ಸುಂದರ ಮತ್ತು ದಟ್ಟ ಕೂದಲನ್ನು (Beautiful And Thick Hair) ಹೊಂದಲು ಎಲ್ಲರೂ ಬಯಸುತ್ತಾರೆ. ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ದಪ್ಪ ಕೂದಲು ತಮ್ಮದಾಗಬೇಕು ಅಂತಾ ಅಂದುಕೊಳ್ತಾರೆ. ಆದರೆ ಕೂದಲಿನ ಆರೋಗ್ಯವು (Hair Health) ತುಂಬಾ ಸೂಕ್ಷ್ಮ. ಮತ್ತು ಇದು ನಮ್ಮ ಸಣ್ಣ ತಪ್ಪುಗಳೂ ಕೆಟ್ಟ ಪರಿಣಾಮ ಬೀರಲು ಕಾರಣವಾಗುತ್ತದೆ. ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ, ಒತ್ತಡ, ಆತಂಕ, ಖಿನ್ನತೆ, ಅನಾರೋಗ್ಯಕರ ಜೀವನಶೈಲಿ, ವೈದ್ಯಕೀಯ ಪರಿಸ್ಥಿತಿ, ಬಾಹ್ಯ ಮಾಲಿನ್ಯ ಮತ್ತು ಇತರೆ ಕಾರಣಗಳು ಬಹುಬೇಗ ಕೂದಲನ್ನು ಹಾಳು ಮಾಡುತ್ತವೆ. ಮತ್ತು ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ. ಕೂದಲು ಉದುರುವಿಕೆ ಇದರಿಂದ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ.
ಕೂದಲು ಉದುರುವ ಸಮಸ್ಯೆ
ಕೂದಲು ಹೆಚ್ಚು ಉದುರುವುದು, ತೆಳ್ಳಗಾಗುವುದು ಹೆಚ್ಚು ಚಿಂತೆಗೆ ಕಾರಣವಾಗುತ್ತದೆ. ಕೂದಲು ಉದುರಲು ಒತ್ತಡವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹಾಗಾಗಿ ಹೆಚ್ಚು ಚಿಂತಿಸಿದರೆ ಕೂದಲು ಮತ್ತಷ್ಟು ಹಾಳಾಗುತ್ತದೆ. ಹಾಗಾಗಿ ಅಗತ್ಯ ಪೋಷಕಾಂಶಗಳಿಂದ ಸಮೃದ್ಧ ಕೆಲವು ವಿಶೇಷ ಹೇರ್ ಮಾಸ್ಕ್ ಟ್ರೈ ಮಾಡಿ. ಇದು ಕೂದಲು ಉದುರುವಿಕೆ ತಡೆಯುತ್ತದೆ. ಕೂದಲು ಮತ್ತು ನೆತ್ತಿಯ ಆರೋಗ್ಯ ಕಾಪಾಡುತ್ತದೆ.
ದಪ್ಪ ಕೂದಲು ಪಡೆಯಲು ಹೇರ್ ಮಾಸ್ಕ್
ಆವಕಾಡೊ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್
ಕೂದಲಿನ ಆರೋಗ್ಯಕ್ಕೆ ಈ ಪೋಷಕಾಂಶಗಳು ಅವಶ್ಯಕ. ಆಹಾರದಲ್ಲಿ ಈ ಹಣ್ಣುಗಳನ್ನು ಸೇರಿಸಿ. ಹೇರ್ ಮಾಸ್ಕ್ ಹಾಕಿ. ಮೊದಲು ಮಧ್ಯಮ ಗಾತ್ರದ ಆವಕಾಡೊ, ಬಾಳೆಹಣ್ಣನ್ನು ಒಂದು ಪಾತ್ರೆಯಲ್ಲಿ ಹಾಕಿ ಮ್ಯಾಶ್ ಮಾಡಿ.
ಚಮಚ ಆಲಿವ್ ಎಣ್ಣೆ ಹಾಕಿ ಪೇಸ್ಟ್ ತಯಾರಿಸಿ, ನೆತ್ತಿಯಿಂದ ಸಂಪೂರ್ಣ ಕೂದಲಿಗೆ ಹಚ್ಚಿ. ನೆತ್ತಿಗೆ ಮಸಾಜ್ ಮಾಡಿ. 40 ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ಶಾಂಪೂ ಮತ್ತು ಕೂದಲನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
ಬೆಟ್ಟದ ನೆಲ್ಲಿಕಾಯಿ, ಶೀಗೆಕಾಯಿ ಮತ್ತು ತೆಂಗಿನೆಣ್ಣೆ ಹೇರ್ ಮಾಸ್ಕ್
ಕೂದಲಿನ ಆರೋಗ್ಯಕ್ಕೆ ಆಯುರ್ವೇದದಲ್ಲಿ ಆಮ್ಲಾ ಮತ್ತು ಶೀಗೆಕಾಯಿ ವರ್ಷಗಳಿಂದ ಬಳಸಲಾಗುತ್ತಿದೆ. ಶೀಗೆಕಾಯಿ ಕೂದಲು ಕಿರುಚೀಲಗಳನ್ನು ಆರೋಗ್ಯವಾಗಿರಿಸುತ್ತದೆ. ಕೂದಲು ಬೇರು ಬಲಗೊಳ್ಳುತ್ತದೆ. ತೆಂಗಿನ ಎಣ್ಣೆ ಕೂದಲಿಗೆ ನೈಸರ್ಗಿಕ ತೇವಾಂಶ ಒದಗಿಸುತ್ತದೆ. ಕೂದಲು ರೇಷ್ಮೆ ಮತ್ತು ಹೊಳೆಯುವಂತೆ ಮಾಡುತ್ತದೆ.
ಮೊದಲು ಪ್ಯಾನ್ ಬಿಸಿ ಮಾಡಿ. ಅದಕ್ಕೆ ಒಂದು ಚಮಚ ಆಮ್ಲಾ ಪುಡಿ, ಒಂದು ಚಮಚ ಶೀಗೆಕಾಯಿ ಪುಡಿ ಮತ್ತು 5 ಚಮಚ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕುದಿಯುತ್ತಿರುವಾಗ ಗ್ಯಾಸ್ ಆಫ್ ಮಾಡಿ. ಎಣ್ಣೆಯನ್ನ ಫಿಲ್ಟರ್ ಮಾಡಿ.
ಉಗುರು ಬೆಚ್ಚಗೆ ಆದ ನಂತರ ನೆತ್ತಿಯಿಂದ ಕೂದಲಿಗೆ ಚೆನ್ನಾಗಿ ಹಚ್ಚಿ. ನೆತ್ತಿಯನ್ನು ಮಸಾಜ್ ಮಾಡಿ. ಕೂದಲನ್ನು 1 ಗಂಟೆ ನಂತರ ತೊಳೆಯಿರಿ. ಅಥವಾ ರಾತ್ರಿಯಿಡೀ ಬಿಡಿ. ಬೆಳಗ್ಗೆ ತೊಳೆಯಿರಿ.
ದಾಸವಾಳ ಹೂವಿನ ಹೇರ್ ಮಾಸ್ಕ್
ದಾಸವಾಳ ಹೂವ ಯಾವಾಗಲೂ ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಉತ್ಕರ್ಷಣ ನಿರೋಧಕವಿದೆ. ಇದು ಕೂದಲಿನ ಕಿರುಚೀಲಗಳು ಮತ್ತು ನೆತ್ತಿಯ ಆರೋಗ್ಯ ಕಾಪಾಡುತ್ತದೆ. ಕೂದಲು ಉದುರುವ ಸಮಸ್ಯೆ ಇರಲ್ಲ. ಕೂದಲು ಬೆಳೆಯುತ್ತದೆ.
ಶಾಂಪೂ ಹಚ್ಚಿದ ನಂತರ ಬಳಸಬೇಡಿ. ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ ಮತ್ತು ಹಾಗೆ ಬಿಡಿ.
ಇದನ್ನೂ ಓದಿ: ಅಜೀರ್ಣ ಸಮಸ್ಯೆಗೆ ಹೇಳಿ Bye bye, ಕಾಫಿಯೇ ಇನ್ಮುಂದೆ ನಿಮ್ಗೆ ಬೆಸ್ಟ್ ಫ್ರೆಂಡ್
ದಾಸವಾಳ ಹೂವು, ಎಲೆಗಳನ್ನು ಬ್ಲೆಂಡರ್ನಲ್ಲಿ ಹಾಕಿ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಬೇರಿನಿಂದ ಚೆನ್ನಾಗಿ ಹಚ್ಚಿರಿ. ಒಂದು ಗಂಟೆ ನಂತರ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ