Hair Colouring: ನೀವೇ ಹೇರ್ ಡೈ ಮಾಡ್ಕೊಳೋದಾ? ಹಾಗಿದ್ರೆ ಇದೆಲ್ಲಾ ಸರಿಯಾಗಿ ತಿಳ್ಕೊಳಿ

Hair Colouring At Home: ಜನರು ನಂಬಿರುವ ಇನ್ನೊಂದು ಅಂಶವೆಂದರೆ ಬ್ಯೂಟಿಪಾರ್ಲರ್‌ನಲ್ಲಿರುವವರಿಗೆ ನಿಮ್ಮ ಕೂದಲಿಗೆ ಯಾವ ಬಣ್ಣ ಸೂಕ್ತ ಹಾಗೂ ಕೂದಲಿಗೆ ಹಾನಿಯುಂಟು ಮಾಡದೇ ಇರುವ ಉತ್ಪನ್ನ ಯಾವುದಾಗಿದೆ ಎಂಬುದು ತಿಳಿದಿರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಸೌಂದರ್ಯದ(Beauty) ವಿಷಯದಲ್ಲಿ ಪುರುಷರಾಗಲೀ ಮಹಿಳೆಯರಾಗಲೀ ಸಮಾನ ಆಸಕ್ತಿಯುಳ್ಳವರು ಆಗಿದ್ದಾರೆ. ಅದರಲ್ಲೂ ಬಿಳಿ ಕೂದಲನ್ನು ಅಡಗಿಸಲೋ ಅಥವಾ ಫ್ಯಾಶನ್(Fashion) ಪ್ರಿಯತೆಗೋ ಇಂದು ಕೂದಲಿಗೆ ಬಣ್ಣ ಹಚ್ಚುವುದು ಸಾಮಾನ್ಯವಾಗಿಬಿಟ್ಟಿದೆ. ಮೊದಲೆಲ್ಲಾ ಬಿಳಿ ಕೂದಲನ್ನು ಮರೆಮಾಚಲು ಬಳಸುತ್ತಿದ್ದ ಬಣ್ಣ ಇದೀಗ ಕಪ್ಪು ಕೂದಲನ್ನು ಬೇರೆ ಬೇರೆ ಬಣ್ಣಗಳಲ್ಲಿ ಅಲಂಕರಿಸಲು ಸಹಕಾರಿಯಾಗಿದೆ. ಆದರೆ ಕೋವಿಡ್ (Coronavirus)ಬಂದ ನಂತರ ಹೆಚ್ಚಿನ ಸೌಂದರ್ಯ ಕ್ರಿಯೆಗಳನ್ನು ಮಹಿಳೆಯರು ಪುರುಷರು ಮನೆಯಲ್ಲಿಯೇ ಮಾಡಿಕೊಳ್ಳುತ್ತಿದ್ದು ಹೊರಗಡೆ ಹೋಗಿ ಕೂದಲಿಗೆ ಕಲರಿಂಗ್(Colouring) ಮಾಡಿಸುವುದನ್ನು ಕಡಿಮೆ ಮಾಡಿದ್ದಾರೆ. ಮನೆಯಲ್ಲಿಯೇ ಕೂದಲಿಗೆ ಬಣ್ಣ ಹಚ್ಚುವ ವಿಧಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಾದರೆ ಮನೆಯಲ್ಲಿಯೇ ನೀವು ಕೂದಲಿಗೆ ಬಣ್ಣ ಹಚ್ಚುತ್ತೀರಿ ಎಂದಾದಲ್ಲಿ ಇದನ್ನು ಹೇಗೆ ಮಾಡಬಹುದು ಎಂಬುದರ ವಿವರ ಇಲ್ಲಿದೆ..


ಕೂದಲಿಗೆ ಬಣ್ಣ ಹಚ್ಚುವುದು ಎಂದರೆ ಇದು ನಿಮ್ಮ ಸಂಪೂರ್ಣ ನೋಟವನ್ನೇ ಬದಲಾಯಿಸಿ ಬಿಡುತ್ತದೆ. ಫ್ಯಾಶನ್ ಪ್ರಿಯತೆಗೆ ಇದೂ ಒಂದು ಸಾಕ್ಷಿಯಾಗಿದೆ. ಆದರೆ ಕೂದಲಿಗೆ ಬಣ್ಣ ಹಚ್ಚುವ ಸಮಯದಲ್ಲೂ ಕೆಲವೊಂದು ಮಿಥ್ಯೆಗಳಿದ್ದು (ಕಟ್ಟುಕತೆಗಳು) ಜನರು ಇದನ್ನು ನಿವಾರಿಸಿಕೊಂಡರೆ ಸುಲಭವಾಗಿ ಕೂದಲಿಗೆ ಕಲರಿಂಗ್ ಮಾಡಿಕೊಳ್ಳಬಹುದು ಎಂದು ಸೂರ್ಯ ಬ್ರಾಸಿಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಲೆಲಿಯಾ ಸಿಸಿಲಿಯಾ ಏಂಜಲೋನ್ ತಿಳಿಸಿದ್ದಾರೆ. ಕೂದಲಿಗೆ ಬಣ್ಣ ಹಚ್ಚುವ ಪ್ರಕ್ರಿಯೆ ತುಂಬಾ ಸರಳವಾಗಿರುವಂಥದ್ದು. ಇದು ಏನೇನೂ ಕಷ್ಟವಲ್ಲ. ಆದರೆ ಕೆಲವೊಂದು ನಂಬಿಕೆಗಳನ್ನು ನಾವಿಲ್ಲಿ ಕೈಬಿಡಬೇಕಾಗುತ್ತದೆ ಎಂದು ಕ್ಲೆಲಿಯಾ ತಿಳಿಸುತ್ತಾರೆ.


ಇದನ್ನೂ ಓದಿ: ಒಣಗಿದ ಹಿಮ್ಮಡಿ ಮುಜುಗರ ಉಂಟುಮಾಡುತ್ತಿದೆಯಾ? ಈ ಮನೆಮದ್ದುಗಳನ್ನು ಟ್ರೈ ಮಾಡಿ..

 ಕ್ಲೆಲಿಯಾ ತಿಳಿಸಿರುವಂತೆ ಮನೆಯಲ್ಲಿ ನೀವು ಬಣ್ಣ ಹಚ್ಚುತ್ತೀರಿ ಎಂದಾದಲ್ಲಿ ಮಿಶ್ರ ಮಾಡುವ ಪ್ರಮಾಣದ ಕುರಿತು ನೀವು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಕೂದಲಿನ ಬಣ್ಣಗಳು ಬಳಕೆಗೆ ಸಿದ್ಧವಾಗಿರುತ್ತವೆ ಹಾಗೂ ನೀವು ಮಿಶ್ರಮಾಡುವ ಅಗತ್ಯವಿರುವುದಿಲ್ಲ ಎಂದು ಹೇಳುತ್ತಾರೆ. ಉದಾಹರಣೆಗೆ ನೈಸರ್ಗಿಕ ಮೆಹೆಂದಿಯನ್ನು ನೀವು ಬಳಸುತ್ತೀರಿ ಎಂದಾದಲ್ಲಿ ಇದರೊಂದಿಗೆ ಏನನ್ನೂ ಮಿಶ್ರ ಮಾಡುವ ಅಗತ್ಯವಿಲ್ಲ.


ಜನರು ನಂಬಿರುವ ಇನ್ನೊಂದು ಅಂಶವೆಂದರೆ ಬ್ಯೂಟಿಪಾರ್ಲರ್‌ನಲ್ಲಿರುವವರಿಗೆ ನಿಮ್ಮ ಕೂದಲಿಗೆ ಯಾವ ಬಣ್ಣ ಸೂಕ್ತ ಹಾಗೂ ಕೂದಲಿಗೆ ಹಾನಿಯುಂಟು ಮಾಡದೇ ಇರುವ ಉತ್ಪನ್ನ ಯಾವುದಾಗಿದೆ ಎಂಬುದು ತಿಳಿದಿರುತ್ತದೆ. ನಮ್ಮ ಕೂದಲಿಗೆ ಹಚ್ಚುವ ಬಣ್ಣವನ್ನು ನಾವು ಖರೀದಿಸುವಾಗ ಅದರಲ್ಲಿರುವ ಅಂಶಗಳತ್ತ ನಾವು ಗಮನ ಹರಿಸುತ್ತೇವೆ. ಇದರಲ್ಲಿ ವಿಷಕಾರಿ ಅಂಶಗಳಿವೆಯೇ ಅಥವಾ ನೈಸರ್ಗಿಕ ವಸ್ತುಗಳನ್ನು ಹೇರ್ ಕಲರ್ ಹೊಂದಿದೆಯೇ ಎಂಬುದನ್ನು ನಾವಾಗಿಯೇ ಪರಿಶೀಲಿಸಬಹುದು ಎಂಬುದಾಗಿ ಸಿಸಿಲಿಯಾ ತಿಳಿಸುತ್ತಾರೆ.


ಪಾರ್ಲರ್‌ಗಳಲ್ಲಿ ಬಳಸುವ ಬಣ್ಣ ಕೂಡ ಇದೇ ರೀತಿಯದ್ದಾಗಿದ್ದು ಕೂದಲಿನ ಆಳವನ್ನು ತಲುಪಲು ಯಾವುದೇ ರೀತಿಯ ಹೆಚ್ಚುವರಿ ಅಂಶಗಳನ್ನು ಮಿಶ್ರಮಾಡುವುದಿಲ್ಲ ಎಂದು ತಿಳಿಸಿದ್ದಾರೆ.


ಬಣ್ಣ ಹಚ್ಚುವಾಗ ಕೂದಲನ್ನು ಆದಷ್ಟು ಬಾಚಿಕೊಳ್ಳುತ್ತಾ ಹಚ್ಚುವುದರಿಂದ ಇದು ಸಂಪೂರ್ಣ ಕೂದಲಿಗೆ ಹರಡಿಕೊಳ್ಳುತ್ತದೆ. ಬ್ಯೂಟಿ ಪಾರ್ಲರ್‌ಗಳಲ್ಲಿ ಬಳಸುವ ಬಣ್ಣವು ಅಮೋನಿಯಾ ಅಥವಾ ಅದರ ಉಪ ಉತ್ಪನ್ನಗಳಾದ ಎಥನೊಲಮೈನ್, ಡೈಥನೊಲಮೈನ್ ಮತ್ತು ಟ್ರೈಥೆನೊಲಮೈನ್ ಅನ್ನು ಒಳಗೊಂಡಿರುತ್ತವೆ.


ಇದನ್ನೂ ಓದಿ: ತ್ವಚೆಯ ಆರೈಕೆಯಿಂದ ಹೃದಯದ ಆರೋಗ್ಯದವರೆಗೆ ರೆಡ್ ವೈನ್ ಪ್ರಯೋಜನಗಳು ಒಂದೆರೆಡಲ್ಲ.

ಇದರಿಂದ ಕೂದಲಿಗೆ ಹಾನಿಯುಂಟಾಗುವುದು ಖಂಡಿತ ಎಂದು ಏಂಜಲೋನ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ನಿಮ್ಮ ಕೂದಲಿಗೆ ಯಾವುದು ಸೂಕ್ತ ಎಂದು ನೀವೇ ಆಯ್ಕೆಮಾಡಿಕೊಂಡಲ್ಲಿ ಅದರಲ್ಲಿ ಅಮೈನೊಮೆಥೈಲ್ ಪ್ರೊಪನಾಲ್‌ನಂತಹ ಸಾವಯವ ಸಂಯುಕ್ತಗಳು ಇವೆಯೇ ಎಂಬುದನ್ನು ಪರಿಶೀಲಿಸಿ ಎಂದು ಕಿವಿಮಾತು ಹೇಳಿದ್ದಾರೆ.


First published: