• Home
  • »
  • News
  • »
  • lifestyle
  • »
  • Hair Care: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!

Hair Care: ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ವಿಶೇಷ ಹೇರ್ ಟಾನಿಕ್ ಮನೆಮದ್ದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದದಲ್ಲಿ ಕೂದಲು ಉದುರುವಿಕೆ ತಡೆಗೆ ಕೆಲವು ಗಿಡಮೂಲಿಕೆಗಳು ಇವೆ. ಅವುಗಳನ್ನು ಕೂದಲಿಗೆ ಜೀವರಕ್ಷಕ ಎಂದು ಹೇಳಲಾಗುತ್ತದೆ. ಗಿಡಮೂಲಿಕೆಗಳಿಂದ ತಯಾರಿಸಿದ ಹೇರ್ ಟಾನಿಕ್ ನಿಮ್ಮ ಕೂದಲ ಸಮಸ್ಯೆ ನಿವಾರಿಸಲು ಹೆಚ್ಚು ಪರಿಣಾಮಕಾರಿ ಆಗಿದೆ. ಹಾಗಾದ್ರೆ ಈ ಹೇರ್ ಟಾನಿಕ್ ನ್ನು ಯಾವ ಗಿಡಮೂಲಿಕೆ ಬಳಸಿ ಮಾಡ್ತಾರೆ ಅನ್ನೋದನ್ನ ನೋಡೋಣ.

ಮುಂದೆ ಓದಿ ...
  • Share this:

    ಬದಲಾಗುತ್ತಿರುವ ಋತುಮಾನದಲ್ಲಿ ಕೂದಲು ಉದುರುವ ಸಮಸ್ಯೆ (Hair Fall Problem) ಬಹುತೇಕ ಜನರನ್ನು ಕಾಡುತ್ತಾ ಇದೆ. ಶುಷ್ಕ ಗಾಳಿಯು ನಿಮ್ಮ ಕೂದಲಿನ ತೇವಾಂಶ ತೆಗೆದು ಹಾಕುತ್ತದೆ. ಇದು ನಿಮ್ಮ ಕೂದಲ ಆರೋಗ್ಯ (Hair Health) ಹಾಳು ಮಾಡುತ್ತದೆ ಜೊತೆಗೆ ಕೂದಲು ಒಣಗುವುದು (Hair Dryness) ಮತ್ತು ಉದುರುವುದು, ಹೊಟ್ಟು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೀವು ಈಗಾಗಲೇ ಹಲವು ಉತ್ಪನ್ನಗಳನ್ನು ಬಳಸಿ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಿರಬಹುದು. ಆದರೆ ಅದು ನಿಮಗೆ ಫಲಿತಾಂಶ ನೀಡದೇ ಸಮಸ್ಯೆ ಹಾಗೇ ಉಳಿದುಕೊಂಡಿರಬಹುದು. ಇದಕ್ಕಾಗಿ ನಾವು ಇವತ್ತು ಕೆಲವು ಗಿಡಮೂಲಿಕೆಗಳಿಂದ ವಿಶೇಷ ಹೇರ್ ಟಾನಿಕ್ ಹೇಗೆ ಮಾಡುವುದು ಅಂತಾ ನೋಡೋಣ.


    ಕೂದಲು ಉದುರುವಿಕೆ ತಡೆಯುತ್ತವೆ ಕೆಲವು ಗಿಡಮೂಲಿಕೆಗಳು


    ಆಯುರ್ವೇದದಲ್ಲಿ ಕೂದಲು ಉದುರುವಿಕೆ ತಡೆಗೆ ಕೆಲವು ಗಿಡಮೂಲಿಕೆಗಳು ಇವೆ. ಅವುಗಳನ್ನು ಕೂದಲಿಗೆ ಜೀವರಕ್ಷಕ ಎಂದು ಹೇಳಲಾಗುತ್ತದೆ. ಆದರೆ ಇದಕ್ಕಿಂತ ಗಿಡಮೂಲಿಕೆಗಳಿಂದ ತಯಾರಿಸಿದ ಹೇರ್ ಟಾನಿಕ್ ನಿಮ್ಮ ಕೂದಲ ಸಮಸ್ಯೆ ನಿವಾರಿಸಲು ಹೆಚ್ಚು ಪರಿಣಾಮಕಾರಿ ಆಗಿದೆ.


    ಹಾಗಾದ್ರೆ ಈ ಹೇರ್ ಟಾನಿಕ್ ನ್ನು ಯಾವ ಗಿಡಮೂಲಿಕೆ ಬಳಸಿ ಮಾಡ್ತಾರೆ? ಯಾವೆಲ್ಲಾ ಪದಾರ್ಥ ಬಳಕೆ ಮಾಡಲಾಗುತ್ತದೆ? ಇದು ಹೇಗೆ ಕೂದಲ ಸಮಸ್ಯೆ ನಿವಾರಿಸಲು ಸಹಾಯಕ ಆಗಿದೆ ಎಂಬುದನ್ನು ನಾವು ಇಲ್ಲಿ ತಿಳಿಯೋಣ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಹೇರ್ ಟಾನಿಕ್


    ಆಯುರ್ವೇದದಲ್ಲಿ ಹಲವು ವರ್ಷಗಳಿಂದ ಈ ಗಿಡಮೂಲಿಕೆಗಳನ್ನು ಬಳಕೆ ಮಾಡಲಾಗುತ್ತಿದೆ. ಇದು ಯಾವುದೇ ಅಡ್ಡ ಪರಿಣಾಮ ಬೀರಲ್ಲ. ಮತ್ತು ತುಂಬಾ ಪರಿಣಾಮಕಾರಿ ಮನೆಮದ್ದಾಗಿದೆ. ನೀವು ಸಹ ಕೂದಲು ಉದುರುವ ಸಮಸ್ಯೆಯಿಂದ ತೊಂದರೆ ಪಡುತ್ತಿದ್ದರೆ ಕೆಲವು ವಸ್ತುಗಳನ್ನು ಬಳಸಿ ಕೂದಲು ಉದುರುವಿಕೆ ಸಮಸ್ಯೆ ತಡೆಯಬಹುದು.


    ಡಾ. ಸೋನಾಲ್ ಗಾರ್ಗ್ ಆಯುರ್ವೇದ ವೈದ್ಯಕೀಯ ಅಧಿಕಾರಿ ಪ್ರಕಾರ, ಹವಾಮಾನ ಬದಲಾವಣೆ ಕೂದಲಿಗೆ ಹೆಚ್ಚು ಹಾನಿ ಮಾಡುತ್ತದೆ. ತಲೆ ಬೋಳು ಆಗಲು ಕಾರಣ ಆಗುತ್ತದೆ. ಇದನ್ನು ತಡೆಯಲು ನೀವು ಈ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಬಹುದು.


    ಮೆಂತ್ಯ ಬೀಜಗಳು


    ಮೆಂತ್ಯ ಬೀಜಗಳು ಬಹಳಷ್ಟು ಪ್ರೋಟೀನ್ ಹೊಂದಿವೆ. ಇದು ಕೂದಲಿಗೆ ಬಹಳ ಮುಖ್ಯ. ಇದರ ಬಳಕೆಯು ಬೋಳು, ಕೂದಲು ತೆಳುವಾಗುವಿಕೆ, ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಮೆಂತ್ಯ ಬೀಜಗಳು ಲೆಸಿಥಿನ್ ಅನ್ನು ಹೊಂದಿವೆ. ಇದು ನೈಸರ್ಗಿಕವಾಗಿ ಕೂದಲನ್ನು ತೇವಗೊಳಿಸಿ ಬಲಪಡಿಸುತ್ತದೆ.


    ಬೆಟ್ಟದ ನೆಲ್ಲಿಕಾಯಿ


    ಕೂದಲಿನ ಕಿರುಚೀಲಗಳಲ್ಲಿ ಕಂಡು ಬರುವ ಚರ್ಮದ ಪಾಪಿಲ್ಲಾ ಕೋಶಗಳ ಸಂಖ್ಯೆ ಕಡಿಮೆಯಾದರೆ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚುತ್ತೆ. ಮತ್ತು ತಲೆ ಬೋಳಾಗಲು ಕಾರಣ ಆಗುತ್ತದೆ. ಆಮ್ಲಾ ಸಾರವು ಪಾಪಿಲ್ಲಾ ಕೋಶಗಳ ಸಂಖ್ಯೆ ಹೆಚ್ಚಿಸುತ್ತದೆ. ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.


    ಲೈಕೋರೈಸ್


    ಲೈಕೋರೈಸ್ ಬೇರು ಹೈಡ್ರೋ-ಆಲ್ಕೊಹಾಲಿಕ್ ಸಾರ ನೀಡುತ್ತದೆ. ಇದು ಕೂದಲು ಬೆಳೆಯಲು ಸಹಕಾರಿ. ಇದು ಕೂದಲು ಉದುರುವಿಕೆ ತಡೆಯುತ್ತದೆ. ಬೆಳವಣಿಗೆಯನ್ನು ಉತ್ತೇಜಿಸುತ್ತದೆ.


    ಭೃಂಗರಾಜ್


    ಭೃಂಗರಾಜ ಬಳಕೆಯು ಕೂದಲಿಗೆ ಪ್ರಯೋಜನಕಾರಿ. ಭೃಂಗರಾಜ್‌ ದಲ್ಲಿರುವ ಮೆಥನಾಲ್ ಎಂಬ ಪೋಷಕಾಂಶವು ಕೂದಲ ಬೆಳವಣಿಗೆಗೆ ಸಹಕಾರಿ.


    ಜಟಾಮಾನ್ಸಿ


    ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಜಟಾಮಾನ್ಸಿ. ಹಾಗೂ ಕೂದಲು ಉದುರುವಿಕೆ ತಡೆಯುತ್ತದೆ.


    ಶುಂಠಿ ಪುಡಿ


    ಶುಂಠಿಯು ಆಂಟಿಮೈಕ್ರೊಬಿಯಲ್ ಗುಣ ಹೊಂದಿದೆ. ಬ್ಯಾಕ್ಟೀರಿಯಾದ ಸೋಂಕಿನಿಂದ ಕೂದಲು ಉದುರುವ ಸಮಸ್ಯೆ ದೂರ ಮಾಡುತ್ತದೆ.


    ವಿಶೇಷ ಹೇರ್ ಟಾನಿಕ್ ತಯಾರಿಸುವುದು ಹೇಗೆ?


    ಮೆಂತ್ಯ ಬೀಜದ ಪುಡಿ ಒಂದು ಟೀಸ್ಪೂನ್, ಆಮ್ಲಾ ರಸ ಒಂದು ಟೀಸ್ಪೂನ್, ಮೂಲೇತಿ ಒಂದು ಟೀಸ್ಪೂನ್, ಭೃಂಗರಾಜ್ ಒಂದು ಟೀಸ್ಪೂನ್, ಜಟಮಾನ್ಸಿ ಒಂದು ಟೀಸ್ಪೂನ್, ಒಣ ಶುಂಠಿ ಒಂದು ಟೀಸ್ಪೂನ್, ನೀರು ಒಂದು ಗ್ಲಾಸ್ ಬೇಕು.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ಎಲ್ಲಾ ಗಿಡಮೂಲಿಕೆಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ 10 ನಿಮಿಷ ಕುದಿಸಿ. ತಣ್ಣಗಾದ ನಂತರ ಫಿಲ್ಟರ್ ಮಾಡಿ. ತಲೆಗೆ ಅನ್ವಯಿಸಿ.

    Published by:renukadariyannavar
    First published: