Hair Loss: ಕೂದಲು ಉದುರುವಿಕೆ ತಡೆಯಲು ನೈಸರ್ಗಿಕ ಗಿಡಮೂಲಿಕೆಗಳನ್ನು ಹೀಗೆ ಬಳಸಿ

ಜೆನೆಟಿಕ್ಸ್ ಮತ್ತು ವಿಟಮಿನ್ ಕೊರತೆಯಿಂದ ಹಾರ್ಮೋನುಗಳ ಬದಲಾವಣೆಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ. ಕೂದಲು ಬೆಳೆಯಲು ಯಾವುದೇ ಮ್ಯಾಜಿಕ್ ಟ್ಯಾಬ್ಲೆಟ್ ಇಲ್ಲ. ಆದರೆ ಕೂದಲಿನ ಬೆಳವಣಿಗೆಗೆ ಗಿಡಮೂಲಿಕೆಗಳು ಉತ್ತೇಜನ ನೀಡುತ್ತವೆ ಎಂದು ಕೆಲವು ಸಂಶೋಧನೆಗಳು ಹೇಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರಕೃತಿ (Nature) ನಮಗೆ ಅನೇಕ ಔಷಧೀಯ (Medicine) ಹಾಗೂ ಗಿಡಮೂಲಿಕೆ (Herbal) ಸಸ್ಯಗಳನ್ನು (Trees) ನೀಡಿದೆ. ಮಹತ್ವದ ಪೋಷಕಾಂಶಗಳನ್ನು (Nutrition) ಒದಗಿಸಿದೆ. ಮುಖದ ಮೈಬಣ್ಣ ಸುಧಾರಿಸುವ ಫೇಸ್ ಮಾಸ್ಕ್‌ಗಳಿಂದ ಹಿಡಿದು ಕೂದಲನ್ನು ಸ್ಟ್ರಾಂಗ್ ಮತ್ತು ಸುಂದರಯುತವಾಗಿ ಮಾಡುವ ಹೇರ್ ವಾಶ್‌ ಗಳನ್ನು ಪ್ರಕೃತಿ ನಮಗೆ ಕೊಡುಗೆಯಾಗಿ ನೀಡಿದೆ. ಹೀಗೆ ನಾವು ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಹಾಗೆಯೇ ಗಿಡಮೂಲಿಕೆಗಳು ಪ್ರಕೃತಿಯು ಕೊಡಮಾಲ್ಪಟ್ಟಿರುವ ಪ್ರಮುಖ ಕೊಡುಗೆ ಆಗಿದೆ. ಇದನ್ನು ಇಂದು ವಿಶೇಷವಾಗಿ ಕೂದಲಿನ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕೂದಲು ಉದುರುವುದು ಇಂದು ಪುರುಷರು ಮತ್ತು ಮಹಿಳೆಯರಿಬ್ಬರ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ.

  ಜೆನೆಟಿಕ್ಸ್ ಮತ್ತು ವಿಟಮಿನ್ ಕೊರತೆಯಿಂದ ಕೂದಲು ಉದುರುವಿಕೆ ಸಮಸ್ಯೆ

  ಹಾಗಾಗಿ ಎಲ್ಲರೂ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕೂದಲು ಉದುರಲು ಕಾರಣಗಳು ಹಲವು ಇರಬಹುದು. ಜೆನೆಟಿಕ್ಸ್ ಮತ್ತು ವಿಟಮಿನ್ ಕೊರತೆಯಿಂದ ಹಾರ್ಮೋನುಗಳ ಬದಲಾವಣೆಯಿಂದ ಕೂದಲು ಉದುರುವಿಕೆ ಉಂಟಾಗುತ್ತದೆ.

  ಕೆಲವೊಮ್ಮೆ ಥೈರಾಯ್ಡ್ ಸಮಸ್ಯೆ ಇದ್ದವರಲ್ಲೂ ಕೂದಲು ಉದುರುವುದು, ಕೂದಲು ತೆಳುವಾಗುವಿಕೆ ಉಂಟಾಗುತ್ತದೆ. ಕೂದಲು ಬೆಳೆಯಲು ಯಾವುದೇ ಮ್ಯಾಜಿಕ್ ಟ್ಯಾಬ್ಲೆಟ್ ಇಲ್ಲ. ಕೂದಲಿನ ಬೆಳವಣಿಗೆಗೆ ಗಿಡಮೂಲಿಕೆಗಳು ಉತ್ತೇಜನ ನೀಡುತ್ತವೆ ಎಂದು ಕೆಲವು ಸಂಶೋಧನೆಗಳು ಹೇಳಿವೆ. ಹಾಗಾದರೆ ಕೂದಲು ಉದುರುವಿಕೆ ತಡೆಯುವ ಗಿಡಮೂಲಿಕೆಗಳ ಬಗ್ಗೆ ಇಲ್ಲಿ ತಿಳಿಯೋಣ.

  ಇದನ್ನೂ ಓದಿ: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

  ಬೆಟ್ಟದ ನೆಲ್ಲಿಕಾಯಿ

  ನಿಮ್ಮ ಕೂದಲಿನ ಬೆಳವಣಿಗೆ ಹೆಚ್ಚಿಸಲು ಬೆಟ್ಟದ ನೆಲ್ಲಿಕಾಯಿ ಅತ್ಯುತ್ತಮ ಮೂಲಿಕೆ. ಇದು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ವಿಟಮಿನ್ ಇ ಯಲ್ಲಿ ಸಮೃದ್ಧವಾಗಿದೆ. ಆಮ್ಲಾ ಸಾರವು ಕೂದಲು ಕಿರುಚೀಲಗಳ ಒಳಗಿನ ಜೀವಕೋಶಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.

  ಬೆಟ್ಟದ ನೆಲ್ಲಿಕಾಯಿಯನ್ನು ಅನ್ವಯಿಸುವುದು ಹೇಗೆ?

  ಕೂದಲಿಗೆ ಶಾಂಪೂ ಹಾಕುವ ಮೊದಲು ಐದರಿಂದ ಹತ್ತು ನಿಮಿಷಗಳ ಕಾಲ ಆಮ್ಲಾ ಎಣ್ಣೆ ಅಥವಾ ಅದರ ಸಾರದಿಂದ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಬೇಕು. ಆಮ್ಲಾ ಟ್ಯಾಬ್ಲೆಟ್ ಅಥವಾ ಪೂರಕ ರೂಪದಲ್ಲಿ ಲಭ್ಯವಿದೆ. ಬೇಕಾದರೆ ಅದನ್ನೂ ಸಹ ಬಳಸಬಹುದು. ಆದರೆ ಎಲ್ಲರಿಗೂ ಕೂದಲು ಆರೋಗ್ಯ ಹೆಚ್ಚಿಸಲು ಆಮ್ಲಾ ಉತ್ತಮ ಮಾರ್ಗ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ಇದನ್ನು ಕೂದಲಿಗೆ ಹಚ್ಚಿದ್ರೆ ಅಲರ್ಜಿ ಆಗುತ್ತದೆ.

  ಅಲೋವೆರಾ

  ಅಲೋವೆರಾ ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಅದ್ಭುತ ಗಿಡಮೂಲಿಕೆ. Researchgate.net ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಅಲೋವೆರಾ ಎಲೆಗಳು ಜೆಲ್ ತರಹದ ವಸ್ತು ಹೊಂದಿರುತ್ತವೆ. ಇದು ನೆತ್ತಿಯ ಆರೋಗ್ಯ ಸುಧಾರಿಸಲು ಪ್ರಯೋಜನಕಾರಿ ಆಗಿದೆ.

  ಹೇಗೆ ಅನ್ವಯಿಸಬೇಕು

  ಕೂದಲಿನ ಬೆಳವಣಿಗೆ ಹೆಚ್ಚಿಸಲು ಅಲೋವೆರಾ ಜೆಲ್ ಅಥವಾ ಜೆಲ್ ಉತ್ಪನ್ನ ಬಳಸಿ. ಅಲೋವೆರಾ ಶಾಂಪೂ ಮಾಡುವ ಮೊದಲು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಇದನ್ನು ನಿಯಮಿತವಾಗಿ ಮಾಡಿದರೆ ನಿಮ್ಮ ನೆತ್ತಿಯ ಮೇಲೆ ಅಲೋವೆರಾ ಉತ್ತಮ ಪರಿಣಾಮ ನೀಡುತ್ತದೆ.

  ಸಾ ಪಾಲ್ಮೆಟೊ ಸಸ್ಯ

  ಸಾ ಪಾಲ್ಮೆಟೊ ಸಸ್ಯದ ಸಾರವು ಅನೇಕ ಕೂದಲಿನ ಪೂರಕಗಳಲ್ಲಿ ಕಂಡು ಬರುತ್ತದೆ. ಗಿಡಮೂಲಿಕೆಯು ಅದರ ಸಕಾರಾತ್ಮಕ ಪರಿಣಾಮ ತೋರಿಸುತ್ತದೆ. ಈ ಬೆರ್ರಿಗಳಲ್ಲಿರುವ ಪೋಷಕಾಂಶಗಳು ಡಿಟಿಎಚ್ ಕೂದಲು ಕಿರುಚೀಲಗಳಿಗೆ ಹಾನಿಯಾಗದಂತೆ ತಡೆಯುತ್ತದೆ.

  ಸಾ ಪಾಲ್ಮೆಟೊ ತೆಗೆದುಕೊಳ್ಳುವುದು ಹೇಗೆ?

  ಸಾ ಪಾಮೆಟ್ಟೊವನ್ನು ಮೌಖಿಕವಾಗಿ ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ. ಎಂಟನೆಯ ವಾರದಲ್ಲಿ ನಿಮ್ಮ ಕೂದಲಿನ ಬೆಳವಣಿಗೆಯಲ್ಲಿ ನೀವು ಖಂಡಿತವಾಗಿಯೂ ಕೆಲವು ಸುಧಾರಣೆ ಕಾಣುತ್ತೀರಿ. ತೆಗೆದುಕೊಳ್ಳುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆಯಿರಿ.

  ರೋಸ್ಮರಿ ಎಣ್ಣೆ

  ರೋಸ್ಮರಿ ಎಣ್ಣೆ ತಲೆಬುರುಡೆಗೆ ಸಂಬಂಧಿಸಿದ ತುರಿಕೆ ಮತ್ತು ಫ್ಲೇಕಿಂಗ್ನಂತಹ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಲಕ್ಷಣಗಳು ಇದು ಕೂದಲಿನ ಬೆಳವಣಿಗೆಗೆ ಉತ್ತಮ ಆಯ್ಕೆಯಾಗಿದೆ.

  ರೋಸ್ಮರಿ ಎಣ್ಣೆ ಹೇಗೆ ಅನ್ವಯಿಸಬೇಕು?

  ರೋಸ್ಮರಿ ಎಣ್ಣೆಯ ಕೆಲವು ಹನಿಗಳನ್ನು ನೆತ್ತಿಯ ಮೇಲೆ ಅನ್ವಯಿಸಿ. ಐದರಿಂದ ಹತ್ತು ನಿಮಿಷಗಳವರೆಗೆ ಮಸಾಜ್ ಮಾಡಿ. ಮತ್ತು ತಕ್ಷಣ ಶಾಂಪೂ ಹಾಕಿ ತೊಳೆಯಿರಿ. ನಾಲ್ಕು ವಾರಗಳಲ್ಲಿ ನೀವು ಕೆಲವು ಬದಲಾವಣೆ ಕಾಣುತ್ತೀರಿ.

  ದಂಡೇಲಿಯನ್ ರೂಟ್

  ಈ ಮೂಲಿಕೆಯನ್ನು ಮೌಖಿಕವಾಗಿ ತೆಗೆದುಕೊಂಡಾಗ ಇದು ನೆತ್ತಿಯಲ್ಲಿ ಉರಿಯೂತ ಕಡಿಮೆ ಮಾಡುತ್ತದೆ. ಸೆಬೊರ್ಹೆಕ್, ಡರ್ಮಟೈಟಿಸ್ ಮತ್ತು ಡ್ಯಾಂಡ್ರಫ್‌ನಂತಹ ಉರಿಯೂತದ ನೆತ್ತಿಯ ಸ್ಥಿತಿಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪೂರಕವಾಗಿದೆ.

  ಇದನ್ನೂ ಓದಿ: ಕೂದಲು ಉದುರಿ ನೆತ್ತಿಯೇ ಬೋಳಾಗೋದೇಕೆ? ಕೆಲವು ಸರಳ ಮನೆ ಮದ್ದು ಟ್ರೈ ಮಾಡಿ

  ಹೇಗೆ ಅನ್ವಯಿಸಬೇಕು?

  ಬರ್ಡಾಕ್ ರೂಟ್ನೊಂದಿಗೆ ಸಂಯೋಜಿಸಿದಾಗ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ನೀವು 10-14 ದಿನಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.
  Published by:renukadariyannavar
  First published: