Hair Care: ಕೂದಲ ಆರೋಗ್ಯಕ್ಕೆ ಲಿಚಿ-ಅಲೋವೆರಾ ಹೇರ್ ಮಾಸ್ಕ್! ತಯಾರಿಸೋದು ಹೇಗೆ?

ಲಿಚಿ ಮತ್ತು ಅಲೋವೆರಾದಿಂದ ತಯಾರಿಸಿದ ಹೇರ್ ಮಾಸ್ಕ್ ನಿಮ್ಮ ಕೂದಲನ್ನು ಸುಂದರ ದಪ್ಪ ಮತ್ತು ಶೈನಿ ಆಗಿಸುತ್ತದೆ. ಇದು ಕೂದಲ ತುದಿ ಒಡೆಯುವ ಮತ್ತು ಉದುರುವ ಸಮಸ್ಯೆ ತೆಗೆದು ಹಾಕುತ್ತದೆ. ಇದಲ್ಲದೆ ಈ ಹೇರ್ ಮಾಸ್ಕ್‌ನಿಂದ ನೀವು ಇನ್ನೂ ಅನೇಕ ಪ್ರಯೋಜನ ಪಡೆಯಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯಾವುದೇ ಕಾರಣ (Causes) ಇಲ್ಲದೆ ನಿಮ್ಮ ಕೂದಲು (Hair) ಉದುರುತ್ತಿದೆಯೇ (Loss)? ನಿಮ್ಮ ಕೂದಲು ಇತರರ ಕೂದಲಿನಂತೆ ದಪ್ಪ (Thick) ಮತ್ತು ಉದ್ದ (Long) ಮತ್ತು ಕಪ್ಪು (Black) ಹಾಗೂ ಶೈನಿ ಆಗಿರಬೇಕು ಎಂದು ನೀವು ಬಯಸುತ್ತೀರಾ? ಇದು ಹೌದು ಎಂದಾದರೆ ಇದಕ್ಕಾಗಿ ಲಿಚಿ ಮತ್ತು ಅಲೋವೆರಾ ಮಿಶ್ರಣ ಅನ್ವಯಿಸಿ. ಲಿಚಿ ಮತ್ತು ಅಲೋವೆರಾದಿಂದ ತಯಾರಿಸಿದ ಹೇರ್ ಮಾಸ್ಕ್ ನಿಮ್ಮ ಕೂದಲನ್ನು ಸುಂದರ, ದಪ್ಪ ಮತ್ತು ಶೈನಿ ಆಗಿಸುತ್ತದೆ ಎಂಬುದನ್ನು ನೀವು ಟ್ರೈ ಮಾಡಬೇಕು. ಈ ಹೇರ್ ಮಾಸ್ಕ್ ಕೂದಲಿಗೆ ಸಂಪೂರ್ಣ ಪೋಷಣೆ ನೀಡುತ್ತದೆ.

    ಇದು ತುದಿ ಒಡೆಯುವ ಮತ್ತು ಉದುರುವ ಸಮಸ್ಯೆ ತೆಗೆದು ಹಾಕುತ್ತದೆ. ಇದಲ್ಲದೆ ಈ ಹೇರ್ ಮಾಸ್ಕ್‌ನಿಂದ ನೀವು ಇನ್ನೂ ಅನೇಕ ಪ್ರಯೋಜನ ಪಡೆಯಬಹುದು. ಲಿಚಿ ಮತ್ತು ಅಲೋವೆರಾ ಹೇರ್ ಮಾಸ್ಕ್ ತಯಾರಿಸುವ ವಿಧಾನ ಯಾವುದು ಎಂದು ಇಲ್ಲಿ ತಿಳಿಯೋಣ.

    ಲಿಚಿ ಮತ್ತು ಅಲೋವೆರಾ ಹೇರ್ ಮಾಸ್ಕ್ ತಯಾರಿಸಲು ಅಗತ್ಯ ಪದಾರ್ಥಗಳು

    ಲಿಚಿ - 10 ಮಾಗಿದ

    ತಾಜಾ ಅಲೋವೆರಾ ಜೆಲ್ - 2 ರಿಂದ 3 ಟೀ ಸ್ಪೂನ್

    ಹೇರ್ ಮಾಸ್ಕ್  ತಯಾರಿಸುವ ವಿಧಾನ ಹೀಗಿದೆ

    ಮೊದಲು, ಲಿಚಿಯ ಸಿಪ್ಪೆ ತೆಗೆಯಿರಿ. ನಂತರ ಒಂದು ಪಾತ್ರೆಯಲ್ಲಿ ಚೆನ್ನಾಗಿ ಲಿಚಿಯಿಂದ ರಸ ಹಿಂಡಿ. ತಿರುಳನ್ನು ಹೊರ ತೆಗೆಯಿರಿ. ಈಗ ಅದಕ್ಕೆ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಮೃದುವಾದ ರೀತಿಯಲ್ಲಿ ಸಿದ್ಧವಾದಾಗ, ಅದನ್ನು ನಿಮ್ಮ ಕೈಗಳು ಅಥವಾ ಬ್ರಷ್‌ನ ಸಹಾಯದಿಂದ ಕೂದಲಿಗೆ ಚೆನ್ನಾಗಿ ಅನ್ವಯಿಸಿ.

    ಇದನ್ನೂ ಓದಿ: ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದರೆ ಯಾವ ಸಮಸ್ಯೆ ಉಂಟಾಗುತ್ತದೆ?

    ಕೂದಲಿಗೆ ಹೇರ್ ಮಾಸ್ಕ್ ಅನ್ನು ಹೇಗೆ ಅನ್ವಯಿಸುವುದು?

    ಈ ಹೇರ್ ಮಾಸ್ಕ್ ಅನ್ನು ನೀವು ಕೂದಲು ಮತ್ತು ಬೇರುಗಳಿಗೆ ಚೆನ್ನಾಗಿ ಅನ್ವಯಿಸಿ. ಯಾವಾಗಲೂ ಕೂದಲ ಬೇರುಗಳಿಗೆ ಹೋಗುವಂತೆ ಮಾಸ್ಕ್ ಹಚ್ಚಿರಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ನೆತ್ತಿಯನ್ನು ಚೆನ್ನಾಗಿ ಮಸಾಜ್ ಮಾಡಿ. ನಂತರ ಕೂದಲ ಮಾಸ್ಕ್ ಸುಮಾರು 1 ರಿಂದ 2 ಗಂಟೆಗಳ ಕಾಲ ಕೂದಲಿನಲ್ಲಿ ಬಿಡಿ.

    ನಂತರ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಕೂದಲು ತೊಳೆಯುವಾಗ ಸೌಮ್ಯ ಶಾಂಪೂ ಬಳಸಿ. ನೈಸರ್ಗಿಕ ಕಂಡೀಷನಿಂಗ್ ಗುಣಲಕ್ಷಣಗಳು ಲಿಚಿಯಲ್ಲಿ ಕಂಡು ಬರುತ್ತವೆ. ಆದ್ದರಿಂದ ನೀವು ಶಾಂಪೂ ನಂತರ ಕಂಡಿಷನರ್ ಅನ್ನು ಬಳಸುವ ಅನಿವಾರ್ಯತೆ ಇಲ್ಲ.

    ಎಣ್ಣೆ ಹಚ್ಚುವುದರಿಂದ ಕೂದಲಿಗೆ ಪೋಷಣೆ

    ಎಣ್ಣೆ ಹಚ್ಚುವುದರಿಂದ ಕೂದಲಿಗೆ ಪೋಷಣೆ ದೊರೆಯುತ್ತದೆ. ಹೀಗಾಗಿ ಅನೇಕ ಹಿರಿಯರು ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚುವುದನ್ನು ಶಿಫಾರಸು ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ವಿವಿಧ ರೀತಿಯ ಕೇಶ ವಿನ್ಯಾಸದಿಂದ ಅನೇಕ ಜನರು ಕೂದಲಿಗೆ ಎಣ್ಣೆ ಹಚ್ಚುವುದನ್ನು ತಪ್ಪಿಸುತ್ತಾರೆ.

    ಕೂದಲಿಗೆ ಎಣ್ಣೆ ಹಚ್ಚದಿದ್ದರೆ ಅದು ನಿಮ್ಮ ಕೂದಲಿನ ಸೌಂದರ್ಯ ಹಾಳು ಮಾಡುತ್ತದೆ. ಕೂದಲಿಗೆ ಎಣ್ಣೆ ಹಚ್ಚದಿದ್ದರೆ ಆಗುವ ಅನಾನುಕೂಲತೆಗಳು ಯಾವವು ಎಂದು ತಿಳಿಯೋಣ?

    ಕೂದಲಿಗೆ ಎಣ್ಣೆ ಹಚ್ಚದೇ ಇರುವ ದುಷ್ಪರಿಣಾಮಗಳು

    ನೀವು ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚದಿದ್ದರೆ, ನಿಮ್ಮ ಕೂದಲಿಗೆ ಅದರಿಂದ ಸಾಕಷ್ಟು ಪೋಷಣೆ ಸಿಗಲ್ಲ. ಅಂತಹ ಸ್ಥಿತಿಯಲ್ಲಿ ಕೂದಲಿನಲ್ಲಿ ಅನೇಕ ಸಮಸ್ಯೆ ಇರಬಹುದು. ಅದರ ಬಗ್ಗೆ ತಿಳಿಯೋಣ. ಕೂದಲು ಒಣಗಿದಾಗ ಕೂದಲು ತುಂಬಾ ದುರ್ಬಲ ಆಗಿರುತ್ತದೆ.

    ಇದನ್ನೂ ಓದಿ: ಕೂದಲ ಆರೈಕೆಗೆ ಕಡಲೆ ಹಿಟ್ಟಿನ ಹೇರ್ ಮಾಸ್ಕ್; ತಯಾರಿಸೋದು ಹೇಗೆ?

    ಕೂದಲಿಗೆ ಎಣ್ಣೆ ಹಚ್ಚದೇ ಇದ್ದರೆ ಕೂದಲಿಗೆ ತೇವಾಂಶ ಸಿಗುವುದಿಲ್ಲ. ಎಣ್ಣೆ ಹಚ್ಚದಿರುವುದು ಕೂದಲು ಮತ್ತು ನೆತ್ತಿಯಲ್ಲಿ ತುರಿಕೆ ಮತ್ತು ಮೊಡವೆ ಉಂಟು ಮಾಡಬಹುದು. ಕೂದಲಿಗೆ ಎಣ್ಣೆ ಹಚ್ಚದ ಕಾರಣ, ನೆತ್ತಿ ತುಂಬಾ ಒಣಗುತ್ತದೆ. ಇದರಿಂದಾಗಿ ತಲೆಹೊಟ್ಟು ಹೆಚ್ಚಾಗುವ ಸಾಧ್ಯತೆ ಇದೆ.
    Published by:renukadariyannavar
    First published: