• Home
  • »
  • News
  • »
  • lifestyle
  • »
  • Hair Care: ಕೂದಲ ಆರೈಕೆ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ತಪ್ಪಿದ್ದಲ್ಲ

Hair Care: ಕೂದಲ ಆರೈಕೆ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ತಪ್ಪಿದ್ದಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಕೂದಲ ಬಗ್ಗೆ ನೀವು ಹೇಗೆ ಕಾಳಜಿ ವಹಿಸುತ್ತೀರಿ ಎಂಬುದು ತುಂಬಾ ಮುಖ್ಯ ಆಗುತ್ತದೆ. ಅನೇಕ ಬಾರಿ ನಾವು ಕೂದಲು ಆರೈಕೆ ವೇಳೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತಹ ಸಾಕಷ್ಟು ತಪ್ಪು ಮಾಡುತ್ತೇವೆ.

  • Share this:

    ಇತ್ತೀಚಿನ ದಿನಗಳಲ್ಲಿ (Now a Days) ಜನರು (People) ಕೂದಲು ಉದುರುವಿಕೆ (Hair Fall) ಮತ್ತು ಕೂದಲು ಬೆಳ್ಳಗೆ (White Hair) ಆಗುತ್ತಿರುವ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ. ಇತ್ತೀಚಿಗೆ ತುಂಬಾ ಜನರು ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ ಮತ್ತು ಕೂದಲು ಬೆಳ್ಳಗೆ ಆಗುತ್ತಿರುವ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಜನರು ಇದಕ್ಕಾಗಿ ದುಬಾರಿ ಎಣ್ಣೆ ಮತ್ತು ಶಾಂಪೂ ಸಹ ಬಳಕೆ ಮಾಡುತ್ತಾರೆ. ಆದರೆ ಇದನ್ನು ಮಾಡಿದ ಬಳಿಕವೂ ಸಮಸ್ಯೆ ಕಡಿಮೆಯಾಗುತ್ತಿಲ್ಲ ಎಂದರೆ ಅದು ನಿಮ್ಮನ್ನು ಹೆಚ್ಚು ಚಿಂತೆಗೆ ದೂಡುತ್ತದೆ. ವಾಸ್ತವದಲ್ಲಿ ಕೂದಲು ಉದುರುವಿಕೆ ಮತ್ತು ತಲೆ ಬೋಳು ಆಗಲು ಇನ್ನೂ ಹಲವು ಕಾರಣಗಳು ಇವೆ.


    ಕೂದಲ ಆರೈಕೆಯಲ್ಲಿ ಹೆಚ್ಚಿನವರು ಮಾಡುವ ತಪ್ಪುಗಳು ಯಾವವು?


    ನಿಮ್ಮ ಕೂದಲ ಬಗ್ಗೆ ನೀವು ಹೇಗೆ ಕಾಳಜಿ ವಹಿಸುತ್ತೀರಿ ಎಂಬುದು ತುಂಬಾ ಮುಖ್ಯ ಆಗುತ್ತದೆ. ಅನೇಕ ಬಾರಿ ನಾವು ಕೂದಲು ಆರೈಕೆ ವೇಳೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಂತಹ ಸಾಕಷ್ಟು ತಪ್ಪು ಮಾಡುತ್ತೇವೆ. ಇದರಿಂದ ಕೂದಲು ಸೀಳಲು ಶುರು ಆಗುತ್ತದೆ. ಕೂದಲ ಆರೈಕೆಯಲ್ಲಿ ಹೆಚ್ಚಿನವರು ಮಾಡುವ ತಪ್ಪುಗಳು ಏನು ಎಂದು ಹೇಗೆ ಇಲ್ಲಿ ತಿಳಿಯೋಣ.


    ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳುವುದು


    ಕೆಲವರು ಮಲಗುವಾಗ ಕೂದಲನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ. ಹೀಗೆ ಮಾಡಿದರೆ ಮಲಗುವಾಗ ಕೂದಲು ಬಾಯಿಗೆ ಬರುವುದಿಲ್ಲ ಎಂದು ಭಾವಿಸುತ್ತಾರೆ. ಹಾಗಾಗಿ ಅವರು ಬಿಗಿಯಾಗಿ ಕೂದಲು ಕಟ್ಟಿಕೊಂಡು ತುರುಬು ಹಾಕಿಕೊಳ್ತಾರೆ. ಹೀಗೆ ಮಾಡುವುದರಿಂದ ಇದು ಕೂದಲಿನ ಬೇರುಗಳನ್ನು ಎಳೆಯುತ್ತದೆ ಮತ್ತು


    ಇದನ್ನೂ ಓದಿ: ಜಗಳ ಆಗಲು ಕಾರಣಗಳು ಏನೇ ಇದ್ದರೂ ಅದನ್ನು ಹೀಗೆ ನಿಭಾಯಿಸಿ!


    ಅವುಗಳನ್ನು ದುರ್ಬಲವಾಗುವಂತೆ ಮಾಡುತ್ತದೆ. ಬಿಗಿಯಾದ ತುರುಬಿಗೆ ಬಿಗಿಯಾದ ರಬ್ಬರ್ ಅನ್ನು ಕಟ್ಟಿಕೊಳ್ಳುವುದು ಕೂದಲನ್ನು ಒಡೆಯುವಂತೆ ಮಾಡುತ್ತದೆ. ಹಾಗಾಗಿ ಕೂದಲು ಕಟ್ಟಿಕೊಳ್ಳುವುದನ್ನು ಮಾಡಬೇಡಿ. ಹಗುರವಾದ ಮತ್ತು ಸಡಿಲವಾದ ರಬ್ಬರ್ ಜೊತೆ ಕೂದಲನ್ನು ಕಟ್ಟಿ.


    ಕೂದಲು ಬಾಚುವ ವಿಧಾನ


    ಕೆಲವರು ಬೆಳಗ್ಗೆ ಎದ್ದ ತಕ್ಷಣ ಕೂದಲು ಬಾಚಿಕೊಳ್ತಾರೆ. ಹೆಚ್ಚಿನ ಜನರು ಮುಂಭಾಗದಿಂದ ಹಿಂದಕ್ಕೆ ಕೂದಲು ಬಾಚಿಕೊಳ್ಳುತ್ತಾರೆ. ಇದು ತಪ್ಪು ವಿಧಾನ. ಇದು ಹೆಚ್ಚು ಕೂದಲು ಒಡೆಯಲು ಕಾರಣ ಆಗುತ್ತದೆ. ಹಿಂಬದಿಯ ಕೂದಲು ಜಟಿಲಗೊಳ್ಳುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣ ಆಗುತ್ತದೆ. ಹಾಗಾಗಿ ಮೊದಲು ಬೆನ್ನಿನ ಕೂದಲನ್ನು ಬಾಚಿಕೊಳ್ಳಿ. ನಂತರ ಮುಂದಿನ ಕೂದಲು ಬಾಚಿಕೊಳ್ಳಿ.


    ಕೂದಲಿಗೆ ಎಣ್ಣೆ ಅನ್ವಯಿಸುವ ವಿಧಾನ


    ಕೆಲವರು ಕೂದಲಿನ ಬೇರುಗಳಲ್ಲಿ ಬಹಳಷ್ಟು ಎಣ್ಣೆ ಅನ್ವಯಿಸುತ್ತಾರೆ. ನಂತರ ಅದನ್ನು ಬಲವಾಗಿ ಉಜ್ಜುತ್ತಾರೆ. ಇದು ಕೂದಲು ಹೆಚ್ಚು ಒಡೆಯುವಂತೆ ಮಾಡುತ್ತದೆ. ನೀವು ಕೈಗಳಿಂದ ಕೂದಲಿನ ಬೇರುಗಳಿಗೆ ಮತ್ತು ಕೂದಲಿನ ಮೇಲೆ ಎಣ್ಣೆ ಅನ್ವಯಿಸಬೇಕು. ಇದು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಕಡಿಮೆ ಉದುರುವಂತೆ ನೋಡಿಕೊಳ್ಳುತ್ತದೆ.


    ಕೂದಲು ತೊಳೆಯುವ ವಿಧಾನ


    ಅನೇಕ ಬಾರಿ ಜನರು ಕೂದಲನ್ನು ಒದ್ದೆ ಮಾಡಿ ನೇರವಾಗಿ ಶಾಂಪೂ ಹಚ್ಚಿ. ಇದು ಹಾನಿಕಾರಕ ರಾಸಾಯನಿಕಗಳು ಕೂದಲಿಗೆ ಹಾನಿ ಮಾಡುತ್ತದೆ. ಸರಿಯಾಗಿ ಶಾಂಪೂ ಮಾಡಲು ಒಂದು ಮಗ್‌ನಲ್ಲಿ ಸಾಕಷ್ಟು ನೀರಿನ ಜೊತೆ ಶಾಂಪೂ ಮಿಶ್ರಣ ಮಾಡಿ. ಸುಮಾರು ಅರ್ಧ ಲೋಟ ನೀರು ಇರಲಿ. ಈಗ ಕೂದಲನ್ನು ಕೆಳಕ್ಕೆ ಸರಿಸಿ. ಮತ್ತು ನಂತರ ಲಘು ಕೈಗಳಿಂದ ಶಾಂಪೂ ಮಾಡಿ.


    ಇದನ್ನೂ ಓದಿ: ಹಾರ್ಮೋನುಗಳ ಅಸಮತೋಲನ ಸಂಕೇತ ಮತ್ತು ಲಕ್ಷಣಗಳು ಯಾವವು?


    ಕೂದಲನ್ನು ಒಣಗಿಸುವ ವಿಧಾನ


    ಕೂದಲನ್ನು ಒಣಗಿಸಲು ಟವೆಲ್ ಬದಲಿಗೆ ಹತ್ತಿ ಬಟ್ಟೆ ಬಳಸಿ. ತುಂಬಾ ಹೊತ್ತು ಟವೆಲ್ ನಿಂದ ಕೂದಲು ಕಟ್ಟಬೇಡಿ. 15 ರಿಂದ 10 ನಿಮಿಷಗಳ ನಂತರ ಟವೆಲ್ ತೆಗೆದು ಹಾಕಿ. ಮತ್ತು ಕೂದಲು ಒಣಗಲು ಬಿಡಿ. ನಂತರ ಬಾಚುವಾಗ ಬ್ಲೋ ಡ್ರೈ ಮಾಡಿ.

    Published by:renukadariyannavar
    First published: