HOME » NEWS » Lifestyle » HAIR FALL DOES CAFFEINE SHAMPOO WORKS FOR HAIR LOSS TREATMENT TO INCREASE HAIR GROWTH STG SCT

Hair Fall: ಕೂದಲು ಉದುರುವಿಕೆ ತಡೆಯಲು ಕೆಫೀನ್ ಸಹಕಾರಿ!

Health Tips: ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಅನೇಕ ನೈಸರ್ಗಿಕ ಚಿಕಿತ್ಸೆಗಳಿವೆ. ಕೂದಲಿನ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುವ ಕೆಫೀನ್ ಸಾಮರ್ಥ್ಯದ ಬಗ್ಗೆ ತಜ್ಞರು ಮತ್ತು ಅಧ್ಯಯನಗಳು ಬೆಳಕು ಚೆಲ್ಲಿವೆ. ಅದು ಹೇಗೆ ಅಂತೀರಾ?

news18-kannada
Updated:March 3, 2021, 12:07 PM IST
Hair Fall: ಕೂದಲು ಉದುರುವಿಕೆ ತಡೆಯಲು ಕೆಫೀನ್ ಸಹಕಾರಿ!
ಸಾಂದರ್ಭಿಕ ಚಿತ್ರ
  • Share this:
ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಯಾಗಿದೆ. ಪೋಷಕಾಂಶದ ಕೊರತೆ, ಮಾನಸಿಕ ಒತ್ತಡ, ಅನಾರೋಗ್ಯ ಮುಂತಾದ ಕಾರಣಗಳಿಂದ ಕೂದಲು ಉದುರುತ್ತವೆ. ಕೆಲವರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬೊಕ್ಕ ತಲೆಯ ಸಮಸ್ಯೆ ಕಂಡುಬರುತ್ತಿದೆ. ಪುರುಷರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ.

ಕೂದಲು ಉದುರಲಾರಂಭಿಸಿದಾಗ ಬಹುತೇಕರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಬಳಸಬೇಕೆಂದು ತಲೆಕೆಡೆಸಿಕೊಳ್ಳುತ್ತಾರೆ. ಕೂದಲು ಉದುರುವಿಕೆಯನ್ನು ನಿಯಂತ್ರಿಸಿ ಮತ್ತೆ ಬೆಳೆಯುವಂತೆ ಮಾಡಲು ಅನೇಕ ನೈಸರ್ಗಿಕ ಚಿಕಿತ್ಸೆಗಳಿವೆ. ಕೂದಲಿನ ಬೆಳವಣಿಗೆ ಹೆಚ್ಚಿಸಲು ಸಹಾಯ ಮಾಡುವ ಕೆಫೀನ್ ಸಾಮರ್ಥ್ಯದ ಬಗ್ಗೆ ತಜ್ಞರು ಮತ್ತು ಅಧ್ಯಯನಗಳು ಬೆಳಕು ಚೆಲ್ಲಿವೆ. ಅದು ಹೇಗೆ ಅಂತೀರಾ?

ಕೂದಲು ಏಕೆ ಉದುರುತ್ತವೆ ಹಾಗೂ ಕೂದಲಿನ ಆರೋಗ್ಯಕ್ಕೆ ಕೆಫೀನ್ ಹೇಗೆ ಸಹಕಾರಿ..?

* ಕೂದಲು ಮತ್ತು ನೆತ್ತಿಗೆ ಕಾಫಿ ಪುಡಿಯನ್ನು ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಹಾಗೂ ಮತ್ತೆ ಬೆಳೆಯಲು ಇದು ಸಹಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

* ಸಂಶೋಧನೆಯ ಪ್ರಕಾರ ಕಾಫಿಯಲ್ಲಿರುವ ಕೆಫೀನ್ ಅಂಶವು ಕೂದಲಿನ ಬೆಳವಣಿಗೆ ಉತ್ತೇಜಿಸಲು ಮತ್ತು ಕೂದಲು ಉದುರುವಿಕೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

* ಪುರುಷರ ಬೊಕ್ಕ ತಲೆ ಸಮಸ್ಯೆ, ಮಿತಿ ಮೀರಿದ ಕೂದಲು ಉದುರುವಿಕೆಗೆ ಹಾಗೂ ಕೂದಲ ಬುಡ ಹಾನಿಗೀಡಾಗುವುದಕ್ಕೆ ಕಾರಣವಾಗುವ ಲೈಂಗಿಕ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್‌ಟಿ) ಪರಿಣಾಮಗಳನ್ನು ಇದು ತಡೆಯುತ್ತದೆ.

* ಹೆಚ್ಚು ಡಿಎಚ್‌ಟಿ ಹೊಂದಿರುವ ಮಹಿಳೆಯರು ಕೂಡ ಕೂದಲು ಉದುರುವಿಕೆ ಸಮಸ್ಯೆ ಅನುಭವಿಸಬಹುದು.* ಕಾಫಿಯು ನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಸ್ ಗಳ ಖನಿಜವಾಗಿದ್ದು, ಇದು ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

* ಕೂದಲಿನ ಉದ್ದ ಹಾಗೂ ಆರೋಗ್ಯವು ಹೇರ್ ಫಾಲಿಕಲ್‌ಗಳ ಆರೋಗ್ಯವನ್ನು ಅವಲಂಬಿಸಿರುತ್ತದೆ. ಕಾಫಿಯು ಈ ಹೇರ್ ಫೋಲಿಕಲ್‌ಗಳನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುತ್ತದೆ.

* ಅತಿಯಾದ ಧೂಮಪಾನ, ಮದ್ಯಪಾನದಿಂದಲೂ ಕೂದಲು ಉದುರುವಿಕೆ ಸಮಸ್ಯೆ ಉಂಟಾಗುತ್ತದೆ.

* ಹಾರ್ಮೋನ್ ಗಳ ವ್ಯತ್ಯಾಸ ಉಂಟಾದಾಗ ಕೂದಲು ಉದುರುತ್ತವೆ. ವಿಪರೀತ ಕೂದಲು ಉದುರುವ ಸಮಸ್ಯೆ ಇದ್ದರೆ ವೈದ್ಯರಿಂದ ಸೂಕ್ತ ಸಲಹೆ ಪಡೆಯುವುದು ಉತ್ತಮ.

* ಕಾಫಿಯಿಂದ ಕೂದಲಿಗೆ ಹಲವಾರು ಲಾಭಗಳಿವೆ ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ.

* ಕೆಫೀನ್ ಅಂಶವು ಕೂದಲು ತುಂಡಾಗುವುದನ್ನು ತಪ್ಪಿಸಿ, ಅದರ ಬೆಳವಣಿಗೆಗೆ ಕಾರಣವಾಗುತ್ತದೆ.

* ಕ್ರಮೇಣವಾಗಿ ಸಂಭವಿಸುವ ಹೇರ್ ಫಾಲಿಕಲ್​ನ ಹಾನಿಯು ಅಂತಿಮವಾಗಿ ಬೋಳು ತಲೆಗೆ ಕಾರಣವಾಗುತ್ತದೆ.

* ಅಧ್ಯಯನವೊಂದರ ಪ್ರಕಾರ ಕೂದಲು ಉದುರುವಿಕೆ ನಿಯಂತ್ರಣ ಮತ್ತು ಅದರ ಬೆಳವಣಿಗೆಯ ಮೇಲೆ ಕೆಫೀನ್‌ನ ಪರಿಣಾಮವನ್ನು ವಿಶ್ಲೇಷಿಸಲಾಗಿದೆ.

* ಕೂದಲು ಬೆಳವಣಿಗೆಯ ಉತ್ತೇಜನಕ್ಕೆ ಕೆಫೀನ್ ಉತ್ತಮ ಆಯ್ಕೆಯಾಗಿದೆ ಎಂದು ಅಧ್ಯಯನಗಳು ತಿಳಿಸಿದೆ.

* ಹೇರ್ ಫಾಲಿಕಲ್​ನ ಗಮನಾರ್ಹ ಬೆಳವಣಿಗೆಗೆ ಕೆಫೀನ್ ಅತ್ಯುತ್ತಮ ಸಾಧನವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by: Sushma Chakre
First published: March 3, 2021, 12:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories