ಹೆಚ್ಚುತ್ತಿರುವ ಮಾಲಿನ್ಯ (Pollution) ಮತ್ತು ಬದಲಾಗುತ್ತಿರುವ ಋತು ಮತ್ತು ಬೀಸುವ ಶುಷ್ಕ ಗಾಳಿಯು (Wind), ಕೂದಲಿನ (Hair) ತೇವಾಂಶ ತೆಗೆದು ಹಾಕುತ್ತದೆ. ಇದು ಕೂದಲನ್ನು ಮತ್ತಷ್ಟು ಶುಷ್ಕ ಮತ್ತು ನಿರ್ಜೀವವಾಗಲು ಕಾರಣವಾಗುತ್ತದೆ. ಮತ್ತು ಕೂದಲು ಬೀಳಲು (Hair Loss) ಪ್ರಾರಂಭಿಸುತ್ತದೆ. ಅಂದ ಹಾಗೆ ಕೂದಲು ಉದುರಲು ಇನ್ನೂ ಹಲವು ಕಾರಣಗಳಿವೆ. ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳ ಬದಲಿಗೆ ಕೆಲವು ಮನೆಮದ್ದು ನೀವು ಮಾಡಬಹುದು. ಇದು ಕೆಮಿಕಲ್ ಮುಕ್ತವಾಗಿದ್ದು, ಕೂದಲಿನ ಹಾನಿ ತಪ್ಪಿಸಲು ಸಹಾಯ ಮಾಡುತ್ತದೆ. ಕೂದಲಿಗೆ ಮನೆಮದ್ದು ಹಾಕುವುದು, ಕೂದಲಿನ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ.
ಕೂದಲಿನ ಹಾನಿ ತಪ್ಪಿಸಲು ಮನೆಮದ್ದು
ಆಹಾರ ತಜ್ಞ ಕಿರಣ್ ಕುಕ್ರೇಜಾ ಅವರು, ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಕೂದಲು ಉದುರುವಿಕೆ ನಿವಾರಣೆಗೆ ಕೆಲವು ಮನೆಮದ್ದು ಹೇಳಿದ್ದಾರೆ. ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಪುರುಷರು ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು ಎಂದಿದ್ದಾರೆ.
ಕರಿಬೇವಿನ ಎಲೆಗಳು
ಕರಿಬೇವಿನ ಎಲೆ ಕೂದಲಿಗೆ ಟಾನಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಕೂದಲಿನ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆ ಬೂದು ಕೂದಲು ಮತ್ತು ತಲೆಹೊಟ್ಟು ಸಮಸ್ಯೆಗೆ ಪರಿಹಾರ ನೀಡುತ್ತದೆ.
ಅರ್ಧ ಕಪ್ ತೆಂಗಿನ ಎಣ್ಣೆಗೆ ಒಂದು ಹಿಡಿ ಕರಿಬೇವಿನ ಎಲೆ ಹಾಕಿ, ಮಧ್ಯಮ ಉರಿಯಲ್ಲಿ 10 ನಿಮಿಷ ಬಿಸಿ ಮಾಡಿ. ಅದು ತಣ್ಣಗಾದಾಗ ಫಿಲ್ಟರ್ ಮಾಡಿ ಕೂದಲಿಗೆ ಮಸಾಜ್ ಮಾಡಿ. 1 ಗಂಟೆ ನಂತರ ಮೈಲ್ಡ್ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ದಾಸವಾಳ ಹೂವು
ದಾಸವಾಳ ವಿಟಮಿನ್ ಸಿ, ಫ್ಲೇವನಾಯ್ಡ್ಗಳು ಮತ್ತು ಅಮೈನೋ ಆಮ್ಲಗಳಂತಹ ಉತ್ಕರ್ಷಣ ನಿರೋಧಕ ಹೊಂದಿದೆ. ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಹೂವುಗಳು ಮತ್ತು ಎಲೆ ಕೂದಲಿಗೆ ಪ್ರಯೋಜನಕಾರಿ. ಇದು ಕೂದಲು ಉದುರುವುದನ್ನು ತಡೆದು ಪೋಷಿಸುತ್ತದೆ.
2 ಕಪ್ ಶುದ್ಧ ತೆಂಗಿನೆಣ್ಣೆಯಲ್ಲಿ 10 ಚೈನೀಸ್ ದಾಸವಾಳ ಹೂ ಬೆರೆಸಿ ಬಿಸಿ ಮಾಡಿ. ಫಿಲ್ಟರ್ ಮಾಡಿ. ರಾತ್ರಿ ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ ಮತ್ತು ಮರುದಿನ ಬೆಳಿಗ್ಗೆ ಶಾಂಪೂ ಬಳಸಿ ತೊಳೆಯಿರಿ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸಿ.
ಅಗಸೆ ಬೀಜಗಳು
ಅಗಸೆಬೀಜಗಳು ತಾಮ್ರ, ಮ್ಯಾಂಗನೀಸ್, ಸೆಲೆನಿಯಮ್, ರಂಜಕ, ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಪೋಷಕಾಂಶ ಹೊಂದಿವೆ. ದೇಹದ ನೈಸರ್ಗಿಕ ಉತ್ಕರ್ಷಣ ನಿರೋಧಕ ರಕ್ಷಣಾ ವ್ಯವಸ್ಥೆಗೆ ಸಹಕಾರಿ. ಈ ಪದಾರ್ಥಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ನೆತ್ತಿ ಆರ್ಧ್ರಕಗೊಳಿಸಲು ಮತ್ತು ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ.
2 ಟೀ ಚಮಚ ಅಲೋವೆರಾ ಜೆಲ್ನಲ್ಲಿ 1 ಚಮಚ ಅಗಸೆ ಬೀಜದ ಪುಡಿ ಮಿಶ್ರಣ ಮಾಡಿ. ಕೂದಲಿಗೆ ಅನ್ವಯಿಸಿ. ಸುಮಾರು 1 ಗಂಟೆ ನಂತರ ಉಗುರು ಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.
ಇದನ್ನೂ ಓದಿ: ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಹೋಗಲಾಡಿಸಲು ಈ ರೀತಿ ಮಾಡಿ, ಇಲ್ಲಿದೆ ಸುಲಭ ಉಪಾಯ
ಆಮ್ಲಾ ಬಳಕೆ
ಕೂದಲ ಪೋಷಣೆಗೆ ಆಮ್ಲಾ ಬಳಸಿ. ವಿಟಮಿನ್ ಸಿ ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ಒಂದು ಕಪ್ ತೆಂಗಿನ ಎಣ್ಣೆಯಲ್ಲಿ 4 ರಿಂದ 5 ಆಮ್ಲಾ 10 ನಿಮಿಷ ಕುದಿಸಿ. ಎಣ್ಣೆ ತಣ್ಣಗಾದಾಗ ಕೂದಲಿಗೆ ಮಸಾಜ್ ಮಾಡಿ. 1 ಗಂಟೆಯ ನಂತರ ಶಾಂಪೂ ಬಳಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ