Strong Hair Tips: ಕೂದಲು ಉದುರುವುದು ತಡೆಯಲು, ಆಂತರಿಕ ಪೋಷಣೆಗೆ ತಜ್ಞರು ಹೇಳಿದ ಆಹಾರ ಪದಾರ್ಥಗಳು ಹೀಗಿವೆ

ಆರೋಗ್ಯದ ಜೊತೆಗೆ ಕೂದಲು ಮತ್ತು ಚರ್ಮ ಲಿಂಕ್ ಆಗಿವೆ. ಹಾಗಾಗಿ ನೀವು ಕೇವಲ ಹೊರಗಿನಿಂದ ಮಾತ್ರ ಕೂದಲಿಗೆ ಪೋಷಣೆ ಮಾಡಿದರೆ ಸಾಲದು. ಆಂತರಿಕ ಪೋಷಣೆಯೂ ತುಂಬಾ ಮುಖ್ಯ. ಹಾಗಾಗಿ ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ತುಂಬಾ ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೂದಲು ಉದುರುವುದು (Hair Fall), ಹದಿಹರೆಯದಲ್ಲೇ ಕೂದಲು ಬಿಳಿಯಾಗುವುದು (White Hair), ನೆತ್ತಿ ಬೋಳಾಗುವುದು ಇದು ಇತ್ತೀಚಿನ ದಿನಗಳ ಸಾಮಾನ್ಯ ಸಮಸ್ಯೆ (Problem) ಆಗಿದೆ. ಹದಗೆಡುತ್ತಿರುವ ಆರೋಗ್ಯದ (Health) ಗುಟ್ಟನ್ನು ಕೂದಲಿನಿಂದಲೇ ಪತ್ತೆ ಹಚ್ಚಬಹುದು. ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಕೂದಲು ವೇಗವಾಗಿ ಉದುರಲು ಶುರು ಆಗುತ್ತದೆ. ಇದಲ್ಲದೆ ಇತರೆ ಅನೇಕ ಕಾರಣಗಳಿಂದಲೂ ಸಹ ಕೂದಲು ಉದುರವುದು ಸೇರಿದಂತೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಏನೇ ಇದ್ದರೂ ಜನರು ತಮ್ಮ ಕೂದಲು ಮತ್ತು ಚರ್ಮ ಇವೆರಡು ವಿಷಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

  ಕೂದಲಿಗೆ ಆಂತರಿಕ ಪೋಷಣೆ

  ಆರೋಗ್ಯದ ಜೊತೆಗೆ ಕೂದಲು ಮತ್ತು ಚರ್ಮ ಲಿಂಕ್ ಆಗಿವೆ. ಹಾಗಾಗಿ ನೀವು ಕೇವಲ ಹೊರಗಿನಿಂದ ಮಾತ್ರ ಕೂದಲಿಗೆ ಪೋಷಣೆ ಮಾಡಿದರೆ ಸಾಲದು. ಆಂತರಿಕ ಪೋಷಣೆಯೂ ತುಂಬಾ ಮುಖ್ಯ. ಹೊರಗಿನಿಂದ ಮಾತ್ರ ಕಾಳಜಿ ವಹಿಸುವುದು ಸಾಕಾಗಲ್ಲ. ಹಾಗಾಗಿ ನೀವು ಸೇವಿಸುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ತುಂಬಾ ಒಳ್ಳೆಯದು.

  ಕೂದಲು ಆರೋಗ್ಯಕರವಾಗಿ ಮತ್ತು ಒಳಗಿನಿಂದ ಬಲವಾಗಿರಲು, ಪೌಷ್ಟಿಕ ಆಹಾರ ಸೇವಿಸಬೇಕು. ಪೋಷಕಾಂಶಗಳಲ್ಲಿ ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅನ್ನು ಅತ್ಯಂತ ಮುಖ್ಯ ಪದಾರ್ಥವೆಂದು ಪರಿಗಣಿಸಲಾಗಿದೆ. ದೇಹದಲ್ಲಿನ ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಪೂರೈಸುವ ಮೂಲಕ ಕೂದಲನ್ನು ಒಳಗಿನಿಂದ ಆರೋಗ್ಯಕರ ಹಾಗೂ ಸ್ಟ್ರಾಂಗ್ ಆಗಿ ಮಾಡುವುದು ತುಂಬಾ ಮುಖ್ಯ.

  ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

  ಚರ್ಮರೋಗ ತಜ್ಞೆ ಅನಿಕಾ ಗೋಯಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆರೋಗ್ಯಕರ ಕೂದಲಿಗೆ ಉತ್ತಮ ಆಹಾರ ಪದಾರ್ಥಗಳ ಬಗ್ಗೆ ಬರೆದುಕೊಂಡು ಶೇರ್ ಮಾಡಿದ್ದಾರೆ. ಯಾರು ಅತಿಯಾದ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೋ

  ಅವರು ನಿಮ್ಮ ಆಹಾರದಲ್ಲಿ ಈ ಕೆಲ ಪದಾರ್ಥಗಳನ್ನು ಸೇರಿಸುವುದರಿಂದ ನಿಮ್ಮ ಕೂದಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ನೀವು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಖಂಡಿತ ಈ ವಸ್ತುಗಳನ್ನು ಸೇವಿಸಿ.

  ಆರೋಗ್ಯಕರ ಕೂದಲಿಗಾಗಿ ಆಹಾರ ಪದಾರ್ಥಗಳು

  ಮೊಟ್ಟೆ ಮತ್ತು ಮೀನು

  ಮೊಟ್ಟೆಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಆದರೆ ಅವು ವಿಟಮಿನ್ ಎ, ಇ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಜೊತೆಗೆ ಇದು ವಿಟಮಿನ್ ಬಿ ಕಾಂಪ್ಲೆಕ್ಸ್ನ ಗುಣ ಲಕ್ಷಣ ಹೊಂದಿದೆ.

  ಇದು ಕೂದಲನ್ನು ಬಲಪಡಿಸಲು ಸಹಕಾರಿ. ಹೊಳೆಯುವ ಕೂದಲಿಗೆ ಇದನ್ನು ಅನ್ವಯಿಸುವುದರ ಜೊತೆಗೆ, ಇದನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ಮೀನು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ಕೂದಲು ಉದುರುವಿಕೆ ನಿಯಂತ್ರಿಸಲು ಮಾತ್ರವಲ್ಲದೆ ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ.

  ವಾಲ್ನಟ್ಸ್

  ವಾಲ್ನಟ್ಸ್ ಕೂದಲಿನ ಆರೋಗ್ಯಕ್ಕೆ ಸಹಕಾರಿ. ಅದನ್ನು ಎಷ್ಟು ಮತ್ತು ಹೇಗೆ ಸೇವಿಸಬೇಕು ಎಂಬುದನ್ನು ತಜ್ಞರಿಂದ ತಿಳಿಯಬೇಕು. ಹಲವು ಬಾರಿ ಹೆಚ್ಚು ಸೇವಿಸುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸತುವು ಅವುಗಳಲ್ಲಿ ಹೇರಳವಾಗಿದೆ. ಇದು ಕೂದಲು ಸ್ಟ್ರಾಂಗ್ ಮಾಡುತ್ತದೆ.

  ರಾಜ್ಮಾ

  ರುಚಿಯಲ್ಲಿ ಸಮೃದ್ಧವಾಗಿರುವ ರಾಜ್ಮಾ ಆರೋಗ್ಯಕ್ಕೆ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಕಿಡ್ನಿ ಬೀನ್ಸ್ ವಿಟಮಿನ್ ಸಿ ಹೊಂದಿದೆ. ಇದು ಕೂದಲನ್ನು ಬಲಪಡಿಸುತ್ತದೆ. ವಿಟಮಿನ್ ಸಿ ಜೊತೆ ಫೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಪ್ರೋಟೀನ್‌ನಂತಹ ಪೋಷಕಾಂಶಗಳಿಂದ ಕೂಡಿದೆ.

  ಹಣ್ಣುಗಳು ಮತ್ತು ತರಕಾರಿಗಳು

  ಬಲವಾದ ಕೂದಲಿಗೆ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡಿ. ಬೀಟ್ರೂಟ್, ಪಾಲಕ ಮತ್ತು ಬೆರ್ರಿ ಹಣ್ಣುಗಳು ಪ್ರಯೋಜನಕಾರಿ. ಇವು ವಿಭಿನ್ನ ಪೋಷಕಾಂಶಗಳಿಂದ ಕೂಡಿವೆ. ಇವು ನಿಮ್ಮ ಕೂದಲಿಗೆ ಪ್ರಯೋಜನ ನೀಡುತ್ತವೆ.

  ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

  ಓಟ್ಸ್

  ಕೂದಲ ಆರೈಕೆಗೆ ಮತ್ತು ಆರೋಗ್ಯಕ್ಕೆ ಓಟ್ಸ್ ಅತ್ಯುತ್ತಮ. ಕೆಲ ಮಹಿಳೆಯರು ಓಟ್ಸ್ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚುತ್ತಾರೆ. ಇದರ ಸೇವನೆ ಕೂದಲನ್ನು ಒಳಗಿನಿಂದ ಸ್ಟ್ರಾಂಗ್ ಮಾಡುತ್ತದೆ. ಇದರಲ್ಲಿರುವ ಪ್ರೊಟೀನ್, ಥಯಾಮಿನ್, ನಿಯಾಸಿನ್, ವಿಟಮಿನ್ ಬಿ6, ವಿಟಮಿನ್ ಬಿ12, ಫಾಸ್ಫರಸ್, ರೈಬೋಫ್ಲಾವಿನ್, ಫೋಲೇಟ್ ಮುಂತಾದ ಪೋಷಕಾಂಶಗಳು ಕೂದಲು ಸಮಸ್ಯೆಗೆ ಪರಿಹಾರ ನೀಡುತ್ತವೆ.
  Published by:renukadariyannavar
  First published: