Hair Fall: ಈ ಪದಾರ್ಥಗಳು ನಿಮ್ಮ ಕೂದಲು ಉದುರುವ ಸಮಸ್ಯೆಗೆ ರಾಮಬಾಣವಂತೆ

ನಿಮಗೆ ಕೂದಲು ಉದುರುವ ಸಮಸ್ಯೆ ಹೆಚ್ಚಿದ್ದರೆ, ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರ ಮತ್ತು ಕೂದಲಿನ ಆರೈಕೆಯ ಭಾಗವಾಗಿ ಮಾಡಿಕೊಳ್ಳುವ ಮೂಲಕ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೂದಲು ಉದುರುವಿಕೆಯು (Hair Loss) ಬದಲಾಗುತ್ತಿರುವ (Changes) ಹವಾಮಾನ ಅಥವಾ ಒತ್ತಡ (Stress) ಕಾರಣ (Cause) ಏನೇ ಇದ್ದರೂ ನಿಮ್ಮನ್ನು ಉದ್ವಿಗ್ನಗೊಳಿಸುತ್ತದೆ. ಕೂದಲು ಉದುರುವುದು ತಡೆಯಲು ಜನರು (People) ಸಾವಿರಾರು ರೂಪಾಯಿ ಉತ್ಪನ್ನಗಳಿಗೆ ಖರ್ಚು ಮಾಡುತ್ತಾರೆ. ಆದಾಗ್ಯೂ ತುಂಬಾ ಜನರು ಸ್ಟ್ರಾಂಗ್ ಕೂದಲು ಹೊಂದಲು ಆಹಾರಕ್ಕೆ ಸಂಬಂಧಿಸಿದ ವಿಷಯದತ್ತ ಸಾಕಷ್ಟು ಗಮನ ಕೊಡಬೇಕು ಎಂಬುದನ್ನೇ ಮರೆತು ಬಿಡುತ್ತಾರೆ. ನಿಮಗೆ ಕೂದಲು ಉದುರುವ ಸಮಸ್ಯೆ ಹೆಚ್ಚಿದ್ದರೆ, ಕೆಲವು ಆಹಾರ ಪದಾರ್ಥಗಳನ್ನು ನಿಮ್ಮ ಆಹಾರ ಮತ್ತು ಕೂದಲಿನ ಆರೈಕೆಯ ಭಾಗವಾಗಿ ಮಾಡಿಕೊಳ್ಳುವ ಮೂಲಕ ಕೂದಲು ಉದುರುವ ಸಮಸ್ಯೆಯನ್ನು ನಿಯಂತ್ರಿಸಬಹುದು.

    ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಬೀಟ್ರೂಟ್ ಜ್ಯೂಸ್

    ಈ ಬಗ್ಗೆ ಖ್ಯಾತ ಹೋಮಿಯೋಪತಿ ವೈದ್ಯ ಬಾತ್ರಾ ತಮ್ಮ ಬ್ಲಾಗ್ ನಲ್ಲಿ ಕೆಲವು ರೀತಿಯ ಮಾಹಿತಿ ಹಂಚಿಕೊಂಡಿದ್ದಾರೆ. ಕೂದಲು ಉದುರುವಿಕೆಗೆ ಕಾರಣವಾಗುವ ಪೌಷ್ಟಿಕಾಂಶ ಕೊರತೆ ನಿವಾರಿಸಲು ಬೀಟ್ರೂಟ್ ಜ್ಯೂಸ್ ಸಹಾಯ ಮಾಡುತ್ತದೆ.

    ಬೀಟ್ರೂಟ್ನಲ್ಲಿ ವಿಟಮಿನ್-ಸಿ, ವಿಟಮಿನ್-ಬಿ6, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಇದೆ. ಈ ಅಂಶಗಳು ಒಟ್ಟಾಗಿ ಬೇರುಗಳಿಂದ ಕೂದಲು ಸ್ಟ್ರಾಂಗ್ ಮಾಡುತ್ತವೆ. ಇದರ ಜೊತೆ ನೆತ್ತಿಯು ಆರೋಗ್ಯವಾಗಿರುತ್ತದೆ. ಮತ್ತು ಕೂದಲಿನ ಗುಣಮಟ್ಟವು ಸುಧಾರಣೆ ಮಾಡುತ್ತದೆ.

    ಇದನ್ನೂ ಓದಿ: ರಕ್ತ ಪರೀಕ್ಷೆಯನ್ನು ಯಾವ ವಯಸ್ಸಿನವರು ಮಾಡಿಸಬೇಕು ಮತ್ತು ಯಾಕೆ? ತಜ್ಞರ ಅಭಿಪ್ರಾಯವೇನು?

    ಗ್ರೀನ್ ಟೀ

    ಗ್ರೀನ್ ಟೀ ಆರೋಗ್ಯ ಪ್ರಯೋಜನಗಳ ಎಲ್ಲರಿಗೂ ಗೊತ್ತೆ ಇದೆ. ಆದಾಗ್ಯೂ ಗ್ರೀನ್ ಟೀ ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದು ಕೋಶಕಗಳನ್ನು ಪುನರುಜ್ಜೀವನಗೊಳಿಸುವಾಗ ಗ್ರೀನ್ ಟೀ ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಡಾ ಬಾತ್ರಾ ಅವರ ಪ್ರಕಾರ, ಪ್ರತಿದಿನ ಒಂದು ಕಪ್ ಗ್ರೀನ್ ಚಹಾವು ಕೂದಲು ಆರೋಗ್ಯಕರ ರೀತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ.

    ನೆಲ್ಲಿಕಾಯಿ

    ಡಾ ಬಾತ್ರಾ ಪ್ರಕಾರ, ಕೂದಲು ಉದುರುವಿಕೆಗೆ ಪ್ರಮುಖ ಕಾರಣ ವಿಟಮಿನ್-ಸಿ ಕೊರತೆ. ಈ ವಿಟಮಿನ್ ಆಮ್ಲಾದಲ್ಲಿ ಹೇರಳವಾಗಿ ಕಂಡು ಬರುತ್ತದೆ. ಆಮ್ಲಾ ತಿನ್ನುವುದರೊಂದಿಗೆ ಮತ್ತು ಅದರ ರಸವನ್ನು ಕುಡಿಯುವುದು ನೇರವಾಗಿ ನೆತ್ತಿಯ ಮೇಲೆ ಅನ್ವಯಿಸಬಹುದು. ಇದು ಕೂದಲಿಗೆ ಟಾನಿಕ್ಗಿಂತ ಕಡಿಮೆಯಿಲ್ಲ.

    ಬೇವಿನ ಎಲೆಗಳು

    ಬೇವು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿ. ಕೂದಲು ಉದುರುವುದನ್ನು ತಡೆಯಲು ಇದನ್ನು ಮಾಸ್ಕ್ ಆಗಿ ಬಳಸಬಹುದು. ಬೇವಿನ ಎಲೆಗಳನ್ನು ಕುದಿಸಿ ನಂತರ ಅವುಗಳನ್ನು ಪೇಸ್ಟ್ ಮಾಡಿ. ಶಾಂಪೂ ಮಾಡಿದ ನಂತರ ಪೇಸ್ಟ್ ಅನ್ನು ಅನ್ವಯಿಸಿ. 30 ನಿಮಿಷಗಳ ನಂತರ ಕೂದಲು ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಬಳಸಿ.

    ಸೊಪ್ಪು

    ಪಾಲಕ್ ಕಬ್ಬಿಣ, ವಿಟಮಿನ್-ಎ, ವಿಟಮಿನ್-ಸಿ ಮತ್ತು ಪ್ರೊಟೀನ್ ಗಳ ಮೂಲವಾಗಿದೆ. ಕಬ್ಬಿಣದ ಕೊರತೆಯು ಕೂದಲು ಉದುರುವಿಕೆಗೆ ಕಾರಣ. ಪಾಲಕವು ಈ ಕೊರತೆ ಹೋಗಲಾಡಿಸುತ್ತದೆ. ಅದರಲ್ಲಿರುವ ನೈಸರ್ಗಿಕ ಮೇದೋಗ್ರಂಥಿಗಳ ಸ್ರಾವವು ಕೂದಲಿಗೆ ಕಂಡಿಷನರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ತರಕಾರಿಯಲ್ಲಿರುವ ಒಮೆಗಾ-3 ಆಮ್ಲಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಕೂಡ ನೆತ್ತಿ ಆರೋಗ್ಯಕ್ಕೆ ಸಹಕಾರಿ.

    ಕ್ಯಾರೆಟ್

    ನೀವು ಉದ್ದ ಮತ್ತು ಬಲವಾದ ಕೂದಲಿಗಾಗಿ ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸಿ. ವಿಟಮಿನ್-ಎ ಸಮೃದ್ಧವಾಗಿರುವ ಈ ತರಕಾರಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ವಿಟಮಿನ್ ಕೊರತೆಯು ಕೂದಲು ಉದುರುವಿಕೆ ಹೆಚ್ಚಿಸುತ್ತದೆ. ಇದು ಒಣ ಮತ್ತು ತುರಿಕೆ ನೆತ್ತಿಯ ಸಮಸ್ಯೆ ಹೋಗಲಾಡಿಸಿ ಕೂದಲು ಉದುರುವಿಕೆ ನಿಯಂತ್ರಿಸುತ್ತದೆ.

    ಕೂದಲು ಉದುರುವುದು ತಡೆಯುವ 4 ವಿಷಯಗಳು

    ಈರುಳ್ಳಿ ರಸ: ಇದರಲ್ಲಿರುವ ಸಲ್ಫರ್ ಕೂದಲು ಉದುರುವುದನ್ನು ತಡೆಯುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ.

    ಅಲೋವೆರಾ: ಅಲೋವೆರಾ ತಲೆಗೆ ಹಚ್ಚಿ ಮತ್ತು ಪ್ರತಿದಿನ ಒಂದು ಚಮಚ ಸೇವಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.

    ಮೊಟ್ಟೆಗಳು ಮತ್ತು ಡೈರಿ ಉತ್ಪನ್ನಗಳು: ಮೊಟ್ಟೆ, ಹಾಲು, ಮೊಸರು ಮುಂತಾದ ವಸ್ತುಗಳು ಪ್ರೋಟೀನ್, ವಿಟಮಿನ್, ಕಬ್ಬಿಣ ಮತ್ತು ಸತುವಿನ ಮೂಲಗಳಾಗಿವೆ. ಈ ಪದಾರ್ಥಗಳು ಒಟ್ಟಾಗಿ ಕೂದಲು ಉದುರುವಿಕೆ ನಿಯಂತ್ರಿಸುತ್ತವೆ.

    ಇದನ್ನೂ ಓದಿ: ಹಾಲಿನ ಜೊತೆ ಚಿಕನ್ ಯಾಕೆ ತಿನ್ನಬಾರದು? ಈ ಬಗ್ಗೆ ಆಯುರ್ವೇದ ಹೇಳೋದೇನು?

    ವಾಲ್ನಟ್: ಬಯೋಟಿನ್, ವಿಟಮಿನ್-ಬಿ, ವಿಟಮಿನ್-ಇ, ಪ್ರೋಟೀನ್, ಮೆಗ್ನೀಸಿಯಮ್ ಸಮೃದ್ಧವಾಗಿರುವ ವಾಲ್ನಟ್ ಕೂದಲು ಉದುರುವಿಕೆ ನಿಯಂತ್ರಿಸುತ್ತದೆ.
    Published by:renukadariyannavar
    First published: