ಬಹಳ ಸಮಯದಿಂದ ಕೂದಲು ಉದುರುವ ಸಮಸ್ಯೆ (Hair Loss Problem) ತಲೆಯನ್ನೇ ಬೋಳು (Bald) ಮಾಡುವ ಆತಂಕ ಮನೆ ಮಾಡುವಂತೆ ಮಾಡುತ್ತದೆ. ಅದು ತಲೆಹೊಟ್ಟು (Dandruff) ಮತ್ತು ನೆತ್ತಿಯ ತುರಿಕೆಗೆ ಸಹ ಕಾರಣವಾಗಿ ಬಿಡುತ್ತೆ. ಅನೇಕ ಉತ್ಪನ್ನಗಳನ್ನು (Products) ಬಳಸಿದ ನಂತರವೂ ಹೆಚ್ಚಿನ ಪರಿಣಾಮ ಅಥವಾ ಕೂದಲು ಸಮಸ್ಯೆ ಕಡಿಮೆ ಆಗೋದೇ ಇಲ್ಲ. ಹಾಗೇ ಸಮಸ್ಯೆ ನಿಮಗೂ ಇದ್ದರೆ ಕೂದಲಿನ ಆರೈಕೆ ಜೊತೆಗೆ ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ಮಾಡಿ. ಆಹಾರ ಮತ್ತು ಕೂದಲ ರಕ್ಷಣೆಗೆ ದಿನಚರಿಯಲ್ಲಿ ಅನೇಕ ಬದಲಾವಣೆ ಮಾಡುವುದು ಉತ್ತಮ. ಅದರ ಜೊತೆಗೆ ಕೂದಲ ಆರೈಕೆಗೆ ಉತ್ತಮ ಹೇರ್ ಟಾನಿಕ್ ಬಳಸಿದರೆ ಸಮಸ್ಯೆ ನಿಲ್ಲುತ್ತದೆ.
ದಪ್ಪ ಮತ್ತು ಹೊಳೆಯುವ ಕೂದಲಿಗಾಗಿ ಹೇರ್ ಟಾನಿಕ್
ದಪ್ಪ ಮತ್ತು ಹೊಳೆಯುವ ಕೂದಲು ಹೊಂದಲು ನೀವು ಸಹ ಮನೆಯಲ್ಲೇ ಹೇರ್ ಟಾನಿಕ್ ತಯಾರಿಸಿ ಬಳಕೆ ಮಾಡಬಹುದು. ಇದರಿಂದ ಹದಿನೈದು ದಿನಗಳಲ್ಲಿ ಕೂದಲು ಉದುರುವುದು ನಿಲ್ಲುವ ಜೊತೆಗೆ ಫಲಿತಾಂಶ ಸಿಗುತ್ತದೆ. ಹೇರ್ ಟಾನಿಕ್ ಬಳಸುವುದರಿಂದ ಡ್ಯಾಂಡ್ರಫ್ ಮತ್ತು ನೆತ್ತಿಯ ತುರಿಕೆ ಕಡಿಮೆ ಆಗುತ್ತದೆ.
ಕೂದಲಿನ ಸಮಸ್ಯೆ ನಿವಾರಣೆಗೆ ಹೇರ್ ಟಾನಿಕ್ ತಯಾರಿಸುವುದು ಹೇಗೆ? ಮೆಂತ್ಯ ಮತ್ತು ಬೆಟ್ಟದ ನೆಲ್ಲಿಕಾಯಿ ಟಾನಿಕ್
ಮೆಂತ್ಯ ಮತ್ತು ಬೆಟ್ಟದ ನೆಲ್ಲಿಕಾಯಿ ಟಾನಿಕ್ ತಯಾರಿಸಲು 20 ಗ್ರಾಂ ಒಣಗಿದ ಬೆಟ್ಟದ ನೆಲ್ಲಿಕಾಯಿ, 3 ಟೀ ಚಮಚ ಮೆಂತ್ಯ ಬೀಜ ಮತ್ತು 10 ಗ್ರಾಂ ಶಿಕಾಕಾಯಿಯನ್ನು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಎರಡು ಲೋಟ ನೀರು ಹಾಕಿ ರಾತ್ರಿಯಿಡಿ ಇಡಿ. ಬೆಳಿಗ್ಗೆ ಕಡಿಮೆ ಉರಿಯಲ್ಲಿ ಕುದಿಸಿ. ನೀರು ಅರ್ಧ ಉಳಿದಿರುವಾಗ ಅದನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
ನಂತರ ನೀರನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ, ಶಾಂಪೂ ಮಾಡಿದ ನಂತರ ಮೆಂತ್ಯ-ಆಮ್ಲಾ ಟಾನಿಕ್ ಅನ್ನು ಕೂದಲಿನ ಬೇರುಗಳಿಗೆ ಸಿಂಪಡಿಸಿ. ನಂತರ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದನ್ನು ಎಣ್ಣೆ ಮಸಾಜ್ ಜೊತೆ ಬಳಸಬಹುದು.
ಮೆಂತ್ಯ ಮತ್ತು ಆಮ್ಲಾ ಟಾನಿಕ್ ಹೇಗೆ ಪ್ರಯೋಜನಕಾರಿ
ಮೆಂತ್ಯ ಮತ್ತು ಆಮ್ಲಾ ಟಾನಿಕ್, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ಕೂದಲಿನ ಸಮಸ್ಯೆ ನಿವಾರಿಸುತ್ತದೆ. ಮೆಂತ್ಯ ಬೀಜಗಳು ಕೂದಲಿನ ಬೆಳವಣಿಗೆ ಉತ್ತೇಜಿಸಲು ಮತ್ತು ಕೂದಲನ್ನು ಬಲಪಡಿಸಲು ಸಹಕಾರಿ. ಶಿಕಾಕೈ ಉತ್ಕರ್ಷಣ ನಿರೋಧಕ. ಶಿಕಾಕೈ ಕೂದಲಿನ ತುರಿಕೆ ನಿವಾರಣೆಗೆ ಹಾಗೂ ತಲೆಹೊಟ್ಟು ನಿವಾರಣೆಗೆ ಸಹಕಾರಿ.
ಈರುಳ್ಳಿ ಮತ್ತು ಕರಿಬೇವಿನ ಟಾನಿಕ್
ಈರುಳ್ಳಿ, ಕರಿಬೇವಿನ ಎಲೆ ಟಾನಿಕ್ ಮಾಡಲು, ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರನ್ನು ಬಿಸಿ ಮಾಡಿ. ಈಗ ಎರಡು ಮಧ್ಯಮ ಗಾತ್ರದ ಈರುಳ್ಳಿ ಕತ್ತರಿಸಿ ಅದರಲ್ಲಿ ಹಾಕಿ. 3 ಚಮಚ ಮೆಂತ್ಯ ಬೀಜಗಳು, 3 ಚಮಚ ಫೆನ್ನೆಲ್ ಬೀಜಗಳು ಮತ್ತು ಎರಡು ಹಿಡಿ ಕರಿಬೇವಿನ ಎಲೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬೇಯಿಸಿ. ನೀರು ಅರ್ಧಕ್ಕೆ ಬಂದಾಗ ಫಿಲ್ಟರ್ ಮಾಡಿ ಮತ್ತು ತಣ್ಣಗಾದ ನಂತರ ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ.
ಈರುಳ್ಳಿ, ಕರಿಬೇವಿನ ಎಲೆ ಟಾನಿಕ್ ಅನ್ನು ಶಾಂಪೂ ಮಾಡಿದ ನಂತರ ಕೂದಲ ಬೇರುಗಳಿಗೆ ಸಿಂಪಡಿಸಬಹುದು. ಇದನ್ನು ಸ್ಪ್ರೇ ಮಾಡಿ ಚೆನ್ನಾಗಿ ಮಸಾಜ್ ಮಾಡಿ. ಮತ್ತು ಒಂದು ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಎಣ್ಣೆ ಮಸಾಜ್‌ನೊಂದಿಗೆ ಬಳಸಬಹುದು. ಟಾನಿಕ್ ನಲ್ಲಿ ಈರುಳ್ಳಿ ರಸ ಕೂದಲು ಉದುರುವಿಕೆ ತಡೆಯುತ್ತದೆ. ಕೂದಲಿನ ಇತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಇದನ್ನೂ ಓದಿ: ಉಬ್ಬಿದ ಕಣ್ಣುಗಳು ಹಾಗೂ ಕಪ್ಪು ವರ್ತುಲ ಹೋಗಲಾಡಿಸಲು ಇಲ್ಲಿದೆ ನೈಸರ್ಗಿಕ ಟಿಪ್ಸ್
ಕೂದಲಿನ ಬೆಳವಣಿಗೆ ಹೆಚ್ಚಿಸುತ್ತದೆ. ಕೂದಲು ಕಿರುಚೀಲಗಳಿಗೆ ಗಂಧಕವೂ ಅಗತ್ಯ. ಈರುಳ್ಳಿ ರಸದಲ್ಲಿ ಆಂಟಿಆಕ್ಸಿಡೆಂಟ್‌ಗಳು ಇವೆ. ಇದು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಕರಿಬೇವಿನ ಎಲೆಗಳು ಕೂದಲಿಗೆ ಔಷಧಿ. ಕೂದಲು ಉದುರುವಿಕೆ ತಡೆಯುತ್ತದೆ. ಕೂದಲನ್ನು ಬಲಪಡಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ