• Home
  • »
  • News
  • »
  • lifestyle
  • »
  • Castor Oil: ಹರಳೆಣ್ಣೆಯನ್ನು ಹೀಗೆ ಯೂಸ್ ಮಾಡಿದ್ರೆ ಕೂದಲು ಉದುರೋದು ನಿಲ್ಲುತ್ತೆ

Castor Oil: ಹರಳೆಣ್ಣೆಯನ್ನು ಹೀಗೆ ಯೂಸ್ ಮಾಡಿದ್ರೆ ಕೂದಲು ಉದುರೋದು ನಿಲ್ಲುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶತಮಾನಗಳಿಂದ ಹರಳೆಣ್ಣೆಯನ್ನು ಕೂದಲ ಆರೈಕೆಗೆ ಬಳಕೆ ಮಾಡಲಾಗುತ್ತಿದೆ. ಈ ಮನೆಮದ್ದು ಎಷ್ಟೋ ಜನರ ಕೂದಲ ಸಮಸ್ಯೆ ಕಡಿಮೆ ಮಾಡಿದೆ. ಕೆಲವೊಮ್ಮೆ ಹರಳೆಣ್ಣೆಯನ್ನು ಸರಿಯಾಗಿ ಬಳಸದೇ ಹೋದರೆ ಹೆಚ್ಚು ಪರಿಣಾಮ ಸಿಗಲ್ಲ. ಕೂದಲಿನ ಬೆಳವಣಿಗೆಗೆ ಹರಳೆಣ್ಣೆಯನ್ನು ಹೇಗೆ ಬಳಸಬೇಕು ಅಂತಾ ಇಲ್ಲಿ ನೋಡೋಣ.

ಮುಂದೆ ಓದಿ ...
  • Share this:

    ಪರಿಸರ ಮಾಲಿನ್ಯದಿಂದ (Environment Pollution) ಕೂದಲು ಒಣಗಿ (Dry Hair) ನಿರ್ಜೀವ ಆಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ (Winter) ಕೂದಲು ಹೆಚ್ಚು ಒಣಗುತ್ತವೆ. ಇದು ಕೂದಲ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ (Side Effects) ಬೀರುತ್ತದೆ. ಮತ್ತು ಕೂದಲ ತುದಿ ಒಡೆಯಲು ಪ್ರಾರಂಭಿಸುತ್ತವೆ. ಕೂದಲಿನ ಸಮಸ್ಯೆಗೆ ಕ್ಯಾಸ್ಟರ್ ಆಯಿಲ್ (Castor Oil) ಅನ್ನು ಶತಮಾನಗಳಿಂದ ಬಳಕೆ ಮಾಡಲಾಗುತ್ತಿದೆ. ಈ ಮನೆಮದ್ದು ಎಷ್ಟೋ ಜನರ ಕೂದಲ ಸಮಸ್ಯೆ ಕಡಿಮೆ ಮಾಡಿದೆ. ಕೆಲವೊಮ್ಮೆ ಹರಳೆಣ್ಣೆಯನ್ನು ಸರಿಯಾಗಿ ಬಳಸದೇ ಹೋದರೆ ಹೆಚ್ಚು ಪರಿಣಾಮ ಸಿಗಲ್ಲ. ಕೂದಲಿನ ಬೆಳವಣಿಗೆಗೆ ಹರಳೆಣ್ಣೆಯನ್ನು ಹೇಗೆ ಬಳಸಬೇಕು ಅಂತಾ ಇಲ್ಲಿ ನೋಡೋಣ. ಜೊತೆಗೆ ಹರಳೆಣ್ಣೆಯ ಪ್ರಯೋಜನಗಳ ಬಗ್ಗೆಯೂ ತಿಳಿಯೋಣ.


    ಹರಳೆಣ್ಣೆ ಕೂದಲ ಬೆಳವಣಿಗೆ ಹೆಚ್ಚಿಸುತ್ತದೆ


    ರೊಮೇನಿಯಾದ ಕರೋಲ್ ಡೇವಿಲಾ ಯೂನಿವರ್ಸಿಟಿ ಆಫ್ ಮೆಡಿಸಿನ್ ಮತ್ತು ಫಾರ್ಮಸಿಯ ಸಂಶೋಧಕ ಡುಮಿತ್ರು ಲುಪುಲಿಯಾಸಾ ಅವರು 2008 ರಲ್ಲಿ ಕೂದಲಿಗೆ ಹರಳೆಣ್ಣೆ ಪ್ರಯೋಜನಗಳ ಕುರಿತು ಸಂಶೋಧನೆ ನಡೆಸಿದ್ದಾರೆ.


    ಅವರ ಪ್ರಕಾರ, ವಿರೇಚಕ ಶುದ್ಧೀಕರಣದ ಪರಿಣಾಮ ಹೊಂದಿದೆ. ಹರಳೆಣ್ಣೆ ಪ್ರಾಚೀನ ಕಾಲದಿಂದಲೂ ಬಳಕೆ ಮಾಡಲಾಗುತ್ತಿದೆ. ಕೂದಲು ಉದುರುವಿಕೆ ತಡೆಗೆ ಇದು ಪ್ರಯೋಜನ ನೀಡುತ್ತದೆ ಎಂದು ಸಂಶೋಧನೆ ಹೇಳಿದೆ.




    ಕೂದಲಿನ ಬೆಳವಣಿಗೆಗೆ ಹರಳೆಣ್ಣೆ ಹೇಗೆ ಕೆಲಸ ಮಾಡುತ್ತದೆ?


    ಹರಳೆಣ್ಣೆ ಬೀಜದಿಂದ ಪಡೆದ ಕ್ಯಾಸ್ಟರ್ ಆಯಿಲ್ ರಿಸಿನೋಲಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಇದು ಒಂದು ರೀತಿಯ ಕೊಬ್ಬಿನಾಮ್ಲ. ಉರಿಯೂತದ ವಿರುದ್ಧ ಹೋರಾಡುತ್ತದೆ. ನೆತ್ತಿಗೆ ರಕ್ತದ ಹರಿವು ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ನೆತ್ತಿಯ ಶುಷ್ಕತೆ ತೊಡೆದು ಹಾಕುತ್ತದೆ.


    ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ತಲೆಹೊಟ್ಟು ಕಡಿಮೆ ಮಾಡುತ್ತದೆ. ಹರಳೆಣ್ಣೆ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ಗುಣ ಹೊಂದಿದೆ. ಆಕ್ಸಿಡೇಟಿವ್ ಒತ್ತಡ ಕಡಿಮೆ ಆಗುತ್ತದೆ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಒಮೆಗಾ 6 ಕೊಬ್ಬಿನಾಮ್ಲ ಹೊಂದಿದೆ. ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ.


    ಉದ್ದ ಮತ್ತು ದಪ್ಪ ಕೂದಲಿಗಾಗಿ ಹರಳೆಣ್ಣೆ ಹೇಗೆ ಬಳಸುವುದು?


    ನೆತ್ತಿಗೆ ಮಸಾಜ್ ಮಾಡಿ


    ನೆತ್ತಿಯ ಆರೋಗ್ಯಕ್ಕೆ ಮತ್ತು ತಲೆಹೊಟ್ಟು ಸಮಸ್ಯೆ ನಿವಾರಣೆಗೆ ಮತ್ತು ಕೂದಲಿನ ಬೆಳವಣಿಗೆಗೆ ನೆತ್ತಿಯ ಮಸಾಜ್ ಮಾಡಿ. ಬೆರಳ ತುದಿಯಿಂದ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡಿ. 10 ನಿಮಿಷ ಮಾಡಿ. ನಂತರ 30 ನಿಮಿಷ ಕಾಲ ಕೂದಲು ಸ್ಟೀಮರ್ ಬಳಸಿ. ಇದು ತೈಲವನ್ನು ವಾಸ್ತವವಾಗಿ ನೆತ್ತಿಯೊಳಗೆ ಹೀರಿಕೊಳ್ಳಲು ಸಹಕಾರಿ. ಒಂದು ಗಂಟೆಯ ನಂತರ ಕೂದಲು ತೊಳೆಯಿರಿ.


    ನೆತ್ತಿ ಮತ್ತು ಕೂದಲು ಕಿರುಚೀಲ


    ಕೂದಲನ್ನು ಬಲಪಡಿಸಲು, ನೆತ್ತಿ ಮತ್ತು ಕೂದಲಿನ ಕೋಶಕವನ್ನು ತೇವಗೊಳಿಸಲು ಹರಳೆಣ್ಣೆ ಸಹಕಾರಿ. ಒಂದು ಚಮಚ ಕ್ಯಾಸ್ಟರ್ ಆಯಿಲ್‌ನಲ್ಲಿ ಚಮಚ ಜೊಜೊಬಾ ಮತ್ತು ಚಮಚ ತೆಂಗಿನ ಎಣ್ಣೆ ಸೇರಿಸಿ ಮಿಶ್ರಣ ಮಾಡಿ. ಇದನ್ನು ನೆತ್ತಿ ಮತ್ತು ಕೂದಲು ಕಿರುಚೀಲಗಳ ಮೇಲೆ ಸಂಪೂರ್ಣವಾಗಿ ಅನ್ವಯಿಸಿ. ತೊಳೆಯುವ ಮೊದಲು ಒಂದು ಗಂಟೆ ಬಿಡಬಹುದು.


    ನಿಂಬೆ ಜೊತೆ ಹರಳೆಣ್ಣೆ ಬಳಕೆ


    ವಿಟಮಿನ್ ಸಿ ಸಮೃದ್ಧ ನಿಂಬೆಯು ಕೂದಲಿನ ಸಮಸ್ಯೆ ನಿವಾರಿಸುತ್ತದೆ. ಹೊಳಪನ್ನು ತರುತ್ತದೆ. ಒಂದು ಚಮಚ ನಿಂಬೆ ರಸ ಮತ್ತು ಚಮಚ ಕ್ಯಾಸ್ಟರ್ ಆಯಿಲ್ ಮಿಶ್ರಣ ಮಾಡಿ. ಕೂದಲಿಗೆ ಹಚ್ಚಿ. ಒಂದು ಗಂಟೆಯ ನಂತರ ಸೌಮ್ಯವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.


    ಇದನ್ನೂ ಓದಿ: ಬ್ರೌನ್ ಬ್ರೆಡ್​ ಅನ್ನು ಹೀಗೆ ತಿಂದ್ರೆ ಬಿಪಿ ಸಮಸ್ಯೆಗೆ ಪರಿಹಾರ ಸಿಗುತ್ತೆ


    ಅಲೋ ವೆರಾ ಮತ್ತು ಹರಳೆಣ್ಣೆ


    ಅಲೋವೆರಾ, ವಿಟಮಿನ್ ಇ ಮತ್ತು ಸಿ ಯಲ್ಲಿ ಸಮೃದ್ಧವಾಗಿದೆ, ಪೋಷಣೆಯನ್ನು ಒದಗಿಸುತ್ತದೆ. ಒಂದು ಚಮಚ ಹರಳೆಣ್ಣೆ , ಒಂದು ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ. ನೆತ್ತಿ ಮತ್ತು ಕೂದಲಿಗೆ ಅನ್ವಯಿಸಿ. ಗಂಟೆಯ ನಂತರ ಕೂದಲು ತೊಳೆಯಿರಿ.

    Published by:renukadariyannavar
    First published: