ಕೆಲವೊಮ್ಮೆ ನಮಗೆ ಇಡೀ ದೇಹದಲ್ಲಿ(Body) ಹಾಳಾದ ನೋವು (Pain) ಕಾಣಿಸಿಕೊಂಡರೆ ನಾವು ವೈದ್ಯರನ್ನು ಸಂಪರ್ಕಿಸದೆ ಯಾವುದಾದರೊಂದು ಆ್ಯಂಟಿಬಯೋಟಿಕ್ ಮಾತ್ರೆಯನ್ನು (Antibiotic Tablet) ಸೇವಿಸುತ್ತೇವೆ. ವೈದ್ಯರ ಸಲಹೆ ಪಡೆದುಕೊಳ್ಳದೆ ನಾವೇ ಮೆಡಿಕಲ್ ಸ್ಟೋರ್ ಗಳಿಗೆ ಹೋಗಿ ಆ್ಯಂಟಿಬಯೋಟಿಕ್ ಮಾತ್ರೆಯನ್ನು ತೆಗೆದುಕೊಂಡು ಬಂದು ಸೇವಿಸಿರುತ್ತೇವೆ. ನಮ್ಮ ದೇಹದ ನೋವು (Body Pain) ಅಲ್ಲಿಗೆ ಕಡಿಮೆಯಾದರೆ ನಾವು ತೆಗೆದುಕೊಂಡ ಮಾತ್ರೆ ಸರಿಯಾಗಿ ಕೆಲಸ ಮಾಡಿದೆ ಅಂತ ಅರ್ಥ.
ಅದೇ ನಾವು ತೆಗೆದುಕೊಂಡ ಆ್ಯಂಟಿಬಯೋಟಿಕ್ ಮಾತ್ರೆಯಿಂದಾಗಿ ನಮ್ಮ ಆರೋಗ್ಯದಲ್ಲಿ ಏರು-ಪೇರು ಆದರೆ ಅಥವಾ ಈ ರೋಗವನ್ನು ವಾಸಿ ಮಾಡದೆ ಮತ್ತೆ ಇನ್ನೊಂದು ರೋಗವನ್ನು ತಂದಿಡುವ ಅವಕಾಶಗಳು ಸಹ ಇರುತ್ತವೆ.
ಹೀಗೆ ವೈದ್ಯರ ಬಳಿ ಹೋಗದೆ ತಾವೇ ಮಾತ್ರೆ ತೆಗೆದುಕೊಂಡು ಇನ್ನ್ಯಾವುದೋ ರೋಗಕ್ಕೆ ತುತ್ತಾಗಿರುವುದನ್ನು ನಾವೆಲ್ಲಾ ಆಗಾಗ್ಗೆ ಈ ಟಿವಿ ನ್ಯೂಸ್ ಗಳಲ್ಲಿ ನೋಡುತ್ತಿರುತ್ತೇವೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ನಾವು ಯಾವುದೋ ಒಂದು ರೋಗಕ್ಕೆ ಚಿಕಿತ್ಸೆ ಪಡೆಯುವಾಗ ತೆಗೆದುಕೊಳ್ಳುವ ಆ್ಯಂಟಿಬಯೋಟಿಕ್ ಗಳು ಸಹ ಪ್ರತಿಕ್ರಿಯೆ ತೋರಿಸುತ್ತವೆ.
ಏನಿದು ವಿಚಿತ್ರ ಘಟನೆ ನಡೆದಿರೋದು ನೋಡಿ..
ವಿಚಿತ್ರವಾದ ಒಂದು ಘಟನೆಯಲ್ಲಿ ಪ್ರತಿಜೀವಕಗಳಿಗೆ ವಿಲಕ್ಷಣ ಪ್ರತಿಕ್ರಿಯೆಯನ್ನು ಅನುಭವಿಸಿದ ನಂತರ ಮಹಿಳೆಯ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗುವುದಲ್ಲದೆ, ಅದರ ಮೇಲೆ ಕಪ್ಪು ಕೂದಲು ಸಹ ಬೆಳೆದಿರುವ ಅಪರೂಪದ ಪ್ರಕರಣವನ್ನು ವೈದ್ಯರು ಕಂಡು ಹಿಡಿದಿದ್ದಾರೆ.
ಬ್ರಿಟಿಷ್ ಮೆಡಿಕಲ್ ಜರ್ನಲ್ ಕೇಸ್ ರಿಪೋರ್ಟ್ ಪ್ರಕಾರ, ಮಹಿಳೆ ಗುದನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು 14 ತಿಂಗಳ ಹಿಂದೆ ಜಪಾನ್‌ನಲ್ಲಿ ಚಿಕಿತ್ಸೆ ಪ್ರಾರಂಭಿಸಿದರು. ತನ್ನ ಕೀಮೋಥೆರಪಿಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು, 60 ರ ಹರೆಯದ ಮಹಿಳೆ ಮಿನೋಸೈಕ್ಲಿನ್ ಅನ್ನು ತೆಗೆದುಕೊಳ್ಳುತ್ತಿದ್ದಳು, ಇದನ್ನು ಮೊಡವೆಯಿಂದ ನ್ಯುಮೋನಿಯಾದವರೆಗೆ ಎಲ್ಲದಕ್ಕೂ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಮಿನೋಸೈಕ್ಲಿನ್ ನಿಂದಾಗಿ ಬ್ಲ್ಯಾಕ್ ಹೇರ್ರಿ ಟಂಗ್ ಕಾಯಿಲೆಗೆ ತುತ್ತಾದ ಮಹಿಳೆ
ಪಾನಿಟುಮಾಬ್-ಪ್ರೇರಿತ ಚರ್ಮದ ಗಾಯಗಳನ್ನು ತಡೆಗಟ್ಟಲು ಈ ಮಹಿಳೆ ದಿನಕ್ಕೆ 100 ಮಿಲಿ ಗ್ರಾಂ ಮಿನೋಸೈಕ್ಲಿನ್ ತೆಗೆದುಕೊಳ್ಳುವುದನ್ನು ಹಾಗೆಯೇ ಮುಂದುವರಿಸಿದ್ದಾರೆ ಎಂದು ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ರೋಗಿಗೆ ಔಷಧ-ಪ್ರೇರಿತ ಹೈಪರ್ಪಿಗ್ಮೆಂಟೇಶನ್ ಮತ್ತು ಕಪ್ಪು, ಕೂದಲಿನ ನಾಲಿಗೆ ಎಂದರೆ ಬ್ಲ್ಯಾಕ್ ಹೇರ್ರಿ ಟಂಗ್ (ಬಿಎಚ್‌ಟಿ) ಕಾಯಿಲೆ ಅಂತ ಪತ್ತೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಈ ಮಹಿಳೆಯ ಮುಖವು ಬೂದು ಬಣ್ಣಕ್ಕೆ ತಿರುಗಿದೆ ಎಂದು ವೈದ್ಯರು ಕಂಡು ಕೊಂಡಿದ್ದಾರೆ ಎಂದು ಮೆಟ್ರೊ ವರದಿ ಮಾಡಿದೆ. ರೋಗಿಯು ವೈದ್ಯರ ಮುಂದೆ ತಮ್ಮ ಬಾಯಿಯನ್ನು ತೆರೆದು ತೋರಿಸಿದಾಗ ಅವರು ಮತ್ತೊಮ್ಮೆ ದಿಗ್ಭ್ರಮೆಗೊಂಡರು. ಏಕೆಂದರೆ ಅವರ ನಾಲಿಗೆಯ ಮೇಲೆ ಕಪ್ಪು ಮತ್ತು ಕಂದು ಬಣ್ಣದ ಕೂದಲಿನಂತಹ ಟೇಸ್ಟ್ ಬಡ್ ಗಳ ಪದರು ಬಂದಿರುವುದನ್ನು ಬಹಿರಂಗಪಡಿಸಿದರು.
ಆಕೆಯ ಮುಖದ ಮೇಲಿನ ಬೂದು ಬಣ್ಣದ ತೇಪೆಗಳು ಮಿನೋಸೈಕ್ಲಿನ್-ಪ್ರೇರಿತ ಚರ್ಮದ ಹಾನಿಯ ಲಕ್ಷಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಏಕೆಂದರೆ ಮಿನೋಸೈಕ್ಲಿನ್ ಆಕ್ಸಿಡೀಕರಣಗೊಂಡಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ವೈದ್ಯರು ಆಕೆಯ ಔಷಧಿಗಳನ್ನು ಮೊದಲು ಬದಲಾಯಿಸಿದರು.
ಆರು ವಾರಗಳ ನಂತರ ಸಹಜ ಸ್ಥಿತಿಗೆ ಬಂದ ಮಹಿಳೆ ಆರೋಗ್ಯ
ಆರು ವಾರಗಳ ನಂತರ, ಮಹಿಳೆಯ ಮುಖದ ವರ್ಣದ್ರವ್ಯ ಮತ್ತು ಬಿಎಚ್‌ಟಿ ಕಾಯಿಲೆಯು ಗಮನಾರ್ಹವಾಗಿ ಸುಧಾರಿಸಿದೆ" ಎಂದು ವೈದ್ಯರು ಹೇಳಿದ್ದಾರೆ. ಆದರೆ ಇದು ಯಾವಾಗ ಸಂಭವಿಸಿತು ಎಂದು ಅವರು ನಿಖರವಾಗಿ ಹೇಳಲಿಲ್ಲ. ಆದರೆ ಇದು ಆದದ್ದು ಮಾತ್ರ ಮಿನೋಸೈಕ್ಲಿನ್ ನ ಅಡ್ಡ ಪರಿಣಾಮದಿಂದಾಗಿ ಅಂತ ಸೂಚಿಸಿತು.
ಈಗ ವೈದ್ಯರು ತಮ್ಮ ವರದಿಯಲ್ಲಿ ಈ ಅಪರೂಪದ ವೈದ್ಯಕೀಯ ಸ್ಥಿತಿಯ ಪ್ರಕರಣದಿಂದಾಗಿ ಕೆಲವು ಪ್ರಮುಖ ಕಲಿಕೆಯ ಅಂಶಗಳನ್ನು ಉಲ್ಲೇಖಿಸಿದ್ದಾರೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ