುತ್ತವೆ ಎಂಬುದರ ಹಿಂದಿನ ಕಾರಣಗಳನ್ನು ಇಲ್ಲಿ ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ


ವೈದ್ಯೆ ಕಿರಣ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಂತಹ ವಿಡಿಯೋದಲ್ಲಿ, ಡಾ. ಕಿರಣ್ "ಚಿಕ್ಕ ವಯಸ್ಸಿನಲ್ಲಿ ಪುರುಷರಿಗೆ ಬೋಳು ತಲೆಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಸಮಸ್ಯೆ ಆಗಿದೆ" ಎಂದು ಹೇಳಿದರು. ಹಿಂದೆ, ಪುರುಷರು ತಮ್ಮ 50 ರಿಂದ 60ರ ವಯಸ್ಸಿನಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Grey Hair: ಒತ್ತಡದ ಜೀವನ ಶೈಲಿಯಿಂದ ಬಿಳಿ ಕೂದಲು ಸಮಸ್ಯೆ ಶುರುವಾಗಬಹುದು..!

ಚಿಕ್ಕ ವಯಸ್ಸಿನ ಪುರುಷರಲ್ಲಿ ಏಕೆ ಕೂದಲು ಉದುರುತ್ತವೆ? ಆಹಾರದಲ್ಲಿ ಹೆಚ್ಚಿದ ಸಕ್ಕರೆ ಅಂಶ:

ಇತ್ತೀಚಿನ ದಿನಗಳಲ್ಲಿ ನಿಮ್ಮ ಆಹಾರದಲ್ಲಿ ಸಕ್ಕರೆಯ ಸೇವನೆ ಹೆಚ್ಚಾಗಿದೆ. ಇನ್ಸುಲಿನ್ ಪ್ರತಿರೋಧ ಉಂಟು ಮಾಡಬಹುದಾದ ಮತ್ತು ಕೂದಲು ಬೀಳುವುದನ್ನು ಹೆಚ್ಚಿಸಬಲ್ಲ ಹೆಚ್ಚಿನ ಗ್ಲೈಸೆಮಿಕ್ ಅಂಶವಿರುವ ಆಹಾರ ಪದಾರ್ಥ ಹೆಚ್ಚಾಗಿ ಸೇವಿಸುವುದು. ಕೆಲವು ವಿಟಮಿನ್ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು.  ನಿಮ್ಮ ಜೀವನಶೈಲಿಯು ನಿಮ್ಮ ಥೈರಾಯ್ಡ್ ಮೇಲೆ ಪರಿಣಾಮ ಬೀರಬಹುದು. ಪ್ರೋಟೀನ್ ಪೌಡರ್‌ಗಳು ಕೂದಲು ಉದುರಲು ಕಾರಣವಾಗಬಹುದು. ಇವರು ಹಂಚಿಕೊಂಡ ವಿಡಿಯೋದ ಕೊನೆಯಲ್ಲಿ, ಬೋಳು ತಲೆಗೆ ಚಿಕಿತ್ಸೆ ಗುರುತಿಸಿ ನೀವು ಕೆಲವು ಆರೋಗ್ಯಕರ ಬದಲಾವಣೆಗಳನ್ನು ನಿಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.








View this post on Instagram






A post shared by Dr. Kiran MD (@drkiransays)






ಈ ವಿಡಿಯೋವನ್ನು 100ಕ್ಕಿಂತಲೂ ಹೆಚ್ಚು ಜನರು ಈಗಾಗಲೇ ಇಷ್ಟ ಪಟ್ಟಿದ್ದಾರೆ. ಇದಕ್ಕೆ ಮೊದಲು, ಡಾ. ಕಿರಣ್ ವಿಟಮಿನ್ ಸಿ ಮತ್ತು ಅದರ ಪ್ರಯೋಜನಗಳ ಬಗ್ಗೆ ವೀಕ್ಷಕರಿಗೆ ತಿಳುವಳಿಕೆ ನೀಡಿದ್ದಾರೆ

ಇದನ್ನೂ ಓದಿ:ಕೂದಲಿನ ಸಮಸ್ಯೆಗೆ ಆಯುರ್ವೇದದಲ್ಲಿದೆ ಪರಿಹಾರಗಳು..!

ವಿಟಮಿನ್ ಸಿ ಚರ್ಮದ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಅವುಗಳನ್ನು ಪಿಗ್ಮೆಂಟೇಶನ್‌ನಿಂದ ರಕ್ಷಿಸುತ್ತದೆ. ವಿಟಮಿನ್ ಸಿ ಶಕ್ತಿಶಾಲಿ ಉತ್ಕರ್ಷಣ ನಿರೋಧಕವಾಗಿದ್ದು, ಇದು ನಿಮ್ಮ ಚರ್ಮವನ್ನು ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ. ಜನರು ವಿಟಮಿನ್ ಸಿ ಸಮೃದ್ಧ ಆಹಾರವನ್ನು ಆಹಾರದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ವಿಟಮಿನ್ ಪೂರಕಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ಕೂದಲು ಅತಿಯಾಗಿ ಉದುರುತ್ತಿದ್ದರೆ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕು ಎಂದು ವೈದ್ಯೆ ಕಿರಣ್ ಹೇಳಿದ್ದಾರೆ.
Published by:Anitha E
First published: